Monday, 20 October 2014

ಮಂಡ್ಯ,ಅ.20-ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುವಂತಾಯಿತು ಎಂದು ಸಂಸದ ಸಿ.ಎಸ್.ಪುಟ್ಟರಾಜು ಅಭಿಪ್ರಾಯಿಸಿದರು.
ನಗರದ ಗುತ್ತಲಿನ ಸನಾಖಾನ್ ಪಂಕ್ಷನ್ ಹಾಲ್‍ನಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ನಡೆದ ಸಂಸದರಿಗೆ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜನರಿಗೆ ಉತ್ತಮ ಯೋಜನೆಗಳನ್ನು ನೀಡಲಿಲ್ಲ. 2 ಅವಧಿಗಳಲ್ಲಿಯೂ ಹಗರಣಗಳ ನಡುವೆಯೇ ಸರ್ಕಾರ ತೋಯ್ದಾಡುತ್ತಿತ್ತು. ಇದರಿಂದಾಗಿ ಬಿಜೆಪಿ ರಾಷ್ಟ್ರದೆಲ್ಲೆಡೆ ಬಲಗೊಳ್ಳಲು ಕಾರಣವಾಯಿತು ಎಂದು ಹೇಳಿದರು.
ದೇಶದಲ್ಲಿ ರಾಜಕಾರಣ ತುಂಬ ಹದಗೆಟ್ಟಿದ್ದು, ಕಾಂಗ್ರೆಸ್‍ನ ಹಗರಣದಿಂದ ಬಿಜೆಪಿ ಸರ್ಕಾರ ಬಂತು ಎಂದು ಹೇಳಿದರು.
ರಾಷ್ಟ್ರ ರಾಜಕಾರಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ವಿಶೇಷ ಸ್ಥಾನವಿದೆ. 10 ತಿಂಗಳ ಕಾಲ ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ನೀಡಿದ ಯೋಜನೆಗಳು ಇಂದಿಗೂ ಅವರನ್ನು ಗೌರವಯುತ ಸ್ಥಾನದಲ್ಲಿ ನಿಲ್ಲುವಂತೆ ಮಾಡಿವೆ ಎಂದರು.
ಇಂದಿನ ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ದೇವೇಗೌಡರಿಂದ ಸಲಹೆ ಪಡೆಯುತ್ತಾರೆ ಎಂದರೆ ಅವರ ಜ್ಞಾನ ಮತ್ತು ಗೌರವ ಎಷ್ಟಿದೆ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು. 
ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಜಿಲ್ಲಾಧ್ಯಕ್ಷ ಮೊಹಮದ್ ತಾಹೇರ್, ಅಬ್ರಾರ್ ಅಹಮದ್, ಅಸ್ಗರ್ ಅಹಮದ್, ಜಾ.ದಳ ಜಿಲ್ಲಾಧ್ಯಕ್ಷ ಡಿ.ರಮೇಶ್ ವೇದಿಕೆಯಲ್ಲಿದ್ದರು.




No comments:

Post a Comment