ರೈತರ ವ್ಯವಸಾಯಕ್ಕೆ, ಕುಡಿಯುವ ನೀರಿಗೆ ಸಮಸ್ಯೆಯಿಲ್ಲ : ಸಿಎಂ
ಮೈಸೂರು,ಆ.5- ರಾಜ್ಯದೆಲ್ಲೆಡೆ ಚನ್ನಾಗಿ ಮಳೆಯಾಗುತ್ತಿದ್ದು, ಇನ್ನು 2-3 ದಿನಗಳಲ್ಲಿ ಕಾವೇರಿಯು ಸಹ ಭರ್ತಿಯಾಗಲಿದೆ. ರೈತರ ವ್ಯವಸಾಯಕ್ಕೆ ಮತ್ತು ಕುಡಿಯುವ ನೀರಿಗೆ ಯಾವುದೇ ರೀತಿ ಸಮಸ್ಯೆಯಾಗುವುದಿಲ್ಲ ಎಂದು ತಿಳಿಸಿದರು.
ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಗತಿ ಪರಿಶೀಲನಾ ಸಭೆಗಾಗಿ ಬೆಂಗಳೂರಿನಿಂದ ಲಘು ವಿಮಾನದಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಸುದ್ಧಿಗಾರರೊಂದಿಗೆ ಮಾತನಾಡಿದರು.
ತಮಿಳುನಾಡು-ಕರ್ನಾಟಕದ ನಡುವೆ ಕಾವೇರಿ ನೀರು ಸಮಸ್ಯೆಯೂ ಸಹ ಉದ್ಬವವಾಗುವುದಿಲ್ಲ, ಪ್ರತಿ ವರ್ಷವೂ ಸುಪ್ರೀಂ ಕೋರ್ಟ್‍ನ ಆದೇಶದಂತೆ ವರ್ಷಕ್ಕೆ 198 ಟಿ.ಎಂ.ಸಿ ನೀರನ್ನು ತಮಿಳುನಾಡಿಗೆ ನೀಡಬೇಕಾಗಿದ್ದು, ಕಳೆದ ಬಾರಿ ಇದೇ ರೀತಿಯಲ್ಲಿ ಹೆಚ್ಚು ಮಳೆಯಾದ ಕಾರಣದಿಂದಾಗಿ ಹೆಚ್ಚುವರಿ 68 ಟಿ.ಎಂ.ಸಿ ನೀರನ್ನು ಬಿಡಲಾಗಿತ್ತು, ಈ ಬಾರಿಯೂ ಸಹ ಹೆಚ್ಚು ನೀರನ್ನು ಬಿಡಬೇಕಾದಂತಹ ಪರಿಸ್ಥಿತಿ ಇದೆ ಎಂದು ಅಭಿಪ್ರಾಯ ಪಟ್ಟರು.
ಕೆ.ಆರ್.ಎಸ್ ಸಹ ಎರಡು ಮೂರು ದಿನಗಳಲ್ಲಿ ಭರ್ತಿಯಾಗಲಿದ್ದು,ಇನ್ನು ಮೂರ್ನಾಲ್ಕು ಅಡಿ ಮಾತ್ರ ಬಾಕಿ ಇದೆ. ಭರ್ತಿಯಾದ ನಂತರ ಬಾಗಿನ ಅರ್ಪಿಸಿ, ನಂತರ ಹೆಚ್ಚುವರಿ ನೀರನನು ತಮಿಳುನಾಢಿಗೆ ನೀಡಲಾಗುವುದು ಕರ್ನಾಟಕದ ಮೂರು ಕ್ಷೇತ್ರಗಳಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರು ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಲಿದೆ ಎಂದರು.
