Sunday, 12 October 2014

ಭಾರತೀನಗರ.ಅ.12- ಶಕ್ತಿ ಸಮೂಹ ಸಂಸ್ಥೆಗಳ ಮಾಲೀಕ ಹಾಗೂ ಚಾಂಷುಗರ್ ಕಾರ್ಖಾನೆಯ ಛೇರ್ಮೆನ್ ದಿವಂಗತ ಡಾ.ಎನ್.ಮಹಾಲಿಂಗಂರವರ 11ನೇ ದಿನದ ಪುಣ್ಯ ಸ್ಮರಣೆ ಅಂಗವಾಗಿ ಇಲ್ಲಿನ ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಕಾರ್ಮಿಕ ಸಂಘ ಹಾಗೂ ಆಡಳಿತ ಮಂಡಳಿ ಪೂಜೆ ನೆರವೇರಿಸಿದರು.
      ಕಾರ್ಖಾನೆಯ ಆಡಳಿತ ಅಧಿಕಾರಿ ಸುಧೀಂದ್ರಕಟ್ಟಿ ಮಾತನಾಡಿ, ಡಾ.ಎನ್.ಮಹಾಲಿಂಗಂ ಸಾವನ್ನಪ್ಪಿರುವುದು ನಮ್ಮೆಲ್ಲರಿಗೂ ನೋವುಂಟುಮಾಡಿದೆ. ರೈತರು ಮತ್ತು ಗ್ರಾಮೀಣ ಜನರ ಅಭ್ಯುದಯಕ್ಕಾಗಿ ಕೈಗಾರಿಕಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾವಿರಾರು ಕಾರ್ಮಿಕರಿಗೆ ಉದ್ಯೋಗದೊಂದಿಗೆ ಜೀವನ ಕಲ್ಪಿಸಿಕೊಟ್ಟ ಮಹಾನೀಯರು ಎಂದರು.
    ಮಹಾಲಿಂಗಂರವರು ಮೃತಪಟ್ಟು 11 ದಿನಗಳಾಗಿದ್ದು, ಅವರ ಪುಣ್ಯತಿಥಿ ಕಾರ್ಯಕ್ರಮವು ತಮಿಳುನಾಡಿನ ಪೊಲಚ್ಚಿಯಲ್ಲಿ ನಡೆಯುತ್ತಿದೆ. ಕಾರ್ಮಿಕರು ಅಲ್ಲಿಗೆ ಹೋಗಲು ಸಾಧ್ಯವಾಗದ ಕಾರಣ ಕಾರ್ಖಾನೆಯಲ್ಲೇ 11ನೇ ದಿನದ ಪೂಜಾ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ ಎಂದರು.
   ಕಾರ್ಮಿಕ ಸಂಘದ ಅಧ್ಯಕ್ಷ ಎಸ್.ಪಿ.ನಾಗರಾಜು ಮಾತನಾಡಿ, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿ ಕುಗ್ಗ್‍ಗ್ರಾಮವಾಗಿದ್ದ ಕಾಳಮುದ್ದನ ದೊಡ್ಡಿಯನ್ನು ಭಾರತೀನಗರವನ್ನಾಗಿ ರೂಪಿಸಿ ಸುತ್ತ-ಮುತ್ತಲ ಗ್ರಾಮಗಳಿಗೆ ಮಾದರಿ ವಾಣಿಜ್ಯ ನಗರವನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರ ಆತ್ಮಕ್ಕೆ ಶಾಂತಿಸಿಗಲೆಂದು ಕಾರ್ಮಿಕರು ಹಾರೈಸುತ್ತಿದ್ದೇವೆ ಎಂದರು.
 ಪುಣ್ಯಸ್ಮರಣೆ ಕಾರ್ಯಕ್ರಮಕ್ಕೂ ಮೊದಲು ಕಾರ್ಖಾನೆಯಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಎಲ್ಲಾ ಕಾರ್ಮಿಕರು ತೆರಳಿ ಮಹಾಲಿಂಗಂರವರ ಹೆಸರಿನಲ್ಲಿ ಪೂಜೆಸಲ್ಲಿಸಿದರು.
  ಎಲ್ಲಾ ಕಾರ್ಮಿಕರು ಮಹಾಲಿಂಗಂರವರ ಭಾವಚಿತ್ರಕ್ಕೆ ಪುಷ್ವಾರ್ಚನೆ ಮಾಡುವ ಮೂಲಕ ಶ್ರದ್ದಾಂಜಲಿ ಅರ್ಪಿಸಿದರು.
   ನಂತರ ಎಲ್ಲಾ ಕಾರ್ಮಿಕರಿಗೂ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
  ಈ ಸಂದರ್ಭದಲ್ಲಿ ಕಾರ್ಮಿಕ ಸಂಘದ ಉಪಾಧ್ಯಕ್ಷ ದೊಡ್ಡರಸಿನಕೆರೆ ಜಯರಾಮು, ಕಾರ್ಯದರ್ಶಿ ವಿ.ಸಿ.ಪುಟ್ಟರಾಜು, ಸಹಕಾರ್ಯದರ್ಶಿ ಎಸ್.ಸಿ.ಸಿದ್ದರಾಜು, ಖಜಾಂಚಿ ದೀಪಕ್,     ಡಿ.ಜಿ.ಎಂ ರವಿ, ಕಾರ್ಮಿಕರ ಅಧಿಕಾರಿ ರಾಘವೇಂದ್ರ, ಅಣ್ಣೂರು ಶಂಭೂಲಿಂಗಯ್ಯ, ಗ್ರಾ.ಪಂ ಸದಸ್ಯ ಚಿಕ್ಕವೆಂಕಟೇಗೌಡ, ಡಿ.ಕೆ.ಮಹೇಂದ್ರಸ್ವಾಮಿ ಸೇರಿದಂತೆ ನಿರ್ದೇಶಕರು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.

No comments:

Post a Comment