ಕೃಷ್ಣರಾಜಪೇಟೆ. ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ದಿನದ 24 ಗಂಟೆಗಳ ಕಾಲವೂ ಹಗಲು ರಾತ್ರಿಯೆನ್ನದೇ ಒತ್ತಡಗಳ ಮಧ್ಯದಲ್ಲಿಯೇ ಕೆಲಸ ಮಾಡುತ್ತಿರುವುದರಿಂದಾಗಿ ಪೋಲಿಸರು ನೆಮ್ಮದಿಯಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ಬಹುತೇಕ ಪೋಲಿಸರು ರಕ್ತದೊತ್ತಡ, ಸಕ್ಕರೆ ಕಾಯಿಲೆ, ಮಾನಸಿಕ ಖಿನ್ನತೆ ಸೇರಿದಂತೆ ವಿವಿಧ ರೋಗಗಳಿಂದ ಬಳಲುತ್ತಿದ್ದಾರೆ. ಇಂತಹ ದಿನಮಾನದಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಸಿ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲದಂತೆ ಕೆಲಸ ಮಾಡಿ ಸೇವೆಯಿಂದ ನಿವೃತ್ತರಾಗುತ್ತಿರುವ ಎಎಸ್‍ಐ ಜವರೇಗೌಡರ ಕಾರ್ಯದಕ್ಷತೆ ಎಲ್ಲಾ ಪೋಲಿಸರಿಗೆ ಚೇತೋಹಾರಿಯಾಗಿದೆ ಎಂದು ವೃತ್ತ ನಿರೀಕ್ಷಕ ಕೆ.ರಾಜೇಂದ್ರ ಹೇಳಿದರು.
ಅವರು ಇಂದು ಪಟ್ಟಣದ ಖಾಸಿಂಖಾನ್ ಸಮೂದಾಯ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸೇವೆಯಿಂದ ನಿವೃತ್ತರಾದ ಎಎಸ್‍ಐ ಜವರೇಗೌಡ’ರನ್ನು ಸನ್ಮಾನಿಸಿ ಗೌರವಿಸಿ ಬೀಳ್ಕೊಟ್ಟು ಪಟ್ಟಣ ಪೋಲಿಸ್ ಠಾಣೆಯಿಂದ ವರ್ಗಾವಣೆಗೊಂಡ ಎಎಸ್‍ಐ ಸಂಪತ್‍ಕುಮಾರ್, ಮುಖ್ಯಪೇದೆ ಜಪ್ರುಲ್ಲಾ ಹಾಗೂ ಇತರರನ್ನು ಅಭಿನಂದಿಸಿ ಮಾತನಾಡಿದರು.
ಸರ್ಕಾರಿ ನೌಕರರಿಗೆ ವರ್ಗಾವಣೆಯೆಂಬುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ ನಾವು ಸೇವೆ ಸಲ್ಲಿಸುತ್ತಿದ್ದ ಜಾಗದಲ್ಲಿ ಜನಸಾಮಾನ್ಯರೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿ, ವರ್ತನೆ, ಅಪರಾಧಗಳ ನಿಯಂತ್ರಣ, ಪ್ರಕರಣಗಳ ಪತ್ತೆ, ಮುಂತಾದವು ನಮ್ಮ ಕರ್ತವ್ಯದ ಜೀವನದಲ್ಲಿ ಆಗಾಗ್ಗೆ ಮೆಲಕು ಹಾಕುವಂತೆ ಮಾಡುತ್ತವೆ. ಜನಸ್ನೇಹಿ ಪೋಲಿಸರಾಗಿ ಕೆಲಸ ಮಾಡಿ ಕರ್ತವ್ಯದಲ್ಲಿ ಒಳ್ಳೆಯ ಹೆಸರುಗಳಿಸಿ ಯಾವುದೇ ದೂರುಗಳಿಲ್ಲದಂತೆ ಒಳ್ಳೆಯ ಹೆಸರುಗಳಿಸಿ ವರ್ಗಾವಣೆಗೊಂಡರೆ ಸಾಕು ಎನ್ನುವ ಇಂದಿನ ದಿನಮಾನದಲ್ಲಿ ಸಾರ್ಥಕ 38 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಜವರೇಗೌಡರ ಕಾರ್ಯದಕ್ಷತೆಯು ಪೋಲಿಸರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ರಾಜೇಂದ್ರ ಪೋಲಿಸರು ನೊಂದು ಠಾಣೆಗೆ ತಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಬರುವ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳಬೇಕು. ಕರ್ತವ್ಯದಲ್ಲಿ ಶಿಸ್ತು ಮತ್ತು ಬದ್ಧತೆಯನ್ನು ಇಟ್ಟುಕೊಂಡು ಕಾನೂನಿನ ಪರಿಮಿತಿಯಲ್ಲಿ ಕೆಲಸ ಮಾಡಿದರೆ ಒಳ್ಳೆಯ ಹೆಸರು ಮತ್ತು ಕೀರ್ತಿಯು ನಮ್ಮನ್ನು ಹಿಂಬಾಲಿಸುತ್ತದೆ. ಆದ್ದರಿಂದ ನೊಂದ ಜನರ ಕಣ್ಣೀರನ್ನು ಒರೆಸಿ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವ ಜನಸ್ನೇಹಿ ಪೋಲಿಸರಂತೆ ಕೆಲಸ ಮಾಡಿ ಬಡಜನತೆಯ ಸೇವೆಯಲ್ಲಿ ಭಗವಂತನನ್ನು ಕಾಣಲು ಪ್ರಯತ್ನಿಸಬೇಕು ಎಂದು ರಾಜೇಂದ್ರ ಕರೆ ನೀಡಿದರು.
ಪಟ್ಟಣ ಪೋಲಿಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಎಂ.ಶಿವಕುಮಾರ್, ಗ್ರಾಮಾಂತರ ಠಾಣೆಯ ಆರಕ್ಷಕ ಉಪನಿರೀಕ್ಷಕ ಡಿ.ಪಿ.ಧನರಾಜ್, ಕಿಕ್ಕೇರಿ ಪೋಲಿಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಯಶ್ವಂತ್‍ಕುಮಾರ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸನ್ಮಾನಿತರ ಪರವಾಗಿ ಮಾತನಾಡಿದ ಎಎಸ್‍ಐ ಜವರೇಗೌಡ ಬಡ ಕುಟುಂಬದಲ್ಲಿ ಜನಿಸಿದ ನಾನು ಪೋಲಿಸ್ ಇಲಾಖೆಗೆ ಕರ್ತವ್ಯಕ್ಕೆ ಸೇರಿಕೊಂಡು ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಬದ್ಧತೆಯಿಂದ ಕೆಲಸ ಮಾಡಿದ್ದೇನೆ. ಜನರ ಸಹಕಾರ ಹಾಗೂ ನನ್ನ ಮೇಲಧಿಕಾರಿಗಳ ಮಾರ್ಗದರ್ಶನದಿಂದಾಗಿ ಒಳ್ಳೆಯ ಹೆಸರು ಗಳಿಸಿ ಯಾವುದೇ ಕಳಂಕವನ್ನು ಹೊತ್ತುಕೊಳ್ಳದೇ ನೆಮ್ಮದಿಯಿಂದ ಸೇವೆಯಿಂದ ನಿವೃತ್ತನಾಗುತ್ತಿದ್ದೇನೆ ಎಂದು ಭಾವುಕರಾದರು.

No comments:
Post a Comment