Wednesday, 29 October 2014

ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವಂತೆ ಮನವಿ


ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವಂತೆ ಮನವಿ
ಮಂಡ್ಯ,ಅ.29- 1950 ರಿಂದ 2014ರ ವರೆಗೂ ಬಾಕಿ ಉಳಿದಿರುವಂತಹ ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಸರ್ಕಾರಕ್ಕೆ ಒತ್ತಡ ಹೇರುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಯ ವೆಂಕಟಗಿರಿಯಯ್ಯರವರು ಕರ್ನಾಟಕ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಿಗೆ ಮನವಿ ಮಾಡಿದರು.
ಜಿ.ಪಂನ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕುಂದು ಕೊರತೆ ಹಾಗೂ ಪ್ರಗತಿ ಪರಿಶೀಲನ ಸಭೆಯಲ್ಲಿಂದು ಅವರು ಮಾತನಾಡಿದರು.
ಸರ್ಕಾರವು 1993-97ರ ವರೆಗಿನ ಬ್ಯಾಕ್‍ಲಾಗ್ ಹುದ್ದೆಗಳನ್ನು ಪರಿಗಣನೆಗೆ ತೆಗೆದು ಕೊಂಡು, ಪರಿಶಿಷ್ಟ ಜಾತಿಗೆ 29,570 ಹಾಗೂ ಪರಿಶಿಷ್ಟ ಪಂಗಡಗಳ 4777 ಹುದ್ದೆಗಳು ಸೇರಿ 34 ಸಾವಿರಕ್ಕು ಹೆಚ್ಚು ಬ್ಯಾಕ್ ಲಾಗ್ ಹುದ್ದೆಗಳು ಖಾಲಿ ಇರುವಂತೆ ವ್ಯಕ್ತಪಡಿಸಿದ್ದು ಇದರಿಂದ ಪರಿಶಿಷ್ಟ ಜಾತಿ/ಪಂಗಡದವರಿಗೆ ಬಾರಿ ಅನ್ಯಾಯವಾಗಲಿದೆ ಎಂದರು.
1950ರಲ್ಲಿ ಸಂವಿಧಾನ ರಚನೆಯಾದಾಗಿನಿಂದಲೂ ಇಲ್ಲಿಯ(2014ರ) ವರೆಗಿನ ಬ್ಯಾಕ್ ಲಾಗ್‍ಹುದ್ದೆಗಳನ್ನು ಪರಿಗಣನೆಗೆ ತೆಗೆದುಕೊಂಡಲ್ಲಿ ಒಟ್ಟು 1,50,000 ಹುದ್ದೆಗಳು ಖಾಲಿಇದ್ದು, ಈ ಹುದ್ದೆಗಳನ್ನು ಪೂರ್ಣಗೊಳಿಸಿದ್ದಲ್ಲಿ 10 ಲಕ್ಷ ಕುಟುಂಬಗಳಿಗೆ ರಕ್ಷಣೆ ದೊರಯುತ್ತದೆ ಎಂದು ಹೇಳಿದರು.
ಸಂಸತ್ತಿನಲ್ಲಿ ಚನ್ನಪ್ಪ ರೆಡ್ಡಿ ಆಯೋಗವು ಹಿಂದುಳಿದ ವರ್ಗಗಳಲ್ಲಿ ಕೆಲವನ್ನು ಪರಿಶಿಷ್ಠ ಜಾತಿ/ಪಂಗಡಗಳಿಗೆ ಸೇರಿಸಲು ಮುಂದಾಗಿದ್ದು, ಇದು ಬಹಳ ಗೊಂದಲಗಳಿಗೆ ಎಡೆ ಮಾಡುತ್ತದೆ. ಅಸ್ಪøಷ್ಯತೆಯನ್ನು ಅನುಭವಿಸದ ಜಾತಿಗಳನ್ನು ಪಟ್ಟಿಗೆ ಸೇರಿಸಿಲ್ಲಿ ಅನ್ಯಾಯವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಮೂಲಧರ್ಮ ಬೌದ್ಧ ಧರ್ಮ. ಇದು ಜಗತ್ತಿನಾದ್ಯಂತ ಹೊರದೇಶಗಳಲ್ಲಿ ಜನ ಮಣ್ಣನೆಗೆ ಪಾತ್ರವಾಗಿದ್ದು, ನಮ್ಮ ನೆಲದ ಧರ್ಮವು ನಮ್ಮ ನೆಲದಲ್ಲಿಯೇ ನಷಿಸುವಂತಹ ಪರಿಸ್ಥಿತಿ ಬಂದಿದೆ. ರಾಜ್ಯದಲ್ಲಿ ಬೌದ್ಧ ಸ್ತೂಪಗಳ ರಕ್ಷಣೆ ಮಾಡುವಂತಹ ಅಗತ್ಯವಿದೆ.
