Thursday, 16 October 2014
ಪ್ರಾದೇಶಿಕ ಆಯುಕ್ತೆ ರಶ್ಮಿ ಮಹೇಶ್ ಮೇಲೆ ಹಲ್ಲೆ ಪ್ರಕರಣ
ನಜûರಾಬಾದ್ ಎಸ್‍ಐ ಅಮಾನತು ; ಇನ್‍ಸ್ಪೆಕ್ಟರ್‍ಗೆ ನೋಟಿಸ್
ಮೈಸೂರು,ಅ.16- ಮೈಸೂರಿನ ಪ್ರಾದೇಶಕ ಆಯುಕ್ತೆ ರಶ್ಮಿ ಮಹೇಶ್‍ಗೆ ಸೂಕ್ತ ಭದ್ರತೆ ನೀಡುವಲ್ಲಿ ವಿಫಲರಾದ ನಜûರಾಬಾದ್‍ನ ಸಬ್ ಇನ್‍ಸ್ಪೆಕ್ಟರ್ ನರೇಂದ್ರಬಾಬುರವರನ್ನು ಅಮಾನತುಗೊಳಿಸಿ ಇನ್‍ಸ್ಪೆಕ್ಟರ್ ಪೂವಯ್ಯಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ಎಂ.ಎ.ಸಲೀಮ್ ತಿಳಿಸಿದರು.
ನಗರದಲ್ಲಿನ ಅವರ ಕಛೇರಿಯಲ್ಲಿ ಕರೆಯಲಾಗಿದ್ದ ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕರ್ನಾಟಕ ಆಡಳಿತ ತರಬೇತಿ ಸಂಸ್ಥೆ(ಎ.ಕೆ.ಐ)ಯ ಅಧಿಕಾರಿ ವೆಂಕಟೇಶ್ ನೀರಿನ ಸಂಪಿನೊಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಸಂಬಂದ ಸ್ಥಳದಲ್ಲಿ ತೀವ್ರ ಉದ್ವಿಘ್ನ ವಾತಾವರಣ ಸೃಷ್ಠಿಯಾಗಿತ್ತು.
ಆಗ ಅಲ್ಲಿನ ಗಲಾಟೆಯ ವಾತಾವರಣವನ್ನು ಹತೋಟಿಗೆ ತರಲು ಇನ್‍ಸ್ಪೆಕ್ಟರ್ ನರೇಂದ್ರ ಬಾಬು ವಿಫಲರಾಗಿದ್ದಾರೆ. ಅದು ಮಾತ್ರವಲ್ಲದೆ ಮೃತ ವೆಂಕಟೇಶ್‍ಗೆ ಸಂತಾಪ ಸೂಚಿಸಲು ಬಂದಂತಹ ಐಎಎಸ್(ಪ್ರಾದೇಶಿಕ ಆಯುಕ್ತೆ) ಅಧಿಕಾರಿ ರಶ್ಮಿ ಮಹೇಶ್‍ಅವರ ಮೇಲೆ ಕೆಲ ನೌಕರರು ಹಾಗೂ ಮೃತ ವೆಂಕಟೇಶ್‍ನ ಸಂಬಂಧಿಕರು ಚಪ್ಪಲಿಯಿಂದ ಹಲ್ಲೆ ನಡಡೆಸಿದ್ದು ಅದನ್ನು ತಡೆಗಟ್ಟಲು ವಿಫಲರಾದ ಕಾರಣ ಈ ರೀತಿಯ ನಿರ್ಧಾರ ಕೈಗೊಳ್ಳಲಗಾಗಿದೆ ಎಂದು ಹೇಳಿದರು.
ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಶ್ಮಿರವರು ಲಿಖಿತ ದೂರನ್ನು ನೀಡಿದ್ದು ಅದರ ಮೇರೆಗೆ 19 ಮಂದಿಯನ್ನು ಗುರ್ತಿಸಿ ಬಂಧಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ರಶ್ಮಿ ಹೇಳಿಕೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತೆ ರಶ್ಮಿ ಮಹೇಶ್‍ರವರು ಸಹ ತಮ್ಮ ಕಛೇರಿಯಲ್ಲಿ ಸುದ್ಧಿಗೋಷ್ಠಿಯನ್ನು ಕರೆದು ಎ.ಕೆ.ಐ ಅಧಿಕಾರಿ ವೆಂಕಟೇಶ್ ಆತ್ಮಹತ್ಯೆಗೆ ಸಂತಾಪ ಸೂಚಿಸಿದರು.
ಹಲವು ದಿನಗಳಿಂದ ಸಂಸ್ಥೆವಿಚಾರವಾಗಿ ದೂರುಗಳು ಬಂದ ಹಿನ್ನಲೆಯಲ್ಲಿ ಮೊನ್ನೆ ಸಂಸ್ಥೆಗೆ ಬೇಟಿ ನೀಡಿದ್ದು, ಅಧಿಕಾರ ದುರುಪಯೋಗವಾಗುತ್ತಿದೆ. ಯಾರೂ ಸರಿಯಾಗಿ ಜವಾಬ್ದಾರಿ ನಿಭಾಯಿಸಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಎಲ್ಲ ಅಧಿಕಾರಿಗಳಂತೆಯೆ ತರಾಟೆಗೆ ತೆಗೆದುಕೊಂದು ಬುದ್ಧವಾದ ಹೇಳಿದ್ದೆ.
ಸಾಮಾನ್ಯವಾಗಿ ಎಲ್ಲಾ ಅಧಿಕಾರಿಗಳು ಮಾಡುವಂತಹ ಕೆಲಸವನ್ನೆ ಮಾಡಿದ್ದೇನೆ ಎಂದು ಹೇಳಿಕೊಂಡರು.
ವೆಂಕಟೇಶ್‍ರವರ ಮರಣ ವಿಚಾರ ತಿಳಿದು ಸಂತಾಪ ಸೂಚಿಸಲು ಹೋದಾಗ ಹಲ್ಲೆ ನಡೆಯಿತು. ಈವಿಚಾರವಾಗಿ ಪೊಲೀಸ್ ಆಯುಕ್ತರಲ್ಲಿ ಲಿಖಿತ ದೂರು ನೀಡಿ ದಾಖಲಿಸಿರುವುದಾಗಿ ತಿಳಿಸಿದರು.
Subscribe to:
Post Comments (Atom)
No comments:
Post a Comment