ಮನಸ್ಸಿನ ಬದಲಾವಣೆಯಿಂದ ದೇವರನ್ನು ಕಾಣಿ - ಸಿಆರ್‍ಎಸ್
ಮಂಡ್ಯ:ತಮ್ಮ ಮನಸ್ಸನ್ನು ಬದಲಾವಣೆ ಮಾಡಿಕೊಳ್ಳುವ ಮೂಲಕ ಪ್ರತಿಯೊಬ್ಬರು ದೇವರನ್ನು ಕಾಣಬೇಕು ಎಂದು ಶಾಸಕ ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.
ನಗರದ 2ನೇ ತಿರುವಿನಲ್ಲಿ ಶ್ರೀರಾಮ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಂಡ್ಯ ಜಿಲ್ಲೆ ಈ ಹಿಂದೆ ಶಿP್ಷÀಣದಲ್ಲಿ ಹಿಂದುಳಿದಿತ್ತು, ಈಗ ಎತ್ತರದಲ್ಲಿದೆ. ಆದರೆ ಶಿಕ್ಷಿತರೆ ಮೋಸ, ವಂಚನೆ, ಕಳ್ಳತನ, ಸೇರಿದಂತೆ ಇನ್ನಿತರ ಸಮಾಜಘಾತುಕ ಪ್ರಕ್ರಿಯೆಗಳಲ್ಲಿ ಪಾಲ್ಗೊಂಡು ಅಪರಾಧಿಗಳಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತ ಪಡಿಸಿದರು.
ಕೆಲವರು ಕೋಟಿ ರೂ. ವೆಚ್ಚ ಮಾಡಿ ದೇವಸ್ಥಾನ ನಿರ್ಮಾಣ ಮಾಡುತ್ತಾರೆ. ಆದರೆ ಅವರ ಮನೆ ಮಕ್ಕಳ ವಿವಾಹಕ್ಕೆ ಹಣವೇ ಇರುವುದಿಲ್ಲ, ನಮ್ಮ ಮನಸ್ಥಿತಿ ಬದಲಾಗದಿದ್ದಲ್ಲಿ ದೇವಸ್ಥಾನ ಕಟ್ಟಿದರೂ ಯಾವುದೇ ಪ್ರಯೋಜನವಿಲ್ಲ, ಆದ್ದರಿಂದ ಮನಸ್ಸಿನ ಬದಲಾವಣೆ ಮೂಲಕ ದೇವರನ್ನು ಕಾಣಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥಸ್ವಾಮೀಜಿ, ಆರ್ಶಿವಚನ ನೀಡಿದರು. ವೇದಿಕೆಯಲ್ಲಿ ಪುರುಷೋತ್ತಮಾನಂದಸ್ವಾಮೀಜಿ, ಶಾಸಕ ಬಿ.ರಾಮಕೃಷ್ಣ, ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಎಂ.ಎಸ್.ಆತ್ಮಾನಂದ, ಎಚ್.ಹೊನ್ನಪ್ಪ, ನಗರಸಭೆ ಅಧ್ಯP್ಷÀ ಸಿದ್ದರಾಜು, ನಲ್ಲಿಗೆರೆ ಬಾಲು ಇತರರಿದ್ದರು.
ಮಾನ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಂದ ಜಲಾನಯನ ಕಾಮಗಾರಿಗಳ ಪರಿಶೀಲನೆ.
ಮಾನ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿ ವ್ಯಾಪ್ತಿಯ ಬೇಬಿ, ಬಿದರಕಟ್ಟೆ, ಕಾರೆಕಟ್ಟೆ, ಜಿ. ಹೊಸಹಳ್ಳಿ ಗ್ರಾಮಗಳಲ್ಲಿ ಜಲಾನಯನ ಅಭಿವೃದ್ದಿ ಇಲಾಖೆ ವತಿಯಿಂದ ಸಮಗ್ರ ಜಲಾನಯನ ನಿರ್ವಹಣೆ ಕಾರ್ಯಕ್ರಮ ಮತ್ತು ನರೇಗ ಯೋಜನೆಯಡಿ ಕೈಗೊಂಡಿರುವ ನಾಲಾಬದು, ಕಂದಕಬದು, ತಡೆ ಅಣೆ, ಗೋಕಟ್ಟೆ ಅಭಿವೃದ್ದಿ, ಕೃಷಿ ಅರಣ್ಯ, ಕೃಷಿ ತೋಟಗಾರಿಕೆ ಮತ್ತು ಕಲ್ಯಾಣಿ ನಿರ್ಮಾಣ ಕಾಮಗಾರಿಗಳನ್ನು ಜಿಲ್ಲಾ ಜಲಾನಯನ ಅಭಿವೃದ್ದಿ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಬೇಬಿ ಪ್ರೌಢಶಾಲೆಗೆ ಭೇಟಿ ನೀಡಿ ಐ.ಡಬ್ಲ್ಯೂ.ಎಂ.ಪಿ. ಯೋಜನೆಯಡಿ ಪ್ರವೇಶದ್ವಾರ ಚಟುವಟಿಕೆ ಕಾರ್ಯಕ್ರಮದಡಿ ನಾಟಿ ಮಾಡಿರುವ ಅರಣ್ಯ ನೆಡುತೋಪು ವೀಕ್ಷಿಸಿದರು. ನಂತರ ಶಾಲೆಯ ಮಕ್ಕಳಲ್ಲಿ ಶೌಚಾಲಯದ ಅವಶ್ಯಕತೆ ಬಗ್ಗೆ ಅರಿವು ಮೂಡಿಸಿ ಶೌಚಾಲಯದ ಬಗ್ಗೆ ನಿತ್ಯ ಪ್ರತಿಜ್ಞಾ ವಿಧಿ ಮಾಡಿಸುತ್ತಿರುವುದರ ಬಗ್ಗೆ ಶಿಕ್ಷಕರಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಜಲಾನಯನ ಅಭಿವೃದ್ದಿ ಇಲಾಖೆಯ ಮುಖ್ಯಸ್ಥರಾದ ಡಾ: ಬಿ.ಎಸ್. ಚಂದ್ರಶೇಖರ್ ರವರು, ಘಟಕದ ಮುಖ್ಯಸ್ಥರಾದ ಟಿ. ವೆಂಕಟೇಶ್, ಹರೀಶ್, ಹೆಚ್.ಕೆ. ರಾಜಪ್ಪ ಇವರು ಹಾಗೂ ತಾಲ್ಲೂಕು ಜಲಾನಯನ ಅಭಿವೃದ್ದಿ ಅಧಿಕಾರಿ ನಿಶಾಂತ್ ಕೀಲಾರ, ಸಹಾಯಕ ಕೃಷಿ ಅಧಿಕಾರಿ ಕೃಷ್ಣಯ್ಯ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ತಿಮ್ಮೇಗೌಡ, ಬೇಬಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸಾವಿತ್ರಮ್ಮ, ಮಾಜಿ ಅಧ್ಯಕ್ಷರಾದ ಕೃಷ್ಣೇಗೌಡರವರು ಚಂದಗಾಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಪ್ರಕಾಶ್‍ರವರು, ಜಿ.ಹೊಸಹಳ್ಳಿ ಪುಟ್ಟಸ್ವಾಮಿ ಮತ್ತಿತರರರು ಉಪಸ್ಥಿತರಿದ್ದರು.
ಕೃಷ್ಣರಾಜಪೇಟೆ. ರೈತರಿಗೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭವನ್ನು ತಂದುಕೊಡುವ ರೇಷ್ಮೆ ಬೆಳೆಯು ಬಂಗಾರದ ಬೆಳೆಯಾಗಿದೆ. ಆದ್ದರಿಂದ ರೈತಬಂಧುಗಳು ಶ್ರದ್ಧಾಭಕ್ತಿಯಿಂದ ರೇಷ್ಮೆ ಬೇಸಾಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಸರ್ವಮಂಗಳ ಹೇಳಿದರು.
