Thursday, 2 October 2014

         
ಅಕ್ಟೋಬರ್ 3 ರಂದು ದಸರಾ ಸಾಂಸ್ಕøತಿಕ ಕಾರ್ಯಕ್ರಮ
      ಮೈಸೂರು,ಅ.2.ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2014ರ ಅಂಗವಾಗಿ ಮೈಸೂರು ನಗರದ ನಾಲ್ಕು ವೇದಿಕೆಗಳಲ್ಲಿ ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮ ವಿವರ ಇಂತಿದೆ.
ಕಲಾಮಂದಿರ ವೇದಿಕೆ: ಅಕ್ಟೋಬರ್ 3 ರಂದು ಸಂಜೆ  5-30 ರಿಂದ 6 ಗಂಟೆಯವರೆಗೆ ಬಾದಾಮಿ ಮುತ್ತಲಗೇರಿಯ ಯಮನಪ್ಪ ಅವರಿಂದ ಡೊಳ್ಳು,  ಭೋಪಾಲ್ ದೀಪ್ ನೃತ್ಯ, ಸಂಜೆ 6 ರಿಂದ 7-30 ಗಂಟೆಯವರೆಗೆ ಮೂಡಬಿದರೆ ರಾಮಕೃಷ್ಣ ಕಾಟು ಕುಕ್ಕೆ ಅವರಿಂದ ದಾಸವಾಣಿ ಹಾಗೂ ಸಂಜೆ 7 ರಿಂದ 9 ಗಂಟೆಯವರೆಗೆ ಶಿರಸಿ ಅಂಜಲಿ ವಿಲ್ಸನ್ ಅವರಿಂದ ಕಥಕ್ ನೃತ್ಯ.
ಪುರಭವನ ವೇದಿಕೆ: ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಗೆಯವರೆಗೆ ಬೆಂಗಳೂರಿನ ಹುಲಿಕಲ್ ನಟರಾಜ್ ಅವರಿಂದ ನಾಟಕ, ಮಧ್ಯಾಹ್ನ 2-30 ರಿಂದ 4-30 ಗಂಟೆಯವರೆಗೆ ಗದಗ್ ಜಿಲ್ಲೆಯ ಪಂಚಾಕ್ಷರಿ ಗವಾಯಿ ನಾಟಕ ಸಂಘದಿಂದ ಅಕ್ಕಮಹಾದೇವಿ ನಾಟಕ, ಸಂಜೆ 5-30 ರಿಂದ 6 ಗಂಟೆಯವರೆಗೆ ಆಂದ್ರಪ್ರದೇಶ ಅವರಿಂದ ಕೂಚುಪುಡಿ, ಸಂಜೆ 6 ರಿಂದ 7-30 ಗಂಟೆಯವರೆಗೆ ಮೈಸೂರಿನ ಅಮೃತ ಚಂದ್ರಶೇಖರ್ ಅವರಿಂದ ಸುಗಮ ಸಂಗೀತ ಹಾಗೂ ಸಂಜೆ 7-30 ರಿಂದ 9 ಗಂಟೆಯವರೆಗೆ ಬೆಂಗಳೂರಿನ ನಾಟ್ಯರಂಭ ಅವರಿಂದ ನೃತ್ಯ ರೂಪಕ.
ಗಾನಭಾರತಿ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಬೆಂಗಳೂರಿನ ಸೌಮ್ಯ ಶ್ರೀ  ತಂಡದಿಂದ ಜಾನಪದ ಗಾಯನ, ಜಮ್ಮು ಮತ್ತು ಕಾಶ್ಮೀರ ಅವರಿಂದ ರೋಪ್ ಡ್ಯಾನ್ಸ್, ಸಂಜೆ 6 ರಿಂದ 7-30 ಗಂಟೆಯವರೆಗೆ ಮೈಸೂರಿನ ಶ್ರೀಮತಿ ಅನುಸೂಯ ಸುದರ್ಶನ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಸಂಜೆ 7-30 ರಿಂದ 9 ಗಂಟೆಯವರೆ ಶಿವಮೊಗ್ಗ ಪೆರಮಾಳ ಕಲಾ ಸಂಘದಿಂದ  ನೃತ್ಯ ರೂಪಕ.
ಚಿಕ್ಕ ಗಡಿಯಾರ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ರಾಜಸ್ಥಾನ ಅವರಿಂದ ಘುಮರ್ ನೃತ್ಯ, ಸಂಜೆ 6 ರಿಂದ 6-30 ಗಂಟೆಯವರೆಗೆ ಮಂಡ್ಯ ಜಿಲ್ಲೆಯ ರಮೇಶ್ ಮತ್ತು ತಂಡದಿಂದ ಪೂಜಾಕುಣಿತ, ಮಿಜೋರಾಂ ಅವರಿಂದ ಚಿರಾವ್ ನೃತ್ಯ ಹಾಗೂ ಸಂಜೆ 6-30 ರಿಂದ 7 ಗಂಟೆಯವರೆಗೆ ಗದಗ್ ಬಸವರಾಜು ನೀಲಪ್ಪ ಹಡಗಲಿ ಅವರಿಂದ ಗೀಗಿ ಪದ ನಡೆಯಲಿವೆ. 
ತೋಟಗಾರಿಕೆ ಇಲಾಖೆ:- ರಸಪ್ರಶ್ನೆ ಸ್ಪರ್ಧೆ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ.   
ವಿಶೇಷ ಚಿಕಿತ್ಸಾ ಶಿಬಿರ
    ಮೈಸೂರು,ಅ.2.ಮೈಸೂರಿನ ಬೃಂದಾವನ ಬಡಾವಣೆಯಲ್ಲಿರುವ ಆಯುರ್ವೇದ ಸಿದ್ಧಾಂತ ಸ್ನಾತಕೋತ್ತರ ವಿಭಾಗದಲ್ಲಿ ತಲೆನೋವಿಗೆ ಸಂಬಂಧಿಸಿದಂತೆ ಉಚಿತ ವಿಶೇಷ ಚಿಕಿತ್ಸಾ ಶಿಬಿರವನ್ನು ಅಕ್ಟೋಬರ್ 6 ರಿಂದ 11 ರವರೆಗೆ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಆಯೋಜಿಸಲಾಗಿದೆ. 
   ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ  9901994224ನ್ನು ಸಂಪರ್ಕಿಸಬಹುದು.

