Friday, 15 August 2014

68ನೆಯ ಸ್ವಾತಂತ್ರ್ಯ ದಿನದಂದು ರಾಷ್ಟ್ರವನ್ನುದ್ದೇಶಿಸಿ ಕೆಂಪುಕೋಟೆಯ ಆಳುವೇರಿಯಿಂದ ಪ್ರಧಾನಮಂತ್ರಿಯವರ ಭಾಷಣ

68ನೆಯ ಸ್ವಾತಂತ್ರ್ಯ ದಿನದಂದು ರಾಷ್ಟ್ರವನ್ನುದ್ದೇಶಿಸಿ ಕೆಂಪುಕೋಟೆಯ ಆಳುವೇರಿಯಿಂದ ಪ್ರಧಾನಮಂತ್ರಿಯವರ ಭಾಷಣ
“ರಾಷ್ಟ್ರೀಯ ಚಾರಿತ್ರ್ಯ ನಿರ್ಮಾಣಕ್ಕೆ ಇದು  ಸಂದರ್ಭ”
ಹೊಸ ಕಾರ್ಯಕ್ರಮಗಳ ಸರಣಿ ಪ್ರಕಟಣೆ :
•       ಬಡವರಿಗೆ ಬ್ಯಾಂಕ್ ಖಾತೆ, ಡೆಬಿಟ್ ಕಾರ್ಡ್ ಹಾಗೂ ಒಂದು  ಲಕ್ಷ ರೂಪಾಯಿ ವಿಮಾ ಮೊತ್ತ ಒದಗಿಸುವ ಪ್ರಧಾನ ಮಂತ್ರಿ ಜನ-ಧನ್ ಯೋಜನಾ .
•       ಭಾರತೀಯರ ಸಬಲೀಕರಣಕ್ಕೆ ಡಿಜಿಟಲ್ ಮೂಲಸೌಕರ್ಯ ಒಂದು ಆದ್ಯತೆ.
•       ಅಕ್ಟೋಬರ್ ಎರಡರಂದು ಸ್ವಚ್ಛಭಾರತ ಆಂದೋಲನಕ್ಕೆ ಚಾಲನೆ.
•       ಒಂದು ವರ್ಷದೊಳಗೆ ಎಲ್ಲ ಶಾಲೆಗಳಲ್ಲಿ ಶೌಚಾಲಯಗಳು.
•       ಸಂಸದ್ ಆದರ್ಶ ಗ್ರಾಮ ಯೋಜನೆಗೆ ಚಾಲನೆ.
•       ಯೋಜನಾ ಆಯೋಗದ ಸ್ಥಾನದಲ್ಲಿ ಹೊಸ ಸಂಸ್ಥೆ.
ರಾಷ್ಟ್ರೀಯ ಚಾರಿತ್ರ್ಯ ನಿರ್ಮಾಣದ ಕಾರ್ಯಕ್ಕೆ ಕೊಡುಗೆ ನೀಡಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಎಲ್ಲ ನಾಗರೀಕರಿಗೆ ಕರೆ ನೀಡಿದ್ದಾರೆ. 68ನೆಯ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯ ಆಳುವೇರಿಯಿಂದ ಅವರು  ಇದೇ ಮೊದಲ ಬಾರಿಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ ರಾಷ್ಟ್ರೀಯ ಹಿತದ ಮಾನದಂಡದಲ್ಲಿ ನಮ್ಮ ಪ್ರತಿಯೊಬ್ಬರ ಕೆಲಸ ಹೇಗೆ ಪ್ರತಿಫಲಿಸುತ್ತದೆ ಎಂಬುದರ ಆತ್ಮಾವಲೋಕನಕ್ಕೆ ಇದು ಸಂದರ್ಭವಾಗಿದೆ ಎಂದು ಅವರು ಹೇಳಿದರು. ನಮ್ಮೆಲ್ಲರ ಎಲ್ಲ ಕೆಲಸಗಳು ರಾಷ್ಟ್ರೀಯಹಿತಕ್ಕಾಗಿರಲಿ ಹಾಗೂ ರಾಷ್ಟ್ರ ನಿರ್ಮಾಣಕ್ಕಾಗಿ ಅದು ಕೊಡುಗೆ ಎಂದು ಪರಿಗಣಿತವಾಗಲಿ ಎಂದು ಪ್ರಧಾನಮಂತ್ರಿ ಹೇಳಿದರು.
