ಅಕ್ಟೋಬರ್ 28 ರಂದು ಮೈಸೂರು ಚಲೋ ಸ್ಮರಣೆ
ಮೈಸೂರು,ಅ.9. ಐತಿಹಾಸಿಕ ಮೈಸೂರು ಚಲೋ ಚಳವಳಿಯನ್ನು ಸ್ಮರಿಸುವ ಸಲುವಾಗಿ ಅಕ್ಟೋಬರ್ 28 ರಂದು ಮೈಸೂರು ನಗರದಲ್ಲಿ ಮೆರವಣಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ಸಭಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅರ್ಚನ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಂದು ಈ ತೀರ್ಮಾನ ಕೈಗೊಳ್ಳಲಾಯಿತು.
ಅಕ್ಟೋಬರ್ 24 ರಂದೇ ಈ ಕಾರ್ಯಕ್ರಮ ನಡೆಸಬೇಕಾತ್ತಾದರೂ ಅಂದು ದೀಪಾವಳಿ ಹಬ್ಬ ಇರುವ ಪ್ರಯುಕ್ತ 28 ರಂದು ಕಾರ್ಯಕ್ರಮ ನಡೆಸಲು ಸಭೆ ನಿರ್ಧರಿಸಿತು.
ಅಕ್ಟೋಬರ್ 28 ರಂದು ಬೆಳಗ್ಗೆ 9-30ಕ್ಕೆ ನಗರದ ಪ್ರೀಡಂ ಪಾರ್ಕ್‍ನಿಂದ ಮೆರವಣಿಗೆ ಆರಂಭಿಸಿ, ರಾಮಸ್ವಾಮಿ ಸರ್ಕಲ್‍ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ರಾಮಸ್ವಾಮಿ ಅವರಿಗೆ ಗೌರವ ಸಲ್ಲಿಸಲಾಗುವುದು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಮತ್ತೆ ಪ್ರೀಡಂ ಪಾರ್ಕ್‍ನಲ್ಲಿ ಸೇರಿ ಧ್ವಜಾರೋಹಣ, ಸಭಾ ಕಾರ್ಯಕ್ರಮ, ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ನಡೆಸಲಾಗುವುದು.
ಅದೇ ದಿನ ಮಧ್ಯಾಹ್ನ 2-30 ರಿಂದ ಕಲಾಮಂದಿರದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಹೈಸ್ಕೂಲ್ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪ್ರಬಂಧ ಸ್ಪರ್ಧೆ ಹಾಗೂ ಚಿತ್ರ ರಚನಾ ಸ್ಪರ್ಧೆ ಆಯೋಜಿಸಲಾಗುವುದು ಹಳೆ ಮೈಸೂರು ಪ್ರಾಂತ್ಯದ 11 ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟಗಾರರು ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಸ್ವಾತಂತ್ರ್ಯ ನಂತರ ಮೈಸೂರು ಸಂಸ್ಥಾನ ಸ್ವತಂತ್ರ ಭಾರತದಲ್ಲಿ ವಿಲೀನವಾಗದೇ ಇದ್ದಾಗ ಮೈಸೂರು ಚಲೋ ಚಳವಳಿ ನಡೆಸಲಾಗಿತ್ತು ನಂತರ ಮೈಸೂರು ಸಂಸ್ಥಾನವನ್ನು 1947ರ ಅಕ್ಟೋಬರ್ 24 ರಂದು ಸ್ವತಂತ್ರ ಭಾರತದಲ್ಲಿ ವಿಲೀನವಾಗಿತ್ತು ಈ ಸ್ಮರಣಿಗಾಗಿ ಮೈಸೂರು ಚಲೋ ಚಳವಳಿ ದಿನ ಆಚರಿಸಲಾಗುವುದು.
ಸಭೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಮಹಾಪೌರರಾಗಿ ಆರ್.ಲಿಂಗಪ್ಪ, ಉಪ ಮಹಾಪೌರರಾಗಿ ಮಹದೇವಮ್ಮ ಆಯ್ಕೆ
ಮೈಸೂರು, ಅಕ್ಟೋಬರ್ 9 ಮೈಸೂರು ಮಹಾನಗರ ಪಾಲಿಕೆಯ ಆವರಣದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಇಂದು ನಡೆದ ಮಹಾಪೌರರು, ಉಪ ಮಹಾಪೌರರು ಹಾಗೂ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿ ಸದಸ್ಯರುಗಳ ಚುನಾವಣೆಯಲ್ಲಿ ಮಹಾಪೌರರಾಗಿ ವಾರ್ಡ್ ಸಂಖ್ಯೆ 20ರ ಸದಸ್ಯರಾದ ಜಾತ್ಯಾತೀತ ಜನತಾ ದಳ ಪಕ್ಷದ ಆರ್.ಲಿಂಗಪ್ಪ ಹಾಗೂ ಉಪ ಮಹಾ ಪೌರರಾಗಿ ಭಾರತೀಯ ಜನತ ಪಕ್ಷದ ವಾರ್ಡ್ ಸಂಖ್ಯೆ 63ರ ಸದಸ್ಯೆ ಮಹದೇವಮ್ಮ ಆಯ್ಕೆಯಾಗಿದ್ದಾರೆ.
