Friday, 8 August 2014

ಮೈಸೂರು- ಶ್ರೀ ರಾಘವೇಂದ್ರ ಸ್ವಾಮಿಗಳ 343ನೇ ಆರಾಧನಾ ಮಹೋತ್ಸವ

ಕೃಷ್ಣಮೂರ್ತಿಪುರಂನಲ್ಲಿರುವ  ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಸನ್ನಿದಾನದಲ್ಲಿ ಶ್ರೀರಾಘವೇಂದ್ರ ಗುರುಸಾರ್ವಭೌಮರ 343ನೇ ಆರಾಧನಾ ಮಹೋತ್ಸವವನ್ನು ಆಯೋಜಿಸಲಾಗಿದೆ.

ಜಯನಾಮ ಸಂವತ್ಸರದ ಶ್ರಾವಣ  ಬಹುಳ ಪಾಡ್ಯ ಬಿದಿಗೆ ಹಾಗೂ ಅದಿಗೆಯ ಆಗಸ್ಟ್ 11,12,ಮತ್ತು 13ರಂದು ಕಲಿಯುಗ ಕಲ್ಪವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ನೆರವೇರಲ್ಲಿದೆ.

ಮೂರು ದಿನಗಳಲ್ಲಿ ಪ್ರಾತಃ ಕಾಲದಲ್ಲಿ ಸುಪ್ರಭಾತ, ಸಚ್ಚಾಸ್ತ್ರಪಾರಾಯಣ, ಮಹಾಪಂಚಾಮೃತ ಅಭಿಷೇಕ, ಅಲಂಕಾರ ಅರ್ಚನೆ ಬ್ರಾಹ್ಮಣ ಸುವಾಸಿನಿ ಸಮಾರಾಧನೆ ಹಾಗೂ ರಜತ ಪಲ್ಲಕಿ ರಥೋತ್ಸವಗಳು ನಡೆಯಲ್ಲಿದೆ
 

No comments:

Post a Comment