ಜಿ.ಮಾದೇಗೌಡರು ಸ್ವಗ್ರಾಮ ಜಮೀನಿನಲ್ಲಿ ಕಾಲುಜಾರಿ ಬಿದ್ದು ಆಸ್ಪತ್ರೆಗೆ ದಾಖಲು.
ಭಾರತೀನಗರ.ಅ.2-ಇಲ್ಲಿಗೆ ಸಮೀಪದ ಗುರುದೇವರಹಳ್ಳಿಯಲ್ಲಿ ಮಾಜಿ ಸಂಸದರು ಹಾಗೂ ಗಾಂಧಿವಾದಿ ಜಿ.ಮಾದೇಗೌಡರು ಗದ್ದೆಯ ತೆವರಿಮೇಲೆ ಕಾಲುಜಾರಿ ಬಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಬುಧವಾರ ತಮ್ಮ ಸ್ವಗ್ರಾಮದ ಗುರುದೇವರಹಳ್ಳಿಗೆ ಬಂದಿದ್ದ ಮಾದೇಗೌಡರು ಗದ್ದೆಗೆ ತೆರಳಿದ್ದರು. ಈ ಸಂದರ್ಭ ಕಾಲು ಜಾರಿ ಬಿದ್ದು ಸ್ವಂಟದ ಮೂಳೆಗೆ ಪೆಟ್ಟುಬಿದ್ದಿದೆ.
ತಕ್ಷಣ ಗ್ರಾಮಸ್ಥರು ಮಂಡ್ಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಸಾಗರ್ ಅಪೊಲೋ ಆಸ್ಪತ್ರೆಗೆ ಕರೆದ್ಯೋಲಾಗಿದೆ. ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆಂದು ತಿಳಿದು ಬಂದಿದೆ.
ಜಿಮಾದೇಗೌಡರು ಇಳಿಯ ವಯಸ್ಸಿನಲ್ಲೂ ಕೂಡ ವಾರಕ್ಕೆ ಮೂರು ಭಾರಿ ತಮ್ಮ ಸ್ವಗ್ರಾಮದ ಜಮೀನಿನ ತೋಟಕ್ಕೆ ಬಂದು ವಿಶ್ರಾಂತಿ ಪಡೆಯುವುದರೊಂದಿಗೆ ವ್ಯವಸಾಯದಲ್ಲೂ ತೊಡಗಿದ್ದರು.
ಜಿಮಾದೇಗೌಡರು ಬೇಗ ಗುಣ ಮುಖರಾಗಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
No comments:
Post a Comment