Friday, 15 August 2014

ಮೈಸೂರುನಗರ ಸಿ.ಸಿ.ಬಿ. ಪೊಲೀಸರಿಂದ ಇಬ್ಬರು ದ್ವಿಚಕ್ರವಾಹನ ಕಳ್ಳರ ಬಂಧನ.

ಮೈಸೂರುನಗರ ಸಿ.ಸಿ.ಬಿ. ಪೊಲೀಸರಿಂದ ಇಬ್ಬರು ದ್ವಿಚಕ್ರವಾಹನ ಕಳ್ಳರ ಬಂಧನ.
ಒಟ್ಟು 60,000/- ರೂ ಬೆಲೆಬಾಳುವ 1 ದ್ವಿಚಕ್ರ ವಾಹನ ಹಾಗೂ 1 ದ್ವಿಚಕ್ರ ವಾಹನದ ಬಿಡಿಭಾಗಗಳ ವಶ.
ದಿನಾಂಕ: 14/08/2014 ರಂದು ಸಿ.ಸಿ.ಬಿ. ಪೊಲೀಸರು ಮೈಸೂರು ನಗರದ ಉದಯಗಿರಿ ಪೊಲೀಸ್ ಠಾಣೆ ಸರಹದ್ದಿನ ಕ್ಯಾತಮಾರನಹಳ್ಳಿಯ ಹರಿಶ್ಚಂದ್ರ ಘಾಟ್ ರಸ್ತೆಯ ಟೆಂಟ್ ಸರ್ಕಲ್ ಬಳಿ ಇರುವ ನಂದನ ಸ್ಟೋರ್ಸ್ ಮುಂಭಾಗ ದ್ವಿಚಕ್ರ ವಾಹನವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ -
1.    ಯಾಸೀರ್ ಪಾಷ ಬಿನ್ ನಾಸೀರ್ ಪಾಷ, 21ವರ್ಷ, ಉಸ್ಮಾನೀಯ ಬ್ಲಾಕ್, ಗೌಸಿಯಾನಗರ, ಮೈಸೂರು
2.    ಹಾಕೀಬ್ ಬಿನ್ ಲೇಟ್|| ರಿಯಾಜ್ ಪಾಷ, 21ವರ್ಷ, ಶಾಂತಿನಗರ, ಮೈಸೂರು.

ಎಂಬುವನನ್ನು ಬಂಧಿಸಿ, ಆರೋಪಿಗಳ ವಶದಲ್ಲಿದ್ದ 1 ಯಮಹ ಖಘಿ-135 ದ್ವಿಚಕ್ರ ವಾಹನ ಮತ್ತು ಯಮಹ ಖಘಿ-135 ದ್ವಿಚಕ್ರ ವಾಹನದ ಬಿಡಿಭಾಗಗಳನ್ನು ಅಮಾನತ್ತು ಪಡಿಸಿಕೊಂಡಿದ್ದು, ಉದಯಗಿರಿ ಪೊಲೀಸ್ ಠಾಣೆಯ 1 ಪ್ರಕರಣ ಹಾಗೂ ಕೆ.ಆರ್.ಪೊಲೀಸ್ ಠಾಣೆಯ 1 ಪ್ರಕರಣ ಸೇರಿದಂತೆ ಒಟ್ಟು 2 ಪ್ರಕರಣಗಳು ಪತ್ತೆಯಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ ರೂ. 60,000/- ಆಗಿರುತ್ತದೆ.
       ಈ   ಪತ್ತೆ   ಕಾರ್ಯವನ್ನು   ಮೈಸೂರು    ನಗರದ   ಅಪರಾಧ ವಿಭಾಗದ ಡಿ.ಸಿ.ಪಿ.ರವರಾದ ಶ್ರೀ. ಎಂ.ಎಂ.ಮಹದೇವಯ್ಯ, ಸಿ.ಸಿ.ಬಿ.ಯ ಎ.ಸಿ.ಪಿ.ರವರಾದ ಕೆ.ಎನ್.ಮಾದಯ್ಯರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ. ಇನ್ಸ್‍ಪೆಕ್ಟರ್‍ಗಳಾದ ಪಿ.ಎ.ಸೂರಜ್, ಆರ್.ಜಗದೀಶ್, ಎ.ಎಸ್.ಐ.ಗಳಾದ ಎಂ.ಜೆ.ಜಯಶೀಲನ್, ಎಂ.ಡಿ.ಶಿವರಾಜು, ಎ.ಜಾರ್ಜ್ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ ಎಂದು ಪೊಲೀಸ್ ಆಯುಕ್ತರವರ ಕಛೇರಿಯ  ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment