Saturday, 23 August 2014

ಅನಂತಮೂರ್ತಿ ಅವರ ನಿಧನ- ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಕಂಬನಿ.

ಕನ್ನಡ ಸಾರಸ್ವತ ಲೋಕದ ದಿಗ್ಗಜ ಹಾಗೂ ನವ್ಯ ಸಾಹಿತ್ಯ ಚಳುವಳಿಯ ಪಿತಾಮಹರಲ್ಲಿ ಒಬ್ಬರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಶ್ರೀ ಉಡುಪಿ ರಾಜಗೋಪಾಲಚಾಯಅನಂತಮೂರ್ತಿ ಅವರ ನಿಧನಕ್ಕೆ              ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಕಂಬನಿ ಮಿಡಿದಿದ್ದಾರೆ.
    ಸಾಹಿತಿಗಳಿಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕು ಎಂದು ಪ್ರತಿಪಾದಿಸಿದ ಪದ್ಮಭೂಷಣ  ಶ್ರೀ ಅನಂತಮೂರ್ತಿ ಅವರು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳಿಗೆ ಸದಾ ಕಾಲ ಸ್ಪಂದಿಸುತ್ತಿದ್ದರು. ರಾಜ್ಯದ ಹಾಗೂ ಶ್ರೀಸಾಮಾನ್ಯನ ಹಿತ ಕಾಯುವಲ್ಲಿ ವಿಶೇಷ ಕಳಕಳಿ ಹಾಗೂ ಅಪ್ರತಿಮ ಬದ್ಧತೆ   ತೋರುತ್ತಿದ್ದ ಅವರು ಈ ನಿಟ್ಟಿನಲ್ಲಿ ತಮ್ಮ ಸ್ಪಷ್ಟ ಅಭಿಪ್ರಾಯ ಹಾಗೂ ದಿಟ್ಟ ನಿಲುವು  ಪ್ರಕಟಿಸುವಲ್ಲಿ ಎಂದೂ ಹಿಂಜರಿಯುತ್ತಿರಲಿಲ್ಲ. ಸಮಾಜವಾದಿ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಶ್ರೀ ಅನಂತಮೂರ್ತಿ ಅವರು ನಿಜವಾದ ಅರ್ಥದಲ್ಲಿ ಸಾರ್ವಜನಿಕ ಬುದ್ದಿಜೀವಿ ಎನಿಸಿದ್ದರು.
      ಎಲ್ಲಾ ವಿಷಯ ಮತ್ತು ವಸ್ತುಗಳನ್ನೂ ತಮ್ಮ ವಿಶಿಷ್ಠ ಹಾಗೂ ವಿಭಿನ್ನ ದೃಷ್ಠಿಕೋನದೊಂದಿಗೆ ವಿಮರ್ಶಿಸುವ ಮತ್ತು ವಿಶ್ಲೇಷಿಸುವ ವಿಶೇಷ ಕಲೆಯನ್ನು ರೂಢಿಸಿಕೊಂಡಿದ್ದ ಶ್ರೀ ಅನಂತಮೂರ್ತಿ ಅವರು ಚಿಂತನಾ ಸಾಗರವೇ ಆಗಿದ್ದರು. ಕಿರಿಯ ಬರಹಗಾರರ ಬಗ್ಗೆ ಅಪಾರ ಪ್ರೀತಿ ತೋರುತ್ತಿದ್ದ     ಶ್ರೀ ಅನಂತಮೂರ್ತಿ ಅವರು ತಮ್ಮ ಅನುಭವದ ಧಾರೆ ಎರೆದು ಅವರನ್ನು ಬೆಳೆಸಲು ಪ್ರೋತ್ಸಾಹಿಸುತ್ತಿದ್ದರು. ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿಯೂ ಕನ್ನಡ ಸಾಹಿತ್ಯದಲ್ಲಿ ಕೃಷಿ ಮಾಡಿ, ಭಾಷಾ ಜಗತ್ತಿನಲ್ಲಿ                  ಸಾಂಸ್ಕøತಿಕ ರಾಯಭಾರಿಯಾಗಿ ಬೆಳೆದು ಬೆಳಗಿದ ಶ್ರೀ ಅನಂತಮೂರ್ತಿ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕದಲ್ಲಿ ಶೋಕ ಆವರಿಸಿದಂತಾಗಿದೆ ಎಂದು ಶ್ರೀ ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ಬಣ್ಣಿಸಿದ್ದಾರೆ.

No comments:

Post a Comment