Sunday, 3 August 2014

ಮಂಡ್ಯ- ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವದ ಅಂಗವಾಗಿ ಆಯೋಜಿಸಿದ್ದ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಪ್ರದರ್ಶನ

ಮಂಡ್ಯ, ಆ.3- ನಗರದ ಕಲಾಮಂದಿರದಲ್ಲಿ ಕಾವೇರಿ ನಾಟಕ ಸಂಘದ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವದ ಅಂಗವಾಗಿ ಆಯೋಜಿಸಿದ್ದ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು.
ಕರ್ನಾಟಕ ಸಂಘದ ಅಧ್ಯಕ್ಷ ಪೆÇ್ರ.ಬಿ.ಜಯಪ್ರಕಾಶಗೌಡ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಪೌರಾಣಿಕ ನಾಟಕಗಳು ಜೀವಂತವಾಗಿರುವುದು ರಂಗಸಂಗೀತದಿಂದ. ಶಾಸ್ತ್ರೀಯ ಸಂಗೀತವನ್ನು ರಂಗಸಂಗೀತದ ಮೂಲಕ ಜನರಿಗೆ ಪರಿಚಯಿಸಲಾಯಿತು ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಜನರಿಂದ ಇಂದಿಗೂ ಪೌರಾಣಿಕ ನಾಟಕ ಜೀವಂತವಾಗಿವೆ. ಈ ನಾಟಕಗಳಿಂದ ನೀತಿ ಜೊತೆಗೆ ಜೀವನವನ್ನು ರೂಪಿಸಿಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಎಂ.ಅಪ್ಪಾಜಪ್ಪ, ಸಂಘದ ಅಧ್ಯಕ್ಷ ಎಚ್.ಎಂ.ಮಂಜುನಾಥ್, ಕಾರ್ಯದರ್ಶಿ ಕಾಳೇನಹಳ್ಳಿ ಕೆಂಚೇಗೌಡ, ಸಾತನೂರು ವೆಂಕಟೇಶ್, ರಮೇಶ್, ಗೋವಿಂದೇಗೌಡ ಇತರರು ಭಾಗವಹಿಸಿದ್ದರು.

No comments:

Post a Comment