‘ಪಾಸ್‍ಪೋರ್ಟ್ ಮೇಳ’www.passportindia.gov.in
ಬೆಂಗಳೂರು, ಅಕ್ಟೋಬರ್ 8, 2014
ಹೆಚ್ಚುತ್ತಿರುವ ಸಾರ್ವಜನಿಕ ಬೇಡಿಕೆ ಹಿನ್ನೆಲೆಯಲ್ಲಿ ಮತ್ತು ಪಾಸ್‍ಪೋರ್ಟ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಬೆಂಗಳೂರಿನ ಪ್ರಾದೇಶಿಕ ಪಾಸ್‍ಪೋರ್ಟ್ ಕಛೇರಿ ಇದೇ ಅಕ್ಟೋಬರ್ 11ರಂದು ರಾಜ್ಯದ ನಾಲ್ಕು ಪಾಸ್‍ಪೋರ್ಟ್ ಸೇವಾ ಕೇಂದ್ರಗಳಲ್ಲಿ ‘ಪಾಸ್‍ಪೋರ್ಟ್ ಮೇಳ’ವನ್ನು ಆಯೋಜಿಸುತ್ತಿದೆ
ಬೆಂಗಳೂರಿನ ಲಾಲ್‍ಬಾಗ್ ರೋಡ್ ಮತ್ತು ಮಾರತ್ ಹಳ್ಳಿ ಹೊರ ವರ್ತುಲ ರಸ್ತೆಗಳಲ್ಲಿರುವ ಪಾಸ್‍ಪೋರ್ಟ್ ಸೇವಾ ಕೇಂದ್ರಗಳಲ್ಲಿ ಮತ್ತು ಹುಬ್ಬಳ್ಳಿ ಮತ್ತು ಮಂಗಳೂರಿನಲ್ಲಿರುವ ಪಾಸ್‍ಪೋರ್ಟ್ ಸೇವಾ ಕೇಂದ್ರಗಳಲ್ಲಿ ಈ ಮೇಳ ನಡೆಯಲಿದೆ.
ಪಾಸ್‍ಪೋರ್ಟ್ ಮೇ¼ದಲ್ಲಿ ಭಾಗವಹಿಸಲು ಅರ್ಜಿದಾರರು ತಿತಿತಿ.ಠಿಚಿssಠಿoಡಿಣiಟಿಜiಚಿ.gov.iಟಿ ಗೆ ಭೇಟಿ ನೀಡಿ ಆನ್‍ಲೈನ್ ಮೂಲಕ ನೋಂದಾವಣಿ ಮಾಡಿಕೊಳ್ಳಬೇಕು. ಅಲ್ಲಿ “ಎಆರ್‍ಎನ್” ( ಅಪ್ಲಿಕೇಶನ್ ರಿಜಿಸ್ಟ್ರೇಷನ್ ನಂಬರ್) ಸೃಷ್ಠಿಸಿದ ಬಳಿಕ ಆನ್‍ಲೈನ್‍ನಲ್ಲೇ ಶುಲ್ಕ ಪಾವತಿ ಮಾಡಿ ಅಲ್ಲೇ ನಿರ್ಧಿಷ್ಟ ಪಾಸ್‍ಪೋರ್ಟ್ ಸೇವಾ ಕೇಂದ್ರದೊಂದಿಗೆ ಭೇಟಿ ಸಮಯ ನಿಗದಿಪಡಿಸಿಕೊಳ್ಳಬೇಕು.
ಟಿವಿ ಚಾನೆಲ್‍ಗಳ ಡಿಜಿಟಲೀಕರಣ
ಡಿಜಿಟಲ್ ಇಂಡಿಯಾದ ಅವಿಭಾಜ್ಯ ಅಂಗ
ಅಕ್ಟೋಬರ್ 8, 2014
ಟಿವಿ ಚಾನೆಲ್‍ಗಳ ಡಿಜಿಟಲೀಕರಣ ಪ್ರಧಾನ ಮಂತ್ರಿಯವರ ‘ಡಿಜಿಟಲ್ ಇಂಡಿಯಾ’ ಯೋಜನೆಯ ಅವಿಭಾಜ್ಯ ಅಂಗವಾಗಿದೆ. ಕೇಬಲ್ ಟಿವಿ ಡಿಜಿಟಲೀಕರಣ ಪ್ರಕ್ರಿಯೆ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟÀದ ಸೇವೆಯನ್ನು ಒದಗಿಸುವ ಗುರಿ ಹೊಂದಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಹಾಯಕ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಅವರು ದೇಶದಲ್ಲಿ ಮೂರು ಮತ್ತು ನಾಲ್ಕನೆಯ ಹಂತದ ಕೇಬಲ್ ಟಿವಿ ಡಿಜಿಟಲೀಕರಣಕ್ಕಾಗಿ ರಚಿಸಲಾದ ಕಾರ್ಯಪಡೆಯ ಮೊದಲ ಸಭೆಯನ್ನುದ್ದೇಶಿಸಿ ಇಂದು ಮಾತನಾಡಿದರು.
