ಪ್ರವಾಸ ಕಾರ್ಯಕ್ರಮ
ಮೈಸೂರು,ಆ.20.ಅಂಗವಿಕಲರ ಅಧಿನಿಯಮದ ರಾಜ್ಯ ಆಯುಕ್ತರಾದ ಕೆ.ಎಸ್.ರಾಜಣ್ಣ ಅವರು ಆಗಸ್ಟ್ 21 ರಂದು 11 ಗಂಟೆಗೆ ಮೈಸೂರು ವಿಶ್ವವಿದ್ಯಾನಿಲಯ, ಜಯಲಕ್ಷ್ಮಿಪುರಂನಲ್ಲಿರುವ ಭಾರತ್ ಸಂಚಾರ್ ನಿಗಮದ ಜನರಲ್ ಮ್ಯಾನೇಜರ್ ಕಚೇರಿ, ಮೈಸೂರಿನ ಕೆ.ಆರ್. ಆಸ್ಪತ್ರೆ ಈ ಸ್ಥಳಗಳಿಗೆ ಭೇಟಿ ನೀಡಿ ವಿಕಲಚೇತನರಿಗಾಗಿ ಸ್ನೇಹಿ ವಾತಾವರಣ ನಿರ್ಮಿಸಿರುವ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಆಗಸ್ಟ್ 21 ರಂದು ಜಿಲ್ಲಾಧಿಕಾರಿಗಳಿಂದ ಫೋನ್ ಇನ್ ಕಾರ್ಯಕ್ರಮ
ಮೈಸೂರು,ಆ.20.ಮೈಸೂರು ಜಿಲ್ಲಾಧಿಕಾರಿಗಳ ಕಛೇರಿಂiÀiಲ್ಲಿ ಪ್ರತಿ ತಿಂಗಳಿನಂತೆ ಈ ಮಾಹೆಯ 3ನೇ ಗುರುವಾರ ಆಗಸ್ಟ್ 21 ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಸಾರ್ವಜನಿಕರ ಕುಂದುಕೊರತೆ ಅಹವಾಲುಗಳನ್ನು ಆಲಿಸುವ ಫೋನ್ ಇನ್ ಕಾರ್ಯಕ್ರಮ ಜರುಗಲಿದೆÉ. ಮೈಸೂರು ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರು ತಮ್ಮ ಸಮಸ್ಯೆಗಳ ಅಹವಾಲುಗಳನ್ನು ದೂರವಾಣಿ ಸಂಖ್ಯೆ 1077 ಅಥವಾ 0821-2423800ರ ಮೂಲಕ ಜಿಲ್ಲಾಧಿಕಾರಿಗಳಿಗೆ ತಿಳಿಸಬಹುದು. ಈ ಸಭೆಗೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಾಜರಾಗಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಕ್ರಮದ ನಂತರ ಖುದ್ದು ಹಾಜರಾಗುವ ನಗರ ಮತ್ತು ಗ್ರಾಮೀಣ ಪ್ರದೇಶದ ಸಾರ್ವಜನಿಕರ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಲಿದ್ದಾರೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಲು ಜಿಲ್ಲಾಧಿಕಾರಿ ಸಿ.ಶಿಖಾ ಅವರು ಕೋರಿದ್ದಾರೆ.
ಬಹಿರಂಗ ಹರಾಜು
ಮೈಸೂರು,ಆ.20.ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಎನ್.ಆರ್. ಮೊಹಲ್ಲಾ, ಮೈಸೂರು-07 ರಲ್ಲಿರುವ ವಿವಿಧ ವೃತ್ತಿ ಘಟಕದ ನಿರುಪಯುಕ್ತ ವಸ್ತುಗಳಾದ ಸಣ್ಣ ಉಪಕರಣ, ಯಂತ್ರೋಪಕರಣ, ರೆಪ್ರಿಜರೇಟರ್ ಏರ್ ಕಂಡೀಷನರ್, ಕಂಪ್ಯೂಟರ್, ಬ್ಯಾಟರಿ, ಜೆರಾಕ್ಸ್ ಮೆಷಿನ್, ಎಂ.ಎಸ್. ಜಿಪ್ಸ್ ಹಾಗೂ ಮುಂತಾದ ಸಾಮಗ್ರಿಗಳನ್ನು ದಿನಾಂಕ 15-10-2014 ರಂದು ಬೆಳಿಗ್ಗೆ 11 ಗಂಟೆಗೆ ಬಹಿರಂಗ ಹರಾಜಿನ ಮೂಲಕ ಸಂಸ್ಥೆಯ ಆವರಣದಲ್ಲಿ ವಿಲೇವಾರಿ ಮಾಡಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2498456ಯನ್ನು ಸಂಪರ್ಕಿಸುವುದು.
