ವರದಿ:ಆರ್.ಶ್ರೀನಿವಾಸ್.ಕೆ.ಆರ್.ಪೇಟೆ.
ಗ್ರಾಮ ಪಂಚಾಯಿತಿಯಿಂದ ದಾರಿ ಬಂದ್ ಮಾಡಿ ಕಾಂಪೌಂಡ್ ನಿರ್ಮಾಣ: ನೊಂದ ಕುಟುಂಬದಿಂದ ನ್ಯಾಯಕ್ಕಾಗಿ ರಾಜ್ಯಪಾಲರಿಗೆ ಮೊರೆ.
ಕೆ.ಆರ್.ಪೇಟೆ,ಅ.23- ಯಾವುದೇ ಒಂದು ಜಾಗದಲ್ಲಿ ಜನ-ಜಾನುವಾರುಗಳಿಗೆ ತಿರುಗಾಡಲು ಅಡ್ಡವಾಗಿ ಮಂದಿರ, ಮಸೀದಿ, ಚರ್ಚ್ ಇದ್ದರೂ ಸಹ ಅದನ್ನು ಒಡೆದು ದಾರಿಯನ್ನು ಕಲ್ಪಿಸಿಕೊಡಬೇಕು ಎಂದು ಸುಪ್ರಿಂ ಕೋರ್ಟ್ ಆದೇಶ ಹೇಳುತ್ತದೆ. ಆದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇದ್ದ ದಾರಿಯನ್ನೇ ಬಂದ್ ಮಾಡಿ ಕಾಂಪೌಂಡ್ ನಿರ್ಮಿಸಿಕೊಳ್ಳುವ ಮೂಲಕ ಎರಡು ಕುಟುಂಬಗಳಿಗೆ ಕನಿಷ್ಠ ತಿರುಗಾಡಲು ಜಾಗವನ್ನು ನೀಡದೇ ತೊಂದರೆಗೀಡಾಗುವಂತೆ ಮಾಡಿದ್ದು ಈ ಕುಟುಂಬ ದಾರಿಗಾಗಿ ರಾಜ್ಯಪಾಲರಿಗೆ ಮೊರೆಹೋಗಿರುವ ಬಗ್ಗೆ ತಾಲೂಕಿನ ಸಿಂಧಘಟ್ಟ ಗ್ರಾಮದಿಂದ ವರದಿಯಾಗಿದೆ.
ಗ್ರಾಮದ ಎಸ್.ಎನ್.ಸಿದ್ದೇಗೌಡರ ಮಕ್ಕಳಾದ ನಂಜುಂಡಸ್ವಾಮಿ, ಶಂಕರೇಗೌಡ ಅವರು ಸಿಂಧಘಟ್ಟ ಗ್ರಾಮ ಪಂಚಾಯಿತಿ ಕಚೇರಿ ಸಿಂಬದಿಯಲ್ಲಿರುವ ತಮಗೆ ಪಿತ್ರಾರ್ಜಿತವಾಗಿ ಬಂದ ನಿವೇಶನದಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಕಳೆದ 30ವರ್ಷಗಳಿಂದಲೂ ವಾಸವಿದ್ದರು. ಈ ಮನೆ ನಿರ್ಮಾಣಕ್ಕೆ 1983ರಲ್ಲಿಯೇ ಅಂದಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೆಟ್ಟೇಗೌಡ ಅವರಿಂದ ಲೈಸೆನ್ಸ್ ಪಡೆದು ಮನೆ ನಿರ್ಮಾಣ ಮಾಡಲಾಗಿತ್ತು. ಈ ನಿವೇಶನವನ್ನು ತಮ್ಮ ತಂದೆಯಾದ ಎಸ್.ಎನ್.ಸಿದ್ದೇಗೌಡ ಅವರು ಇದೇ ಗ್ರಾಮದ ಮಹಮದ್ ಹುಸೇನ್ ಅವರಿಂದ 17.11.1964ರಲ್ಲಿ ಪೂರ್ವ, ಪಶ್ಚಿಮ 78ಅಡಿ ದಕ್ಷಿಣೋತ್ತರ 175ಅಡಿ ವಿಸ್ರ್ತೀಣ ಜಾಗವನ್ನು ಅಂದಿನ ತಹಸೀಲ್ದಾರ್ ಅಲಿನೇಷನ್ ಮಾಡಿಕೊಟ್ಟಿರುವ ನಿವೇಶನವನ್ನು ಕ್ರಯಕ್ಕೆ ಪಡೆದು ಕೊಂಡಿದ್ದ ಜಾಗದಲ್ಲಿ ನಾವು ಮನೆ ಕಟ್ಟಿಕೊಂಡು ವಾಸವಿದ್ದೇವೆ. ಆದರೆ ಅಂದಿನಿಂದ ಸುಮ್ಮನಿದ್ದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇಂದು ಏಕಾಏಕಿ ನಾವು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಪಕ್ಕದವರೆವಿಗೂ ಕಾಂಪೌಂಡ್ ನಿರ್ಮಿಸಿದ್ದಾರೆ. ಇದರಿಂದ ನಾವು ಮನೆಯಿಂದ ಹೊರಹೋಗಲು ತೊಂದರೆಯಾಗಿದೆ. ನಮಗೆ ತಿರುಗಾಡಲು ಪರ್ಯಾಯ ಮಾರ್ಗವೇ ಇಲ್ಲದಂತಾಗಿದೆ. ಇದಲ್ಲದೇ ಜಾನುವಾರುಗಳನ್ನು ಮನೆಯೊಳಗಿಂದ ಹೊರಕ್ಕೆ ಹಿಡಿದುಕೊಂಡು ಬರಲು ಸಾಧ್ಯವಾಗದೇ ಕಳೆದ ಒಂದು ವಾರದಿಂದಲೂ ಜಾನುವಾರುಗಳು(ಹಸುಗಳು) ಮನೆಯೊಳಗೆಯೇ ಇವೆ.
ನಮ್ಮ ಮನೆಗೆ ಕುಡಿಯುವ ನೀರಿಗೆಂದು ಹಾಕಿಸಿಕೊಂಡಿದ್ದ ಕುಡಿಯುವ ನೀರಿನ ನಲ್ಲಿ ವ್ಯವಸ್ಥೆಯನ್ನು ಕಿತ್ತು ದ್ವಂಸಗೊಳಿಸಿ ಕುಡಿಯಲು ನೀರಲ್ಲದಂತೆ ಮಾಡಿದ್ದಾರೆ. ನಮ್ಮ ಹೆಣ್ಣುಮಕ್ಕಳಿಗೆಂದು ಶೌಚಾಲಯ ನಿರ್ಮಿಸಿಕೊಂಡಿದ್ದೆವು ಅಲ್ಲಿಗೆ ಹೋಗಲು ಇದ್ದ ದಾರಿಯನ್ನು ಸಹ ಗ್ರಾ.ಪಂ. ಅಧಿಕಾರಿಗಳು ಬಂದ್ ಮಾಡಿರುವುದರಿಂದ ಶೌಚಾಲಯಕ್ಕೂ ಹೋಗಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ತೊಂದರೆ ನೀಡಿದ್ದಾರೆ. ಕೇಳಿದರೆ ಇದು ಗ್ರಾಮ ಪಂಚಾಯಿತಿ ಜಾಗ ಎನ್ನುತ್ತಾರೆ ಹಾಗಾದರೆ ಸುಪ್ರಿಂಕೋರ್ಟ್ ನೀಡಿರುವ ಆದೇಶದಂತೆ ಜನರಿಗೆ ತಿರುಗಾಡುವ ದಾರಿಯಲ್ಲಿ ಏನೇ ಅಡ್ಡವಿದ್ದರೂ ಒಡೆದು ಹಾಕಿ ಎಂಬ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಇದೊಂದು ರೀತಿ ಸ್ವತಂತ್ರ ಪೂರ್ವದಲ್ಲಿ ಬ್ರಿಟೀಷರಿಗಿಂತಲೂ ಕೆಟ್ಟ ಆಡಳಿತವನ್ನು ಸ್ವಾತಂತ್ರಾನಂತರದಲ್ಲಿ ಅಧಿಕಾರಿಗಳು ನಡೆಸುತ್ತಿದ್ದು ಇದು ಅಧಿಕಾರಿಗಳು ನಡೆಸುತ್ತಿರುವ ಕ್ರೂರ ದೌರ್ಜನ್ಯವಾಗಿದೆ ಮತ್ತು ದಬ್ಬಾಳಿಕೆಯಾಗಿ ಎಂದು ರೈತ ಮುಖಂಡ ಮುದ್ದುಕುಮಾರ್ ಅಧಿಕಾರಿಗಳ ವರ್ತನೆಯನ್ನು ಖಂಡಿಸಿದ್ದಾರೆ. ಗ್ರಾಮ ಪಂಚಾಯಿತಿ ದೌರ್ಜನ್ಯ ದಬ್ಬಾಳಿಕೆ ಕುರಿತು ರಾಜ್ಯಪಾಲರು, ಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ಅಧಿಕಾರಿಗಳಿಗೆ ದೂರು ನೀಡಿ ದೌರ್ಜನ್ಯವನ್ನು ತಡೆಹಿಡಿದು ಜೀವನ ನಡೆಸಲ್ಯು ಅಗತ್ಯವಾಗಿರುವ ಮೂಲಭೂತ ಸೌಲಭ್ಯಗಳಾದ ತಿರುಗಾಡಲು ದಾರಿ, ಕುಡಿಯಲು ನೀರು, ಬಂದ್ ಮಾಡಲಾಗಿರುವ ಶೌಚಾಲಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದಾರೆ.
ರೈತರ ರಕ್ಷಣೆಗೆ ಬಾರದ ಸರ್ಕಾರದ ವಿರುದ್ದ ಪ್ರತಿಭಟನೆ.
ಮೈಸೂರು:23; ರಾಜ್ಯದಲಿ ್ಲ ಅಸ್ಥಿತ್ವದಲ್ಲಿರುವ ಸರ್ಕಾರವು ರೈತರ ರಕ್ಷಣೆಗೆ ಬಾರದೆ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಆದ್ದರಿಂದ ನವೆಂಬರ್ 10ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರೈತರು ಧರಣಿ ಸತ್ಯಗ್ರಹ ಹಮ್ಮಿಕೊಂಡು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ತಿಳಿಸಿದರು.
ಇಂದು ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರವು ಈ ಹಿಂದೆ ಕೃಷಿ ಆಯೋಗ ರಚಿಸುವುದಾಗಿ ಹೇಳಿತು ಇದುವರೆಗೂ ಆಯೋಗ ರಚಿಸಿಲ್ಲ ಅದು ನೆನೆಗುದಿಗೆ ಬಿದ್ದಿದೆ, ಕೃಷಿ ಆಯೋಗ ಜಾರಿಗೆ ಬರುವವರೆಗೂ ರೈತರ ಸಮಸ್ಯೆ ಕೇಳುವವರಿಲ್ಲ, ಅವರ ರಕ್ಷಣೆಗೆ ಬರುವುದಿಲ್ಲ, ಸರ್ಕಾರ ರೈತರ ರಕ್ಷಣೆಗೆ ಇದೆಯೋ ಇಲ್ಲವೂ ಎಂಬಂತಾಗಿದೆ ಆದ್ದರಿಂದ ಕೂಡಲೇ ಕೃಷಿ ಆಯೋಗ ರಚಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ತರಕಾರಿಗಳ ಬೆಲೆ ತೀರಾ ಕುಸಿದಿದೆ, ಹತ್ತಿ, ಮೆಕ್ಕೆ ಜೋಳ, ರೇಷ್ಮೆ ಮುಂತಾದ ಬೆಳೆಗಳಿಗೂ ರಕ್ಷಣೆ ಇಲ್ಲದೆ ರೈತ ಕಂಗಲಾಗಿದ್ದಾರೆ, ಆದ್ದರಿಂದ ಸರ್ಕಾರ ತರಕಾರಿ ಸಮಿತಿ ರಚನೆ ಮಾಡಬೇಕು, ಯಾರಾ, ರೇಷ್ಮೆ ಮುಂತಾದ ಬೆಳೆಗಳಿಗೂ ರಕ್ಷಣೆ ಇಲ್ಲದೆ ರೈತ ಕಂಗಲಾಗಿದ್ದಾರೆ, ಆದ್ದರಿಂದ ಸರ್ಕಾರ ತರಕಾರಿ ಸಮಿತಿ ರಚನೆ ಮಾಡಬೇಕು, ಯಾವ ರೈತ, ಯಾವ ಯಾವ ಬಗೆಯ ತರಕಾರಿ ಬೆಳೆಯಬೇಕು, ಎಷ್ಟು ಪ್ರಮಾಣದಲ್ಲಿ ಬೆಳೆಯಬೇಕು, ಎಂಬುದನ್ನು ನಿಗದಿ ಮಾಡಬೇಕು ಎಂದರು.
