Friday, 17 October 2014

ಅ.20ರಿಂದ ಖಾಧಿ ಗ್ರಾಮೋದ್ಯೊಗ ಮೇಳ

ಮೈಸೂರು, ಅ.17- ಭಾರತದ ಮಹಾತ್ಮ ಗಾಂಧಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯು ಮೈಸೂರು ನಗರದಲ್ಲಿ ಇದೆ 20ರಿಂದ ನ. 3ರ ವರೆಗೆ ನಂಜರಾಜ ಬಹದ್ದೂರ್ ಛತ್ರದಲ್ಲಿ 13 ದಿನಗಳ ಖಾದಿ ಗ್ರಾಮೋದ್ಯೋಗ ಮೇಳವನ್ನು ಆಯೋಜಿಸಿದೆ ಎಂದು ಸಂಸಥೆರಯ ಜಿಲ್ಲಾ ಅಧಿಕಾರಿ ಕಾಂತರಾಜು ತಿಳಿಸಿದರು. ಇಂದು ಸುದ್ಧಿಘೊಷ್ಠಿಯಲ್ಲಿ ಮಾತನಾಡುತ್ತಾ ದೇಶದ ವಿವಿಧ ರಾಜ್ಯಗಳಿಂದ ಖಾದಿ ಉದ್ಯಮಿಗಳು ತಾವೇ ನೈದ ಬಟ್ಟೆಗಳನ್ನು ªಪ್ರದರ್ಶನಕ್ಕಿಟ್ಟು ಮಾರಾಟ ಮಾಡಲಿದ್ದಾರೆ, ಸುಮಾರು 57ಕ್ಕೂ ಹೆಚ್ಚು ಮಳಿಗೆಗಳು ಈ ಮೇಲದಲ್ಲಿ ಭಾಗವಹಿಸಲಿವೆ ಎಮದು ಹೇಳಿದರು. ಇ ಮೆಳದಲ್ಲಿ ಹತ್ತಿ, ಉಣ್ಣೆ, ರೆಷ್ಮೆ ಮುಂತ್ತಾದ ಬಗೆಬಗೆಯ ವಿನ್ಯಾಸದ ವಸ್ತ್ರಗಳು, ರಾಜಸ್ಥಾನಿ ಸಾರಿಗಳು, ಉಡುಪುಗಳು ಗೃಹ ಅಲಮಕಾರಿಕ ವಸ್ತುಗಳು, ಕರಕುಶಾಲ ಹಾಗೂ ಕೆತ್ತನೆಯ ವಸ್ತುಗಳು ಪ್ರದರ್ಶನದಲ್ಲಿ ಇರುತ್ತವೆ ಎಂದರಲ್ಲದೆ, ಖಾದಿ ಉದ್ಯಮಿಗಳನ್ನು ಉತ್ಯೇಜಿಸುವ ಸಲುವಾಗಿ, ಭಾರತ ಸರ್ಕಾರ ವಿವಿಧ ರಾಜ್ಯಗಳಲ್ಲಿ ಪ್ರದರ್ಶನ ಮತ್ತು ಮಾರಾಟ ಮೇಳನ್ನು ಆಯೋಜಿಸುತ್ತಿದೆ ಈ ಭಾರಿ ದೀಪಾವಳಿ ವಿಶೇಷವಗಿ ಮೈಸೂರಿನಲ್ಲಿ ಆಯೋಜಿಸಿದೆ ಎಮದು ವಿವರಿಸಿದರು.

No comments:

Post a Comment