ಬೌದ್ಧ ಸ್ತೂಪಗಳನ್ನು ರಕ್ಷಿಸುವ ಸಲುವಾಗಿ ಅದಕ್ಕೆ ಒಂದು ಪ್ರಾಧಿಕಾರವನ್ನು ಸ್ಥಾಪಿಸುವ ಸಲುವಾಗಿ ಹಾಗೂ ಪ್ರತಿ ಜಿಲ್ಲೆ, ತಾಲ್ಲೂಕುಗಳ ಕೇಂದ್ರಗಳಲ್ಲಿ ಬೌದ್ಧ ವಿಹಾರ ಸ್ಥಾಪನೆಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡವಂತೆ ಮನವಿ ಮಾಡಿದರು.
ಸುಪ್ರೀಂ ಕೋರ್ಟು ಅಟ್ರಾಸಿಟಿ ಕೇಸುಗಳು ಬೇಲ್ ನೀಡುವಂತಿಲ್ಲ ಎಂದು ಆದೇಶವನ್ನು ಹೊರಡಿಸಿದ್ದರು, ನಮ್ಮ ಉಚ್ಛನ್ಯಾಯಾಲಯವು ಆದೇಶ ಸಂಖ್ಯೆ ಐಎಲ್‍ಆರ್20023308ರಲ್ಲಿ ಬೇಲ್ ನೀಡುವಂತೆ ರಾಜ್ಯದಾದ್ಯಂತ ಆಧೇಶ ಹೊರಡಿಸಿದ್ದು, ರಾಜ್ಯದ ಎಲ್ಲಾ ಸೆಷನ್ಸ್ ನ್ಯಾಯಾಲಯಗಳಲ್ಲಿ ಇದನ್ನೆ ಪಾಲಿಸುವಂತಾಗಿದೆ.
ಇದರಿಂದಾಗಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಲೆ ಇವೆ ಇದನ್ನು ಬದಲಾಯಿಸಿ, ದಲಿತರನ್ನು ನಿಂದಿಸಿದರೆ, ಅವರ ಮೇಲೆ ಹಲ್ಲೆ ಮಾಡಿದ್ದಲ್ಲಿ ಬೇಲ್ ದೊರೆಯದಂತಹ ಸರ್ವೋಚ್ಛó ನ್ಯಾಯಾಲಯದ ಆದೇಶವನ್ನು ಪರಿಪಾಲನೆ ಜಾರಿಗೊಳಿಸಲು ಮುಖ್ಯ ಮಂತ್ರಿಗಳ ಗಮನಕ್ಕೆ ತರಬೇಕೆಂದು ಒತ್ತಾಯಿಸಿದರು.
ಮಂಡ್ಯ ತಾಲ್ಲೂಕಿನ ಈಚಗೆರೆ ಗ್ರಾಮದಲ್ಲಿ ತಮಟೆ ಹೊಡೆಯಲಿಲ್ಲ ವೆಂಬ ಕಾರಣಕ್ಕೆ ದಲಿತನಿಗೆ ತನ್ನ ಜಮೀನಿನಲ್ಲ ಸಾಗುವಳಿಗೆ ಹಾಗೂ ಬೆಳೆದಂತಹ ಕಬ್ಬಿನ ಸಾಕಾಣಿಕೆಗೆ ಅವಕಾಶ ಕೊಡದೆ ಆತನ ಕಬ್ಬು ಒಣಗಿ ಸರ್ಕಾರ ಅವನಿಗೆ ಪರಿಹಾರ ನೀಡಿತ್ತಾದರೂ, ಇಂತಹ ಹಲವು ಪ್ರಕರಣಗಳು ಜಿಲ್ಲೆಯಲ್ಲ ನಡೆಯುತ್ತಲಿದ್ದು, ಇಂತಹ ಪ್ರಕರಣಗಳ ಕಡೆಗೆ ಗಮನ ಹರಿಸುವಂತೆ ಮನವಿ ಮಾಡಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಬಿ.ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿನಡೆಯುವಂತಹ ಗುತ್ತಿಗೆಗಳಲ್ಲಿ ಶೇಕಡವಾರು ಗುತ್ತಿಗೆಯನ್ನು ದಲಿತ ಗುತ್ತಿಗೆ ದಾರರಿಗೆ ಮೀಸಲು ಇಡಬೇಕು, ಇ-ಟೆಂಡರ್ ರೂಪದಲ್ಲಿ ಗುತ್ತಿಗೆ ಕರೆಯುತ್ತಲಿರುವುದರಿಂದ ದಲಿತರು ಗುತ್ತಿಗೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ದಲಿತರಿಗೆ ಪ್ರತ್ಯೇಕವಾಗಿ ಇ-ಟೆಂಡರ್ ಪ್ರಕ್ರಿಯೆ ನಡೆಯಬೇಕೆಂದು ಒತ್ತಾಯಿಸಿದರು.
ಪೌರಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ಪಡೆಯದೆ ಅವರುಗಳನ್ನು ಖಾಯಂ ಗೊಳಿಸಿ ಸರ್ಕಾರಿ ನೌಕರರ ಡಿ.ಗ್ರೂಪಿಗೆ ಸೇರಿಸಬೇಕು. ಅವರನ್ನು ಸರ್ಕಾರಿ ನೌಕರನ್ನಾಗಿ ಮಾಡಬೇಕೆಂದರು.
ರಾಜ್ಯದಲ್ಲಿ ಮುಜರಾಯಿ ಇಲಾಖೆ ಸೇರಿದಂತಹ ದೇವಾಲಯಗಳಲಿ ದಲಿತರನ್ನು ಬಿಡುತ್ತಿಲ್ಲ, ಇಂತಹ ಸಂದರ್ಭದಲ್ಲಿ ಶ್ಮಸಾನಗಳಲ್ಲಿ ಅಂತಿಮ ಸಂಸ್ಕಾರ ದಿಂದ ದಲಿತರು ವಂಚಿತರಾಗುತ್ತಿದ್ದು, ಒಂದು ವರ್ಷದೊಳಗೆ ರಾಜ್ಯದಾದ್ಯಂತ ಪ್ರತಿ ಗ್ರಾಮದಲ್ಲಿಯೂ ದಲಿತರಿಗೆ ಪ್ರತ್ಯೇಕ ಸ್ಮಶಾನವನ್ನು ರೋಪಿಸಬೇಕು.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡವನ್ನು ರಚಿಸಿ ದಲಿತರ ಮೇಲಿನ ದೌರ್ಜನ್ಯವನ್ನು ತಡೆಯಲು ಮುಂಧಾಬೇಕು.
ಈಗ ದಲಿತರ ನಿಧಿಗೆ ದೊರೆತಿರುವ 22.75 ಕೋಟಿ ಹಣವನ್ನು ಸದ್ಬಳಕೆ ಮಾಡಿ, ಪ್ರತಿ ವರ್ಷದ ಅನುದಾನವನ್ನು ಅದೇ ವರ್ಷದಲ್ಲಿ ಬಳಕೆಯಾಗುವಂತಾಗಬೇಕೆಂದು ಒತ್ತಾಯಿಸಿದರು.
ಕರಾದಸಂಸ ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ ಮಾತನಾಡಿ, ಮಿಮ್ಸ್‍ನ ನಿರ್ದೇಶಕಿ ಪುಷ್ಪಾ ಸರ್ಕಾರ್‍ರವರು ಆಸ್ಪತ್ರೆಯಲ್ಲಿನ ದಲಿತ ಸಿಬ್ಬಂದಿಗೆ ಮಾನಸಿಕ ಕಿರುಕುಳವನ್ನು ನೀಡುತ್ತಿದ್ದು, ಅವರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ಅಲ್ಲಿನ ದಲಿತ ನೌಕರರೊಬ್ಬರಿ 35 ವರ್ಷಗಳಿಂದ ಅಲ್ಲಿಯೇ ಸೇವೆ ಸಲ್ಲಿಸಿದ್ದರು, ಅವರಿಗೆ ಮುಂಬಡ್ತಿಯನ್ನು ನೀಡದೇ ಹಾಗೆಯೇ ಉಳಿಸಿಕೊಂಡು ಹೊಸ ಸಿಬ್ಬಂದಿ ನೇಮಕಾತಿ ಮಾಡುತ್ತಿರುವುದು ಅಸಹನೀಯ ಘಟನೆಯಾಗಿದ್ದು, ಇಂತಹ ಹಲವು ಪ್ರಕರಣಗಳ ಬಗ್ಗೆ 7 ಪುಟಗಳ ವರದಿಯನ್ನು ಸಲ್ಲಿಸಿದರು.
ಸಭೆಯಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಇ.ಅಶ್ವಥ್ ನಾರಾಯಣ್, ಆಯೋಗದ ಕಾರ್ಯದರ್ಶಿ ಕಮಲ, ಜಿಲ್ಲಾಧಿಕಾರಿ ಅಜಯ್‍ನಾಗಭೂಷಣ್, ಎಸ್ಪಿ ಭೂಷಣ್ ಜಿ. ಬೋರಸೆ, ಸಿಇಓ ರೋಹಿಣಿ ಸಿಂಧೂರಿ, ಜಿ.ಪಂ ಸದಸ್ಯ ಸುರೇಶ್ ಕಂಠಿ ಉಪಸ್ಥಿತರಿದ್ದರು.


No comments:

Post a Comment