ಗ್ರಾಹಕರ ಅಭಿರುಚಿ ಮತ್ತು ಅಗತ್ಯತೆಗಳನ್ನು ಪೂರೈಸಲು ತಯಾರಕರು ನೂತನ ತಂತ್ರಜ್ಞಾನಗಳನ್ನು ಆವಿಷ್ಕರಿಸಿ ಅವುಗಳನ್ನು ಜನಪ್ರಿಯಗೊಳಿಸಬೇಕು. ಡಿಜಿಟಲೀಕರಣ ಪ್ರಕ್ರಿಯೆಯನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುವುದರಿಂದ ಮುಂದಿನ ಹಂತದಲ್ಲಿ ಗ್ರಾಹಕರಿಗೆ ನೀಡಿರುವ ದರ ಪದ್ಧತಿ ಡಿಜಿಟಲೀಕರಣ ಪ್ರಕ್ರಿಯೆಯನ್ನು ನಿರ್ಧರಿಸುವ ಪ್ರಮುಖ ಅಂಶವಾಗಲಿದೆ ಎಂದು ಸಚಿವರು ಹೇಳಿದರು. ಡಿಜಿಟಲೀಕರಣದ ಮೂರು ಮತ್ತು ನಾಲ್ಕನೇ ಹಂತಗಳು ಸರಿಯಾದ ಸಮಯದಲ್ಲಿ ಪೂರ್ಣಗೊಳ್ಳುವಂತೆ ಮಾಡಲು ನಿಯೋಜನೆಗೊಂಡ ಕಾರ್ಯಪಡೆಗಳು ಅನುಷ್ಠಾನದ ಸಮಯಾವಧಿಯನ್ನು ಗುರುತಿಸಕೊಳ್ಳಬೇಕೆಂದು ಸಚಿವರು ತಿಳಿಸಿದರು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಬಿಮಲ್ ಜುಲ್ಕಾ ಉಪಸ್ಥಿತರಿದ್ದರು.
ಅಂಚೆ ದಿನಾಚರಣೆ
ಬೆಂಗಳೂರು, ಅಕ್ಟೋಬರ್ 8, 2014
ದಿನಾಂಕ 09-10-2014ರಿಂದ 15-10-2014ರವರೆಗೆ ಆಚರಿಸಲ್ಪಡುವ ರಾಷ್ಟ್ರೀಯ ಅಂಚೆ ಸಪ್ತಾಹದ ಅಂಗವಾಗಿ ಬೆಂಗಳೂರಿನ ಪ್ರಧಾನ ಅಂಚೆ ಕಛೇರಿ ಇದೇ ಅಕ್ಟೋಬರ್ 11ರಂದು ಬೆಳಗ್ಗೆ 11 ಗಂಟೆಗೆ ‘ಅಂಚೆ ದಿನ’ (ಮೇಲ್ ಡೇ) ಕಾರ್ಯಕ್ರಮವನ್ನು ಆಯೋಜಿಸಿದೆ. ಅಂಚೆ ಗ್ರಾಹಕರ ಸೌಲಭ್ಯಕ್ಕಾಗಿ ಈ ದಿನ ಪಿಕ್ ಅಪ್ ಸರ್ವಿಸ್ ( ಅಂಚೆ ಸಂಗ್ರಹಣಾ ಸೇವೆ) ನ್ನು ಆರಂಭಿಸಲಾಗುತ್ತದೆ.
ಈ ಉದ್ದೇಶಕ್ಕಾಗಿ ಬೆಂಗಳೂರು ಪ್ರಧಾನ ಅಂಚೆ ಕಛೇರಿ, ಜೆಸಿ ನಗರ ಅಂಚೆ ಕಛೇರಿ, ಎಸ್‍ಸಿ ಗಾರ್ಡನ್ ಅಂಚೆ ಕಛೇರಿ, ಬೆನ್ಸನ್ ಟೌನ್ ಅಂಚೆ ಕಛೇರಿ, ಹೆಚ್.ಕೆ.ಪಿ ರಸ್ತೆ ಅಂಚೆ ಕಛೇರಿ ಮತ್ತು ವಸಂತನಗರ ಅಂಚೆ ಕಛೇರಿಗಳನ್ನು ಅಂಚೆ ವಿತರಣಾ ವಲಯಗಳನ್ನಾಗಿ ಗುರುತಿಸಲಾಗಿದೆ. ಈ ವಲಯಗಳ ವ್ಯಾಪ್ತಿಗೆ ಬರುವ ಅಂಚೆ ಗ್ರಾಹಕರು ಅಂಚೆ ಸೇವೆಗಾಗಿ ಬೆಂಗಳೂರು ಪ್ರಧಾನ ಅಂಚೆ ಕಛೇರಿಯ ಈ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು:
080-22863344, 080-22850029, 9480885791, 9449849375 .
ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ
No comments:
Post a Comment