ಮೈಸೂರು ದಸರಾ ವಿಷಯಕ್ಕೆ ಸಂಬಂಧಿಸಿದಂತೆ ಮೈಸೂರು ಮಹಾರಾಣಿ ಪ್ರಮೋದಾ ದೇವಿರವರು ಪ್ರಸ್ಥಾಪಿಸಿದ ವಿಚಾರಕ್ಕೆ ಸಂಬಂದಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಅರಮನೆಯ ವಿಷಯ ಈಗಾಗಲೇ ಕೋಟಿನ ಮೆಟ್ಟಿಲೇರಿರುವುದರಿಂದ ಈ ಬಗ್ಗೆ ಏನನ್ನು ಹೇಳಲು ಬಯಸುವುದಿಲ್ಲ, ಅವರ ಖಾಸಗಿ ದರ್ಬಾರ್ ವಿಷಯಕ್ಕೆ ನಾವು ತಲೆಯನ್ನು ಹಾಕುವುದಿಲ್ಲ, ಖಾಸಗಿ ದರ್ಬಾರ್ ಅವರಿಗೆ ಬಿಟ್ಟದ್ದು, ಸರ್ಕಾರದ ವತಿಯಿಂದ ನೆಯಬೇಕಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು ಈಬಾರಿಯ ಸದನವನ್ನು ಬಿಜೆಪಿಯವರೆ ಹಾಳುಮಾಡಿದ್ದು, ಬಿಜೆಪಿಯ ಆಡಳಿತಾವಧಿಯಲ್ಲಿ ನಡೆದಂತಹ ಢಿನೋಟಿಫಿಕೇಷನ್ ಪ್ರಕರಣವ ನ್ನು ಸದಸಲ್ಲಿ ಪ್ರಸ್ತಾಪಿಸಿ ಇಡೀ ಸದನವನ್ನು ಹಾಳುಮಾಡಿದ್ದಾರೆ.ಅವರಿಗೆ ಸದನದಲ್ಲಿ ಪ್ರಸ್ತಾಪಿಸಲು ಯಾವುದೆ ವಿಷಯ ಸಿಗದೇ ಹೋದಕಾರಣ ಅವರೆ ಮಾಡಿದಂತಹ ಢಿನೋಟಿಫಿಕೇಷನ್ ಪ್ರಕರಣ ಎತ್ತಿ ತಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಬಾಗಲಕೋಟೆ ಜಿಲ್ಲೆಯಲ್ಲಿ ಕೊಳವೆ ಬಾವಿಗೆ ಬಿದ್ದಂತಹ ಮಗುವಿನ ವಿಚಾರ ಪ್ರಶ್ನೆಗೆ ಉತ್ತರಿಸಿದ ಅವರು ಮಗುವಿನ ರಕ್ಷಣೆಗಾಗಿ ಅಲ್ಲಿನ ಉಸ್ತವಾರಿ ಸಚಿವ ಎಸ್.ಆರ್.ಪಾಟೀಲ್ ಜೊತೆಯಲ್ಲಿಯೇ ಇದ್ದು ಮಗುವನ್ನು ಜೀವಂತವಾಗಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಸರ್ಕಾರವು ಮಗುವನ್ನು ಉಳಿಸುವ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡಲಿದೆ ಎಂದ ತಿಳಿಸಿದರು.
ನಂತರ ಜಿ.ಪಂ.ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರೊಡಗೂಡಿ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ಮುಖ್ಯಮಂತ್ರಿಗಳು ಕೇಳಿದ ಪ್ರಶ್ನೆಗಳಿಗೆ ಸರಿಯಾದ ರೀತಿಯಲ್ಲಿ ಉತ್ತರಿಸದಧಿಕಾರಿಗಳ ವಿರುದ್ಧ ಹರಿಹಾಯ್ದರು, ಕರ್ತವ್ಯ ನಿರ್ವಹಿಸದೆ ಬೇಜವಾಬ್ದಾರಿಯುತವಾಗಿ ಕಾಲಕಳೆಯುವ ಅಧಿಕಾರಿಗಳ ಅಮಾನತು ಮಾಡಲಾಗುವುದೆಂದು ಎಚ್ಚರಿಸಿದರು.
