ಕೃಷ್ಣರಾಜಪೇಟೆ. ತಾಲೂಕಿನಲ್ಲಿ ನಮೂನೆ 50 ಮತ್ತು 53ರಲ್ಲಿ ದರಖಾಸ್ತು ಭೂಮಿಗೆ ಅರ್ಜಿ ಸಲ್ಲಿಸಿ ಭೂಮಿಯ ಸ್ವಾಧೀನಾನುಭವದಲ್ಲಿರುವ ರೈತರಿಗೆ ದರಖಾಸ್ತು ಫೋಡಿ ಆಂದೋಲನದ ಮೂಲಕ ಭೂಮಿಯನ್ನು ಅಳತೆ ಮಾಡಿಸಿ ಸ್ಕೆಚ್ ಮಾಡಿಕೊಡಲಾಗುವುದು. ಪ್ರಾರಂಬಿಕ ಹಂತವಾಗಿ ತಾಲೂಕಿನ 5 ಗ್ರಾಮಗಳಲ್ಲಿ ದರಖಾಸ್ತು ಫೋಡಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ರೈತಬಂಧುಗಳು ಭೂಮಾಪನಾ ಇಲಾಖೆಗೆ ಅರ್ಜಿಸಲ್ಲಿಸಿ ತಮ್ಮ ಕೃಷಿಭೂಮಿಯನ್ನು ಅಳತೆ ಮಾಡಿಸಿ ಫೋಡಿ ಮಾಡಿಸಿಕೊಳ್ಳಬೇಕು ಎಂದು ಭೂಮಾಪನಾ ಇಲಾಖೆಯ ಸೂಪರ್‍ವೈಸರ್ ಕೆ.ದೇವೇಗೌಡ ಮನವಿ ಮಾಡಿದ್ದಾರೆ.
ಅವರು ಗಾಂಧೀ ಜಯಂತಿಯ ಅಂಗವಾಗಿ ತಾಲೂಕಿನಲ್ಲಿ ಕಂದಾಯ ಇಲಾಖೆಯ ವತಿಯಿಂದ ಪಹಣಿ ತಿದ್ದುಪಡಿ ಆಂದೋಲನದ ಮಾದರಿಯಲ್ಲಿಯೇ ಫೋಡಿ ಆಂದೋಲನವನ್ನು ಹಮ್ಮಿಕೊಂಡು ರೈತರಿಗೆ ಅನುಕೂಲ ಮಾಡಿಕೊಡಲು ಭೂಮಾಪನಾ ಇಲಾಖೆಯು ಮುಂದಾಗಿದೆ. ಪ್ರಾರಂಭಿಕವಾಗಿ ಕಸಬಾ ಹೋಬಳಿಯ ತೆರ್ನೇನಹಳ್ಳಿ, ಅಕ್ಕಿಹೆಬ್ಬಾಳು ಹೋಬಳಿಯ ಗುಬ್ಬಹಳ್ಳಿ, ಬೂಕನಕೆರೆ ಹೋಬಳಿಯ ದೊಡ್ಡಗಾಡಿಗನಹಳ್ಳಿ, ಕಿಕ್ಕೇರಿ ಹೋಬಳಿಯ ರಾಮನಹಳ್ಳಿ ಮತ್ತು ಸಂತೇಬಾಚಹಳ್ಳಿ ಹೋಬಳಿಯ ಜೊತ್ತನಪುರ ಗ್ರಾಮಗಳಲ್ಲಿ ಫೋಡಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ನಾರಾಯಣಗೌಡ ಅವರಿಗೆ ವಿವರಿಸಿದರು.
ನಮೂನೆ 50 ಮತ್ತು 53ರಲ್ಲಿ ದರಖಾಸ್ತು ಭೂಮಿಗಾಗಿ ಈಗಾಗಲೇ ಅರ್ಜಿ ಸಲ್ಲಿಸಿ ಕೃಷಿ ಭೂಮಿಯ ಸ್ವಾಧೀನನಾಭುವದಲ್ಲಿರುವ ರೈತರು ತಮ್ಮ ಜಮೀನಿನ ಸರ್ವೇ ಸ್ಕೆಚ್ ಮತ್ತು ಫೋಡಿ ಮಾಡಿಸಿ ಜಮೀನಿನ ದುರಸ್ತು ಮಾಡಿಸಿಕೊಂಡು ವ್ಯಾಜ್ಯ ಮುಕ್ತರಾಗಿ ನೆಮ್ಮದಿಯ ಜೀವನವನ್ನು ನಡೆಸಬಹುದಾಗಿದೆ. ರೈತ ಬಂಧುಗಳು ಈ ಸುವರ್ಣಾವಕಾಶವನ್ನು ಸದ್ಭಳಕೆ ಮಾಡಿಕೊಂಡು ತಮ್ಮ ಭೂಮಿಯನ್ನು ಫೋಡಿ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಹೆಚ್.ಎಲ್.ಶಿವರಾಮ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೆಂಚಪ್ಪ, ಉಪತಹಶೀಲ್ದಾರ್ ರಾಮಚಂದ್ರಪ್ಪ, ಗೋಪಾಲ್ ಶಿರಸ್ತೇದಾರ್ ಮಹದೇವೇಗೌಡ, ರಾಜಶ್ವನಿರೀಕ್ಷಕರಾದ ರಾಮಚಂದ್ರ, ಬಸವರಾಜು, ತಾಲೂಕು ಸರ್ವೇಯರ್ ಸಿದ್ಧಯ್ಯ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರಶೀರ್ಷಿಕೆ: 02-ಏಖPಇಖಿಇ-02 ಕೃಷ್ಣರಾಜಪೇಟೆ ತಾಲೂಕಿನಲ್ಲಿ ನಮೂನೆ 50 ಮತ್ತು 53ರಲ್ಲಿ ದರಖಾಸ್ತು ಭೂಮಿಗೆ ಅರ್ಜಿ ಸಲ್ಲಿಸಿ ಭೂಮಿಯ ಸ್ವಾಧೀನಾನುಭವದಲ್ಲಿರುವ ರೈತರಿಗೆ ದರಖಾಸ್ತು ಫೋಡಿ ಆಂದೋಲನದ ಮೂಲಕ ಭೂಮಿಯನ್ನು ಅಳತೆ ಮಾಡಿಸಿ ಸ್ಕೆಚ್ ಮಾಡಿಕೊಡುವ ಬಗ್ಗೆ ಭೂಮಾಪನಾ ಇಲಾಖೆಯ ಸೂಪರ್‍ವೈಸರ್ ದೇವೇಗೌಡ ಅವರು ಶಾಸಕ ನಾರಾಯಣಗೌಡ ಅವರಿಗೆ ಮಾಹಿತಿ ನೀಡಿದರು. ತಹಶೀಲ್ದಾರ್ ಹೆಚ್.ಎಲ್.ಶಿವರಾಮ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೆಂಚಪ್ಪ ಚಿತ್ರದಲ್ಲಿದ್ದಾರೆ.

No comments:
Post a Comment