ಪ್ರಾದೇಶಿಕ ಆಯುಕ್ತೆ ರಶ್ಮಿ ಮಹೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ ಜಾತ್ಯಾತೀತ ಜನತಾ ದಳದ ಆರ್.ಲಿಂಗಪ್ಪ 40 ಮತಗಳನ್ನು ಪಡೆದು, 27 ಮತಗಳನ್ನು ಪಡೆದ ವಾರ್ಡ್ ಸಂಖ್ಯೆ 58ರ ಸದಸ್ಯ ಕಾಂಗ್ರೆಸ್ ಪಕ್ಷದ ಪ್ರತಿಸ್ಫರ್ಧಿ ಆರ್.ಅನಂತು ವಿರುದ್ಧ 13 ಮತಗಳ ಅಂತರದಿಂದ ಜಯಗಳಿಸಿದರು.
ಆರ್.ಲಿಂಗಪ್ಪ ಅವರು ಮೈಸೂರು ಮಹಾ ನಗರ ಪಾಲಿಕೆಯ 17ನೇ ಮಹಾ ಪೌರರಾಗಿ ಆಯ್ಕೆಯಾಗಿದ್ದು, ಇವರ ಅಧಿಕಾರ ಅವಧಿ ಅಕ್ಟೋಬರ್ 9, 2014 ರಿಂದ ಅಕ್ಟೋಬರ್ 8, 2015ರ ತನಕ ಇರುತ್ತದೆ.
ಉಪ ಮಹಾ ಪೌರರ ಚುನಾವಣೆಯಲ್ಲಿ ಭಾರತೀಯ ಜನತ ಪಕ್ಷದ ಪಾಲಿಕೆ ಸದಸ್ಯೆ ಮಹದೇವಮ್ಮ 39 ಮತಗಳನ್ನು ಪಡೆದು, ಪ್ರತಿಸ್ಫರ್ಧಿ ಕಾಂಗ್ರೆÉಸ್‍ನ ವಾರ್ಡ್ ಸಂಖ್ಯೆ 3 ಸದಸ್ಯೆ ಸಮೀನಾ ಜಬೀನ್ ವಿರುದ್ಧ 12 ಮತಗಳಿಂದ ಜಯಶೀಲಲಾದರು. ಉಪ ಮಹಾಪೌರರ ಅಧಿಕಾರ ಅವಧಿ ಅಕ್ಟೋಬರ್ 9, 2014 ರಿಂದ ಅಕ್ಟೋಬರ್ 8, 2015 ಆಗಿರುತ್ತದೆ.
ಮಹಾನಗರ ಪಾಲಿಕೆ ನಾಲ್ಕು ಸ್ಥಾಯಿ ಸಮಿತಿ ಚುನಾವಣೆ:
ಮೈಸೂರು ಮಹಾ ನಗರ ಪಾಲಿಕೆಯ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿಯ ಸದಸ್ಯರುಗಳಾಗಿ ಆರ್.ಅನಂತು, ಸುನೀಲ್ ಕುಮಾರ್, ಪ್ರಶಾಂತ್, ಹಸೀನ ತಾಜ್, ಬಿ.ಎಂ.ನಟರಾಜ್, ಟಿ.ಎಸ್. ಗಿರೀಶ್ ಪ್ರಸಾದ್ ಹಾಗೂ ಎಸ್.ಬಾಲಸುಬ್ರಮಣ್ಯ ಅವರುಗಳು ಅವಿರೋಧ ಆಯ್ಕೆಯಾದರು.
ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯಲ್ಲಿ ಸಮೀನಾ ಜಬೀನ, ತಸ್ಲೀಮ, ಎಂ.ಶಿವಣ್ಣ, ಟಿ.ರಾಮು, ಬಿ.ಮಂಜುನಾಥ್, ಎಂ.ಬಿ.ಜಗದೀಶ್ ಹಾಗೂ ಆರ್.ರಾಘವೇಂದ್ರ ಅವಿರೋಧ ಆಯ್ಕೆಯಾದರು.
