Sunday, 3 August 2014

ಕೆ.ಆರ‍್ ಪೇಟೆ-ಆಗಸ್ಟ್ 15ಕ್ಕೆವೀರಯೋಧ ಉದಯಕುಮಾರ್ ಅವರ ಪುತ್ಥಳಿ ಅನಾವರಣ.

ಕೃಷ್ಣರಾಜಪೇಟೆ. ಜಮ್ಮು ಕಾಶ್ಮೀರದಲ್ಲಿ ಬಿಎಸ್‍ಎಫ್ ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಕಳೆದ ಎರಡು ವರ್ಷಗಳ ಹಿಂದೆ ವೀರಮರಣವನ್ನಪ್ಪಿದ್ದ ವೀರಯೋಧ ತಾಲೂಕಿನ ಮೋದೂರು ಗ್ರಾಮದ ಸುಪುತ್ರ ಹುತಾತ್ಮ ವೀರಯೋಧ ಉದಯಕುಮಾರ್ ಅವರ ಪುತ್ಥಳಿಯನ್ನು ಗ್ರಾಮದಲ್ಲಿ ಅನಾವರಣ ಮಾಡಲು ಗ್ರಾಮದ ಜನರು ಸದ್ದಿಲ್ಲದೇ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಕಳೆದ 26-07-2012ರಂದು ಜಮ್ಮು-ಕಾಶ್ಮೀರದ ದುರ್ಗಮ ಕಣಿವೆಯಲ್ಲಿ ಸಂಭವಿಸಿದ ಸೇನಾ ಟ್ರಕ್ ದುರಂತದಲ್ಲಿ ಉದಯ್‍ಕುಮಾರ್ ದುರಂತ ಸಾವಿಗೀಡಾಗಿದ್ದರು. ಗಡಿಭದ್ರತಾ ಪಡೆಯಲ್ಲಿ ಯೋಧನಾಗಿ ಕರ್ತವ್ಯ ನಿರ್ವಹಿಸಿದ್ದ ಮೋದೂರು ಗ್ರಾಮದ ನಿಂಗಪ್ಪ-ಬಸಮ್ಮ ದಂಪತಿಗಳ ಕಿರಿಯ ಪುತ್ರನಾದ ಹುತಾತ್ಮ ವೀರಯೋಧ ಉದಯಕುಮಾರ್ ಅವರಿಗೆ ಗ್ರಾಮದ ಪರವಾಗಿ ಧನ್ಯವಾದಗಳನ್ನು ಸಮರ್ಪಿಸಲು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ದಿನದಂದು ಹುತಾತ್ಮ ವೀರಯೋಧ ಉದಯಕುಮಾರ್ ಅವರ ಪುತ್ಥಳಿಯನ್ನು ಮೋದೂರು ಗ್ರಾಮದ ಬಸ್‍ನಿಲ್ದಾಣದ ಆವರಣದಲ್ಲಿ ಅನಾವರಣ ಮಾಡಲು ಗ್ರಾಮದ ಮುಖಂಡರು ಹಾಗೂ ಹಿರಿಯರು ನಿರ್ಧರಿಸಿದ್ದಾರೆ.
ಮಂಡ್ಯ ಜಿಲ್ಲಾಧಿಕಾರಿ ಡಾ.ಅಜಯ್ ನಾಗಭೂಷಣ್ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಗುಲಾಬ್ ಭೂಷಣ್‍ಬೊರಸೆ ಅವರ ಸಮಕ್ಷಮದಲ್ಲಿ ಲೋಕಸಭಾ ಸದಸ್ಯ ಸಿ.ಎಸ್.ಪುಟ್ಟರಾಜು ಅವರು ಆಗಷ್ಟ್-15 ರಂದು ಮೋದೂರು ಗ್ರಾಮದಲ್ಲಿ ಮಧ್ಯಾಹ್ನ 12.30ಕ್ಕೆ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ಹುತಾತ್ಮ ವೀರಯೋಧ ವೀರಯೋಧ ಉದಯ್‍ಕುಮಾರ್ ಅವರ ಪುತ್ಥಳಿಯನ್ನು ಅನಾವರಣ ಮಾಡಲಿದ್ದಾರೆ.
ಶಾಸಕ ಕೆ.ಸಿ.ನಾರಾಯಣಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಕ್ಷೇತ್ರದ ಮಾಜಿಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಎಂ.ಪುಟ್ಟಸ್ವಾಮಿಗೌಡ, ಮಾಜಿಸ್ಪೀಕರ್ ಕೃಷ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಪರಮೇಶ್, ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರೋಹಿಣಿಸಿಂಧೂರಿದಾಸರಿ, ಜಿಲ್ಲಾ ವಾರ್ತಾಧಿಕಾರಿ ರಾಜು, ಪಾಂಡವಪುರ ಉಪವಿಭಾಗಾಧಿಕಾರಿ.ಬಿ.ವಾಣಿ, ಶ್ರೀರಂಗಪಟ್ಟಣ ಡಿವೈಎಸ್‍ಪಿ ಗೀತಪ್ರಸನ್ನ, ತಹಶೀಲ್ದಾರ್ ಶೀಧರ್‍ಮೂರ್ತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೆಂಚಪ್ಪ, ವೃತ್ತಆರಕ್ಷಕ ನಿರೀಕ್ಷಕರಾದ ಕೆ.ರಾಜೇಂದ್ರ, ಜಿಲ್ಲಾ ಪಂಚಾಯಿತಿ ಸದಸ್ಯೆ ಸರ್ವಮಂಗಳವೆಂಕಟೇಶ್, ಬೂಕನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿಬೋಳೇಗೌಡ, ತಾಲೂಕು ಪಂಚಾಯಿತಿ ಸದಸ್ಯರಾದ ಹೆಳವೇಗೌಡ, ಮಂಜುಳಾ ಮಂಜುನಾಥ್, ತಾಲೂಕು ಪಂಚಾಯಿತಿ ಮಾಜಿಅಧ್ಯಕ್ಷೆ ವಿಜಯಲಕ್ಷ್ಮೀರಾಜಶೇಖರ್, ಪುರಸಭೆ ಮಾಜಿಅಧ್ಯಕ್ಷ ಕೆ.ಬಿ.ಮಹೇಶ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ವಿಶೇಷ ಆಹ್ವಾನಿತರಾಗಿ ಭಾಗವಹಿಸುತ್ತಿದ್ದಾರೆ. ಆದ್ದರಿಂದ ಮೋದೂರು ಗ್ರಾಮದಲ್ಲಿ ನಡೆಯುತ್ತಿರುವ ವೀರಯೋಧನಿಗೆ ನಮನಗಳನ್ನು ಸಲ್ಲಿಸುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ದೇಶಾಭಿಮಾನಿಗಳು ಭಾಗವಹಿಸಬೇಕೆಂದು ಮೃತಯೋಧನ ಸಹೋದರ ಮಹದೇವಪ್ಪ ಮನವಿ ಮಾಡಿದ್ದಾರೆ.

No comments:

Post a Comment