ಬೆಂಗಳೂರು, ಆ.23 ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಉಮಾಶ್ರೀ, ಆರ್.ವಿ.ದೇಶಪಾಂಡೆ, ಎಚ್.ಸಿ.ಮಹದೇವಪ್ಪ, ಟಿ.ಬಿ.ಜಯಚಂದ್ರ ಅವರು ಅನಂತಮೂರ್ತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದು, ಅನಂತಮೂರ್ತಿ ಅವರ ಪತ್ನಿ ಎಸ್ತಾರ್, ಪುತ್ರ ಶರತ್ ಮತ್ತು ಪುತ್ರಿ ಅನುರಾಧ ಅವರಿಗೆ
ಸಾಂತ್ವನ ಹೇಳಿದರು.
ಶುಕ್ರವಾರ ಸಂಜೆ ನಿಧನಹೊಂದಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ
ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಅಂತ್ಯಸಂಸ್ಕಾರ ಬೆಂಗಳೂರು ವಿಶ್ವವಿದ್ಯಾಲಯ
ಆವರಣದ ಕಲಾಗ್ರಾಮದಲ್ಲಿ ಶನಿವಾರ ಸಂಜೆ ಸಕಲ ಸರ್ಕಾರಿ ಗೌರವ ಮತ್ತು ಸಂಪ್ರದಾಯದಂತೆ
ನಡೆಯಿತು. ಅನಂತಮೂರ್ತಿ ಅವರ ಪುತ್ರ ಶರತ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಮಾಧ್ವ ಸಂಪ್ರದಾಯದಂತೆ ಯುಆರ್‌ಎ ಅಂತಿಮ ಸಂಸ್ಕಾರ ನೆರವೇರಿತು.ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರಸ್ವಾಮಿ.
ಹಿರಿಯ ರಂಗಕಲಾವಿದೆ ಜಯಶ್ರೀ.
ವಿಧಾನ ಪರಿಷತ್ ಸದಸ್ಯೆ ತಾರಾ.
No comments:
Post a Comment