ಸಭೆಯಲ್ಲಿ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್, ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವ ಪ್ರಸಾದ್, ಶಾಸಕರುಗಳಾದ ತನ್ವೀರ್ ಸೇಠ್, ಎಂ.ಕೆ.ಸೋಮಶೇಖರ್, ವಾಸು, ಜಿ.ಟಿ.ದೇವೇಗೌಡ, ಹೆಚ್.ಎ.ವೆಂಕಟೇಶ್, ಹೆಚ್.ಪಿ.ಮಂಜುನಾಥ್, ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯರುಗಳಾದ ಗೋಮಧುಸೂಧನ್,ಧರ್ಮಸೇನ, ಮರಿಸಿದ್ದೇಗೌಡ, ಅಪರ ಜಿಲ್ಲಾಧಿಕಾರಿ ಪಾಲಯ್ಯ, ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ನಾಳೆ ಮುಖ್ಯಮಂತ್ರಿಗಳಿಂದ ಕಾವೇರಿಗೆ ಬಾಗಿನ
ಕೆ.ಆರ್.ಎಸ್‍ನ ಇಂದಿನ ನೀರಿನ ಮಟ್ಟ, 122.5 ಅಡಿಗಳಿದ್ದು, ನಾಳೆಗೆ ಭರ್ತಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಮುಖ್ಯಮಂತ್ರಿಗಳು ನಾಳೆ ಮಧ್ಯಾಹ್ನ 12 ರಿಂದ 1 ಗಂಟೆಯೊಳಗೆ ಕಾವೇರಿಗೆ ಬಾಗಿನ ಅರ್ಪಿಸುವುದಾಗಿ ಅವರು ಇಂದು ಜಿಲ್ಲಾ ಪಂಚಾಯತಿಯ ಪ್ರಗತಿ ಪರಿಶೀಲನೆಯ ಸಭೆಯಲ್ಲಿ ತಿಳಿಸಿದರು.
ಬನ್ನೂರಿನಲ್ಲಿ ರಸ್ತೆಯ ಕಾಮಗಾರಿಗೆ ಚಾಲನೆ ನೀಡಿ ತದನಂತರ ಮಧ್ಯಾಹ್ನದ ವೇಳೆಗೆ ಕೆ.ಆರ್.ಎಸ್.ನಲ್ಲಿ ಕಾವೇರಿಗೆ ಬಾಗಿನ ಅರ್ಪಿಸಿ ಪೂಜೆಯನ್ನು ಸಲ್ಲಿಸುವುದಾಗಿ ಅವರು ಹೇಳಿದರು.
ಕಾರ್ಯಪಾಲಕ ಅಭಿಯಂತರ ಶ್ರೀರಂಗರಾಜುರವರು ಸಂಜೆಮಿತ್ರ ಪತ್ರಿಕೆಯೊಂದಿಗೆ ಮಾತನಾಡಿ ನಾಳೆ 12ಗಂಟೆಯೊಳಗೆ ಕಾವೇರಿಯು 124 ಅಡಿಗಳಷ್ಟು ಭರ್ತಿಯಾಗಲಿದ್ದು, ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಲಿದ್ದಾರೆ.
ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ವಸತಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್, ನೀರಾವರಿ ಸಚಿವ ಎಂ.ಬಿ.ಪಾಟೀಲ್, ಲೋಕೋಪಯೋಗಿಸಚಿವ ಹೆಚ್.ಸಿ.ಮಹದೇವಪ್ಪ, ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್, ಸಹಕಾರಿ ಸಚಿವ ಹೆಚ್.ಎಸ್.ಮಹದೇವ ಪ್ರಸಾದ್, ಮಂಡ್ಯ ಸಂಸದ ಸಿ.ಎಸ್.ಪುಟ್ಟರಾಜು ಮತ್ತು ಮೈಸೂರಿನ ಹಾಗೂ ಮಂಡ್ಯ ಜಿಲ್ಲೆಯ ಶಾಸಕರುಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

No comments:
Post a Comment