Sunday, 10 August 2014

ಮಂಡ್ಯ-ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಮಟ್ಟ ಗರಿಷ್ಠ ಮಿತಿ ತಲುಪಿರುವುದರಿಂದ ನದಿಗೆ ಅಪಾರ ಪ್ರಮಾಣದ ನೀರು.

ಮಂಡ್ಯ, ಆಗಸ್ಟ್ 9. ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಮಟ್ಟ ಗರಿಷ್ಠ ಮಿತಿ ತಲುಪಿರುವುದರಿಂದ ನದಿಗೆ ಯಾವುದೇ ಕ್ಷಣದಲ್ಲಿ ಅಪಾರ ಪ್ರಮಾಣದ ನೀರು ಬಿಡುವ ಸಂಭವಿದ್ದು, ನದಿಯ ಪಾತ್ರದಲ್ಲಿನ ಗ್ರಾಮಸ್ಥರುಗಳು ತಕ್ಷಣ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕೆಂದು ಎಂದು ಮಂಡ್ಯ ಅಪರ ಜಿಲ್ಲಾಧಿಕಾರಿಗಳಾದ ಬಿ.ಆರ್.ಪೂರ್ಣಿಮಾ ಅವರು ಮನವಿ ಮಾಡಿದ್ದಾರೆ.
ಕೆ.ಆರ್.ಸಾಗರ ಅಣೆಕಟ್ಟೆಯಿಂದ ಹೆಚ್ಚುವರಿ ನೀರನ್ನು  ನದಿಗೆ ಬಿಟ್ಟ ಸಂದರ್ಭದಲ್ಲಿ ಉಂಟಾಗುವ ಪ್ರವಾಹ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಈ ಕೆಳಕಂಡ ದೂರವಾಣಿಗೆ ಕರೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಹೆಚ್ಚುವರಿ ಅರಕ್ಷಕ ಅಧೀಕ್ಷಕರು, ಮಂಡ್ಯ – 9480804802, ಉಪವಿಭಾಗಾಧಿಕಾರಿ ಪಾಂಡವಪುರ- 9620378501, ತಹಸೀಲ್ದಾರ್, ಶ್ರೀರಂಗಪಟ್ಟಣ-9481756522, ಶ್ರೀರಂಗಪಟ್ಟಣ ವಿಪತ್ತು ನಿರ್ವಹಣಾ ಕೇಂದ್ರ-08236-252029, ತಹಸೀಲ್ದಾರ್, ಪಾಂಡವಪುರ-9448101588, ಪಾಂಡವಪುರ ವಿಪತ್ತು ನಿರ್ವಹಣಾ ಕೇಂದ್ರ-08236-255128.

No comments:

Post a Comment