Sunday, 31 August 2014


ಪಾಂಡವಪುರ: ಕೆಎಸ್‍ಆರ್‍ಡಿಸಿ ಬಸ್ ಬೈಕ್‍ಗೆ  ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಕೆ.ಆರ್.ಪೇಟೆ ರಸ್ತೆಯ ಡಾಮಡಹಳ್ಳಿ ಕ್ರಾಸ್ ಬಳಿ ಭಾನುವಾರ ಸಂಜೆ ನಡೆದಿದೆ.
ತಾಲೂಕಿನ ಕೆ.ಬೆಟ್ಟಹಳ್ಳಿ ಗ್ರಾಮದ ಕುಮಾರ್ ಆಲಿಯಾಸ್ ಅಮ್ಮಣ್ಣಿ(33) ಎಂಬಾತನೇ ಅಪಘಾತದಲ್ಲಿ ಸಾವನ್ನಪ್ಪಿರುವ ದುದೈವಿ.
ಕುಮಾರ್ ಆಲಿಯಾಸ್ ಅಮ್ಮಣ್ಣಿ ರೈಲ್ವೇ ಸ್ಟೇಷನ್‍ಗೆ ಹೋಗಿ ಮತ್ತೇ ಸ್ವ ಗ್ರಾಮ ಕೆ.ಬೆಟ್ಟಹಳ್ಳಿಗೆ ವಾಪಸ್ಸಾಗುವ ಸಂದರ್ಭದಲ್ಲಿ, ಕೆ.ಆರ್.ಪೇಟೆ ಕಡೆಯಿಂದ ಬಂದ ಕೆಎಸ್‍ಆರ್‍ಟಿಸಿ ಬಸ್ ಬೈಕ್‍ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ ಸವಾರ ಬಸ್‍ನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ದಾವಿಸಿದ ಅಕ್ಕ-ಪಕ್ಕ ಗ್ರಾಮಸ್ಥರು ಮತ್ತೇ ಸಾರ್ವಜನಿಕರು ಘಟನೆಯಿಂದ ಆಕ್ರೋಶಗೊಂಡು ಬಸ್‍ನ ಗಾಜುಗಳನ್ನು ಪುಡಿಪುಡಿ ಮಾಡಿ, ರಸ್ತೆ ತಡೆದು ಸಾರಿಗೆ ಸಂಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.
ಡಾಮಡಹಳ್ಳಿ ಕ್ರಾಸ್ ತುಂಬಾ ಅಪಾಯಾಕಾರಿಯಾಗದ್ದು ಈ ಸ್ಥಳದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ, ಇದಕ್ಕೆ ಕಾರಣ ರಸ್ತೆ ಅಗಲಿ ಕರಣವಾಗದಿರುವುದು. ಆದ್ದರಿಂದ ಈ ಸ್ಥಳದಲ್ಲಿ ರಸ್ತೆ ಅಗಲಿಸಿ ಮತ್ತೇ ರಸ್ತೆಯ ಪಕ್ಕದಲ್ಲಿರುವ ತೆಂಗಿನ ಮರಗಳನ್ನು ಕಡಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕಾಗಮಿಸಿದ ಪಾಂಡವಪುರ ಕೆಎಸ್‍ಆರ್‍ಟಿಸಿ ಡಿಪೋ ವ್ಯವಸ್ಥಾಪಕ ಮಹದೇವಯ್ಯ ಭೇಟಿಕೊಟ್ಟು ಪರಿಶೀಲಿಸಿ, ಪ್ರತಿಭಟನಕಾರರ ಮನಹೊಲಿಸಲು ಪ್ರಯತ್ನ ಪಟ್ಟಿದ್ದಾದರು ಅದು ವಿಫಲವಾಯಿತು, ನಂತರ ಸ್ಥಳಲ್ಲೇ ಕುಮಾರ್ ಕುಟುಂಬಕ್ಕೆ ಪರಿಹಾರ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದರು, ಇದಕ್ಕೆ ಕೆಎಸ್‍ಆರ್‍ಟಿಸಿ ಡಿಪೋ ವ್ಯವಸ್ಥಾಪಕ ಮಹದೇವಯ್ಯ ಮೃತ ಕುಟುಂಬಕ್ಕೆ 50 ಸಾವಿರ ರೂ ಗಳನ್ನು ತಾತ್ಕಾಲಿಕ ಪರಿಹಾರ ನೀಡಿದರು. ನಂತರ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಯಿತು.
ಈ ಸಂಭಂದ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

No comments:

Post a Comment