ಮೈಸೂರು,ಸೆ.7-ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕಾಡಿನಿಂದ ಮೈಸೂರು ನಾಡಿಗೆ ಬಂದಂತಹ ಅಂಬಾರಿ ಹೊತ್ತ ಅರ್ಜುನ ಸೇರಿಂತೆ ಇತರೆ ಆನೆಗಳಿಗೆ ಅದ್ದೂರಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿ ಬೀಳ್ಕೊಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅಧ್ಯಕ್ಷತೆಯಲ್ಲಿ ಅರಮನೆ ಆವರಣದಲ್ಲಿ ಅಂಬಾರಿ ಹೊತ್ತು ಸಾಗಿದ ಅರ್ಜುನ ಸೇರಿದಂತೆ ಒಟ್ಟು 13 ಆನೆಗಳಿಗೆ ವಿಶೇಷ ಪೂಜೆ ಮಾಡಿ, ತಿಂಡಿ ತಿನಿಸುಗಳನ್ನು ನೀಡಿ, ಅತಿಥಿ ಸತ್ಕಾರದೊಂದಿಗೆ ಹಾಗೂ ಮಾವೂತರು ,ಕಾವಾಡಿಗಳಿಗೆ ವಿಶೇಷ ಉಟೋಪಚಾರ ಮಾಡಿ, ಒಟ್ಟು 13 ಆನೆಗಳನ್ನು ನೋಡಿಕೊಂಡತಹ ಕಾವಾಡಿ ಮಾವೂತರಿಗೆ ತಲಾ 5 ಸಾವಿರ ಗೌರವಧನ ನೀಡಿ ಕಾಡಿಗೆ ಕಳುಹಿಸಿ ಕೊಡಲಾಯಿತು.
ಸಚಿವ ಶ್ರೀನಿವಾಸ್ ಪ್ರಸಾದ್ ಅಭಿಮಾನಿ ಬಳಗದ ವತಿಯಿಂದ ಮಾವೂತರಿಗೆ ಹೊದಿಕೆ ಕಂಬಳಿಗಳು ಹಾಗೂ ಅವರ ಮಕ್ಕಳಿಗೆ ಬಟ್ಟೆಗಳನ್ನು ನೀಡಿ ಗೌರವಿಸಲಾಯಿತು.
ನಂತರ 13 ಆನೆಗಳನ್ನು ಲಾರಿಗಳಿಗೆ ಹತ್ತಿಸಿ ಅವುಗಳ ಮೂಲಕ ಕಾಡಿಗೆ ಕಳುಹಿಸಿ ಕೊಡಲಾಯಿತು.
ಅಂಬಾರಿ ಹೊತ್ತ ಅರ್ಜುನ ಕಾಡಿನಿಂದ ಬಂದಾಗ 5,470 ಕೆ.ಜಿ ತೂಕ ಹೊಂದಿದ್ದ, ಹೊರಡುವಾಗ 5,850 ಕೆ.ಜೆ ತೂಕವನ್ನು ಹೊಂದಿದ. ಅದರಂತೆಯೇ ಗಜೇಂದ್ರ 5,020 ರಿಂದ 5,250, ಬಲರಾಮ 4,970 ರಿಂದ 5,575, ಅಭಿಮನ್ಯು 4,880 ರಿಂದ 5,220, ವರಲಕ್ಷ್ಮಿ 3,260 ರಿಂದ 3,385, ಮೇರಿ 3,035 ರಿಂದ 3,405 ರಷ್ಟು ತೂಕ ಏರಿಕೆ ಕಂಡು ಬಂದಿತು. ಇವರೊಂದಿಗೆ ಇತರೆ ಆನೆಗಳನ್ನು ಕಳುಹಿಸಿ ಕೊಡಲಾಯಿತು.
ಸಚಿವರೊಂದಿಗೆ ಜಿಲ್ಲಾಧಿಕಾರಿ ಸಿ.ಶಿಖಾ, ಜಿ.ಪಂ ಅಧ್ಯಕ್ಷೆ ಪುಷ್ಟಾ ಅಮರನಾಥ್ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.
No comments:
Post a Comment