Tuesday, 7 October 2014

ಮಂಡ್ಯ: ನಗರದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ, ಆರ್. ಭರಣಯ್ಯ ಸ್ವತಂತ್ರ ಪದವಿಪೂರ್ವ ಕಾಲೇಜು, ಮಳವಳ್ಳಿ ತಾಲೂಕು ಪೂರಿಗಾಲಿ ಇವರ ಸಂಯುಕ್ತ ಆಶ್ರಯದಲ್ಲಿ 2014-15ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆಯಿತು.
ಕ್ರೀಡಾಕೂಟವನ್ನು ಉದ್ಘಾಟಿಸಿದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎಂ. ಶ್ರೀಕಂಠಯ್ಯ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳನ್ನು ಬದುಕಿಗಾಗಿ ಮುಂದುವರಿಸಬೇಕು ಎಂದು ಹೇಳಿದರು.
ತೀರ್ಪುಗಾರರು ನೀಡುವ ತೀರ್ಪಿಗೆ ಬದ್ಧವಾಗಿ ಕ್ರೀಡಾಪಟುಗಳು ನಡೆದುಕೊಳ್ಳಬೇಕು. ಕ್ರೀಡಾಪಟುಗಳು ಸೋಲು ಗೆಲುವನ್ನು ಸಹಜವಾಗಿ ಸ್ವೀಕರಿಸಬೇಕು. ಸೋಲನ್ನು ನಗು ಮುಖದಿಂದ ಸ್ವೀಕರಿಸಬೇಕು ಎಂದು ಹೇಳಿದರು.
ಪಿಎಲ್‍ಎನ್ ಪ್ರಥಮ ದರ್ಜೆ ಮತ್ತು ಆರ್. ಭರಣಯ್ಯ ಪ್ರಥಮ ದರ್ಜೆ ಕಾಲೇಜು ಸಂಸ್ಥಾಪಕ ಪಿ.ಎಲ್. ನಂಜುಂಡಸ್ವಾಮಿ, ನವಚೇತನ ಸಾಮಾಜಿಕ ಮತ್ತು ಶೈಕ್ಷಣಿ ಸಂಸ್ಥೆಯ ಉಪಾಧ್ಯಕ್ಷರಾದ ಡಾ. ಪಿ.ಎಲ್. ಗಂಗಾಧರ್, ಪಿ.ಎಲ್. ಅನಂತಸ್ವಾಮಿ, ಕಾರ್ಯದರ್ಶಿ ಎನ್. ಯತೀಶ್, ಸದಸ್ಯ ಓಂಕಾರಸ್ವಾಮಿ, ಪ್ರಾಂಶುಪಾಲ ಎಸ್. ಶಿವಕುಮಾರ್, ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಜಿ. ಶಂಕರೇಗೌಡ, ಜಿಲ್ಲಾ ಪದವಿಪೂರ್ವ ಕಾಲೇಜುಗಳ  ಉಪನ್ಯಾಸಕರ ಸಂಘದ ಅಧ್ಯಕ್ಷ ಹನುಮಂತಯ್ಯ, ಕಾಲೇಜು ಪ್ರಾಂಶುಪಾಲರಾದ ಡಾ. ಸಂಧ್ಯಾ, ಕ್ರೀಡಾ ಸಂಚಾಲಕ ವಿಜಯಕುಮಾರ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.


No comments:

Post a Comment