Wednesday, 20 August 2014

ಕೆ.ಆರ್.ಪೇಟೆ ಸುದ್ದಿಗಳು.

ಕೃಷ್ಣರಾಜಪೇಟೆ. ದೇವಾಲಯಗಳು ಮಾನವರಾದ ನಮಗೆ ಮಾನಸಿಕ ನೆಮ್ಮದಿಯನ್ನು ನೀಡುವ ಶ್ರದ್ಧಾಕೇಂದ್ರಗಳಾಗಿವೆ. ಆದ್ದರಿಂದ ಇಂದಿನ ಒತ್ತಡದ ಬದುಕಿನಲ್ಲಿ ಮನಸ್ಸಿಗೆ ನೆಮ್ಮದಿಯನ್ನು ಪಡೆಯಲು ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ದೇವರು ಮತ್ತು ಧರ್ಮಧ ಮೊರೆಹೋಗುವುದು ಅನಿವಾರ್ಯವಾಗಿದೆ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀಶ್ರೀ ಕುಮಾರ ಚಂದ್ರಶೇಖರನಾಥಸ್ವಾಮೀಜಿಗಳು ಕರೆ ನೀಡಿದರು.
ಅವರು ಇಂದು ತಾಲೂಕಿನ ಹೇಮಗಿರಿಯ ನಾಟನಹಳ್ಳಿ ಗ್ರಾಮದಲ್ಲಿ ಶ್ರೀ ಹೊನ್ನಾಲದಮ್ಮ ದೇವಿಯ ಪ್ರತಿಷ್ಠಾಪನೆ ಸಮಾರಂಭದ ಅಂಗವಾಗಿ ನಡೆದ ಹೋಮ ಮತ್ತು ಕಳಸ ಪೂಜೆಸಮಾರಂಭದಲ್ಲಿ ಭಾಗವಹಿಸಿ ನೂತನವಾಗಿ ಜೀರ್ಣೋದ್ಧಾರಗೊಂಡ ಗ್ರಾಮದ ಮುಖ್ಯಪ್ರಾಣ ಆಂಜನೇಯಸ್ವಾಮಿಯ ದೇವಾಲಯವನ್ನು ಲೋಕಾರ್ಪಣೆಗೊಳಿಸಿ ನೆರೆದಿದ್ದ ಸದ್ಭಕ್ತರನ್ನು ಉದ್ಧೇಶಿಸಿ ಆಶೀರ್ವಚನ ನೀಡಿದರು.
ಇಂದಿನ ಯುವಜನರು ಪಾಶ್ಚಿಮಾತ್ಯ ಸಂಸ್ಕøತಿಗೆ ಮಾರುಹೋಗಿ ನಮ್ಮ ಭಾರತೀಯ ಸಂಸ್ಕøತಿ ಮತ್ತು ಪರಂಪರೆಯನ್ನು ಮರೆಯುತ್ತಿದ್ದಾರೆ. ಗ್ರಾಮೀಣ ಪ್ರದೇಶದ ದೇವಾಲಯಗಳಿಗೆ ಹಬ್ಬ ಹರಿದಿನಗಳನ್ನು ಹೊರತುಪಡಿಸಿದರೆ ದೇವಾಲಯಕ್ಕೆ ಹೋಗವಿ ಭಗವಂತನ ಪೂಜೆಯನ್ನು ಮಾಡಿಸಿ ದೇವರನ್ನು ನೆನೆಯುವವರ ಸಂಖ್ಯೆಯಹು ಕಡಿಮೆಯಾಗುತ್ತಿದೆ. ನಮ್ಮ ಸಂಸ್ಕøತಿಯ ಪ್ರತಿಬಿಂಬವಾಗಿರುವ ದೇವಾಲಯಗಳನ್ನು ಉಳಿಸಿ ನಮ್ಮ ಮುಂದಿನ ತಲೆಮಾರಿಗೆ ಜೋಪಾನ ಮಾಡುವ ಕೆಲಸವನ್ನು ಯುವಜನರೇ ನಿಂತು ಮಾಡಬೇಕಾಗಿದೆ. ಸಂಕಟ ಬಂದಾಗ ವೆಂಕಟರಮಣ ಎಂದು ದೇವರ ನಾಮಸ್ಮರಣೆ ಮಾಡದೇ ದಿನಕ್ಕೆ ಒಂದು ಬಾರಿಯಾದರೂ ದೇವಾಲಯಕ್ಕೆ ಹೋಗಿ ಭಗವಂತನ ನಾಮಸ್ಮರಣೆ ಮಾಡಿಕೊಂಡು ಕೆಲಸ-ಕಾರ್ಯಗಳನ್ನು ಆರಂಭಿಸಿದರೆ ಕಾರ್ಯಸಿದ್ಧಿಯಾಗುವ ಜೊತೆಗೆ ಮಾನಸಿಕವಾಗಿಯೂ ನೆಮ್ಮದಿಯು ದೊರೆಯುತ್ತದೆ. ಆದ್ದರಿಂದ ಯುವಜನರು ಪಾಶ್ಚಾತ್ಯ ಸಂಸ್ಕøತಿಯ ಆಕರ್ಷಣೆಗೆ ಮಾರುಹೋಗಿ ನಮ್ಮತನವನ್ನು ಮರೆಯದೇ ಗುರು-ಹಿರಿಯರು ಹಾಗೂ ತಂದೆ-ತಾಯಿಗಳನ್ನು ಗೌರವಿಸುವ, ತೊಂದರೆಯಲ್ಲಿರುವ ಜನರಿಗೆ ಕೈಲಾದ ಸಹಾಯವನ್ನು ಮಾಡುವ ಮನೋಭಾವನೆಯನ್ನು ಬೆಳೆಸಿಕೊಂಡು ಸಮಾಜಮುಖಿಯಾಗಿ ಮುನ್ನಡೆಯಬೇಕು ಎಂದು ಕುಮಾರ ಚಂದ್ರಶೇಖರನಾಥ ಸ್ವಾಮೀಜಿಗಳು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನುಗ್ಗೇಹಳ್ಳಿಯ ಹಿರೇಮಠದ ಪೀಠಾಧಿಪತಿಗಳಾದ ಶ್ರೀಮಹೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ ವಿಶ್ವಕ್ಕೇ ಮಾದರಿಯಾದ ಸಂಸ್ಕøತಿಯನ್ನು ಹೊಂದಿರುವ ಭಾರತ ದೇಶದಲ್ಲಿ ಹುಟ್ಟಿರುವ ನಾವೇ ಧನ್ಯರಾಗಿದ್ದೇವೆ. ಮಾನವ ಜನ್ಮವು ಶಾಶ್ವತವಲ್ಲ, ಹುಟ್ಟು ಆಕಸ್ಮಿಕ, ಸಾವು ನಿಶ್ಚಿತವಾದ್ದರಿಂದ ಹುಟ್ಟು-ಸಾವಿನ ಮಧ್ಯದಲ್ಲಿ ಸಮಾಜ ಒಪ್ಪುವಂತಹ ಕೆಲಸ-ಕಾರ್ಯಗಳನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಿ ಬದುಕು ನಡೆಸಲು ಪ್ರಯತ್ನಿಸಬೇಕು. ನ್ಯಾಯ, ನೀತಿ ಹಾಗೂ ಧರ್ಮದ ಮಾರ್ಗದಲ್ಲಿ ಸಾಗುವ ಮೂಲಕ ಜೀವನದಲ್ಲಿ ಗುರಿ ತಲುಪಲು ಕಷ್ಟವಾದರೂ ಧರ್ಮವನ್ನು ಬಿಡದೇ ನೀತಿಯ, ಮಾವನತೆಯ ಮಾರ್ಗಧಲ್ಲಿ ಸಾಗಿದರೆ ಮೋಕ್ಷವು ದೊರೆಯುವ ಜೊತೆಗೆ ಮಾನಸಿಕ ನೆಮ್ಮದಿಯೂ ದೊರೆತು ಜೀವನದಲ್ಲಿ ಸಾರ್ಥಕತೆ ದೊರೆಯುತ್ತದೆ. ಆದ್ದರಿಂದ ಜನರು ಸ್ವಾರ್ಥಿಗಳಾಗದೇ ಗಳಿಸಿದ ಹಣದಲ್ಲಿ ಅಲ್ಪಭಾಗವನ್ನು ದಾನ-ಧರ್ಮಕ್ಕೆ ಬಳಸಿದರೆ ಮಾನವ ಜನ್ಮವು ಸಾರ್ಥಕವಾಗುತ್ತದೆ ಎಂದರು.
ಆದಿಚುಂಚನಗಿರಿಯ ಹೇಮಗಿರಿ ಶಾಖಾಮಠದ ಶ್ರೀ ಲಕ್ಷ್ಮೀನಾರಾಯಣನಾಥ ಸ್ವಾಮೀಜಿಗಳು, ಪಟ್ಟಣದ ಪುಟ್ಟಮ್ಮ ಚಿಕ್ಕೇಗೌಡ ನಾಗರಿಕ ಟ್ರಸ್ಟಿನ ಕಾರ್ಯದರ್ಶಿ ಸಮಾಜಸೇವಕ ಕೆ.ಸಿ.ರೇವಣ್ಣ, ಮುಖಂಡರಾದ ಗಂಗಾಧರ್, ನಿಂಗೇಗೌಡ, ಆಗಮಿಕ ಪ್ರವೀಣರಾದ ವೇದಬ್ರಹ್ಮ ರವೀಂದ್ರಕುಮಾರ್, ಈಶ್ವರ ದೇವಾಲಯದ ಅರ್ಚಕರಾದ ವಿರೂಪಾಕ್ಷ, ಶೀಳನೆರೆ ದಿನೇಶ್, ಮಡುವಿನಕೋಡಿ ಸಂತೋಷ್, ಎನ್.ಆರ್.ರವಿಶಂಕರ್, ಬಂಡಿಹೊಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಬೀರವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣೇಗೌಡ ಮತ್ತಿತರರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಬೀರವಳ್ಳಿ, ಮೂಡನಹಳ್ಳಿ, ಆಲೇನಹಳ್ಳಿ, ಕುಪ್ಪಹಳ್ಳಿ, ನಂದೀಪುರ, ಬಲ್ಲೇನಹಳ್ಳಿ ಗ್ರಾಮಗಳ ಸದ್ಭಕ್ತರು ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾಧಿಗಳು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.

No comments:

Post a Comment