ಸ್ವಾತಂತ್ರ್ಯ ದಿನದಂದು ಭಾರತದ ಜನತೆಗೆ ಶುಭ ಕೋರಿದ ಶ್ರೀ ನರೇಂದ್ರ ಮೋದಿ ತಾವು ಜನತೆಯನ್ನು ‘ಪ್ರಧಾನಮಂತ್ರಿ’ಯಾಗಿ ಸಂಬೋಧಿಸದೇ ‘ಪ್ರಧಾನ ಸೇವಕ’ ಅಂದರೆ ಮೊದಲ ಸೇವಕನಾಗಿ ಸಂಬೋಧಿಸುತ್ತಿರುವುದಾಗಿ ತಿಳಿಸಿದರು. ಶ್ರೀಸಾಮಾನ್ಯನ ಸಬಲೀಕರಣ ಉದ್ದೇಶ ಹೊಂದಿದ ಹಾಗೂ ಭಾರತದ  ಯುವಕರ ಸಾಮಥ್ರ್ಯ ಹೊರಹೊಮ್ಮಿಸುವ ಗುರಿ ಉದ್ದೇಶದ ನೂತನ ಸರಣಿ ಕಾರ್ಯಕ್ರಮಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಕಟಿಸಿದರು. ಬ್ಯಾಂಕ್ ಸೌಕರ್ಯ ಹಾಗೂ ಹಣಕಾಸು ಒಳಗೊಳ್ಳುವಿಕೆ ಸಾರ್ವತ್ರೀಕರಣಗೊಳಿಸುವ ಒಂದು ಪ್ರಮುಖ  ಹೊಸ ಕಾರ್ಯಕ್ರಮವಾಗಿ ಬಡ ಕುಟುಂಬಗಳಿಗೆ ಬ್ಯಾಂಕ್ ಖಾತೆ ,ಡೆಬಿಟ್ ಕಾರ್ಡ್ ಹಾಗೂ ಒಂದು ಲಕ್ಷ ರೂಪಾಯಿ ವಿಮೆ ಒದಗಿಸುವ ಪ್ರಧಾನಮಂತ್ರಿ ಜನ-ಧನ್ ಯೋಜನೆಯನ್ನು ಪ್ರಧಾನಮಂತ್ರಿ ಪ್ರಕಟಿಸಿದರು.
ಉದ್ಯೋಗ ನೀಡಬಲ್ಲ ಕೌಶಲ್ಯಗಳನ್ನು ಒದಗಿಸಲು ರಾಷ್ಟ್ರವ್ಯಾಪಿ ಕೌಶಲಭಾರತ ಆಂದೋಲನಕ್ಕೆ ಚಾಲನೆ ನೀಡಲಾಗುವುದು. ಭಾರತದಲ್ಲಿ ಬಂಡವಾಳ ಹೂಡಿ ಭಾರತದ ಕೈಗಾರಿಕಾ ಬೆಳವಣಿಗೆಗೆ ಸಹಾಯಕವಾಗುವಂತೆ ವಿಶ್ವದೆಲ್ಲೆಡೆಯ ಉತ್ಪಾದಕರಿಗೆ ಆಮಂತ್ರಣ ನೀಡುತ್ತಾ ಪ್ರಧಾನಮಂತ್ರಿ ‘ಭಾರತಕ್ಕೆ ಬನ್ನಿ ಮತ್ತು ನಿರ್ಮಿಸಿ’ ಎಂಬ ಕಣ್ಣೋಟವನ್ನು ಪ್ರಕಟಿಸಿದರು. ತಮ್ಮ ಔದ್ಯಮಿಕ ಚೈತನ್ಯವನ್ನು ಹೊರಹೊಮ್ಮಿಸಿ ಎಂದು ಭಾರತದ ಯುವ ಜನಾಂಗಕ್ಕೆ ಅವರು ಕರೆ ನೀಡಿ ನಮ್ಮ ಆಮದು ಸಂಪನ್ಮೂಲಕ್ಕೆ ಕೊಡುಗೆಯಾಗಿ ಭಾರತದಲ್ಲಿ ವಿವಿಧ ವಸ್ತುಗಳನ್ನು ತಯಾರಿಸುವ ಪರಿಶ್ರಮ ಪಡುವಂತೆ ಸಲಹೆ ಮಾಡಿದರು.
