Thursday, 16 October 2014

ಕೃಷಿ ತಂತ್ರಜ್ಞರ ಸಂಸ್ಥೆಯಿಂದ ವಿಶ್ವ ಆಹಾರ ದಿನಾಚರಣೆ ******* “ಉತ್ತಮ ಕೃಷಿ ಪದ್ದತಿಗಳನ್ನು ಅಳವಡಿಸಿ ದೇಶವನ್ನು ಹಸಿವು ಮುಕ್ತಗೊಳಿಸುವಲ್ಲಿ ಕೃಷಿ ಕುಟುಂಬಗಳ ಪಾತ್ರ ಮಹತ್ವದಾಗಿದೆ ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್ ತಿಳಿಸಿದರು. ರೋಟರಿ ಪಶ್ಚಿಮ ಸಭಾಂಗಣ ಮೈಸೂರು ಇಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿ ಇಲಾಖೆ ಮೈಸೂರು, ರೋಟರಿ ಮೈಸೂರು ಉತ್ತರ, ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು ಮತ್ತು ಕೃಷಿಕ ಸಮಾಜ ಇವರುಗಳು ಜಂಟಿಯಾಗಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಂದುವರೆದು, ಕೃಷಿ ಕುಟುಂಬವೆಂದರೆ ಕೃಷಿಯಲ್ಲಿ ತಮ್ಮದೇ ಆದ ಮಹತ್ತರ ಪಾತ್ರವಹಿಸುತ್ತಿರುವ ಮಹಿಳೆಯರಿಗೂ ಗೌರವ ಸಲ್ಲಬೇಕೆಂದರು. ಪ್ರಖ್ಯಾತ ಕೃಷಿ ವಿಜ್ಞಾನಿ ಪದ್ಮಭೂಷಣ ಡಾ. ಎಂ. ಮಹದೇವಪ್ಪ ಮಾತನಾಡಿ ಕುಟುಂಬಕೃಷಿ ವಿಷಯ ಆಧರಿಸಿ ಆಚರಿಸಲಾಗುತ್ತಿರುವ ವಿಶ್ವ ಆಹಾರ ದಿನಾಚರಣೆಯಂದು ಅಪ್ಪಟ ಸಾಧಕ ಕೃಷಿಕುಟುಂಬಗಳನ್ನು ಸನ್ಮಾನಿಸಿರುವುದು ಶ್ಲಾಘನೀಯ ಎಂದರು. ನವೀನ ತಂತ್ರಜ್ಞಾನಗಳನ್ನು ಸ್ವೀಕರಿಸುವಲ್ಲಿ ರೈತರು ಮುಕ್ತ ಮನಸ್ಸಿನಿಂದ ಮುಂದೆ ಬರಬೇಕು, ಯುವಕರನ್ನು ಮರಳಿ ಕೃಷಿಯತ್ತ ಆಕರ್ಷಿಸಲು ಪ್ರಾಯೋಗಿಕ ಕೃಷಿ ವಿಷಯಗಳಿಗೆ ಮಹತ್ವ ನೀಡಬೇಕು ಎಂದರು. ಈ ಸಾಲಿನ ವಿಶ್ವ ಆಹಾರ ದಿನಾಚರಣೆಯನ್ನು “ಕುಟುಂಬ ಕೃಷಿ : ವಿಶ್ವಕ್ಕೆ ಆಹಾರ ಪೂರೈಕೆ, ಭೂಮಿಯ ಆರೈಕೆ” ಧ್ಯೇಯವಾಕ್ಯದೊಂದಿಗೆ ಆಚರಿಸಲಾದ ಈ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲೆÉಯಲ್ಲಿ ಸಮಗ್ರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಸಾಧನೆಗೈದ ಮೂರು ಕೃಷಿಕುಟುಂಬಗಳ ದಂಪತಿಗಳನ್ನು ಸನ್ಮಾನಿಸಲಾಯಿತು. ಸನ್ಮಾನಿತ ಸಾಧಕ ಕೃಷಿಕುಟುಂಬ ದಂಪತಿಗಳು 1. ಶ್ರೀಮತಿ ಎನ್.ನಾಗಮಣಿ ಮತ್ತು ಶ್ರೀ ಸುಂದರಸ್ವಾಮಿ, ಬಿಳಿಗೆರೆಹುಂಡಿ, ಕಸಬಾ ಹೋ. ತಿ.ನರಸೀಪುರ ತಾ. 2. ಶ್ರೀಮತಿ ದೇವೀರಮ್ಮ ಮತ್ತು ಶ್ರೀ ಪುಟ್ಟಯ್ಯ, ಮಲಾರ ಕಾಲೋನಿ, ಕಸಬಾ ಹೋ. ಹೆಚ್.ಡಿ.ಕೋಟೆ ತಾ. 3. ಶ್ರೀಮತಿ ಅನಿತಾಬಾಯಿ ಮತ್ತು ಶ್ರೀ ಶಿವಸಿಂಗ್, ಹೆಚ್.