Wednesday, 15 October 2014
pib news
ಸಂಯುಕ್ತ ಪದವಿ ಮಟ್ಟದ (ಟೈರ್ 1 ) ಪರೀಕ್ಷೆ-2014
ಸಿಬ್ಬಂದಿ ನೇಮಕಾತಿ ಆಯೋಗ ಸಂಯುಕ್ತ ಪದವಿ ಮಟ್ಟದ (ಟೈರ್-1 ) ಪರೀಕ್ಷೆ-2014ನ್ನು ಇದೇ ಅಕ್ಟೋಬರ್ 19,2014ರಂದು ನಡೆಸಲಿದೆ. ಬೆಂಗಳೂರು, ಮಂಗಳೂರು, ಮೈಸೂರು, ಧಾರಾವಾಡ, ಗುಲ್ಬರ್ಗ, ತಿರುವನಂತಪುರಂ, ಕೊಚ್ಚಿ , ಕೋಯಿಕೋಡ್ ಮತ್ತು ತ್ರಿಶೂರ್ ಸೇರಿದಂತೆ ದೇಶದ ನಾನಾ ಪರೀಕ್ಷಾ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯಲಿದೆ. ಕರ್ನಾಟಕ-ಕೇರಳ ವ್ಯಾಪ್ತಿಗೆ ಬರುವ ಅಭ್ಯರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರಗಳನ್ನು ಈಗಾಗಲೇ ಕಳುಹಿಸಿಕೊಡಲಾಗಿದೆ. ಪ್ರವೇಶ ಪತ್ರ ದೊರಕದ ಅಬ್ಯರ್ಥಿಗಳು ಆಯೋಗದ ವೆಬ್‍ತಾಣ hಣಣಠಿ//ssಛಿಞಞಡಿ.ಞಚಿಡಿ.ಟಿiಛಿ.iಟಿ ಕ್ಕೆ ಭೇಟಿ ನೀಡಿ ಪ್ರವೇಶ ಪತ್ರಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪಾಸ್‍ಪೋರ್ಟ್ ಗಾತ್ರದ ತಮ್ಮ ಇತ್ತೀಚಿನ ಭಾವಚಿತ್ರದ ನಾಲ್ಕು ಪ್ರತಿಗಳು ಮತ್ತು ಭಾವಚಿತ್ರ ಗುರುತಿನ ಚೀಟಿಯ (ಫೊಟೋ ಐಡಿ ಕಾರ್ಡ್) ಮೂಲಪ್ರತಿಯನ್ನು ಕಡ್ಡಾಯವಾಗಿ ತರಬೇಕು.
ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ದೂರವಾಣಿ ಮತ್ತು ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಧಿಸಲಾಗಿದೆ.
ಸಾರ್ಕ್ ರಾಷ್ಟ್ರಗಳ ಇಂಧನ ಸಚಿವರ ಸಭೆ
ಅಕ್ಟೋಬರ್ 15, 2014
ಸಾರ್ಕ್ ರಾಷ್ಟ್ರಗಳ ಇಂಧನ ಸಚಿವರುಗಳ ಐದನೆಯ ಸಭೆ ನಾಳೆ ಮತ್ತು ನಾಡಿದ್ದು (ಅಕ್ಟೋಬರ್ 16 ಮತ್ತು 17) ನವದೆಹಲಿಯಲ್ಲಿ ನಡೆಯಲಿದೆ. ಸಾರ್ಕ್ ಸದಸ್ಯ ರಾಷ್ಟ್ರಗಳ ನಡುವೆ ಇಂಧನ ಸಹಕಾರವನ್ನು ವೃದ್ಧಿಸುವ ಉದ್ದೇಶದಿಂದ ಈ ಸಭೆ ಕರೆಯಲಾಗಿದೆ. ಇಂಧನ, ಕಲ್ಲಿದ್ದಲು ಮತ್ತು ಪುನಶ್ಚೇತನಗೊಳ್ಳುವ ಇಂಧನ ಖಾತೆಗಳ ಸಹಾಯಕ ಸಚಿವ (ಸ್ವತಂತ್ರ) ಶ್ರೀ.ಪಿಯುಶ್ ಗೋಯಲ್ ಸಭೆಯನ್ನು ಉದ್ಘಾಟಿಸಲಿದ್ದಾರೆ.
ಸಾರ್ಕ್ ಸದಸ್ಯ ರಾಷ್ಟ್ರಗಳಾದ ಅಪ್ಘಾನಿಸ್ಥಾನ, ಭೂತಾನ್, ಬಾಂಗ್ಲಾದೇಶ, ಮಾಲ್ಡೀವ್ಸ್, ನೇಪಾಳ, ಪಾಕಿಸ್ಥಾನ ಮತ್ತು ಶ್ರೀಲಂಕಾ ದೇಶಗಳ ಇಂಧನ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
Subscribe to:
Post Comments (Atom)
No comments:
Post a Comment