ರೈತರ ಆದಾಯಕ್ಕಿಂದ ಖರ್ಚೆ ಹೆಚ್ಚಾಗಿದೆ - ಕೆಎಸ್ಪಿ
ಮಂಡ್ಯ, ಆ.30- ಕೆಲವು ವರ್ಷಗಳ ಹಿಂದೆ ರೈತನ ಬೆಳೆದ ಬೆಳೆಗೆ ಹಾಗೂ ಮಾಡುತ್ತಿದ್ದ ಖರ್ಚಿಗೆ ಸಮಾನವಾಗಿರುತ್ತಿತ್ತು. ಅದರೆ ಪ್ರಸಕ್ತ ದಿನದಲ್ಲಿ ಆದಾಯಕ್ಕಿಂತ ಖರ್ಚೆ ಹೆಚ್ಚಾಗುತ್ತಿರುವುದರಿಂದ ರೈತರು ಬೀದಿ ಬಂದು ನಿಲ್ಲುವಂತ ಪರಿಸ್ಥಿತಿಗೆ ಬಂದು ನಿಂತಿದ್ದಾರೆ ಎಂದು ಶಾಸಕ ಪುಟ್ಟಣ್ಣಯ್ಯ ವಿಷಾಧಿಸಿದರು.
ನಗರದ ಕಲಾಮಂದಿರದಲ್ಲಿ ಮಂಡ್ಯ ಜಿಲ್ಲಾ ಸರ್ಕಾರಿ, ಸಹಕಾರಿ ಹಾಗೂ ಖಾಸಗಿ ಸಕ್ಕರೆ ಕಾರ್ಖಾನೆಗಳ ಸಂಯುಕ್ತಾಶ್ರಯದಲ್ಲಿ, ಜಿಲ್ಲಾಡಳಿತ, ಹಾಗೂ ಜಿ.ಪಂ., ಕøಷಿ ವಿಶ್ವವಿದ್ಯಾನಿಲಯ ಬೆಂಗಳೂರು ಇವರ ಸಹಕಾರೊಂದಿಗೆ ನಡೆದ ಕಬ್ಬಿನ ಉತ್ಪಾದನೆ ಹಾಗೂ ಮೌಲ್ಯವರ್ಧನೆ- ಸವಾಲುಗಳು ಹಾಗೂ ಅವಕಾಶಗಳು ಕುರಿತಾದ ರಾಜ್ಯ ಮಟ್ಟದ ಕಾರ್ಯಗಾದಲ್ಲಿ ಪಾಲ್ಗೊಂಡು ಪ್ರಾಸ್ತಾವಿಕ ನುಡಿಯನ್ನಾಡಿದರು.
ಮಳೆ ಇಲ್ಲದೆ, ಸರಿಯಾದ ಸಮಯದಲ್ಲಿ ಬೆಳೆಗಳಿಗೆ ನೀರು ಹರಿಸದೆ ರೈತರು ಸಂಕಷ್ಟದಲ್ಲಿ ಇರುವಂತಹ ಸಂದರ್ಭದಲ್ಲಿ ಟನ್ ಕಬ್ಬಿಗೆ ಮುಂಗಡ ಹಣ ಹಾಗೂ ಸೂಕ್ತ ಬೆಂಬಲ ಬೆಲೆ ನಿಗಧಿ ಪಡಿಸಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ವಿಫಲವಾಗುತ್ತಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ರೈತರು ಬೆಳೆದ ಬೆಳೆಗಳೂ ಸಂಪೂರ್ಣವಾಗಿ ನಾಶವಾಗುವಂತ ಸಂದರ್ಭದಲ್ಲೂ ಸರ್ಕಾರ ಬೆಂಬಲ ಬೆಲೆ ನೀಡದೆ ಎಫ್‍ಆರ್‍ಪಿ ಬಗ್ಗೆ ಮಾತನಾಡಿಕೊಂಡು ನಿಂತಿವೆ. ಎಫ್‍ಆರ್‍ಪಿ ಬಗ್ಗೆ ಮಾತನಾಡುವ ಅವರು ರೈತರ ಸಂಕಷ್ಟಗಳಿಗೆ ಏಕೆ ಕೈಜೋಡಿಸುತ್ತಿಲ್ಲ ಎಂದು ಅಸಮದಾನ ವ್ಯಕ್ತಪಡಿಸಿದರು.
ರೈತರು ಬೆಳೆದಿರುವ ಕಬ್ಬಿನಿಂದ ಉತ್ಪಾದನೆಯಾಗುವ ಸಕ್ಕರೆ, ಎಥನಾಲ್, ಸ್ಪಿರೀಟ್, ವಿದ್ಯುತ್‍ನಿಂದ ಸರ್ಕಾರಕ್ಕೆ ಅಪಾರ ಪ್ರಾಮಾಣದಲ್ಲಿ ಲಾಭಾಂಶ ದೊರೆಯುತ್ತದೆ. ಇದರ ಬಗ್ಗೆ ಲೆಕ್ಕಹಾಕುವುದಾದರೆ ರೈತರ ಟನ್ ಕಬ್ಬಿಗೆ 4ರಿಂದ5 ಸಾವಿರದ ನೀಡಬೇಕಾಗುತ್ತದೆ. ರೈತರಿಗೆ ಯಾವುದೇ ರೀತಿಯ ಲೆಕ್ಕ ಬರುವುದಿಲ್ಲ ಎಂದು ಕೇವಲ ಟನ್ ಕಬ್ಬಿಗೆ 3000, ಮುಂಡವಾಗಿ 2500ರೂ. ನೀಡಲು ಹಿಂದು ಮುಂದು ನೋಡುತ್ತಿದ್ದಾರೆ ಎಂದು ಹೇಳಿದರು.
ಸರ್ಕಾರ ಮುಂದಿನ ದಿನಗಳಲ್ಲಿ ಸೂಕ್ತ ಬೆಂಬಲ ಬೆಲೆ ನೀಡದಿದ್ದರೆ ಸುಮಾರು 1ಲಕ್ಷ ಮಂದಿಯೊಂದಿಕೆ ಕೇಂದ್ರಕ್ಕೆ ಮುತ್ತಿಗೆ ಹಾಕಿ ಸರಿಯಾದ ಬೆಲೆ ನೀಡುವಂತೆ ಒತ್ತಾಯಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾರ್ಯಾಗಾರದಲ್ಲಿ ದಕ್ಷಿಣ ಭಾರತದ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷ ಸಿ.ಪವನ್ ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದರು. ಜಿಕೆವಿಕೆ ಸಂಶೋಧನಾ ನಿರ್ದೇಶಕ ಡಾ.ಎಂ.ಎ.ಶಂಕರ್, ಬೇಸಾಯ ಶಾಸ್ತ್ರ ಪ್ರಧಾನ ಸಂಶೋಧಕ ಡಾ.ಕೆ.ಶಿವರಾಮನ್, ಕೊಯಮತ್ತೂರು ತಳಿ ಅಭಿವøದ್ಧಿ ವಿಭಾಗದ ಪ್ರಧಾನ ಸಂಶೋಧಕ ಡಾ.ಪಿ.ಗೋವಿಂದರಾಜ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ.ಬೊರಸೆ, ಡಾ.ಕೆ.ಟಿ.ಪಾಂಡುರಂಗೇಗೌಡ, ಡಾ.ಟಿ.ಶಿವಶಂಕರ್, ಡಾ.ವಿ.ಎನ್.ಪಾಟೀಲ್, ಡಾ.ಜೆಮ್ಲನಾಯಕ್, ಡಾ.ಟಿ.ಇ.ನಾಗರಾಜು ಇತರರಿದ್ದರು.

No comments:
Post a Comment