ಪಾಂಡವಪುರ: ಕೃಷ್ಣರಾಜಸಾಗರದ ಹಿನ್ನಿರಿನ ಪ್ರದೇಶವಾದ ತಾಲ್ಲೂಕಿನ ಮಲ್ಲಿಗೆರೆ ಗ್ರಾಮದಲ್ಲಿ ಸುಮಾರ 409 ಎಕರೆ ಪ್ರದೇಶದ ಜಮೀನಿಗೆ ನೀರು ಪೂರೈಸುವ ಏತ ನೀರಾವರಿ ಯೋಜನೆಗೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಶುಕ್ರವಾರ ಚಾಲನೆ ನೀಡಿದರು.
ಮಲ್ಲಿಗೆರೆ ಗ್ರಾಮದಲ್ಲಿನ ಏತ ನೀರಾವರಿ ಯೋಜನೆಯೆಲ್ಲಿ ಕೃಷಿ ಪ್ರದೇಶಕ್ಕೆ ನೀರೆತ್ತುವ ಮೋಟಾರ್ ಸ್ವೀಚ್ ಹಾಕುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಕೃಷ್ಣರಾಜಸಾಗರ ಜಲಾಶಯಕ್ಕೆ ಕನ್ನಂಬಾಡಿ ಅಣೆಕಟ್ಟೆಕಟ್ಟಿದ ಸಂದರ್ಭದಲ್ಲಿ ಹಲವಾರು ಗ್ರಾಮಗಳು ಮುಳುಗಡೆಯಾದವು. ಅದರಲ್ಲಿ ಮಲ್ಲಿಗೆರೆ ಗ್ರಾಮವೂ ಒಂದು. 1974ರಲ್ಲಿ ಇಲ್ಲಿಯ ರೈತರಿಗೆ ಅನುಕೂಲವಾಗಕಲೆಂದು ಏತ ನೀರಾವರಿ ಯೋಜನೆಯನ್ನು ಜಾರಿಗೆ ತರಲಗಿತ್ತು. ಆದರೆ ಈ ಯೋಜನೆಯು ಕಳೆದ 4-5 ವರ್ಷಗಳಿಂದ ಸ್ಥಗಿತಗೊಂಡಿತು.
ತಾವು ಶಾಸಕರಾದ ಮೇ¯À ಕಳೆದ 2013-14ನೇ ಸಾಲಿನಲ್ಲಿ ಈ ಯೋಜನೆಗೆ ಮತ್ತೆ ಚಾಲನೆ ನೀಡುವ ಕ್ರಮವಹಿಸಲಾಯಿತು. ಹಾಗಾಗಿ ಈ 2014-15ನೇ ಸಾಲಿಗೂ ಏತ ನೀರಾವರಿಗೆ ಚಾಲನೆ ನೀಡಲಾಗುತ್ತಿದೆ. ಇದರಿಂದಾಗಿ ಮಲ್ಲಿಗೆರೆ, ಸುಂಡಹಳ್ಳಿ, ಕಬ್ಬಲಗೆರೆಪುರ ಗ್ರಾಮಗಳ ಸುಮಾರು 409.14 ಎಕರೆ ಪ್ರದೇಶಗಳ ರೈತರ ಜಮೀನಿಗೆ ಅನುಕೂಲವಾಗಲಿದೆ. ಹಾಲಿ ಇರುವ ಯೋಜನೆಯ ಏತ ನೀರಾವರಿಗೆ ಮತ್ತೊಂದು ಮೋಟಾರ್ ಮತ್ತು ಪೈಪ್‍ಲೈನ್ ಅಳವಡಿಸಿದರೆ ಹೊಸ ಸಾಯಪನಹಳ್ಳಿ, ಡಿಂಕಾಶೆಟ್ಟಿಹಳ್ಳಿ, ಗ್ರಾಮಗಳಿಗೆ ನೀರುನ್ನು ಒದಗಿಸಬಹುದಾಗಿರುವುದರಿಂದ ಇದಕ್ಕೆ ತಗಲುವ ವೆಚ್ಚದ ಅಂದಾಜು ಪಟ್ಟಿ, ಕ್ರಿಯಾ ಯೋಜನೆಯನ್ನು ತಯಾರಿಸಬೇಕೆಂದು ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‍ಗಳಿಗೆ ಸೂಚಿಸಿದರು.
ನಂತರ ನಿಗಮದ ಕಿರಿಯ ಎಂಜಿನಿಂiÀiರ್ ರವಿ ಮಾತನಾಡಿ, ಮಲ್ಲಿಗೆರೆ ನೀರಾವರಿ ಯೋಜನೆಗೆ ಈಗ 45 ಅಶ್ವ ಶಕ್ತಿಯ ಮೋಟಾರ್‍ನ್ನು ಅಳವಡಿಸಲಾಗಿದ್ದು, ನಿತ್ಯ ತಂಡೋಪ ತಂಡವಾಗಿ 16 ಗಂಟೆಗಳ ಕಾಲ ನೀರನ್ನು ಒದಗಿಸಲಾಗುತ್ತದೆ. ಕೃಷ್ಣರಾಜಸಾಗರ ಜಲಾಶಯದಲ್ಲಿ 100 ಅಡಿ ನೀರು ತುಂಬಿದಾಗ ಮಾತ್ರ ಹಿನ್ನೀರಿನ ಈ ಏತ ನೀರಾವರಿಯಿಂದ ಜಮೀನಿಗೆ ನೀರು ಒದಗಿಸಲು ಸಾಧ್ಯ ಎಂದು ತಿಳಿಸಿದರು.
ತಾ.ಪಂ ಅಧ್ಯಕ್ಷರ ಕಡೆಗಣನೆ: ಮಲ್ಲಿಗೆರೆ ಗ್ರಾಮದ ಮತ್ತು ತಾಲ್ಲೂಕು ಪಂಚಾಯಿತಿ ಪ್ರಭಾರ ಅಧ್ಯಕ್ಷರೂ ಆದ ಯಶ್ವಂತ್ ಮಲ್ಲಿಗೆರೆಯವರನ್ನು ಗ್ರಾಮದಲ್ಲಿ ನಡೆದ ಏತ ನೀರಾವರಿ ನೀರು ಪೂರೈಸುವ ಕಾರ್ಯಕ್ರಮಕ್ಕೆ ಕಾವೇರಿ ನೀರಾವರಿ ನಿಗಮದ ಇಲಾಖೆಯ ಎಂಜಿನಿಯರ್‍ಗಳು ಮತ್ತು ಅಧಿಕಾರಿಗಳು ಆಹ್ವಾನ ನೀಡದೆ ಬೇಜವಬ್ದಾರಿ ತೋರಿದ್ದಾರೆ. ಅದೇ ಗ್ರಾಮದ ಜನಪ್ರತಿನಿದಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದರಿರುವುದಕ್ಕೆ ತಾ.ಪಂ. ಅಧ್ಯಕ್ಷ ಯಶ್ವಂತ್ ಮಲ್ಲಿಗೆರೆ ಅಸಮದಾನ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕಾವೇರಿ ನೀರಾವರಿ ನಿಗಮದ ಎಇಇ ಅನಿಲ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಲ್.ಕೆಂಪೂಗೌಡ, ಗ್ರಾಮದ ಮುಖಂಡರಾದ ರಾಜೇಶ್, ಮೊಗಣ್ಣ, ಯತೀಶ್, ಪಾರ್ಥಸಾರಥಿ ಸೇರಿದಂತೆ ಹಲವರು ಹಾಜರಿದ್ದರು.

No comments:
Post a Comment