Sunday, 31 August 2014

ದೇವಲಾಪುರ ಹೋಬಳಿಯಲ್ಲಿ ಮರಳು ಮಹಾ ದಂಧೆಯ ನಿಲ್ಲದ ಸಾಗಾಣಿಕೆ.
ತಪ್ಪಿದ ಅವಘಡ. ಚಾಲನೆಯಲ್ಲಿ ಲಾರಿಚಾಲಕ ಪರಾರಿ. ಹೂಗಾರ್ ಸಾರಥ್ಯ.
ವರದಿ:ದೇ.ರಾ.ಜಗದೀಶ್.
ದೇವಲಾಪುರ ಆ: ಅಕ್ರಮವಾಗಿ ಮರಳು ವiಹಾದಂದೆಯ ಮಾಫಿಯ ವಿರುದ್ದ ಕಾರ್ಯಚರಣೆ ಮಾಡುತ್ತಿದ್ದ ಡಿ.ವೈ.ಎಸ್.ಪಿ.ಸವಿತಾ ಹೂಗಾರ್‍ರವರಿದ್ದ ಜೀಪಿಗೆ ಲಾರಿಯೊಂದು ಡಿಕ್ಕಿಯೊಡೆದು ಕೊಲೆ ಪ್ರಯತ್ನ ಮಾಡುವ ಘಟನೆ ಮೊನ್ನೆ ದೇವಲಾಪುರ ಹೋಬಳಿಯ ಅರಕೆರೆ ಬಳಿ ನೆಡೆದಿದೆ.
 ನಾಗಮಂಗಲ ತಾಲ್ಲೂಕಿನ ದೇವಲಾಪುರ ಹೋಬಳಿಯ ಕೆಲಭಾಗಗಳಲ್ಲಿ ನಿತ್ಯ ನಿರಂತರವಾಗಿ ಮರಳು ಸಾಗಾಣಿಕೆಗೆ ಯಾವಮಾನದಂಡವಿಲ್ಲದೆ ಹಗಲು-ರಾತ್ರಿ ವೇಳೆಯಲ್ಲಿ ಸಾಗಾಣಿಕೆ ಮಾಡುತ್ತಿದ್ದು ಮೊನ್ನೆ ಬೆಳಗಿನ ಜಾವ ಶಿಂಷಾ ತೊರೆಯಿಂದ ಮರಳು ಸಾಗಾಣಿಕೆ ಜಾಡು ಹಿಡಿದ ಡಿ.ವೈ.ಎಸ್.ಪಿ.ಸವಿತಾ ಹೂಗಾರ್ ಸಾರಥ್ಯದಲ್ಲಿ ಕಾರ್ಯಚರಣೆ ನೆಡೆಸಿತ್ತು. ಅಕ್ರಮ ಮರಳು ಸಾಗಾಣಿಕೆಯ ವಿರುದ್ದ ತಾಲ್ಲೂಕಿನ ದೇವಲಾಪುರ ಹೋಬಳಿಯ ಅರಕೆರೆಯ ಶಿಂಷಾ ತೊರೆಯ ಮೇಲಿರುವ ಮುತ್ತುರಾಯಸ್ವಾಮಿ ದೇವಾಲಯದ ಬಳಿ ಲಾರಿಯು ಚಾಲನೆಯಲ್ಲಿ ಬಿಟ್ಟು ಚಾಲಕ ಪರಾರಿಯಾಗಿದ್ದು ಸ್ವಲ್ಪ ಅಂತರದಲ್ಲಿಯೇ ಡಿ.ವೈ.ಎಸ್.ಪಿ.ಯವರ ಕಾರು ಅವಘಡದಿಂದ ಪಾರಾಗಿದೆ.

ಈ ಕಾರ್ಯಚರಣೆಯಿಂದ ಡಿ.ವೈ.ಎಸ್.ಪಿ.ಯವರ ಕಾರು ಲಾರಿಗೆ ತಗುಲಿದ್ದು ದೊಡ್ಡ ದುರಂತದಿಂದ ಪಾರಾಗಿದೆ. ಈ ಕಾರ್ಯಚರಣೆಯಲ್ಲಿ ಪೇದೆಗಳಾದ ಲೊಕೇಶ್ ಬನವಾಸಿ, ಹನೀಫ್ ಹಾಗೂ ಚಾಲಕ ಬಾಲಾಜಿ ಅವರುಗಳನ್ನು ಒಳಗೊಂಡ ತಂಡದೊಂದಿಗೆ ಸ್ಥಳಕ್ಕೆ ಹೊರಟ ವಾಹನ ರಸ್ತೆ ಬದಿಯಲ್ಲಿ ನಿಲ್ಲಿಸಿ ಕಾರ್ಯಪ್ರವೃತ್ತರಾದಾಗ ಮರಳು ಮಾಫಿಯ ಭೂಗಳ್ಳರು ಡಿ.ವೈ.ಎಸ್.ಪಿ.ಸವಿತಾ ಹೂಗಾರ್‍ರವರು ಇದ್ದ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾರೆ ಇದನ್ನು ಗಮನಿಸಿದ ಡಿ.ವೈ.ಎಸ್.ಪಿ. ರವರು ವಾಹನದಿಂದ ಹೊರಕ್ಕೆ ಜಿಗಿದ್ದಿದ್ದಾರೆ.

ಈ ಘಟನೆಯಿಂದ ಮರಳು ತುಂಬಿದ ಲಾರಿಗಳನ್ನು ವಶಪಡಿಸಿಕೊಂಡು ಚಾಲನೆಯಲ್ಲಿದ್ದ ಲಾರಿಚಾಲಕ ಪರಾರಿಯಾಗಿದ್ದು ಶೆಟ್ಟಹಳ್ಳಿ ಗ್ರಾಮದ ಬಳಿ ಡೈರಿ ಮುಂಭಾಗ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆಯಬೇಕಾಗಿದ್ದ ಲಾರಿಯು ಕೂದಲೆಳೆಯ ಅಂತರದಿಂದ ಪಾರಾಗಿದೆ. ಲಾರಿ ಮಾಲೀಕರುಗಳಾದ ಯೋಗೇಶ್ ಮತ್ತು ಮಧು ಎಂಬುವರನ್ನು ಪೋಲೀಸರು ಬಂದಿಸಿದ್ದು ನಾಗಮಂಗಲ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಮರಳು ಮಾಫಿಯಾ ವಿರುದ್ದ ಅಧಿಕಾರಿಗಳನ್ನು ಲೆಕ್ಕಿಸದೆ ಈ ದಂಗೆಕೋರರು ದೇವಲಾಪುರ ಹೋಬಳಿಯ ಕೆಲಭಾಗಗಳಲ್ಲಿ ನಿತ್ಯನಿರಂತರವಾಗಿ ಮರಳು ಸಾಗಿಸುತ್ತಿದ್ದು ಈ ಮಾಫಿಯಾಗೆ ಈಗಲೇ ಮುನ್ನೇಚರಿಕೆಯ ಕ್ರಮಕೈಗೊಂಡು ಹಾಗೂ ಶಿಂಷಾ ತೊರೆಯ ಪಾತ್ರದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವರೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂಬುದನ್ನು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದ್ದೆ.



No comments:

Post a Comment