ಸಹಕಾರ ಸಂಘ : ಸೆಪ್ಟೆಂಬರ್ 25ರೊಳಗೆ ವಾರ್ಷಿಕ ಮಹಾಸಭೆ ನಡೆಸಿ
ಮೈಸೂರು,ಆ.20.ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959, ನಿಯಮಗಳು 1960 ರ ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997 ರ ನಿಯಮಗಳು 2004 ರನ್ವಯ ಎಲ್ಲಾ ಸಹಕಾರಿ ಸಂಘಗಳು ಸೆಪ್ಟೆಂಬರ್ 25 ರೊಳಗೆ ಸರ್ವಸದಸ್ಯರ ವಾರ್ಷಿಕ ಮಹಾಸಭೆ ನಡೆಸುವಂತೆ ಮೈಸೂರು ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.
ಸಹಕಾರ ಸಂಘಗಳು ಲೆಕ್ಕಪರಿಶೋಧನೆಯನ್ನು ಸಹಕಾರ ಸಂಘಗಳ ಲೆಕ್ಕಪರಿಶೋದಕರನ್ನು ನೇಮಕ ಮಾಡಿಕೊಂಡು ಸೆಪ್ಟೆಂಬರ್ 1 ರೊಳಗೆ ಲೆಕ್ಕಪರಿಶೋಧನೆ ಮಾಡಿಸಿ ವರದಿಯನ್ನು ವಾರ್ಷಿಕ ಮಹಾಸಭೆಯಲ್ಲಿ ತಪ್ಪದೆ ಮಂಡಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬದಲಿ ಮಾರ್ಗ ವ್ಯವಸ್ಥೆ
ಮೈಸೂರು,ಆ.20.ರಾಮಾನುಜ ರಸ್ತೆಯ ಜೆ.ಎಸ್.ಎಸ್. ವಿದ್ಯಾಪೀಠದಿಂದ ಎಂ.ಜಿ.ರಸ್ತೆಯವರೆಗೆ ಚಾವಡಿ ಬೀದಿ, ಶ್ರೀ ಬಸವೇಶ್ವರ ಪ್ರತಿಮೆಯಿಂದ ಶ್ರೀ ಪಾತಾಳಾಂಜನೇಯ ಸ್ವಾಮಿ ದೇವಸ್ಥಾನದವರೆಗೆ ಜೆ.ಎಸ್.ಎಸ್.ವಿದ್ಯಾಪೀಠದ ಹತ್ತಿರ ಇರುವ ಪುರಾತನವಾದ ಕಲ್ಲು ಚಪ್ಪಡಿಯ ಸೇತುವೆಯ ಪುನರ್ ನಿರ್ಮಾಣದ ಕಾಮಗಾರಿಯನ್ನು ನಗರ ಪಾಲಿಕೆಯವರು ಕೈಗೊಂಡಿರುತ್ತಾರೆ. ಸಾರ್ವಜನಿಕರಿಗೆ ಸುಗಮ ಸಂಚಾರ ಕಲ್ಪಿಸಲು ಮೈಸೂರು ನಗರ ಪೊಲೀಸ್ ಆಯುಕ್ತ ಡಾ| ಎಂ.ಎ.ಸಲೀಂ ಅವರು ಬದಲಿ ಮಾರ್ಗದ ವ್ಯವಸ್ಥೆ ಮಾಡಿ ಆದೇಶ ಹೊರಡಿಸಿರುತ್ತಾರೆ.
