Friday, 8 August 2014

ಐಎಎಸ್/ಐಪಿಎಸ್ ತರಬೇತಿ ಆಯ್ಕೆಗೆ ಆ.10ರಂದು ಅರ್ಹತಾ ಪರೀಕ್ಷೆ

 ಐಎಎಸ್/ಐಪಿಎಸ್ ತರಬೇತಿ ಆಯ್ಕೆಗೆ ಆ.10ರಂದು ಅರ್ಹತಾ ಪರೀಕ್ಷೆ
    ಮಂಡ್ಯ, ಆಗಸ್ಟ್ 08 . ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಕೇಂದ್ರ ನಾಗರಿಕ ಸೇವಾ ಪರೀಕ್ಷೆಗಳಿಗೆ (ಐಎಎಸ್/ಐಪಿಎಸ್) ಪೂರ್ವಭಾವಿ ತರಬೇತಿ ಪಡೆಯಲು ಅರ್ಜಿ ಸಲ್ಲಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 2014ರ ಆಗಸ್ಟ್ 10ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಕೇಂದ್ರೀಕೃತ ಘಟಕದ ವತಿಯಿಂದ ಪ್ರವೇಶ ಪರೀಕ್ಷೆ ಏರ್ಪಡಿಸಲಾಗಿದೆ.
    ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಗಳ ವಿಳಾಸದ ಬಗ್ಗೆ ಎಸ್‍ಎಂಎಸ್ ಮೂಲಕ ಮಾಹಿತಿ ಕಳುಹಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಸಮಾಜ ಕಲ್ಯಾಣ ಇಲಾಖೆ ವೆಬ್‍ಸೈಟ್ ತಿತಿತಿ.sತಿ.ಞಚಿಡಿ.ಟಿiಛಿ.iಟಿ ನೋಡಬಹುದು. ಪರೀಕ್ಷೆಗೆ ಹಾಜರಾಗುವಾಗ ಪ್ರವೇಶ ಪತ್ರವನ್ನು ತಪ್ಪದೆ ಹಾಜರುಪಡಿಸುವುದು ಎಂದು ಮಂಡ್ಯ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಆಗಸ್ಟ್ 9ರಂದು ಮೈಸುಗರ್ ಕಾರ್ಖಾನೆ ಕಬ್ಬು ನುರಿಸುವ ಕಾರ್ಯ ಪ್ರಾರಂಭ
ಮೈಸೂರು ಸಕ್ಕರೆ ಕಂಪನಿ ವತಿಯಿಂದ 2014-15ನೇ ಸಾಲಿನ ಕಬ್ಬು ನುರಿಸುವ ಕಾರ್ಯವನ್ನು ಆಗಸ್ಟ್ 9 ರಂದು ಶನಿವಾರ ಆರಂಭಿಸಲಾಗುವುದು ಎಂದು ಕಾರ್ಖಾನೆ ಕಬ್ಬು ಅಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಕಂಪನಿಯ ಅಧ್ಯಕ್ಷರೂ ಆಗಿರುವ ಸಕ್ಕರೆ ಸಚಿವರಾದ ಎಚ್. ಎಸ್.ಮಹದೇವ ಪ್ರಸಾದ್, ವಸತಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಎಚ್.ಅಂಬರೀಷ್ ಅವರ ಸಮ್ಮುಖದಲ್ಲಿ ಅಂದು ಬೆಳಗ್ಗೆ 9 ಗಂಟೆಗೆ ದೇವತಾಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

No comments:

Post a Comment