Monday, 18 August 2014

ಎಲ್ಲರಿಗೂ ಬೇಕು ಕಾನೂನು ಅರಿವು ಕೆ.ಎಸ್. ಮುದಗಲ್

 ಎಲ್ಲರಿಗೂ ಬೇಕು ಕಾನೂನು ಅರಿವು ಕೆ.ಎಸ್. ಮುದಗಲ್
     ಜನಸಾಮಾನ್ಯರು ಪ್ರತಿದಿನ ಹಲವಾರು ರೀತಿಯ ಕಷ್ಟಗಳನ್ನು ಎದುರಿಸುತ್ತಾರೆ ಕೆಲವು ಸಂದರ್ಭದಲ್ಲಿ ಮೋಸಕ್ಕೂ ಸಹ ಒಳಗಾಗುತ್ತಾರೆ. ಇಂತಹ ಸಂದರ್ಭದಲ್ಲಿ ಯಾವ ರೀತಿಯಾಗಿ ಕಾನೂನಿನ ನೆರವು ಪಡೆದುಕೊಳ್ಳಬಹುದು ಎಂಬುದು ಎಲ್ಲರಿಗೂ ತಿಳಿದಿರಬೇಕು.
    ಈ ನಿಟ್ಟಿನಿಂದ ಇಂದು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಸ್. ಮುದಗಲ್ ಅವರು ಜಿಲ್ಲಾ ಸಾಕ್ಷರತ ರಥಕ್ಕೆ ಚಾಲನೆ ನೀಡಿದರು.
     ಕಾನೂನು ಅರಿವಿನ ಕೊರತೆಯಿಂದಾಗಿ ಬಹಳಷ್ಟು ಮಂದಿ ಕಾನೂನು ನೆರವು ಪಡೆಯಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸುವುದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶವಾಗಿದೆ ಎಂದರು.
     ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ  ದಿನಾಂಕ 18-08-2014 ರಿಂದ 07-09-2014 ರವರೆಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕಾನೂನು ಸಾಕ್ಷರತಾ ರಥ ಮತ್ತು ಜನತಾ ನ್ಯಾಯಾಲಯ ಸಂಚಾರಿ ವಾಹನದ ಮೂಲಕ ಕಾನೂನು ಸಾಕ್ಷರತಾ ಕಾರ್ಯಕ್ರಮ ನಡೆಸಲಾಗುವುದು. ಪ್ರತಿ ದಿನ ಆಯ್ದ ಮೂರು ಸ್ಥಳಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಕಾನೂನು ಅರಿವಿನ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
     ಕಾರ್ಯಕ್ರಮದಲ್ಲಿ ಜಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಹೆಗೆಡ್ ನ್ಯಾಯಾಧೀಶರರಾದ ಜೆ.ಆರ್.ಮಂಡೋನ್ಸ್ ಶ್ರೀದೇವಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.   
     ಕಾನೂನು ಸಾಕ್ಷರತಾ ರಥದ ಸಂಚಾರ:  ಆಗಸ್ಟ್ 18 ಮತ್ತು 20 ರವರೆಗೆ ಮೈಸೂರು ನಗರ ಮತ್ತು ತಾಲ್ಲೂಕು, ಆಗಸ್ಟ್ 21 ರಿಂದ 23 ರವರೆಗೆ ನಂಜನಗೂಡು, ಆಗಸ್ಟ್ 24 ರಿಂದ 26 ರವರೆಗೆ ತಿ.ನರಸೀಪುರ, ಆಗಸ್ಟ್ 27 ರಿಂದ 29 ರವರೆಗೆ ಕೆ.ಆರ್.ನಗರ, ಆಗಸ್ಟ್ 30, 31 ಮತ್ತು  ಸೆಪ್ಟೆಂಬರ್ 1 ರಂದು ಹೆಚ್.ಡಿ.ಕೋಟೆ ಸೆಪ್ಟೆಂಬರ್ 2 ರಿಂದ ಸೆಪ್ಟೆಂಬರ್ 4 ರವರೆಗೆ ಹುಣಸೂರು ಹಾಗೂ ಸೆಷ್ಟೆಂಬರ್ 5 ರಿಂದ 7 ರವರೆಗೆ ಪಿರಿಯಾಪಟ್ಟಣ ತಾಲ್ಲೂಕುಗಳಲ್ಲಿ ಕಾನೂನು ರಥ ಸಂಚರಿಸಲಿದೆ.
   ಆಗಸ್ಟ್ 18 ಮತ್ತು 20 ರವರೆಗೆ ಮೈಸೂರು ನಗರ ಮತ್ತು ತಾಲ್ಲೂಕುಗಳಲ್ಲಿ ಜರುಗಲಿರುವ  ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಓಡಿಪಿ ಸಂಸ್ಥೆಯ ಸಹಯೋಗದೊಂದಿಗೆ ನಡೆಸಲಿದೆ.
    ಆಗಸ್ಟ್ 18 ರಂದು ಬಾಲ್ಯ ವಿವಾಹ ನಿಷೇಧ ಕಾಯ್ದೆ, ಸಾಂವಿಧಾನಾತ್ಮಕ ಹಕ್ಕುಗಳ ಮತ್ತು ಕರ್ತವ್ಯಗಳ ಬಗ್ಗೆ ಮೈಸೂರಿನ ಬೋಗಾಧಿಯಲ್ಲಿರಯವ ಗಂಗೋತ್ರಿ ಕಾನ್ವಂಟ್ ಶಾಲಾ ಆವರಣದಲ್ಲಿ,  ಬಸವೇಶ್ವರ ನಗರದ ಸರ್ಕಾರಿ ಪ್ರೌಢಶಾಲೆ ಹಾಗೂ ಜನತಾ ನಗರದಲ್ಲಿರುವ ಜೈಭಾರತ್ ಮಾತಾ ಎಜುಕೇಸನ್ ಟ್ರಸ್ಟ್ ಗಳಲ್ಲಿ ಕಾನೂನು ಅರಿವು ಶಿಬಿರಗಳು ನಡೆಯಲಿದೆ.
   ಆಗಸ್ಟ್ 19 ರಂದು ಬೆಳಿಗ್ಗೆ 10-30ಕ್ಕೆ ಗಾಂಧಿನಗರದಲ್ಲಿರುವ ಶಿವಯೋಗಿ ಕಾಲೇಜಿನಲ್ಲಿ ಬಾಲ್ಯ ವಿವಾಹ ನಿಷೇಧ ಕಾಯಿದೆ ಹಾಗೂ ಸಂವಿಧಾನ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ವಕೀಲ ಹಾಗೂ ಕಾನೂನು ಸಲಹೆಗಾರರಾದ ಎನ್. ಸುಂದರ್ ರಾಜ್ ಅವರು ಉಪನ್ಯಾಸ ನೀಡುವರು.
   ಮಧ್ಯಾಹ್ನ 12-30ಕ್ಕೆ ಕಳಸ್ತವಾಡಿ ಸಮುದಾಯ ಭವನದಲ್ಲಿ ಮಹಿಳಾ ದೌರ್ಜನ್ಯ ಕಾಯಿದೆ, ಹಿಂದೂ ಮಹಿಳಾ ಆಸ್ತಿ ಹಕ್ಕು ಕಾಯಿದೆ, ವಿವಾಹನೋಂದಣಿ ಕಾಯಿದೆ, ವರದಕ್ಷಿಣೆ ಕಾಯಿದೆ ಬಗ್ಗೆ ವಕೀಲ ಹಾಗೂ ಕಾನೂನು ಸಲಹೆಗಾರರಾದ ಬಿ.ಎಂ. ಮರಪ್ಪ ಅವರು ಉಪನ್ಯಾಸ ನೀಡುವರು.
   ಮಧ್ಯಾಹ್ನ 2-30ಕ್ಕೆ ಕುರಬರಹಳ್ಳಿಯ ವೈಶಾಲಿ ಕಾನ್ವೆಂಟ್ ಶಾಲೆಯಲ್ಲಿ ಸಂವಿಧಾನ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ವಕೀಲ ಹಾಗೂ ಕಾನೂನು ಸಲಹೆಗಾರರಾದ ಎನ್. ಸುಂದರ್ ರಾಜ್ ಅವರು ಉಪನ್ಯಾಸ ನೀಡುವರು.
   ಆಗಸ್ಟ್ 20 ರಂದು ಬೆಳಿಗ್ಗೆ 11 ಗಂಟೆಗೆ ಆಸ್ತಿ ಹಕ್ಕುಗಳು, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯಿದೆ 2005, ಬಾಲ್ಯ ವಿವಾಹ ನಿಷೇಧ ಕಾಯಿದೆ, ಮೋಟಾರು ವಾಹನ ಅಪಘಾತ  ಪರಿಹಾರ ಕಾಯಿದೆ ಕುರಿತಂತೆ ವಕೀಲ ಹಾಗೂ ಕಾನೂನು ಸಲಹೆಗಾರರಾದ ಬಿ.ಎಂ. ಮರಪ್ಪ ಅವರು ಉಪನ್ಯಾಸ ನೀಡುವರು.
   ಮಧ್ಯಾಹ್ನ 12-30ಕ್ಕೆ ಗೌರಿಶಂಕರ ನಗರ ಪ್ರೌಢಶಾಲೆ ಆವರಣದಲ್ಲಿ ಸಂವಿಧಾನ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ವಕೀಲ ಹಾಗೂ ಕಾನೂನು ಸಲಹೆಗಾರರಾದ ಎನ್. ಸುಂದರ್ ರಾಜ್ ಅವರು ಉಪನ್ಯಾಸ ನೀಡುವರು.
   ಮಧ್ಯಾಹ್ನ 3 ಗಂಟೆಗೆ ಗೌಸಿಯಾನಗರದಲ್ಲಿರುವ ಆರ್.ಜಿ.ಎ.ಹೆಚ್.ಪಿ.ಎಸ್. ಉಸ್ಮಾಮಿಯಾ ಪ್ರೌಢಶಾಲೆಯಲ್ಲಿ ಸಂವಿಧಾನ ಹಕ್ಕುಗಳು ಮತ್ತು ಕರ್ತವ್ಯಗಳು, ಮಕ್ಕಳ ಹಕ್ಕುಗಳು, ಹಿಂದೂ ಮತ್ತು ಮುಸ್ಲಿಂ ಮಹಿಳಾ ಆಸ್ತಿ ಹಕ್ಕು ಕಾಯಿದೆ, ವಿವಾಹ ನೋಂದಣಿ ಕಾಯಿದೆ ಹಾಗೂ ವರದಕ್ಷಿಣೆ ನಿಷೇಧ ಕಾಯಿದೆ ಬಗ್ಗೆ ವಕೀಲ ಹಾಗೂ ಕಾನೂನು ಸಲಹೆಗಾರರಾದ ಬಿ.ಎಂ. ಮರಪ್ಪ ಅವರು ಉಪನ್ಯಾಸ ನೀಡುವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾನೂನು ಅರಿವು ನೆರವು ಪಡೆದುಕೊಳ್ಳಿ.


No comments:

Post a Comment