ಭಾರತದಲ್ಲಿ ತಯಾರಿಸಿದವು-ಮೇಡ್ ಇನ್ ಇಂಡಿಯಾ ಉತ್ಕøಷ್ಟತೆಗೆ ಪರ್ಯಾಯವಾಗಲಿ ಎಂದು ಅವರು ಆಶಿಸಿದರು.
ನಾಗರೀಕರ ಸಬಲೀಕರಣ ಡಿಜಿಟಲ್ ಮೂಲಸೌಕರ್ಯ ಆದ್ಯತೆ ಎಂದು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ ‘ಡಿಜಿಟಲ್ ಇಂಡಿಯಾ’ ನಿರ್ಮಾಣದತ್ತ ತಮ್ಮ ಸರ್ಕಾರದ ಸಂಕಲ್ಪವನ್ನು ಪ್ರಕಟಿಸಿದರು. ಜನರಿಗೆ ಸಕಾಲದಲ್ಲಿ ಮತ್ತು ಪರಿಣಾಮಕಾರಿ ರೀತಿಯಲ್ಲಿ ಮಾಹಿತಿ ಹಾಗೂ ಸೇವೆಯನ್ನು ಒದಗಿಸುವುದು ಡಿಜಿಟಲ್ ಇಂಡಿಯಾ ಗುರಿ. 
ಸ್ವಚ್ಛಭಾರvಕ್ಕೆÀ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಪ್ರಕಟಿಸಿ ಸ್ವಚ್ಛತೆಯ ಅಗತ್ಯವನ್ನು ಒತ್ತಿ ಹೇಳಿದರು. ಈ ವರ್ಷದ ಅಕ್ಟೋಬರ್ ಎರಡರಂದು ಸ್ವಚ್ಛ  ಭಾರತ ಆಂದೋಲನಕ್ಕೆ  ಮಹಾತ್ಮಾ ಗಾಂಧೀಯವರ 150ನೆಯ ಜಯಂತಿ ಸಮಯಕ್ಕೆ ಅಂದರೆ 2019ಕ್ಕೆ ಈ ಗುರಿ ಪೂರ್ಣಗೊಳಿಸುವ ಆಶಯವನ್ನು ಅವರು ವ್ಯಕ್ತಪಡಿಸಿದರು. ಇದಕ್ಕೆ ಸಂಬಂಧಿಸಿದಂತೆ ತತ್‍ಕ್ಷಣದಿಂದ ಜಾರಿಗೆ ಬರುವ ಸ್ವಚ್ಛಭಾರತದ ಮೊದಲ ಹೆಜ್ಜೆಯಾಗಿ ಎಲ್ಲ ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣ ಪ್ರಕಟಿಸಿದರು. ಒಂದು ವರ್ಷದೊಳಗೆ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳು ಸೇರಿದಂತೆ ಈ ಗುರಿ ತಲುಪುವ ಉದ್ದೇಶ ಪ್ರಕಟಿಸಿದರು. ತಮ್ಮ ತಮ್ಮ ಕ್ಷೇತ್ರದಲ್ಲಿ ಒಂದು ಮಾದರಿ ಗ್ರಾಮ ನಿರ್ಮಾಣವನ್ನು 2016ರ ವೇಳೆಗೆ ನಿರ್ಮಿಸುವಂತೆ ಪ್ರತಿಯೊಬ್ಬ ಸಂಸತ್ ಸದಸ್ಯರಿಗೆ ಆಮಂತ್ರಣ ನೀಡಿದ ಪ್ರಧಾನಮಂತ್ರಿ ‘ಸಂಸದ್ ಆದರ್ಶ್ ಗ್ರಾಮ್ ಯೋಜನೆ’ ಚಾಲನೆಯನ್ನು ಪ್ರಕಟಿಸಿದರು. ಶ್ರೀ ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನವಾದ ಅಕ್ಟೋಬರ್ 11 ರಂದು ಈ ಯೋಜನೆಯ ಸಂಪೂರ್ಣ ನೀಲನಕ್ಷೆಯನ್ನು ಪ್ರಕಟಿಸಲಾಗುವುದೆಂದು ಅವರು ತಿಳಿಸಿದರು.