ಅವರು ಇಂದು ತಾಲೂಕಿನ ಚಿಕ್ಕೋನಹಳ್ಳಿಯ ರೇಷ್ಮೆ ತರಬೇತಿ ಶಾಲೆಯ ಆವರಣದಲ್ಲಿ ತಾಲೂಕಿನ ರೇಷ್ಮೆ ಬೆಳೆಗಾರರಿಗೆ ಆಯೋಜಿಸಿದ್ದ ತಾಂತ್ರಿಕ ಕಾರ್ಯಾಗಾರ ಹಾಗೂ ಸಹಾಯಧನದ ಚೆಕ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ರೇಷ್ಮೆ ಬೇಸಾಯದಲ್ಲಿ ಯಶಸ್ಸುಗಳಿಸಲು ತಜ್ಞರ ಮಾರ್ಗದರ್ಶನ ಹಾಗೂ ಬೇಸಾಯದಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಶ್ರದ್ಧೆಯಿಂದ ವ್ಯವಸಾಯ ಮಾಡಿದರೆ ಸಾಕು, ಅತ್ಯಲ್ಪ ಅವಧಿಯಲ್ಲಿ ಕೈತುಂಬಾ ಲಾಭದ ಹಣವನ್ನು ರೇಷ್ಮೆ ಬೇಸಾಯವು ತಂದು ಕೊಡುತ್ತದೆ. ಮಣ್ಣಿನ ರಸಸಾರಕ್ಕೆ ಅನುಗುಣವಾಗಿ ಮಣ್ಣಿನ ಪರೀಕ್ಷೆಯನ್ನು ಮಾಡಿಸಿ ಹೆಚ್ಚಿನ ರಸಗೊಬ್ಬರಗಳನ್ನು ಬಳಸದೇ ಬೇಸಾಯ ಮಾಡಿದರೆ ಭೂಮಿ ತಾಯಿಯು ಎಂದಿಗೂ ರೈತನನ್ನು ಕೈಬಿಡದೇ ಹೆಚ್ಚಿನ ಇಳುವರಿಯನ್ನು ನೀಡಿ ಆಶೀರ್ವದಿಸುತ್ತಾಳೆ ಎಂದು ಹೇಳಿದ ಸರ್ವಮಂಗಳ ಕೃಷ್ಣರಾಜಪೇಟೆ ತಾಲೂಕು ರೇಷ್ಮೆ ಬಿತ್ತನೆ ವಲಯವಾಗಿರುವುದರಿಂದ ತಾಲೂಕಿನ ಬಯೋಲ್ಟಿನ್ ರೇಷ್ಮೆ ಗೂಡಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಈ ಸದವಕಾಶವನ್ನು ಸದ್ಭಳಕೆ ಮಾಡಿಕೊಂಡು ರೈತ ಬಂಧುಗಳು ರೈತರ ಪ್ರಗತಿಗೆ ಹಾಗೂ ಆರ್ಥಿಕ ಸ್ವಾವಲಂಭನೆಗೆ ಸಹಕಾರಿಯಾಗಿರುವ ರೇಷ್ಮೆ ಬೆಳೆ ಬೇಸಾಯಕ್ಕೆ ಮುಂದಾಗಬೇಕು ಎಂದು ಸರ್ವಮಂಗಳ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೇಷ್ಮೆ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಶಾಂತರಾಜು ಅವರು ಮಾತನಾಡಿ ಮಂಡ್ಯ ಜಿಲ್ಲೆಯು ರೇಷ್ಮೆ ಬೆಳೆಯ ಬೇಸಾಯ ಹಾಗೂ ಇಳುವರಿಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯ ರೈತರು ಬೆಳೆಯುವ ರೇಷ್ಮೆಗೂಡು ಬಿತ್ತನೆ ಗೂಡಾಗಿದ್ದು ಉತ್ಕøಷ್ಠ ಗುಣಮಟ್ಟದಿಂದ ಕೂಡಿರುವುದರಿಂದ ರಾಜ್ಯದಾಧ್ಯಂತ ಹೆಚ್ಚಿನ ಬೇಡಿಕೆಯಿದೆ. ಕೆ.