ಮೈಸೂರು ನಗರದಲ್ಲಿ ಪೋಲಿಸರಿಂದ ಎಸ್.ಸಿ./ಎಸ್.ಟಿ. ಕಾಲೋನಿ ಭೇಟಿ ಮತ್ತು ಕುಂದುಕೊರತೆ ಸಭೆ.
ದಿನಾಂಕ. 24-08-2014 ಭಾನುವಾರ ರಂದು ಮೈಸೂರು ನಗರದಲ್ಲಿ ಪೊಲೀಸ್ ನಿರೀಕ್ಷಕರುಗಳು ತಮ್ಮ ಠಾಣಾ ಸರಹದ್ದಿನ ವ್ಯಾಪ್ತಿಯಲ್ಲಿರುವ ಎಸ್.ಸಿ./ಎಸ್.ಟಿ. ಕಾಲೋನಿಗಳಿಗೆ ಭೇಟಿ ನೀಡಿ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ಕಾಲೋನಿಯ ಜನರ ಕುಂದುಕೊರತೆಗಳನ್ನು ವಿಚಾರಿಸಿ ಆ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಆದ್ದರಿಂದ ಎಸ್.ಸಿ./ಎಸ್.ಟಿ. ಕಾಲೋನಿಗಳ ಜನರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮೈಸೂರು-ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು. ಆರ್. ಅನಂತ ಮೂರ್ತಿ ಅವರ ನಿದನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಪ್ರಸಾದ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ . ತಮ್ಮ ಪ್ರಖರ ವೈಚಾರಿಕತೆ ಹಾಗು ಅನನ್ಯ ಸಾಹಿತ್ಯದಿಂದ ಅವರು ಕನ್ನಡ ಸಾರಸ್ವತ ಲೋಕದಲ್ಲಿ ಮರೆಯಲಾಗದ ಛಾಪು ಮೂಡಿಸಿದ್ದಾರೆ , ಅವರ ನಿದನ ದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಸ್ಟ ಉಂಟಾಗಿದೆ ಎಂದು ಅವರು ಶೋಕಿಸಿದ್ದಾರೆ .
ತಾಲ್ಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ
ಮಂಡ್ಯ, ಆ. 22 : ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆ.25 ಹಾಗೂ 26ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸರ್ಕಾರಿ ಪ್ರೌಢಶಾಲೆ ಮಲ್ಲೇನಹಳ್ಳಿ ಇವರ ಆಶ್ರಯದಲ್ಲಿ ಪಶ್ಚಿಮ ವಲಯ ತಾಲ್ಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ-2014-15ರ ಉದ್ಘಾಟನಾ ಸಮಾರಂಭ ನಡೆಯಲಿದೆ.
ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸುವರು. ಸಂಸದ ಸಿ.ಎಸ್.ಪುಟ್ಟರಾಜು ಕ್ರೀಡಾಧ್ವಜಾರೋಹಣ ನೆರವೇರಿಸುವರು. ಪಿಇಟಿ ಅಧ್ಯಕ್ಷ ಹೆಚ್.ಡಿ.ಚೌಡಯ್ಯ ಕ್ರೀಡಾಜ್ಯೋತಿ ಸ್ವೀಕರಿಸುವರು. ಜಿ.ಪಂ.ಅಧ್ಯಕ್ಷೆ ಮಂಜುಳ ಪರಮೇಶ್, ಸದಸ್ಯ ಕೆ.ಎಸ್.ವಿಜಯಾನಂದ ಕ್ರೀಡಾಪಟುಗಳಿಗೆ ಹಿತನುಡಿ ನುಡಿಯುವರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯ ಶಂಕರೇಗೌಡ, ತಾ.ಪಂ. ಅಧ್ಯಕ್ಷ ಟಿ.ಸಿ.ಶಂಕರೇಗೌಡ, ತಾ.ಪಂ. ಸದಸ್ಯರಾದ ವಿಜಯಮಣಿ ಮಲ್ಲೇಶ್, ಚಂದ್ರಕಲಾ, ಸಂಪತ್‍ಕುಮಾರ್, ಹೆಚ್.ಸಿ.ಪ್ರಭಾವತಿ, ಎಸ್.ರಮೇಶ್, ಸವಿತ ಬಿ.ಬೆಟ್ಟಸ್ವಾಮಿ, ಬೇವುಕಲ್ಲು ಗ್ರಾ.ಪಂ. ಅಧ್ಯಕ್ಷ ಚಲುವೇಗೌಡ, ಸದಸ್ಯರಾದ ನಾಗರಾಜು, ಜಯೇಂದ್ರ, ತಾಯಮ್ಮಪುಟ್ಟಸ್ವಾಮಿ ಮತ್ತಿತರರು ಭಾಗವಹಿಸುವರು.

No comments:
Post a Comment