ಯೋಜನಾ ಆಯೋಗದ ಬದಲಿಗೆ ಹೊಸ ಸಂಸ್ಥೆಯೊಂದರ ರಚನೆಯನ್ನು ಶ್ರೀ ನರೇಂದ್ರ ಮೋದಿ ಪ್ರಕಟಿಸಿದರು. ಈ ಹೊಸ ಸಂಸ್ಥೆ ದೇಶದ ಒಕ್ಕೂಟ ಸಂರಚನೆಗೆ ಸಂಮ್ಮಾನ ತೋರುವುದೆಂದು ಪ್ರಧಾನಿ ಪ್ರತಿಪಾದಿಸಿದರು.
ಸಂಸತ್ತಿನ ಉತ್ಪಾದಕ ಅಧಿವೇಶನಕ್ಕಾಗಿ ವಿರೋಧ ಪಕ್ಷಗಳೂ ಸೇರಿದಂತೆ ಎಲ್ಲ ಸಂಸತ್ ಸದಸ್ಯರಿಗೆ ವಂದನೆ ತಿಳಿಸಿದ ಪ್ರಧಾನಿ ಒಮ್ಮತದ ಕಡೆ ಮುಂದುವರೆಯಲು ತಮ್ಮ ಸರ್ಕಾರ ಆಶಿಸಿದೆ ಎಂದು ಹೇಳಿದರು.
ತಾವು ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಕೇಂದ್ರ ಸರ್ಕಾರದ ಕಾರ್ಯಸಂಸ್ಕøತಿಯಲ್ಲಿ ಸಕಾರಾತ್ಮಕ ಬದಲಾವಣೆ ಬಂದಿದೆ ಎಂಬ ವರದಿಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಕರ್ತವ್ಯ ಶ್ರದ್ಧೆಯಿಂದ ಕೆಲಸ ಮಾಡುವುದು ಸರ್ಕಾರಿ ನೌಕರರ ನಿಯಮವಾಗಿದ್ದು ಇಂತಹ ವರದಿಗಳ ಬಗ್ಗೆ ತಮಗೆ ಆಶ್ಚರ್ಯ ಉಂಟಾಗಿದೆ ಎಂದು ಹೇಳಿದರು.  ಈ ಸಂಗತಿ ಸುದ್ದಿಯಾಗುವುದಾದರೆ ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯ ಸಾಂಘಿಕ ಔನತ್ಯ ಹೇಗೆ ಕೆಳಮಟ್ಟಕ್ಕೆ ಬಿದ್ದಿದೆ ಎಂದು ಇದು ತೋರಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. “ಮೇರಾ ಕ್ಯಾ, ಮುಜೇ ಕ್ಯಾ” ಅಂದರೆ ‘ನನ್ನದೇನು,ನನಗೇನು’ಎಂಬ ಸ್ವಾರ್ಥ ಧೋರಣೆಯನ್ನು ಕೈಬಿಡುವಂತೆ ಸಮಾಜಕ್ಕೆ ಪ್ರಧಾನಿ ಕರೆ ನೀಡಿದರು.  

