Tuesday, 26 August 2014

ಮಂಡ್ಯ-ಸಂಸದ ಸಿ.ಎಸ್.ಪುಟ್ಟರಾಜು ರವರಿಂದ ಸಭೆ.

ಮಂಡ್ಯ,ಆ.26- ಜಿಲ್ಲಾ ಪಂಚಾಯತಿಗೆ ಸಂಸದರ ನಿಧಿಯಿಂದ ನೀಡಲಾಗಿರುವ ಅನುದಾನ ಇನ್ನು ಮೂರುತಿಂಗಳೊಳಗೆ ನಿಗಧಿತ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗದೆ ಹೋದಲ್ಲಿ, ಅದನ್ನು ಹಿಂಪಡೆದು ಇತರಕೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದೆಂದು ಸಂಸದ ಪುಟ್ಟರಾಜುರವರು ಅಧಿಕಾರಿಗಳನ್ನು ಎಚ್ಚರಿಸಿದರು.
ನಗರದ ಜಿ.ಪಂ. ಕಾವೇರಿ ಸಭಾಂಗಣದಲ್ಲಿ ಸಂಸದ ಸಿಎಸ್ ಪುಟ್ಟರಾಜುರವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಅಭಿವೃದ್ಧಿ ಕಾಮಗಾರಿಗೆ ಸಂಸದರ ನಿಧಿಯಿಂದ ನೀಡಲಾದ ಅನುದಾನದ ಮೌಲ್ಯ ಹಾಗೂ ಅದರ ಬಳಕೆಯ ಕುರಿತಾಗಿ ಅಧಿಕಾರಿಗಳಿಗೆ ಸಂಸದರು ಪ್ರಶ್ನೆ ಮಾಡಿ ಕೇಳಿದಾಗಿ ಅಧಿಕಾರಿಗಳು ಮೂರು ಕೋಟಿ ಹಣ ಅನುದಾನವಾಗಿ ದೊರೆತಿದ್ದು, ಈ ವರೆಗೂ ಲಕ್ಷಗಳಷ್ಟು ಮಾತ್ರ ಬಳಕೆಯಾಗಿರುವುದಾಗಿ ಉತ್ತರಿಸಿದರು.
ಇದರಿಂದಾಗಿ ಅಸಮಾಧಾನಗೊಂಡ ಸಂಸದರು, ಹಣ ಬಳಕೆಯಾಗದೇ ಹೋದಲ್ಲಿ ವಾಪಸ್ ಪಡೆಯಲಾಗುವುದು. ಮುಂದಿನ ಪ್ರಗತಿ ಪರಿಶೀಲನೆ ಸಭೆಯೊಳಗೆ ಬಳಕೆಮಾಡಿ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಂತರ್ಜಲ ಅಭಿವೃದ್ಧಿಗೆ ಪ್ರತಿ ಗ್ರಾಮಗಳಲಿಯೂ ಎರಡು ಎಕರೆ ಭೂಮಿಯಲ್ಲಿ ಗುಂಡಿಗಳನ್ನು ಮಾಡಿ ನೀರನ್ನು ಸಂಗ್ರಹಿಸುವ ಕಾಮಗಾರಿಗೆ ಅಧಿಕ ಒತ್ತನ್ನು ನೀಡಲಾಗಿದ್ದು, ಕಾಮಗಾರಿಯು ಚಾಲನೆಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇದಕ್ಕೂ ಮುನ್ನ ಕೇಂದ್ರ ಸರ್ಕಾರ ವಸತಿ ನಿರ್ಮಾಣ ಯೋಜನೆಗಳಲ್ಲಿ ಒಂದಾದ ಇಂದಿರಾ ಆವಾಜ್ ವಸತಿ ಯೋಜನೆಯಡಿಯಲ್ಲಿ ಇದುವರೆಗೂ ಪ್ರಗತಿಯಾಗಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರವಾಗಿ ಜಿಲ್ಲೆಯಲ್ಲಿ ಈಗಾಗಲೆ ಬ್ಲಾಕ್ ಆಗಿರುವ ಮನೆಗಳ ಸವೇ ಮಾಡಲಾಗಿದ್ದು, ಎಲ್ಲಾ ಯೋಜನೆಗಳಿಂದ 25000 ಮನೆಗಳು ಬ್ಲಾಕ್ ಆಗಿದೆ. ನಿವೇಶನೆ ಇಲ್ಲದ ಫಲಾನುಭವಿಗಳನ್ನೂ ಸಹ ಆಯ್ಕೆ ಮಾಡಿರುವುದರಿಂದ ಪ್ರಗತಿ ಕುಂಠಿತವಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇದುವರೆಗೂ ಕೆ.