Tuesday, 26 August 2014

ಕೆ.ಎಂ.ಎಫ್.ಕಾರ್ಯಕ್ರಮ.

ಮಂಡ್ಯ: ರಾಸುಗಳು ಕಾಲು ಬಾಯಿ ಜ್ವರದಿಂದ ಮೃತಪಟ್ಟಿದ್ದು, ಸರ್ಕಾರ ನೀಡುವ 25 ಸಾವಿರ ಧನ ಸಹಾಯದ ಜೊತೆಗೆ ಮಂಡ್ಯ ಹಾಲು ಒಕ್ಕೂಟದಿಂದಲೂ ಪ್ರತ್ಯೇಕವಾಗಿ 6 ಸಾವಿರ ಸಹಾಯ ಧನ ನೀಡಲಾಗುತ್ತಿದೆ ಎಂದು ಅಧ್ಯಕ್ಷ ಕದಲೂರು ರಾಮಕೃಷ್ಣ ತಿಳಿಸಿದರು.
ಮಂಡ್ಯದ ಪಾಂಡುರಂಗ ಸಮುದಾಯ ಭವನದಲ್ಲಿ  ಮಂಡ್ಯ ಹಾಲು ಒಕ್ಕೂಟದ ವತಿಯಿಂದ ನಡೆದ ಮಂಡ್ಯ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರಾದೇಶಿಕ ಸಭೆ, ಆಡಳಿತ ಮಂಡಳಿ ಸದಸ್ಯರ ಸನ್ಮಾನ, ರಾಸುಗಳಿಗೆ ಸಹಾಯಧನದ ವಿತರಣೆ ಸಮಾರಂಭದಲ್ಲಿ ಚೆಕ್ ವಿತರಿಸಿ ಮಾತನಾಡಿದ ಅವರು, ಮಂಡ್ಯ ತಾಲೂಕಿನ 240 ರಾಸುಗಳು ಮೃತಪಟ್ಟಿದ್ದು, ಮಾಲೀಕರಿಗೆ ತಲಾ 6 ಸಾವಿರ ರೂ. ಚೆಕ್‍ನ್ನು ವಿತರಿಸಿದರು.
ಹಾಲು ಉತ್ಪಾದಕರು ಡೈರಿಗಳಿಗೆ ಗುಣಮಟ್ಟದ ಹಾಲು ವಿತರಿಸುವಂತೆ ಮನವಿ ಮಾಡಿದರು. ಎಸ್.ಎಸ್.ಎಲ್.ಸಿ. ವಿಭಾಗದ ಮೂವರು ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಾಲು ಉತ್ಪಾದಕರ 9 ಮಕ್ಕಳಿಗೆ ತಲಾ 5 ಸಾವಿರ ರೂ. ಚೆಕನ್ನು ವಿತರಿಸಿದರು.
ಹಾಲು ಒಕ್ಕೂಟದಲ್ಲಿ ಹುದ್ದೆಗಳನ್ನು ತುಂಬಲಾಗುವುದು. ಡೈರಿಯ ಆರ್ಥಿಕ ಸ್ಥಿತಿ ಗತಿಗಳನ್ನು ನೋಡಿಕೊಂಡು ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಹೇಳಿದರು.
ವ್ಯವಸ್ಥಾಪಕ ನಿರ್ದೇಶಕ ಡಾ. ಕೆ. ಸ್ವಾಮಿ, ನಿರ್ದೇಶಕರಾದ ಬೆಟ್ಟಸ್ವಾಮಿಗೌಡ, ಎಸ್.ಪಿ. ಮಹೇಶ್, ಬಿ. ಚಂದ್ರ, ಶಿವಕುಮಾರ್, ಉಮೇಶ್, ಪ್ರಧಾನ ವ್ಯವಸ್ಥಾಪಕ ಜಗದೀಶ್, ವ್ಯವಸ್ಥಾಪಕ ವಿ.ಎಂ. ರಾಜು, ಉಪ ವ್ಯವಸ್ಥಾಪಕ ಡಾ. ಮೋಹನ್‍ಕುಮಾರ್, ಸಹಾಯಕ ವ್ಯವಸ್ಥಾಪಕ ಶಶಿಧರ್, ವಿಸ್ತರಣಾಧಿಕಾರಿ ಎನ್.ಆರ್. ಮರಿರಾಚಯ್ಯ, ನಂಜುಂಡಸ್ವಾಮಿ,  ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಮಂಡ್ಯ: ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಎಂ.ಆರ್. ಮಂಗಳಮ್ಮ ಅವಿರೋಧವಾಗಿ ಆಯ್ಕೆಯಾದರು.
ಗ್ರಾಮ ಪಂಚಾಯಿತಿಯಲ್ಲಿ 21 ಮಂದಿ ಸದಸ್ಯರಿದ್ದು, ಪಂಚಾಯಿತಿಯ ಉಳಿದ ಅವಧಿಗೆ ಮಂಗಳಮ್ಮ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಎಂ.ಆರ್. ಮಂಗಳಮ್ಮ ಅವರ ಆಯ್ಕೆಯನ್ನು ಚುನಾವಣಾಧಿಕಾರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜು ಅವರು ಪ್ರಕಟಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರನ್ನು ಸದಸ್ಯರುಗಳಾದ ಸಿದ್ದರಾಜು, ಕುಮಾರ್, ಪುರುಷೋತ್ತಮ್, ಶೇಖರ್, ನಾಗಲಿಂಗು, ಪವಿತ್ರ, ಸರೋಜಮ್ಮ, ವಸಂತಮ್ಮ, ಸುಶೀಲಮ್ಮ, ಸಿದ್ದರಾಮಯ್ಯ, ಶಂಕರ್, ಗುರುಮೂರ್ತಾಚಾರ್, ಮಹೇಶ್, ನಾರಾಯಣ್, ಕೆಂಪಮ್ಮ ಅಭಿನಂದಿಸಿದರು.

No comments:

Post a Comment