ರೈತ ಹಳ್ಳಿ ಬಿಟ್ಟು ನಗರದ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ ಈ ಬಗ್ಗೆ ಕೌನ್ಸಸಿಂಗ್ ನಡೆಸಿ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದ ಪುಟ್ಟಣ್ಣಯ್ಯ, ಐ.ಎ.ಎಸ್, ಐ.ಪಿ.ಎಸ್, ಹಾಗೂ ಇತರೆ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡರೆ, ಹಲ್ಲೆ ನಡೆದರೆ ಹಲವಾರು ವಿಚಾರಣೆಗಳು ನಡೆಯುತ್ತವೆ ಆದರೆ ರೈತ ಆತ್ಮಹತ್ಯೆ ಮಾಡಿಕೊಂಡರೆ ಯಾವ ತನಿಖೆ ಹಾಗೂ ವಿಚಾರಣೆ ನಡೆಸುವುದಿಲ್ಲ ಹಾಗಾಗಿ ತಾರತಮ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಿಂದ ತಮಿಳುನಾಡಿಗೆ ಪ್ರತಿದಿನ ಐದು ಟಿ.ಎಂ.ಸಿ, ನೀರು ಹೋಗುತ್ತಿದೆ ಇದಕ್ಕೆ ಲೆಕ್ಕ ಇಲ್ಲ, ಆದ್ದರಿಂದ ಸುಪ್ರೀಂ ಕೋರ್ಟ್ ಆದೇಶದಂತೆ ನೀರು ಹಂಚಿಕೆ ಸಮಸ್ಯೆಯನ್ನು ಬಗ್ಗೆಹರಿಸಲು ಒಂದು ನಿರ್ಧಾರಕ್ಕೆ ಬರಬೇಕು, ಅವರಿಗೆ ನೀಡಬೇಕಾದ 280 ಟಿ.ಎಂ.ಸಿ, ನೀರನ್ನು ಪ್ರತಿದಿನ ಹೋಗುವ ನಿರಿನೊಂದಿಗೆ ಲೆಕ್ಕ ಹಾಕಿ ಬಿಡಬೇಕು, ಆ ಮೂಲಕ ಮತ್ತೆ ನೀರಿನ ಸಮಸ್ಯೆ ಬಾರದ ಹಾಗೆ ನೋಡೊಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಹೆಚ್ಚುತ್ತಿರುವ ಎಳೆ ವಯಸ್ಸಿನ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಅತ್ಯಚಾರಿಗಳಿಗೆ ಭಯ ಹುಟ್ಟಿಸುವಂತಹ ಉಗ್ರ ಶಿಕ್ಷೆಯ ಮಸೂದೆಯನ್ನು ಮಂಡಿಸಿ, ಅದನ್ನು ಜಾರಿಗೆ ತರಬೇಕು ಅವರಿಗೆ ಭಯದ ವಾತಾವರಣ ಸೃಷ್ಠಿಯಾಗಲು ಗಲ್ಲು ಶಿಕ್ಷೆಯಂತಹ ಶಿಕ್ಷೆ ವಿಧಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಮುಖಂಡರಾದ ಹೊಸಕೋಟ್ಟೆ ಬಸವರಾಜು, ಹೊಸೂರು ಕುಮಾರ್ ಹಾಜ್ಜರಿದರು.

No comments:
Post a Comment