ಆರ್.ಪೇಟೆ ತಾಲೂಕಿನ ಹವಾಮಾನವು ರೇಷ್ಮೆ ಬೇಸಾಯಕ್ಕೆ ಸೂಕ್ತವಾಗಿದ್ದು ಇಲ್ಲಿನ ರೈತರು ಕೇವಲ 350 ಎಕರೆ ಭೂಮಿಯಲ್ಲಿ ಬೆಳೆಯುವ ಸಿಎಸ್‍ಆರ್-2 ರೇಷ್ಮೆ ಗೂಡಿನಿಂದ ಚಾಕಿಮಾಡಿ ರೇಷ್ಮೆ ಮೊಟ್ಟೆಗಳನ್ನು ತಯಾರು ಮಾಡಿ ರೈತರಿಗೆ ಬೆಳೆ ಬೆಳೆಯಲು ನೀಡಲಾಗುತ್ತಿದೆ. ರೈತರು ರೇಷ್ಮೆ ಬೆಳೆಯಲು ರೇಷ್ಮೆಸಾಕಾಣಿಕೆ ಮನೆ, ಹಿಪ್ಪುನೇರಳೆ ಬೆಳೆಗೆ ಅಳವಡಿಸಿಕೊಳ್ಳಲು ಹನಿ ನೀರಾವರಿ ಪದ್ದತಿ ಹಾಗೂ ಉಪಕರಣಗಳು, ಸಾಧನೆ-ಸಲಕರಣೆಗಳಿಗೆ ಸರ್ಕಾರವು ಸಬ್ಸಿಡಿಯನ್ನು ನೀಡಿ ಪ್ರೋತ್ಸಾಹಿಸುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಅತ್ಯಧಿಕ ಬೇಡಿಕೆಯನ್ನು ಹೊಂದಿರುವ ರೇಷ್ಮೆ ಬೇಸಾಯಕ್ಕೆ ರೈತರು ತಮ್ಮನ್ನು ಸಮರ್ಪಿಸಿಕೊಳ್ಳಬೇಕು ಎಂದು ಶಾಂತರಾಜು ಕರೆ ನೀಡಿದರು.
ರೇಷ್ಮೆ ಬೆಳೆ ತಾಂತ್ರಿಕ ಕಾರ್ಯಾಗಾರದಲ್ಲಿ ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿಗಳಾದ ದಯಾನಂದ್, ನಿವೃತ್ತ ರೇಷ್ಮೆ ಉಪನಿರ್ದೇಶಕ ಹೆಚ್.ರಾಜಪ್ಪ, ರೇಷ್ಮೆ ತರಬೇತಿ ಶಾಲೆಯ ಪ್ರಾಂಶುಪಾಲ ಡಿ.ಹೆಚ್.ಲಿಂಗಪ್ಪ, ತಾಲೂಕು ಸಹಾಯಕ ನಿರ್ದೇಶಕ ಆರ್.ಲೋಕೇಶ್ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತಬಂಧುಗಳಿಗೆ ರೇಷ್ಮೆ ಬೇಸಾಯದ ಬಗ್ಗೆ ಅಗತ್ಯ ಮಾಹಿತಿಯನ್ನು ನೀಡಿದರು.
ರೇಷ್ಮೆ ಕೃಷಿ ವಸ್ತುಪ್ರದರ್ಶನ; ಇದೇ ಸಂದರ್ಭದಲ್ಲಿ ರೇಷ್ಮೆ ಬೇಸಾಯಕ್ಕೆ ಪೂರಕವಾದ ಸಾಧನ-ಸಲಕರಣೆಗಳ ಪ್ರದರ್ಶನ, ರೇಷ್ಮೆ ಹುಳುವಿನ ಬೆಳವಣಿಗೆ ಕ್ರಮ, ರೇಷ್ಮೆ ಗೂಡಿನಿಂದ ಅಲಂಕಾರಿಕ ಉತ್ಪನ್ನಗಳ ತಯಾರಿಕೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುವ ವಸ್ತು ಪ್ರದರ್ಶನವನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ ಜಗಧೀಶ್ ಉದ್ಘಾಟಿಸಿದರು.