ನಗರ ಯೋಜನೆ ಅಭಿವೃದ್ಧಿ ಸ್ಥಾಯಿ ಸಮಿತಿಗೆ ಸಿಆರ್.ಜಗದೀಶ್, ಸಂಶಾದ ಬೇಗಂ. ಎಸ್.ಬಾಲು, ಶಿವಕುಮಾರ್, ಇಂದ್ರಾ, ವನಿತ ಪ್ರಸಾದ್ ಮತ್ತು ಭಾಗ್ಯವತಿ ಅವರುಗಳು ವಿರೋಧವಿಲ್ಲದೆ ಚುನಾಯಿತರಾದರು.
ಲೆಕ್ಕೆ ಪತ್ರ ಸ್ಥಾಯಿ ಸಮಿತಿಗೆ ಸುನೀಲ್, ಉಮಾಮಣಿ, ಆರ್.ಕಮಲ, ಮಹದೇವಪ್ಪ, ಅನುಸೂಯ, ಪುಷ್ಪಾವತಿ ಹಾಗೂ ರಾಮ್‍ಪ್ರಸಾದ್ ಅವರುಗಳು ಅವಿರೋಧವಾಗಿ ಸದಸ್ಯರುಗಳಾದರು.
ಅಯ್ಕೆಯಾಗಿರುವ ನಾಲ್ಕು ಸ್ಥಾಯಿ ಸಮಿತಿಯ ಸದಸ್ಯರುಗಳ ಅಧಿಕಾರವು ಅವಧಿಯು ಅಕ್ಟೋಬರ್ 9, 2014 ರಿಂದ ಅಕ್ಟೋಬರ್ 8, 2015 ರ ವರೆಗೆ ಇರುತ್ತದೆ.
ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಬೆಟಸೂರಮಠ್, ಹೆಚ್ಚವರಿ ಪ್ರಾದೀಶಿಕ ಆಯುಕ್ತೆ ಗಾಯತ್ರಿ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ವಾಸು, ಸೋಮಶೇಖರ್, ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯರಾದ ಗೋ.ಮಧುಸುಧನ್, ನಾಗರಾಜು (ಸಂದೇಶ್ ನಾಗರಾಜ್) ಮರಿತಿಬ್ಬೇಗೌಡ, ಧರ್ಮಸೇನ ಹಾಗೂ ಪಾಲಿಕೆಯ ಸದಸ್ಯರುಗಳು ಚುನಾವಣೆಯಲ್ಲಿ ಭಾಗವಹಿಸಿದರು.
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ
ಮೈಸೂರು,ಅ.9.ತಿ. ನರಸೀಪುರ ತಾಲ್ಲೂಕಿನ ಕೆಂಪೇಗೌಡನಕೊಪ್ಪಲು ಗ್ರಾಮದಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಭರ್ತಿ ಮಾಡಲು ಸ್ಥಳೀಯ ಮಹಿಳಾ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಅಕ್ಟೋಬರ್ 27 ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂ. 08227-261267 ನ್ನು ಸಂಪರ್ಕಿಸಬಹುದು.
ವಿಶೇಷ ಚಿಕಿತ್ಸಾ ಶಿಬಿರ
ಮೈಸೂರು,ಅ.9.ಮೈಸೂರಿನ ಬೃಂದಾವನ ಬಡಾವಣೆಯಲ್ಲಿರುವ ಆಯುರ್ವೇದ ಸಿದ್ಧಾಂತ ಸ್ನಾತಕೋತ್ತರ ವಿಭಾಗದಲ್ಲಿ ಆಮ್ಲಪಿತ್ತ, ಉಳಿತೇಗು, ಎದೆ ಗಂಟಲು ಉರಿತ, ಹಸಿವು ಆಗದಿರುವಿಕೆ ಹಾಗೂ ಅಜೀರ್ಣ ಖಾಯಿಲೆ ಸಂಬಂಧಿಸಿದಂತೆ ಉಚಿತ ವಿಶೇಷ ಚಿಕಿತ್ಸಾ ಶಿಬಿರ ಅಕ್ಟೋಬರ್ 13 ರಿಂದ 18 ರವರೆಗೆ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 7795126125 ನ್ನು ಸಂಪರ್ಕಿಸಬಹುದು.
