ಜಿಲ್ಲಾಧಿಕಾರಿ ಕಛೇರಿ ಕಟ್ಟಡ ರಕ್ಷಿಸಿ!
ಮಂಡ್ಯ-ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ 1939ರಂದು ಮಂಡ್ಯ ಜಿಲ್ಲೆ ಉದಯವಾದ ಸಂದರ್ಭದಲ್ಲಿ ಈ ಕಲ್ಲು ಕಟ್ಟಡ ನಿರ್ಮಿಸಲಾಗಿದೆ.
ಈ ಕಟ್ಟಡ ನಿರ್ಮಾಣವಾಗಿ 75 ವರ್ಷವಾಗಿದ್ದು, ಮಂಡ್ಯ ಜಿಲ್ಲೆ ಈ ವರ್ಷ ವಜ್ರಮಹೋತ್ಸವ ಆಚರಿಸಿಕೊಳ್ಳಲಿದೆ. ಜಿಲ್ಲಾಧಿಕಾರಿ ಕಚೇರಿ ಕಲ್ಲುಕಟ್ಟಡ ಮಂಡ್ಯನಗರಕ್ಕೆ ಶೋಭೆ ತರುವಂತಿದೆ. ಇಂತಹ ಅಪರೂಪದ ಕಲ್ಲುಕಟ್ಟಡ ನಿರ್ಮಾಣದಲ್ಲಿ ನೂರಾರು ವರ್ಷ ಬಾಳಿಕೆ ಬರುವಂತಹ ಗುಣಮಟ್ಟದಲ್ಲಿ ನಿರ್ಮಿಸಲಾಗಿದೆ.
ಆದರೆ ಈ ಹಿಂದಿನ ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಟ್ಟಡ ಅಪಾಯದ ಸ್ಥಿತಿಯಲ್ಲಿದೆ. ಏಕೆಂದರೆ, ಕಟ್ಟಡದ ಸುತ್ತಲು ಹೊರಗೋಡೆಯ ಮೇಲೆ ಬೆಳೆದಿರುವ ಆಲ ಹಾಗೂ ಅರಳಿಗಿಡಗಳು ಬೆಳೆದಿವೆ. ಪಶ್ಚಿಮದ ಗೋಡೆಯ ಮೇಲೆ ಬೆಳೆದಿರುವ ಅರಳಿಗಿಡವು ಈ ಕಟ್ಟಡಕ್ಕಿಂತಲ್ಲೂ ಹೆಚ್ಚು ಎತ್ತರ ಬೆಳೆದಿದೆ. ಈ ಗಿಡ ಮರವಾಗುವ ಸ್ಥಿತಿಯಲಿದೆ. ಇದರ ಬೇರು ಕಟ್ಟಡದ ಗೋಡೆಯ ಒಳಭಾಗಕ್ಕೆ ಹೋಗಿರುವುದರಿಂದ ಬೇರು ದಪ್ಪವಾಗಿ ಗೋಡೆ ಬಿರುಕು ಬಿಡುವ ಸ್ಥಿತಿಯಲ್ಲಿದೆ. ಶಿಥಿಲವಾಗಿ ಗೋಡೆ ಯಾವುದೇ ಸಮಯದಲ್ಲಾದರು ಬೀಳಬಹುದು .
ಜಿಲ್ಲಾಧಿಕಾರಿಗಳು ಈಗಲಾದರು ಕಟ್ಟಡದ ಕಡೆ ನೋಡಿ ಅದರ ರಕ್ಷಣೆ ಮಾಡುವ ತುರ್ತು ಅಗತ್ಯವಿದೆ .
No comments:
Post a Comment