Friday, 17 October 2014

ಬರ್ಬರವಾಗಿ ಕತ್ತು ಇರಿದು ಯುವಕನ ಕೊಲೆ

ಮಂಡ್ಯ,ಅ.17- ಯುವಕನ ಕತ್ತು ಇರಿದು ಬರ್ಬರವಾಗಿ ಕೊಲೆಗೈದಂತಹ ದುರ್ಘಟನೆ ಮಂಡ್ಯ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಸ್ವರ್ಣಸಂದ್ರದ ಲೇಟ್.ತಿಮ್ಮದಾಸಿರವರ ಪುತ್ರ ಕೇಶವ ಕುಮಾರ್(25 ವರ್ಷ) ಎಂಬಾತನನ್ನು ನಿನ್ನೆ ರಾತ್ರಿ ಬರ್ಬರವಾಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಕತ್ತನ್ನು ಇರಿದು ಕೊಲೆ ಮಾಡಿ ತದ ನಂತರ ಬೇವನಹಳ್ಳಿಯ ರಸ್ತೆ ಬದಿಯಲ್ಲಿ ಎಸೆದಿದ್ದಾರೆ. ಎಂದಿನಂತೆ ಬೆಳಿಗ್ಗೆ ಬೇವನಹಳ್ಳಿಯ ಮಹೇಶ್ ಗದ್ದೆಯ ಕಡೆಗೆ ಹೋಗುವಾಗ, ಅದೇ ಗ್ರಾಮದ ವಿಷಕಂಠರವರ ಜಮೀನು ಹಾಗೂ ರಸ್ತೆಯ ಮಧ್ಯೆ ನೀರುಹರಿಯುವ ಜಿಗುಳಿನಲ್ಲಿ ಕೇಶವ ಕುಮಾರ್ ಉರುಫ್ ಕೇಶವನ ಶವ ಪತ್ತೆಕಂಡಿದ್ದು, ಸುಮಾರು 8.30ಕ್ಕೆ ಪೊಲೀಸ್ ಠಾಣೆಗೆ ಕುದ್ದಾಗಿ ಹಾಜರಾಗಿ ಸುದ್ದಿ ತಲುಪಿಸಿದ್ದಾರೆ. ಕೇಶವ ಪೈನಾನ್ಸ್ ವ್ಯವಹಾರವನ್ನು ಮಾಡಿಕೊಂಡಿದ್ದ, ತಾಯಿ ಜಯಮ್ಮ ಮನೆಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ವೃತ್ತನಿರೀಕ್ಷಕರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣವು ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯಕ್ಕೆ ಏನು ಕಾರಣವೆಂಬುದು ತಿಳಿದು ಬಂದಿಲ್ಲ. ಪೂರ್ಣ ತನಿಖೆಯಾದ ನಂತರ ತಿಳಿದು ಬರಲಿದೆ ಎಂದು ಠಾಣೆಯ ಸಬ್ ಇನ್ಸಪೆಕ್ಟರ್ ಬಿ.ಎಸ್.ಶಿವರುದ್ರ ಪ್ರತ್ರಿಕೆಗೆ ತಿಳಿಸಿದರು. ಮಹಾವೀರ ಸರ್ಕಲ್‍ನಲ್ಲಿ ವ್ಯಕ್ತಿ ಸಾವು ಮಂಡ್ಯ,ಅ.17- ನಗರದ ಮಹಾವೀರ ಸರ್ಕಲ್‍ನಲ್ಲಿ ವ್ಯಕ್ತಿಯೊಬ್ಬ ಆಕಸ್ಮಿಕ ಸಾವನ್ನಪ್ಪಿರುವಂತಹ ಘಟನೆ ಜರುಗಿದೆ. ಮೃತ ವ್ಯಕ್ತಿ ಬಾಬ್‍ಜಾನ್ ಬಿನ್ ರಹೀಮ್ ಸಾಬ್ ಎಂಬಾತನು ನಿನ್ನೆ ಚರಂಡಿಯನ್ನು ದಾಟುವ ಸಂದರ್ಭದಲ್ಲಿ ಕಾಲು ಜಾರಿ ಕೆಳಕ್ಕಪ್ಪಳಿಸಿದ ಪರಿಣಾಮವಾಗಿ ಸಾವನ್ನಪ್ಪಿರುವುದಾಗಿ ಆತನ ಸಂಬಂಧಿಕರು ಪತ್ರಿಕೆ ತಿಳಿಸಿದ್ದಾರೆ. ಮೃತನಿಗೆ ಬಲೀಸ್ ಉನಿಸಾ ಎಂಬ ಪತ್ನಿಯಿದ್ದು, ಎರಡು ಗಂಡು ಹಾಗೂ ಎರಡು ಹೆಣ್ಣು ಸೇರಿದಂತೆ ನಾಲ್ಕುಮಂದಿ ಮಕ್ಕಳಿದ್ದಾರೆ. ಒಂದು ಹೆಣ್ಣುಮಗುವಿಗೆ ಮದುವೆಯಾಗಿದೆ ಎಂದು ತಿಳಿದು ಬಂದಿದೆ. ಮೃತ ಬಾಬ್‍ಜಾನ್‍ರವರ ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಪ್ಪಿಸಿದ್ದು, ಪ್ರಕರಣವನ್ನು ನಗರದ ಈಸ್ಟ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ.

No comments:

Post a Comment