ರಾಮಾನುಜ ರಸ್ತೆಯಲ್ಲಿ ಉತ್ತರಾಧಿ ಮಠದ 1ನೇ ಕ್ರಾಸ್ ಜಂಕ್ಷನ್‍ನಿಂದ ಉತ್ತರಕ್ಕೆ ರಾಮಚಂದ್ರ ಅಗ್ರಹಾರದ ಕ್ರಾಸ್ ರಸ್ತೆ ಜಂಕ್ಷನ್‍ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ರಾಮಾನುಜ ರಸ್ತೆಯಲ್ಲಿ ನಿರ್ಬಂಧಿಸಿದ ಸ್ಥಳದಿಂದ ಉತ್ತರಕ್ಕೆ ಸಾಗುವ ವಾಹನಗಳು ಉತ್ತರಾಧಿಮಠದ 1ನೇ ಕ್ರಾಸ್‍ನಲ್ಲಿ ಪೂರ್ವಕ್ಕೆ ಸಾಗಿ ಉತ್ತರಾಧಿ ಮಠದ ರಸ್ತೆಯ ಮೂಲಕ ಜೆ.ಎಸ್.ಎಸ್.ವೃತ್ತವನ್ನು ತಲುಪಿ ಮುಂದೆ ಸಾಗಬೇಕು. ರಾಮಾನುಜ ರಸ್ತೆಯಲ್ಲಿ ರಾಮಚಂದ್ರ ಅಗ್ರಹಾರದ ರಸ್ತೆ ಜಂಕ್ಷನ್‍ನಿಂದ ದಕ್ಷಿಣಕ್ಕೆ ಸಾಗುವವಾಹನಗಳು ಫೋರ್ಟ್ ಮೋಹಲ್ಲಾ ರಸ್ತೆಯ ಮೂಲಕ ರಾಮಾನುಜ ರಸ್ತೆಯನ್ನು ತಲುಪಿ ಮುಂದೆ ಸಾಗಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಧೀಮಂತ ನಾಯಕ:ದೇವರಾಜ ಅರಸು ಸ್ಮರಣೆ
ಮೈಸೂರು,ಆ.20.ಜನತಂತ್ರ ವ್ಯವಸ್ಥೆಯಲ್ಲಿ ರಾಜಕೀಯ ಭಾಗವಹಿಸುವಿಕೆ ಇಲ್ಲದಿದ್ದಲ್ಲಿ, ಸಣ್ಣಪುಟ್ಟ ಜಾತಿ-ಜನಾಂಗಗಳು ತಮ್ಮ ನ್ಯಾಯಬದ್ಧ ಪಾಲು ಪಡಯುವಲ್ಲಿ ವಿಫಲವಾಗುತ್ತವೆ. ದೇವರಾಜ ಅರಸು ಅವರು ಇಂತಹ ನಿರ್ಲಕ್ಷಿತ ಜಾತಿ ಜನಾಂಗಗಳಿಗೆ ರಾಜಕೀಯ ಹಾಗೂ ಸಾಮಾಜಿಕ ನ್ಯಾಯ ಒದಗಿಸಿದ ಮುತ್ಸದ್ದಿ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕ ಡಾ| ಸಿ.ನಾಗಣ್ಣ ಅಭಿಪ್ರಾಯಪಟ್ಟರು.
ಸಾಮಾಜಿಕ ಕ್ರಾಂತಿಯ ನೇತಾರ, ಹಿಂದುಳಿದ ವರ್ಗಗಳ ಧೀಮಂತ ನಾಯಕ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 99ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಮೈಸೂರು ನಗರದ ಮಾನಸಗಂಗೋತ್ರಿ ಸೆನೆಟ್ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹಾವನೂರು ಆಯೋಗದ ವರದಿ ಆಧರಿಸಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಅಧಿಕಾರ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ ದೇವರಾಜ ಅರಸು ಕೇವಲ ರಾಜಕಾರಣಿ ಆಗಿರದೆ ಮುತ್ಸದ್ದಿ ಆಗಿದ್ದರು, ಅಲ್ಪಸಂಖ್ಯಾತರ ಜನಾಂಗದವರೂ ಮುಖ್ಯಮಂತ್ರಿ ಆಗಬಹುದೆಂಬ ಭರವಸೆ ಮೂಡಿಸಿದವರು ಅರಸು ಎಂದು ನಾಗಣ್ಣ ಹೇಳಿದರು.
ದೇಶದೆಲ್ಲೆಡೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಕಾರಾತ್ಮಕ ಭಾವನೆ ಇದ್ದಾಗಲೂ ಕರ್ನಾಟಕದಲ್ಲಿ ಅದನ್ನು ಸಕಾರಾತ್ಮಕವಾಗಿ ಬಳಸಿಕೊಂಡವರು ದೇವರಾಜ ಅರಸು, ಆ ಸಂದರ್ಭದಲ್ಲಿ ಉತ್ತಮ ಕಾರ್ಯಕ್ರಮ ನೀಡಿದರು. ಸಾಹಿತ್ಯದಲ್ಲಿಯೂ ಅವರು ಅಪಾರ ಆಸಕ್ತಿ ಹೊಂದಿದ್ದರು ಎಂದು ನಾಗಣ್ಣ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಂ.ಕೆ.ಸೋಮಶೇಖರ್ ಅವರು ಅರಸರು ದಿಟ್ಟ ಸ್ವಭಾವದ ನಾಯಕರಾಗಿದ್ದರು ಮಂಡ್ಯ ಜಿಲ್ಲೆಯ ಜನತೆಯ ವಿರೋಧದ ನಡುವೆಯೂ ಮೈಸೂರು ಜಿಲ್ಲೆಗೆ ವರುಣಾ ನಾಲೆಯನ್ನು ತಂದ ಕೀರ್ತಿ ಅವರದು ಎಂದು ಹೇಳಿದರು.
ಹೆಚ್.ಡಿ.ಕೋಟೆ ಕ್ಷೇತ್ರದ ಶಾಸಕ ಚಿಕ್ಕಮಾದು ಅವರು ಮಾತನಾಡಿ ಉಳುವವನೇ ಹೊಲದೊಡೆಯ ಎಂಬ ಕಾನೂನು ಜಾರಿಗೊಳಿಸುವ ಮೂಲಕ ರೈತರು ಬದುಕು ಹಸನಾಗಿಸಿದವರು ದೇವರಾಜ ಅರಸರು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಾಮರಾಜ ಕ್ಷೇತ್ರದ ಶಾಸಕ ವಾಸು, ದೂರದೃಷ್ಠಿ ಹೊಂದಿದ್ದ ನಾಯಕ ದೇವರಾಜ ಅರಸ್ ಅವರು ಎಂದೂ ಜಾತಿ ಆಧಾರಿತ ದ್ವೇಷ ಬಿತ್ತಲಿಲ್ಲ, ಬದಲಿಗೆ ಸಣ್ಣಪುಟ್ಟ ಜಾತಿಗಳ ಆರ್ಥಿಕ ಉನ್ನತಿಗಾಗಿ ತಮ್ಮ ಅಧಿಕಾರವನ್ನು ಸದ್ಬಳಕೆ ಮಾಡಿದರು ಎಂದು ಹೇಳಿದರು.
ಹಿಂದುಳಿದ ವರ್ಗಗಳ ಹಾಸ್ಟೆಲ್‍ಗಳಲ್ಲಿ ಅಧ್ಯಯನ ಮಾಡುತ್ತಿದ್ದು ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು.
ಮೈಸೂರು ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಗೋಪಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸರಸ್ವತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಟಿ. ಜವರೇಗೌಡ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಆಗಸ್ಟ್ 21 ರಂದು ವಿಶೇಷ ತರಬೇತಿ ಕಾರ್ಯಕ್ರಮ
ಮೈಸೂರು,ಆ.20.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳಿಗೆ “ಕಚೇರಿ ಕಾರ್ಯ ವಿಧಾನ” ಕೈಪಿಡಿಯಲ್ಲಿನ ಅಂಶಗಳ ಸಮರ್ಪಕ ಅನುಷ್ಠಾನ ಕುರಿತು ವಿಶೇಷ ತರಬೇತಿಯನ್ನು ಆಗಸ್ಟ್ 21 ರಂದು ಬೆಳಿಗ್ಗೆ 10-30ಕ್ಕೆ ಬನ್ನಿಮಂಟಪದಲ್ಲಿರುವ ಪ್ರಾದೇಶಿಕ ತರಬೇತಿ ಕೇಂದ್ರದÀಲ್ಲಿ ಹಮ್ಮಿಕೊಳ್ಳಲಾಗಿದೆ.
ಮೈಸೂರು ವಿಶ್ವವಿದ್ಯಾನಿಲಯದ ಇನ್ಸ್‍ಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನ ಡಾ. ಆನಂದ್ ಬಹದ್ದೂರ್, ವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು
No comments:
Post a Comment