ಶಾಸಕ ಡಿ.ಸಿ.ತಮ್ಮಣ್ಣನವರಿಗೆ ಶಿಕ್ಷಕರಿಂದ "ವಿದ್ಯಾರ್ಥಿ ಬಂದು" ಬಿರುದು ಪ್ರಧಾನ.
ಭಾರತೀನಗರ.ಆ.8- ಚಿಕ್ಕರಸಿನಕೆರೆ ಹೋಬಳಿ ವ್ಯಾಪ್ತಿಯ ಶಿಕ್ಷಕರು ಶಾಸಕ ಡಿ.ಸಿ ತಮ್ಮಣ್ಣನವರನ್ನು "ವಿದ್ಯಾರ್ಥಿ ಬಂದು" ಎಂಬ ಬಿರುದು ನೀಡಿ ಸನ್ಮಾನಿಸಿ ಗೌರವಿಸಿದರು.
ಮದ್ದೂರಿನ ಗುರುಭವನದಲ್ಲಿ ಮದ್ದೂರು ತಾಲ್ಲೂಕು ಪತ್ರಿಕಾ ವರದಿಗಾರರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ಸಿ.ಎ.ಕೆರೆ ಹೋಬಳಿಯ ಶಿಕ್ಷಕರು ಇದೇ ವೇದಿಕೆಯಲ್ಲಿ ಶಾಸಕ ತಮ್ಮಣ್ಣನವರನ್ನು ಸನ್ಮಾನಿಸಿರು.
ಈ ಸಂದರ್ಭದಲ್ಲಿ ಶಾಸಕ ಡಿ.ಸಿ ತಮ್ಮಣ್ಣ ಮಾತನಾಡಿ, ಶಿಕ್ಷಣ ಕ್ಷೇತ್ರವು ಅಭಿವೃದ್ದಿ ಹೊಂದಿದರೆ ಕ್ಷೇತ್ರದ ವಿದ್ಯಾರ್ಥಿಗಳು ವಿದ್ಯಾವಂತರಾಗುವುದರ ಜೊತೆಗೆ ಬದುಕು ಅಸನಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದಲೇ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವುದರೊಂದಿಗೆ ದಿನಪತ್ರಿಕೆಗಳನ್ನು ತಾಲ್ಲೂಕಿನ ಎಲ್ಲಾ ಎಸ್‍ಎಸ್‍ಸಲ್‍ಸಿ ವಿದ್ಯಾರ್ಥಿಗಳಿಗೂ ಉಚಿತವಾಗಿ ನೀಡುತ್ತಿದ್ದೇನೆ ಎಂದು ತಿಳಿಸಿದರು.
ಪ್ರತಿ ಭಾರಿಯೂ ತಾಲ್ಲೂಕಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುತ್ತಿರುವುದು ಶ್ಲಾಘನೀಯ ವಿಚಾರ ಎಂದರು.
ಪತ್ರಿಕೆ ನೀಡುವುದರಿಂದ ವಿದ್ಯಾರ್ಥಿಗಳಿಗೆ ಚಿಕ್ಕವಯಸ್ಸಿನಲ್ಲಿಯೇ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಯುತ್ತದೆ. ಆ ಮೂಲಕವೇ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ವೃದ್ದಿಸಿಕೊಂಡು ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪುಟ್‍ವ್ಯಾಪಾರಿಗಳು ಕೂಡ ದಿನಪತ್ರಿಕೆಗಳನ್ನು ಕೊಂಡು ಓದುವ ಹವ್ಯಾಸವನ್ನು ಹೊಂದಿದ್ದಾರೆ. ಆದ್ದರಿಂದ ಆ ಪತ್ರಿಕೆಗಳ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಇದು ಕನ್ನಡ ಭಾಷಾ ಪತ್ರಿಕೆಗಳಲ್ಲೂ ಜರೂರಾಗಿ ಆಗಬೇಕಿದೆ ಎಂದರು.
ಮದ್ದೂರು ತಾಲ್ಲೂಕಿನಲ್ಲಿ ಉತ್ತಮ ಫಲಿತಾಂಶ ಬಂದಿರುವುದು ಹೆಮ್ಮೆಯ ವಿಷಯವಾಗಿದ್ದು, ತಾನು ಕೊಟ್ಟ ಕೊಡುಗೆ ಸಾರ್ಥಕವಾಗಿದೆ ಎಂದು ಪ್ರಶಿಂಸಿದರು.
ವಿದ್ಯಾರ್ಥಿಗಳು ಉತ್ತಮವಾಗಿ ಓದಿ ಶಾಲೆಗೆ, ಪೋಷಕರಿಗೆ ಹಾಗೂ ತಾಲ್ಲೂಕಿಗೆ ಕೀರ್ತಿತರಬೇಕೆಂದು ಸಲಹೆ ನೀಡಿದರು.
ಸಂಸದ ಸಿ.ಎಸ್.ಪುಟ್ಟರಾಜು, ಶಾಸಕ ಬಿ.ರಾಮಕೃಷ್ಣ, ಕ್ಷೇತ್ರ ಶಿಕ್ಷಣಾಧೀಕಾರಿ ಕೆ.ಕಾಳೀರಯ್ಯ, ಸಂಘದ ಅಧ್ಯಕ್ಷ ಅಣ್ಣೂರು ಸತೀಶ್, ಪೊಲೀಸ್ ಅಧೀಕ್ಷಕರ ಎ.ಎನ್.ಪ್ರಕಾಶ್‍ಗೌಡ, ಮನ್‍ಮುಲ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಪತ್ರಕರ್ತರಾದ ಮತ್ತಿಕೆರೆ ಜಯರಾಮು, ಕೆ.ಎನ್.ರವಿ, ಅಣ್ಣೂರು ಲಕ್ಷ್ಮಣ್, ಎಸ್.ಕೃಷ್ಣಸ್ವರ್ಣಸಂದ್ರ, ಬಿ.ಪಿ.ಪ್ರಕಾಶ್, ಜಿ.ಪಂ ಸದಸ್ಯ ಲಲಿತಾಪ್ರಕಾಶ್, ಸರ್ವೋಧಯ ಕರ್ನಾಟಕ ಪಕ್ಷಕದ ಜಿಲ್ಲಾಧ್ಯಕ್ಷ ಶ್ಯಾಂಸುಂದರ್, ಸಂಘದ ಉಪಾಧ್ಯಕ್ಷರಾದ ಎಂ.ಪಿ.ವೆಂಕಟೇಶ್, ಕೊಪ್ಪಶಿವಶಂಕರ್, ಉಪನ್ಯಾಸಕರಾದ ದೊಡ್ಡಬೋರಯ್ಯ, ಚಿರಫೌಂಡೇಶನ್ ಅಧ್ಯಕ್ಷ ಎಸ್.ಸಿ.ಯೋಗೇಶ್, ಶಿವಪುರ ಸತೀಶ್ ಸೇರಿದಂತೆ ಇತರರಿದ್ದರು. ಚಾಮನಹಳ್ಳಿ ಮಂಜು ನಿರೂಪಣೆ ಮಾಡಿದರೆ, ಅಂಬರಹಳ್ಳಿ ಸ್ವಾಮಿ ಸ್ವಾಗತಿಸಿದರು.

No comments:
Post a Comment