ಎಂ.ಪಟ್ಟಣ, ಕಸಬಾ ಹೋ. ಪಿರಿಯಾಪಟ್ಟಣ ತಾ. ಕುಟುಂಬಕೃಷಿಯ ಮೂಲಕ ದೇಶದ ಆಹಾರ ಕೊರತೆ ನೀಗಿಸುವ ಜೊತೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವಲ್ಲಿ ಅಸಂಖ್ಯಾತ ಸಣ್ಣ ಹಿಡುವಳಿದಾರರ ಕೊಡುಗೆಯನ್ನು ಸ್ಮರಿಸಿ ಗೌರವಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿತ್ತು. ಜಂಟಿ ಕೃಷಿ ನಿರ್ದೇಶಕ ಎಂ. ಮಹಂತೇಶಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಹಾಯಕ ಗವರ್ನರ್ ರೊ. ಎಮ್. ಎಸ್. ಜಯಪ್ರಕಾಶ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಅರುಣ್ ಬಳಮಟ್ಟಿ ಮತ್ತು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕಲ್ಮಳ್ಳಿ ಶಿವಕುಮಾರ್ ಸೇರಿದಂತೆ 200 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ನಿವೃತ್ತ ಜಂಟಿ ಕೃಷಿ ನಿರ್ದೇಶಕ ಕೃಷ್ಣಯ್ಯ ಸ್ವಾಗತಿಸಿದರು, ಉಪ ನಿರ್ದೇಶಕ ಯೋಗೇಶ್ ನಿರೂಪಿಸಿದರು ಹಾಗೂ ರೋ.ಮಂಜುನಾಥ್ ವಂದಿಸಿದರು ದಿನಾಂಕ : 16.10.2014 ಡಾ. ಎಂ.ಮಹಂತೇಶಪ್ಪ ಜಂಟಿ ಕೃಷಿ ನಿರ್ದೇಶಕರು, ಮೈಸೂರು. ಪ್ರತಿಯನ್ನು ಮಾನ್ಯ ಉಪ ನಿರ್ದೇಶಕರು, ವಾರ್ತಾ ಮತ್ತು ಪ್ರಚಾರ ಇಲಾಖೆ, ಮೈಸೂರು ರವರಿಗೆ ಸಲ್ಲಿಸುತ್ತಾ ಜಿಲ್ಲೆಯ ಎಲ್ಲಾ ಪತ್ರಿಕಾ ಪ್ರತಿನಿಧಿಗಳಿಗೆ ರವಾನಿಸಲು ಕೋರಿದೆ. Phoಣos 1 & 2. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್ ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು 3. ಸಾಧಕ ಕೃಷಿಕುಟುಂಬ ದಂಪತಿಗಳ ಸನ್ಮಾನ : ಶ್ರೀಮತಿ ಎನ್.ನಾಗಮಣಿ ಮತ್ತು ಶ್ರೀ ಸುಂದರಸ್ವಾಮಿ, ಬಿಳಿಗೆರೆಹುಂಡಿ, ಕಸಬಾ ಹೋ. ತಿ.ನರಸೀಪುರ ತಾ. 4. ಸಾಧಕ ಕೃಷಿಕುಟುಂಬ ದಂಪತಿಗಳ ಸನ್ಮಾನ : ಶ್ರೀಮತಿ ದೇವೀರಮ್ಮ ಮತ್ತು ಶ್ರೀ ಪುಟ್ಟಯ್ಯ, ಮಲಾರ ಕಾಲೋನಿ, ಕಸಬಾ ಹೋ. ಹೆಚ್.ಡಿ.ಕೋಟೆ ತಾ. 5. ಸಾಧಕ ಕೃಷಿಕುಟುಂಬ ದಂಪತಿಗಳ ಸನ್ಮಾನ : ಶ್ರೀಮತಿ ಅನಿತಾಬಾಯಿ ಮತ್ತು ಶ್ರೀ ಶಿವಸಿಂಗ್, ಹೆಚ್.ಎಂ.ಪಟ್ಟಣ, ಕಸಬಾ ಹೋ. ಪಿರಿಯಾಪಟ್ಟಣ ತಾ. 6. ಕೃಷಿ ವಿಜ್ಞಾನಿ ಪದ್ಮಭೂಷಣ ಡಾ. ಎಂ. ಮಹದೇವಪ್ಪ ಮಾತನಾಡಿದರು

No comments:

Post a Comment