ಪ್ರಗತಿಪರ ರೇಷ್ಮೆ ಬೆಳೆಗಾರರಿಗೆ ಚೆಕ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಕಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿಗೋಪಾಲ್ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ಕೆ.ಕುಮಾರ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ, ಸಮಾಜಸೇವಕರಾದ ಕೆ.ಸಿ.ರೇವಣ್ಣ, ರಾಜ್ಯ ಆತ್ಮಾ ಕೃಷಿ ಯೋಜನೆಯ ನಿರ್ದೇಶಕ ವಿಠಲಾಪುರ ಸುಬ್ಬೇಗೌಡ, ಮುಖಂಡರಾದ ರಾಜಶೇಖರ್, ಕೆ.ಎಸ್.ಸೋಮಶೇಖರ್, ಬಿ.ಆರ್.ಗೋಪಾಲ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರೇಷ್ಮೆ ಬೆಳೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದಿರುವ ತಾಲೂಕಿನ ಪ್ರಗತಿಪರ ರೇಷ್ಮೆ ಬೆಳೆಗಾರರಾದ ಅರೆಬೂವನಹಳ್ಳಿ ಬಿ.ಆರ್.ಗೋಪಾಲ್ ಮತ್ತು ಕೆ.ಎಸ್.ಸೋಮಶೇಖರ್ ಹಾಗೂ ರೇಷ್ಮೆ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಶಾಂತರಾಜು ಅವರನ್ನು ಇಲಾಖೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಎಂ.ಎನ್.ಲೋಕೇಶ್ ಸ್ವಾಗತಿಸಿದರು. ತಾಂತ್ರಿಕ ಸೇವಾ ಕೇಂದ್ರದ ಅಧಿಕಾರಿಗಳಾದ ನಾಗರಾಜು ವಂದಿಸಿದರು. ದೊರೆಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.
ಕೃಷ್ಣರಾಜಪೇಟೆ. ಸಮಾಜದಲ್ಲಿ ಮಾನವರಾದ ನಾವುಗಳು ಒತ್ತಡದ ಬದುಕಿನಿಂದ ಮುಕ್ತರಾಗಿ ಸದಾ ಕ್ರಿಯಾಶೀಲರಾಗಿ ಲವಲವಿಕೆಯಿಂದ ಆತಂಕವಿಲ್ಲದೇ ಜೀವನ ನಡೆಸಿದರೆ ಮಾನಸಿಕ ಖಿನ್ನತೆಯನ್ನು ಸಂಪೂರ್ಣವಾಗಿ ತಡೆದು ಆರೋಗ್ಯವಂತ ಸಮಾಜವನ್ನು ಸುಲಭವಾಗಿ ನಿರ್ಮಿಸಬಹುದು ಎಂದು ಪಟ್ಟಣದ ಸಿವಿಲ್ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಸ್.ಗೋಪಾಲಪ್ಪ ಹೇಳಿದರು.
ಅವರು ಇಂದು ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯದ ಆವರಣದಲ್ಲಿ ವಿಶ್ವ ಮಾನಸಿಕ ದಿನಾಚರಣೆಯ ಅಂಗವಾಗಿ ತಾಲೂಕು ವಕೀಲರ ಸಂಘ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ಯಾಂತ್ರಿಕ ಜೀವನದಲ್ಲಿ ಸದಾ ಒತ್ತಡದಲ್ಲಿ ಜೀವನ ನಡೆಸುವ ಮಾನವನು ತನ್ನದಲ್ಲದ ತಪ್ಪಿನಿಂದ ದುರಾಸೆ ಹಾಗೂ ದುಶ್ಚಟಗಳಿಗೆ ಬಲಿಯಾಗಿ ತನ್ನ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಂಡು, ಸಂತಸಮಯವಾಗಿರಬೇಕಾದ ಬದುಕನ್ನು ನರಕವನ್ನಾಗಿಸಿಕೊಂಡು ಮಾನಸಿಕ ಖಿನ್ನತೆಗೆ ಬಲಿಯಾಗಿ ಬಳಲುತ್ತಿದ್ದಾನೆ. ಏಕಾಂಗಿ ಜೀವನ, ಒತ್ತಡದ ಬದುಕು, ಆತಂಕವು ಮಾನವನನ್ನು ಮಾನಸಿಕ ಅಸ್ವಸ್ಥನನ್ನಾಗಿಸುತ್ತದೆ. ಆದ್ದರಿಂದ ಮಾನವರು ಒತ್ತಡಗಳಿಂದ ಮುಕ್ತರಾಗಿ ನಗುನಗುತ್ತಾ ಸಂತೋಷದಿಂದ ಜೀವನ ನಡೆಸುವುದನ್ನು ಮೈಗೂಡಿಸಿಕೊಂಡು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಧ್ಯಾನ ಹಾಗೂ ಯೋಗದ ಮೂಲಕ ಮಾನಸಿಕ ಸಮತೋಲವನ್ನು ಕಾಪಾಡಿಕೊಂಡು ಕ್ರಿಯಾಶೀಲರಾಗಿರುವುದನ್ನು ಕಲಿಯಬೇಕು. ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯವೆಂಬುದನ್ನು ಮನಗಂಡು ಆತ್ಮವಿಶ್ವಾಸದಿಂದ ಸಮಸ್ಯೆಗಳಿಗೆ ಹೆದರದೇ ಆತ್ಮವಿಶ್ವಾಸದಿಂದ ಬದುಕು ನಡೆಸಿ ನೂರ್ಕಾಲ ನೆಮ್ಮದಿಯ ಜೀವನ ನಡೆಸಬೇಕು ಎಂದು ಗೋಪಾಲಪ್ಪ ಕರೆ ನೀಡಿದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಜೆಎಂಎಫ್‍ಸಿ ನ್ಯಾಯಾಲಯದ ಕಿರಿಯ ಶ್ರೇಣಿ ನ್ಯಾಯಾಧೀಶರಾದ ಎಸ್.ಕುಮಾರ್ ಇಂದು ಮಾನಸಿಕ ಖಿನ್ನತೆಗೆ ಬಲಿಯಾಗಿ ಪ್ರತೀ 40 ಸೆಕೆಂಡಿಗೆ ಒಬ್ಬ ವ್ಯಕ್ತಿಯಂತೆ ವಿಶ್ವದಾದ್ಯಂತ ಮೂರು ಸಾವಿರಕ್ಕೂ ಹೆಚ್ಚು ಜನರು ಪ್ರತಿದಿನ ದುರಂತ ಸಾವಿಗೆ ಬಲಿಯಾಗುತ್ತಿದ್ದಾರಲ್ಲದೇ ವಿಶ್ವದಲ್ಲಿ ಎರಡೂವರೆ ಕೋಟಿಗೂ ಹೆಚ್ಚು ಜನರು ಮಾನಸಿಕ ರೋಗಿಗಳಾಗಿ ಬಳಲುತ್ತಿದ್ದಾರೆ. ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ಸಮಾಜದಲ್ಲಿ ಸಂಘ ಜೀವಿಗಳಾಗಿ ಬದುಕು ನಡೆಸುವ ಎಲ್ಲಾ ವರ್ಗಗಳ ಜನರೂ ಕೈಜೋಡಿಸಿ ಧೃಡವಾದ ಹೆಜ್ಜೆಗಳನ್ನು ಇಡಬೇಕಾಗಿದೆ ಎಂದು ಹೇಳಿದ ಕುಮಾರ್ ಒತ್ತಡಗಳು ಹಾಗೂ ಆತಂಕದಿಂದ ಮುಕ್ತರಾಗಿ ಆತ್ಮವಿಶ್ವಾಸದಿಂದ ಜೀವನ ನಡೆಸಿದರೆ ಮಾನಸಿಖ ಖಿನ್ನತೆಯನ್ನು ಸಂಪೂರ್ಣವಾಗಿ ದೂರ ಮಾಡಬಹುದು. ಮಾನಸಿಕ ಖಿನ್ನತೆಗೆ ಒಳಗಾಗಿರುವ ಜನರನ್ನು ಬಂಧಿಸಿ, ಹಿಂಸೆ ನೀಡಿ, ಪ್ರಾಣಿಗಳಿಗಿಂತಲೂ ಕೀಳಾಗಿ ಕಂಡು ಹೀಯಾಳಿಸದೇ ಪ್ರೀತಿ-ವಿಶ್ವಾಸಗಳಿಂದ ಆರೈಕೆ ಮಾಡುವ ಮೂಲಕ ಮಾನಸಿಕವಾಗಿ ಗಟ್ಟಿಗೊಳಿಸಲು ಆತ್ಮವಿಶ್ವಾಸವನ್ನು ತುಂಬಬೇಕು ಎಂದು ಕುಮಾರ್ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಹೆಚ್.