ತಾವು ಅಧಿಕಾರ ವಹಿಸಿಕೊಂಡ ನಂತರ ಸರ್ಕಾರದ ವಿವಿಧ ಇಲಾಖೆಗಳ ನಡುವೆ ವಿರಸ ಅನೈಕಮತ್ಯ ಸ್ಥಿತಿಗಳನ್ನು ತಾವು ನೋಡಿ ತಮಗೆ ಬಹಳವೇ ದಿಗಿಲಾಯಿತೆಂದೂ ಪ್ರಧಾನಿ ಹೇಳಿದರು. ಈ ಪರಿಸ್ಥಿತಿಯನ್ನು ತಾವು ಬಗೆಹರಿಸುವುದಾಗಿ ಜನತೆಗೆ ಭರವಸೆ ನೀಡಿದ ಅವರು ಭಾರತ ಸರ್ಕಾರ ಒಂದು ಬಿಡಿಭಾಗಗಳ ಜೋಡಿಸಿದÀ ಘಟಕವಾಗಿ ಕೆಲಸಮಾಡುವುದಕ್ಕಿಂತ ಒಂದು ಜೈವಿಕ ಸಂಘಟನೆಯಾಗಿ ಆಗುವಂತೆ ತಾವು ಇದನ್ನು ಮಾರ್ಪಡಿಸುವುದಾಗಿ ಹೇಳಿದರು.
ಅಭಿವೃದ್ಧಿ ಮತ್ತು ಸದಾಡಳಿತ ಇವೆರಡು ಮಾತ್ರಾ ಎರಡು ಹಳಿಗಳಾಗಿದ್ದು ರಾಷ್ಟ್ರವನ್ನು ಮುಂದಕ್ಕೆ ಕೊಂಡೊಯ್ಯಬಲ್ಲದು ಎಂದು ಪ್ರಧಾನಿ ತಿಳಿಸಿದರು. ದೇಶದಲ್ಲಿ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಪ್ರಧಾನಿ ದಿಗ್ಭ್ರಮೆ ವ್ಯಕ್ತಪಡಿಸಿದರು. ಕುಟುಂಬವೊಂದರಲ್ಲಿ ಪುತ್ರಿಯರಿಗೆ ಬಹಳ ಪ್ರಶ್ನೆಗಳನ್ನು ಹಾಕಲಾಗುತ್ತದೆ ಎಂದು ಉಲ್ಲೇಖಿಸಿದ ಪ್ರಧಾನಿ ಪೋಷಕರು ತಮ್ಮ ಗಂಡು ಮಕ್ಕಳನ್ನು ಸಹ ಪ್ರಶ್ನಿಸಬೇಕು ಮತ್ತು ಅವರ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು ಎಂದು ಕರೆ ನೀಡಿದರು. 

ಪ್ರತಿಯೊಬ್ಬ ಲೈಗಿಂಕ ದೌರ್ಜನ್ಯ ನಡೆಸುವ ವ್ಯಕ್ತಿ ಮತ್ತೊಬ್ಬರ ಪುತ್ರ ಎಂದು ಪ್ರಧಾನಿ ಹೇಳಿದರು. ಅದೇ ರೀತಿಯಲ್ಲೇ ಭಯೋತ್ಪಾÀದಕತೆ ಅಥವಾ ಮಾವೋವಾದಕ್ಕೆ ಶರಣಾಗಿರುವ ತಪ್ಪು ಮಾರ್ಗದರ್ಶನ ಪಡೆದ ಯುವಕರಿಗೆ ಹಿಂಸೆಯನ್ನು ತ್ಯಜಿಸಿ ರಾಷ್ಟ್ರೀಯ ಮುಖ್ಯವಾಹಿನಿಗೆ ಹಿಂತಿರುಗುವಂತೆ ಅವರು ಕರೆ ನೀಡಿದರು. ಪ್ರಧಾನ ಮಂತ್ರಿಯವರು  ಶ್ರೀ ಅರವಿಂದೋ ಹಾಗೂ ಸ್ವಾಮಿ ವಿವೇಕಾನಂದ ಅವರನ್ನು ಉಲ್ಲೇಖಿಸಿ ಅವರುಗಳು ಕಂಡ ಭಾರತ ಮತ್ತೊಮ್ಮೆ ಜಗದ್ಗುರುವಾಗಬೇಕೆಂಬ ಕಣ್ಣೋಟವನ್ನು ಪ್ರಸ್ತಾಪಿಸಿ ಈ ಕಣ್ಣೋಟ ಸಾಕಾರಗೊಳ್ಳಲು ನೆರವಾಗುವಂತೆ ಸಕಲ ಭಾರತೀಯರಿಗೆ ಕರೆ ನೀಡಿದರು.



No comments:

Post a Comment