Sunday, 3 August 2014

ಕೆ.ಆರ್.ಪೇಟೆ-ಸುದ್ದಿ.

ಕೆ.ಆರ್.ಪೇಟೆ.ಆ.03,(ಶ್ರೀನಿವಾಸ್)-ರಾಜ್ಯದ ಬೆಳಗಾವಿ ಗಡಿಭಾಗದಲ್ಲಿ ಕನ್ನಡ ವಿರೋಧಿ ಕೃತ್ಯಗಳನ್ನು ನಡೆಸುತ್ತಿರುವ ಎಂ.ಇ.ಎಸ್ ಮತ್ತು ಶಿವಸೇನೆ ಕಾರ್ಯಕರ್ತರನ್ನು ಬಂಧಿಸಿ ಅವರನ್ನು ಬಗ್ಗು ಬಡಿಯದೇ ಕನ್ನಡ ಪರ ಹೋರಾಟಗಾರರನ್ನು ಯಳ್ಳೂರು ಚಲೋ ಕಾರ್ಯಕ್ರಮಕ್ಕೆ ಹೋಗುವ ಸಂದರ್ಭದಲ್ಲಿ ಬಂಧಿಸಿರುವ ರಾಜ್ಯ ಸರ್ಕರದ ಕನ್ನಡ ವಿರೋಧಿ ನೀತಿಯನ್ನು ಖಂಡಿಸಿ ತಾಲೂಕು ನಿಸ್ವಾರ್ಥಿ ಕನ್ನಡ ಜಾಗೃತಿ ವೇದಿಕೆಯ ಕಾರ್ಯಕರ್ತರು ಪಟ್ಟಣದ ಟಿ.ಬಿ.ವೃತ್ತದಲ್ಲಿ ರಸ್ತೆ ತಡೆ ಚಳುವಳಿ ನಡೆಸಿದರು.
ತಾಲೂಕು ನಿಸ್ವಾರ್ಥಿ ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷ ಕೆ.ಆರ್.ಚೇತನ್‍ಕುಮಾರ್, ವೇದಿಕೆಯ ಸಲಹೆಗಾರ ಪುರಸಭಾ ಸದಸ್ಯ ಕೆ.ವಿನೋಧ್, ಕಾರ್ಯಾಧ್ಯಕ್ಷ ಕೆ.ಎಚ್.ಧನಂಜಯ, ಪ್ರಧಾನ ಕಾರ್ಯದರ್ಶಿ ಎಲ್.ಕೆ. ಜಯರಾಂ, ಜಂಟಿ ಕಾರ್ಯದರ್ಶಿ ರಾಜೇಶ್,   
 ಉಪಾಧ್ಯಕ್ಷ ಅರುಣ್‍ಕುಮಾರ್,  ಖಜಾಂಚಿ ಎಂ.ಪಿ.ಅರುಣ್‍ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಕೆ.ಟಿ.ರವಿಚಂದ್ರ, ಸಂಘಟನಾ ಕಾರ್ಯದರ್ಶಿ ಎ.ಬಿ.ಪ್ರಮೋದ್, ಸಿದ್ದಿಕ್‍ಷರೀಪ್, ಕಾನೂನು ಸಲಹೆಗಾರ ಬಸವರಾಜು, ಮಹಿಳಾ ಘಟಕದ ಅಧ್ಯಕ್ಷೆ ಸವಿತಾರಮೇಶ್, ಉಪಧ್ಯಕ್ಷೆ ಹರ್ಷಿತಾ, ಪಿ.ಎಚ್.ರವಿಕುಮಾರ್, ಚಂದ್ರೇಗೌಡ, ವೆಂಕಟೇಶ್, ಎಂ.ಪಿ.ಚಂದ್ರಹಾಸ್, ಪಿ.ಎನ್.ಲೋಕೇಶ್, ಗುರುಪ್ರಸಾದ್, ಆನಂದ್, ಸಿ.ಕೆ.ಲೋಕೇಶ್ ಮತ್ತಿತರರ ನೇತೃತ್ವದಲ್ಲಿ ವೃತ್ತದಲ್ಲಿ ಮಾನ ಸರಪಳಿ ನಿರ್ಮಿಸಿ ಕೆಲ-ಕಾಲ ಮೈಸೂರು ಚನ್ನರಾಯಪಟ್ಟಣ ಮುಖ್ಯ ರಸ್ತೆ ಬಂದ್ ಮಾಡಿ ಎಂ.ಇ.ಎಸ್. ಮತ್ತು ಶಿವಸೇನಾ ಕಾರ್ಯಕರ್ತರ ವಿರುದ್ಧ ಘೋಷಣೆ ಕೂಗಿದರು. ಅಲ್ಲದೇ ರಾಜ್ಯ ಸರ್ಕಾರವು ಕನ್ನಡ ವಿರೋಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ಇರುವುದನ್ನು ತೀವ್ರವಾಗಿ ಖಂಡಿಸಿದರು.  ಬೆಳಗಾವಿಯಲ್ಲಿ ಮರಾಠಿಗರು ನಡೆಸುತ್ತಿರುವ ಪುಂಡಾಟಿಕೆಯನ್ನು ತಡೆಯುವ ಕೆಲಸ ಮಾಡದೇ ಕನ್ನಡಪರ ಹೋರಾಟಗಾರರನ್ನು ಬಂಧಿಸುತ್ತಿರುವ ಕರ್ನಾಟಕ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಧಾನ ವ್ಯಕ್ತಪಡಿಸಿದರು.   

No comments:

Post a Comment