ಬಕ್ರೀದ್ ಹಬ್ಬ ಆಚರಣೆ: ಅಕ್ಟೋಬರ್ 6 ರಂದು ಸಾರ್ವತ್ರಿಕ ರಜೆ
 ಮೈಸೂರು,ಅ.2.ರಾಜ್ಯ ಸರ್ಕಾರವು ಸೆಂಟ್ರಲ್ ಮೂನ್ ಕಮಿಟಿ ಕೋರಿಯಂತೆ ಬಕ್ರೀದ್ ಹಬ್ಬದ ಆಚರಣೆ ಸಂಬಂಧ ಅಕ್ಟೋಬರ್ 5ರ ಬದಲಾಗಿ ಅಕ್ಟೋಬರ್ 6 ರ ಸೋಮವಾರದಂದು ಸಾರ್ವತ್ರಿಕ ರಜೆಯನ್ನು ಘೋಷಿಸಿದೆ ಎಂದು ಪ್ರಕಟಣೆ ತಿಳಿಸಿದೆ.



ಗಾಂಧಿ ಜಯಂತಿ:  ಆಚರಿಣೆ
      ಮೈಸೂರು,ಅ.2. ಮೈಸೂರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ದಸರಾ ಚಲನಚಿತ್ರೋತ್ಸವ ಸಹಯೋಗದಲ್ಲಿ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಇಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.
     ರಘುಲೀಲಾ ಸಂಗೀತ ಶಾಲೆ ವಿದ್ಯಾರ್ಥಿಗಳಿಂದ ಪ್ರಾರ್ಥನಾ ಗೀತೆಗಳನ್ನು ಆಯೋಜಿಸಲಾಗಿತ್ತು.  ರಾಷ್ಟ್ರಪಿತ ಮಹಾತ್ಮ ಗಾಂಧಿ ಕುರಿತು ಕೇಂದ್ರ ವಾರ್ತಾ ಮತ್ತು ಪ್ರಚಾರ ಇಲಾಖೆಯ ಚಲನಚಿತ್ರ ಶಾಖೆಯಿಂದ ಹೊರತರಲಾದ ಗ್ಲಿಂಪ್ಸಸ್ ಆಫ್ ಗಾಂಧಿ ಎಂಬ ಸಾಕ್ಷ್ಯಚಿತ್ರವನ್ನು ಇದೇ ವೇಳೆ ಪ್ರದರ್ಶಿಸಲಾಯಿತು.
     ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ವೈ.ಸಿ.ರೇವಣ್ಣ ಅವರು ಮಹಾತ್ಮ ಗಾಂಧಿಜೀ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಜೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆಕಾಶವಾಣಿ ಕೃಷಿ ವಿಭಾಗದ ಅಧಿಕಾರಿ ಎನ್.ಕೆ.ಕೇಶವಮೂರ್ತಿ ಅವರು ಗಾಂಧಿ ಸ್ಮøತಿ ವಾಚಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಎ.ಆರ್.ಪ್ರಕಾಶ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

No comments:

Post a Comment