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ
ಮೈಸೂರು,ಅ.9.ಮೈಸೂರು ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾರ್ಥಿ ವೇತನ ಮಂಜೂರಾತಿಗಾಗಿ ಮೈಸೂರು ನಗರ ಮತ್ತು ತಾಲ್ಲೂಕಿನಲ್ಲಿರುವ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆಗಳ 5ನೇ ತರಗತಿಯಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವವರು ಹಿಂದುಳಿದ ವರ್ಗಗಳ ವರ್ಗ 1, 2ಎ, 2ಬಿ, 3ಎ, 3ಬಿ ಸೇರಿರಬೇಕು. ವಿದ್ಯಾರ್ಥಿಗಳು ಆಯಾ ಶಾಲಾ ಮುಖ್ಯೋಪಾಧ್ಯಾಯರ ಮೂಲಕ ಅರ್ಜಿ ಸಲ್ಲಿಸಬೇಕು. ಈಗಾಗಲೇ ಶಾಲಾ ಮುಖ್ಯಸ್ಥರಿಗೆ ಸದರಿ ಕಛೇರಿಯಿಂದ ವಿದ್ಯಾರ್ಥಿ ವೇತನದ ಅರ್ಜಿ ಫಾರಂಗಳನ್ನು ವಿತರಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೈಸೂರು ಜಿಲ್ಲೆ ದೂರವಾಣಿ ಸಂಖ್ಯೆ 0821-2445447ನ್ನು ಸಂಪರ್ಕಿಸಬಹುದಾಗಿದೆ.
ಸಾಂಸ್ಕøತಿಕ ವೇದಿಕೆ ಉದ್ಘಾಟನಾ ಸಮಾರಂಭ
ಮೈಸೂರು,ಅ.9.ಮೈಸೂರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ವತಿಯಿಂದ ಸಾಂಸ್ಕøತಿಕ ವೇದಿಕೆ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮವನ್ನು ಅಕ್ಟೋಬರ್ 10 ರಂದು ಬೆಳಗ್ಗೆ 11 ಗಂಟೆಗೆ ಕಾಲೇಜಿನ ಕಲಾ ಮಂಟಪದಲ್ಲಿ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ನಡೆಯಲಿದೆ.
ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಪ್ರಾಂಶುಪಾಲರಾದ ಡಾ|| ಜಿ.ಎಂ.ಸುಶೀಲ ಅವರು ಅಧ್ಯಕ್ಷತೆ ವಹಿಸುವರು.
ಶಾಸಕ ವಾಸು, ಜಿಲ್ಲಾಧಿಕಾರಿ ಸಿ.ಶಿಖಾ, ಖ್ಯಾತ ಭರತನಾಟ್ಯ ಕಲಾವಿದೆ ವಿದೂಷಿ ಡಾ| ಕೃಪಾಪಡ್ಕೆ, ಹಾಸನ ಜಿಲ್ಲೆಯ ಅರಸೀಕರೆಯ ನಗರಸಭಾ ಅಧ್ಯಕ್ಷರಾದ ಕೆ.ಎನ್.ಮೋಹನ್ ಕುಮಾರ್, ಅಂತರರಾಷ್ಟ್ರೀಯ ಹ್ಯಾಂಡ್‍ಬಾಲ್ ಮತ್ತು ಫುಟ್‍ಬಾಲ್ ಆಟಗಾರ್ತಿ ತಾರಾ ಅರಗಮ್ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಉದ್ಯಮಿಗಳಾಗಿ: ಆರ್.ವಿ ದೇಶಪಾಂಡೆ
ಮೈಸೂರು,ಅ.9.ಡಿಪ್ಲೋಮಾ ವಿದ್ಯಾರ್ಥಿಗಳು ಉದ್ಯೋಗಗಳನ್ನರಸದೇ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಉದ್ಯಮಿಗಳಾಗಬೇಕೆಂದು ಉನ್ನತ ಶಿಕ್ಷಣ ಸಚಿವರಾದ ಆರ್.ವಿ.ದೇಶಪಾಂಡೆ ಅವರು ಕರೆನೀಡಿದರು.
ಮೈಸೂರಿನ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್‍ನಲ್ಲಿ ಟಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ.ನ ಸಹಯೋಗದೊಂದಿಗೆ ಡಿಪ್ಲೋಮಾ ವಿದ್ಯಾರ್ಥಿಗಳಿಗಾಗಿ ಅಯೋಜಿಸಲಾಗಿದ್ದ “ಸರ್ವೀಸ್ ಅಡ್‍ವೈಸರ್ ಟಯೋಟ-ಟೆಕ್ನಿಕಲ್ ಎಜುಕೇಷನ್ ಪ್ರೋಗ್ರಾಂ (ಎಸ್‍ಎಟಿ-ಟಿಇಪಿ)” ಎಂಬ ಸರ್ವೀಸ್ ಅಡ್‍ವೈಸರ್ ತರಬೇತಿ ಕಾರ್ಯಕ್ರಮವನ್ನು ಸಿ.ಪಿ.ಸಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಉದ್ಘಾಟಿಸಿ ಮಾತನಾಡಿದರು ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್‍ಗೆ 50 ಗಣಕಯಂತ್ರಗಳನ್ನು ಹಾಗೂ ಅವಶ್ಯಕವಾದ ಪೀಠೋಪಕರಣಗಳನ್ನು ವiಂಜೂರು ಮಾಡುವುದಾಗಿ ತಿಳಿಸಿದರು.
ಶಾಸಕರಾದ ತನ್ವೀರ್ ಸೇಠ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಐಟಿಐ ಮತ್ತು ಪಾಲಿಟೆಕ್ನಿಕ್‍ಗಳಲ್ಲಿ ವಿದ್ಯಾರ್ಥಿಗಳು ತಾಂತ್ರಿಕ ಕೌಶಲ್ಯ ಪಡೆದು ಸ್ವಾವಲಂಬಿಗಳಾಗಬೇಕು. ತಾಂತ್ರಿಕ ಕಾಲೇಜುಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಮೈಸೂರಿನಲ್ಲಿ ಇನ್ನು ಹೆಚ್ಚು ಸರ್ಕಾರಿ ತಾಂತ್ರಿಕ ಕಾಲೇಜುಗಳು ಸ್ಥಾಪನೆಯಾಗಬೇಕಿದೆ ಎಂದರು.
ನಗರದಲ್ಲಿ ಒಂದು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯಾಗಬೇಕು ಹಾಗೂ ಇದರ ಜೊತೆಗೆ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್‍ನಲ್ಲಿ ಅಧುನಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹೊಸ ಡಿಪ್ಲೋಮಾ ಕೋರ್ಸ್‍ಗಳನ್ನು ಪ್ರಾರಂಭಿಸಬೇಕೆಂದು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದರು.
ಟಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕರರಾದ ನವೋಮಿ ಇಶೀಯವರು ದೇಶಾದ್ಯಂತ ಹಮ್ಮಿಕೊಂಡಿರುವ ತಮ್ಮ ಸಂಸ್ಥೆಯ ತಾಂತ್ರಿಕ ಶಿಕ್ಷಣ ಕಾರ್ಯಕ್ರಮದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ನವೋಮಿ ಇಶೀಯವರು ಆರ್.ವಿ.ದೇಶಪಾಂಡೆಯವರಿಗೆ ಈ ತರಬೇತಿ ಕಾರ್ಯಕ್ರಮದ ಸಂಬಂಧ ಒಡಂಬಡಿಕೆಯನ್ನು ಹಸ್ತಾಂತರಿಸಿದರು. ಹಾಗೂ, ಟಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ.ನ ಹಿರಿಯ ಉಪಾಧ್ಯಕ್ಷರಾದ ಹೆಚ್. ಇವನಾಗರವರು ತಾಂತ್ರಿಕ ಶಿಕ್ಷಣ ನಿರ್ದೇಶಕರರಾದ ಹೆಚ್.ಯು.ತಳವಾರ್‍ರವರಿಗೆ ತರಬೇತಿಗೆ ಸಂಬಂಧಿಸಿದ ಮೆಟೀರಿಯಲ್ ಕಂಟೆಂಟ್ ಬೋರ್ಡನ್ನು ಹಸ್ತಾಂತರಿಸಿದರು.
ಟಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ.ನ ಉಪಾಧ್ಯಕ್ಷರಾದ ಮಹೇಶ್ ಎನ್ ಸಾಲ್ಕರ್‍ರವರು ತರಬೇತಿಗೆ ಸಂಬಂಧಿಸಿದ ಶಿಕ್ಷಕರಾದ ಟಿ.ಹೆಚ್.ಲೋಕೇಶ್ ಮತ್ತು ಕೆ.ಶ್ರೀನಿವಾಸರವರಿಗೆ ಪ್ರಮಾಣಪತ್ರ ವಿತರಿಸಿದರು.
.ತಳವಾರ್ ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಶಾಸಕರಾದ ವಾಸು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಲ್.ಮಾದಪ್ಪ, ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷÀರಾದ ಲೋಕಮಣಿ, ಸ್ಥಳೀಯ ಕಾರ್ಪೋರೇಟರ್ ಆರ್.ರವೀಂದ್ರಕುಮಾರ್ ಮತ್ತು ತಾಂತ್ರಿಕ ಶಿಕ್ಷಣ ನಿರ್ದೇಶಕರಾದ ಹೆಚ್.ಯು
No comments:
Post a Comment