Saturday, 23 August 2014

ಕೆ.ಆರ್.ಪೇಟೆ ಸುದ್ದಿಗಳು.

ಕೃಷ್ಣರಾಜಪೇಟೆ. ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾದ ಕನ್ನಡ ಸಾರಸ್ವತ ಲೋಕದ ದಿಗ್ಗಜ ಪದ್ಮಭೂಷಣ ಡಾ.ಯು.ಆರ್.ಅನಂತಮೂರ್ತಿ ಅವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸುವ ಮೂಲಕ ಶಾಸಕ ನಾರಾಯಣಗೌಡ ಶ್ರದ್ಧಾಂಜಲಿ ಸಮರ್ಪಿಸಿ, ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಅತ್ಯುನ್ನತವಾದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಚಿಂತಕ, ನಿಷ್ಠೂರವಾಧಿಗಳಾದ ಅನಂತಮೂರ್ತಿ ಅವರ ನಿಧನದಿಂದ ಕನ್ನಡ ಸಾರಸ್ವತಲೋಕಕ್ಕೆ ಅಪಾರವಾದ ನಷ್ಠವುಂಟಾಗಿದೆ ಎಂದು ಶಾಸಕರು ಕಂಬನಿ ಮಿಡಿದರು.
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ನಾವೂ-ನೀವು ಕನ್ನಡ ಸಾಂಸ್ಕøತಿಕ ಸಂಘಟನೆ ಹಾಗೂ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅಗಲಿದ ಮಹಾನ್ ಚೇತನಕ್ಕೆ ನುಡಿ-ನಮನ ಸಲ್ಲಿಸಿದ ಶಾಸಕ ನಾರಾಯಣಗೌಡ ಸಮಾಜದ ಮೌಢ್ಯಗಳ ವಿರುದ್ಧ ಸಮರವನ್ನೇ ಸಾರಿ ನುಡಿದಂತೆ ನಡೆದ ನಿಷ್ಠೂರವಾಧಿಗಳಾದ ಅನಂತಮೂರ್ತಿ ಅವರ ಸಾವಿ ಕನ್ನಡ ಸಾಹಿತ್ಯಾಭಿಮಾನಿಗಳಿಗೆ ಅಪಾರ ದುಃಖವನ್ನುಂಟುಮಾಡಿದೆ. ಘಟಶ್ರಾಧ್ಧಾ, ಸಂಸ್ಕಾರ ಚಿತ್ರಗಳ ಮೂಲಕ ಅತ್ಯುತ್ತಮ ಚಿತ್ರಕತೆಗೆ ಕೇಂದ್ರದ ಸರ್ಣಕಮಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ಯುಆರ್ ಪ್ರಝಾಪ್ರಭುತ್ವ ವ್ಯವಸ್ಥೆಯ ಉಳೋಇವಿಗಾಗಿ ಹೋರಾಟವನ್ನು ನಡೆಸಿ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗಿದ್ದರೂ ಸತ್ಯವನ್ನು ನುಡಿಯುವಲ್ಲಿ ಹಿಂದೇಟು ಹಾಕಲಿಲ್ಲ. ನುಡಿದಂತೆ ನಡೆದು ಅನ್ಯಾಯ, ಅಕ್ರಮಗಳ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದ ಮಹಾನ್ ನಾಯಕರಾಗಿದ್ದ ಯು.ಆರ್.ಅನಂತಮೂರ್ತಿ ಅವರಿಗೆ ರಾಜಕೀಯ ರಂಗದಲ್ಲಿ ಘಟಾನುಘಟಿಗಳೇ ಸ್ನೇಹಿತರಾಗಿದ್ದರೂ ರಾಜಕಾರಣದಲ್ಲಿ ಯಾವುದೇ ಹುದ್ದೆಯನ್ನು ಅಲಂಕರಿಸಲಾಗಲಿಲ್ಲವಲ್ಲ ಎಂಬ ನೋವು ಅವರನ್ನು ಕಾಡಿತ್ತು. ಬಸವಪ್ರಶಸ್ತಿ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ನೀಡುವ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ ಅನಂತಮೂರ್ತಿ ಸಮಾಜದ ಅಭಿವೃಧ್ಧಿಗೆ ಮಾರಕವಾಗಿರುವ ಮೌಢ್ಯಗಳ ವಿರುದ್ಧ ಹೋರಾಟ ನಡೆಸಿ ಇತಿಹಾಸದ ಪುಟಗಳಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದಿದ್ದಾರೆ. ಕನ್ನಢಾಭಿಮಾನಿಗಳಿಗೆ ಹಾಗೂ ಕುಟುಂಬದ ಸದಸ್ಯರಿಗೆ ಭಗವಂತನು ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.
ಕೃಷ್ಣರಾಜಪೇಟೆ ಲಯನ್ಸ್ ಸಂಸ್ಥೆಯ ಅಧ್ಯಕ್ಷ ವಿಠಲಾಪುರ ಜಯರಾಮು, ತಾಲೂಕು ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪದ್ಮೇಶ್, ನಾವೂ-ನೀವು ಸಾಂಸ್ಕøತಿಕ ಸಂಘಟನೆಯ ಕತ್ತರಘಟ್ಟ ವಾಸು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿಉಪಾಧ್ಯಕ್ಷ ಕೆ.ಆರ್.ನೀಲಕಂಠ, ಸಾಹಿತಿ ಮಾರೇನಹಳ್ಳಿ ಲೋಕೇಶ್, ಕವಿಗಳಾದ ಧನಲಕ್ಷ್ಮೀ, ರಾಯಸಮುದ್ರ ಶ್ರೀಧರ್, ಬಲ್ಲೇನಹಳ್ಳಿ ಮಂಜುನಾಥ, ನಾರ್ಗೋನಹಳ್ಳಿ ರವಿ, ಪತ್ರಕರ್ತರಾದ ಬಳ್ಳೇಕೆರೆ ಮಂಜುನಾಥ್, ಕಾಡುಮೆಣಸ ಚಂದ್ರು, ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಸೈಯ್ಯದ್ ಖಲೀಲ್ ಮತ್ತಿತರರ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಅಗಲಿದ ಮಹಾನ್ ಚೇತನಕ್ಕೆ ಪುಷ್ಪಾಂಜಲಿಯ ಮೂಲಕ ನಮನಗಳನ್ನು ಸಲ್ಲಿಸಿದರು. ಕಾರ್ಯಕ್ರಮಕ್ಕೂ ಮುನ್ನ ಅಗಲಿದ ಚೇತನದ ಆತ್ಮಕ್ಕೆ ಶಾಂತಿಕೋರಿ ಎರಡು ನಿಮಿಷಗಳ ಕಾಲ ಮೌನಾಚರಣೆ ನಡೆಸಲಾಯಿತು.
ಸಾಹಿತಿ ಡಾ.ನರಸಿಂಹರಾಜು ಸ್ವಾಗತಿಸಿದರು, ಧನಲಕ್ಷ್ಮೀ ವಂದಿಸಿದರು, ಸಾಹಿತಿ ಮಾರೇನಹಳ್ಳಿ ಲೋಕೇಶ್ ಸ್ವರಚಿತ ಕವನ ವಾಚನ ಮಾಡುವ ಮೂಲಕ ನುಡಿ-ನಮನ ಸಲ್ಲಿಸಿದರು.

No comments:

Post a Comment