ಟಿ.ಹರೀಶ್ ಮಾತನಾಡಿ ಮಾನವನ ದೇಹ ಮತ್ತು ಮನಸ್ಸು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದ್ದರಿಂದ ಯುವಜನರು ಸಣ್ಣ ಪುಟ್ಟ ಸಮಸ್ಯೆಗಳನ್ನೇ ದೊಡ್ಡದೆಂದು ಭಾವಿಸಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಮಾಧಕ ವಸ್ತುಗಳನ್ನು ಸೇವಿಸಿ ದುಶ್ಚಟಗಳಿಗೆ ದಾಸರಾಗಿ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳದೇ ಸದಾ ಧನಾತ್ಮಕವಾಗಿ ಆಲೋಚನೆ ಮಾಡಿ ಆತ್ಮವಿಶ್ವಾಸದಿಂದ ಜೀವನ ನಡೆಸುವುದನ್ನು ಮೈಗೂಡಿಸಿಕೊಳ್ಳಬೇಕು. ಯುವಜನರು ಸೋಲಿಗೆ ಹೆದರದೇ ಕ್ರಿಯಾಶೀಲತೆಯನ್ನು ರೂಡಿಸಿಕೊಂಡು ಮನಸ್ಸು ಸದೃಢವಾಗಲು ಒತ್ತಡಗಳಿಂದ ದೂರವಿರಬೇಕು. ಅತಿಯಾದ ಆಸೆಯೇ ದುಃಖಕ್ಕೆ ಕಾರಣವಾಗುವುದರಿಂದ ಸೋಮಾರಿಗಳಾಗಿ ವ್ಯರ್ಥವಾಗಿ ಸಮಯವನ್ನು ಹಾಉ ಮಾಡಿಕೊಳ್ಳದೇ ಸಮಯಕ್ಕೆ ಮಹತ್ವ ನೀಡಿ ಒತ್ತಡಗಳಿಂದ ಮುಕ್ತರಾಗಿ ಮಾನಸಿಕ ಸಮತೋಲನವನ್ನು ಕಾಪಾಡಿಕೊಂಡು ನೆಮ್ಮದಿಯ ಜೀವನ ನಡೆಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ಅನಂತರಾಮಯ್ಯ, ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್, ಜಂಟಿ ಕಾರ್ಯದರ್ಶಿ ಕೆರೆಮೇಗಳಕೊಪ್ಪಲು ಶಂಕರೇಗೌಡ, ವಕೀಲರಾದ ಹೆಚ್.ರವಿ, ಕೆ.ಎನ್.ನಾಗರಾಜು, ಕೆ.ಆರ್.ಮಹೇಶ್, ಬಿ.ಆರ್.ಪಲ್ಲವಿ, ಎಸ್.ಡಿ.ಸರೋಜಮ್ಮ, ಕೃಷ್ಣಕುಮಾರ್, ಕುಛೇಲಗೌಡ, ಎಂ.ಎನ್.ಸೋಮೇಗೌಡ, ಅಪರ ಸರ್ಕಾರಿ ಅಭಿಯೋಜಕರಾದ ಮಂಜುನಾಥ್, ವಕೀಲರಾದ ರಾಜೇಗೌಡ, ಸಿ.ಎನ್.ಮೋಹನ್, ಎನ್.ಆರ್.ರವಿಶಂಕರ್, ಕೆ.ಆರ್.ಪಾಂಡು, ಬಂಡಿಹೊಳೆ ಗಣೇಶ್, ಜಿ.ಕೆ.ಸತೀಶ್, ಮತ್ತಿತರರು ಭಾಗವಹಿಸಿದ್ದರು.
ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಸ್ವಾಗತಿಸಿದರು, ಎಂ.ಎಲ್.ಸುರೇಶ್ ವಂದಿಸಿದರು, ಡಿ.ಆರ್.ಮೋಹನ್ ಕಾರ್ಯಕ್ರಮ ನಿರೂಪಿಸಿದರು.

No comments:
Post a Comment