ಆರ್.ಪೇಟೆಯಲ್ಲಿ 182 ಮನೆಗಳು, ಮದ್ದೂರಿನಲ್ಲಿ 82 ಮನೆಗಳು, ಮಳವಳ್ಳಿಯಲ್ಲಿ 59, ಮಂಡ್ಯದಲ್ಲಿ 39, ನಾಗಮಂಗಲದಲ್ಲಿ 71, ಶ್ರೀರಂಗಪಟ್ಟಣದಲ್ಲಿ 51 ಹಾಗೂ ಪಾಂಡವಪುರದಲ್ಲಿ 25 ಮನೆಗಳ ನಿರ್ಮಾಣವಾಗಿದೆ ಎಂದು ಅಧಿಕಾರಿಗಳು ವಸತಿ ಯೋಜನೆ ಪ್ರಗತಿಯ ವಿವರಣೆ ನೀಡಿದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದ ಸಂಸದರು ಈಗ ಪ್ರಾರಂಭವಾಗಿರುವ ಮನೆಗಳನ್ನು ಅನ್‍ಬ್ಲಾಕ್ ಮಾಡಿ, ಇನ್ನು ಉಳಿದಂತೆ ಫಲಾನುಭವಿಗಳಿಗೆ ನಿರ್ಮಣವನ್ನು ಅತೀ ಶೀಘ್ರವಾಗಿ ಮಾಡುವಂತೆ ಜಿಲ್ಲಾ ಪಂಚಾಯತಿಯು ಎಲ್ಲಾ ಇಓ ಗಳನ್ನು ಸಂಪರ್ಕಿಸಿ ಜಿಲ್ಲೆಯ ತಾಲ್ಲೂಕುಗಳಲಿ ಸರ್ವೇ ಕಾರ್ಯವನ್ನು ಮಾಡಿ, ಇಂದು ಆಂದೋಲನದ ರೀತಿಯಲ್ಲಿ ಪ್ರಗತಿಯಾಗುತ್ತಲಿರು ಶೌಚಾಲಯ ನಿರ್ಮಾಣದ ಜೊತೆಯಲ್ಲಿ ವಸತಿ ಸೇರಿದಂತೆ ಎಲ್ಲಾ ಯೋಜನೆಗಳು ಜನರಿಗೆ ತಲುಪಿಸುವಂತೆ ಶಾಸಕ ಚಲುವರಾಯ ಸ್ವಾಮಿ ಅಧಿಕಾರಿಗಲಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಅಜಯ್‍ನಾಗಭೂಷಣ್ ಮಾತನಾಡಿ ಯಾವ ಗ್ರಾ.ಪಂ.ಫಲಾನುಭವಿಗಳಿಗೆ ನಿವೇಶನದ ಸಮಸ್ಯೆ ಇದೆಯೋ ಅವರುಗಳಿಗೆ ಸರ್ಕಾರ ಭೂಮಿಯನ್ನು ಹುಡುಕಿ, ತಾಲ್ಲೂಕುಗಳಲ್ಲಿನ ಇಓಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿ ತಕ್ಷಣ ಫಲಾನುಭವಿಗಳಿಗೆ ನೀಡುವಂತೆ ಹೇಳಿದ ಅವರು ಗುಡಿಸಲು ವಾಸಿಗಳ ಸರ್ವೇಮಾಡಿ ತಾಲ್ಲೂಕುವಾರು ಮತ್ತು ಗ್ರಾ.ಪಂ ವಾರು ಮಾಹಿತಿಯನ್ನು ಪಡೆದು ಖಾಸಗಿ ಜಮೀನಿನಲ್ಲಿ ಗುಡಿಸಲಿನಲ್ಲಿರುವ ಪಲಾನುಬವಿಗಳಿಗೆ ಸರ್ಕಾರಿ ಜಮೀನಿನಲ್ಲಿ ಬಡಾವಣೆ ನಿರ್ಮಿಸಿ ಮನೆ ನಿರ್ಮಾಣ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ನಂರೇಂದ್ರ ಸ್ವಾಮಿ, ಚಲುವರಾಯ ಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಕೆ.ಸಿ.ನಾರಾಯಣಗೌಡ, ಜಿ.ಪಂ. ಸಿಇಓ ರೋಹಿಣಿ ಸಿಂಧೂರಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

No comments:

Post a Comment