Tuesday, 7 October 2014

ಪಿಡಿಓ ಮತ್ತು ಬಿಲ್ ಕಲೆಕ್ಟರ್ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ
ಮಂಡ್ಯ,ಅ.7- ಮದ್ದೂರಿನ ಸಿ.ಎ.ಕೆರೆ ಹೋಬಳಿಯ ಯಡಗನಹಳ್ಳಿ ಗ್ರಾ.ಪಂ.ಯಲ್ಲಿ ಬದಲಿ ಪಂಚಾಯಿತಿ ನೌಕರನಾಗಿ ಕಾರ್ಯ ನಿರ್ವಹಿಸುತ್ತಲಿದ್ದಂತಹ ಶಿವಪ್ರಕಾಶ್‍ರವರಿಗೆ ಕಿರುಕುಳ ನೀಡಿ ಸಾವಿಗೆ ಶರಣಾಗಲು ಕಾರಣ ಕರ್ತರಾದ ಪಿಡಿಓ ಸುಧ ಮತ್ತು ಬಿಲ್ ಕಲೆಕ್ಟರ್ ಕೃಷ್ಣೇಗೌರರನ್ನು ಬಂಧಿಸಲು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳು ಜಿ.ಪಂ ಎದುರು ಪ್ರತಿಭಟನೆ ನಡೆಸಿದರು.
ಮೃತ ಶಿವಪ್ರಸಾದ್ ತಾನು ಸಾವಿಗೆ ಶರಣಾಗುವ ಮುನ್ನ ಸಾವಿಗೆ ಕಾರಣ ಕರ್ತರು ಹಾಗೂ ಮಾನಸಿಕ ಕಿರುಕುಳ ಮತ್ತು ದೌರ್ಜನ್ಯದ ಬಗ್ಗೆ ಸಂಕ್ಷಿಪ್ತವಾಗಿ ಬರೆದಿದ್ದು, ಪಿಡಿಓ ಮತ್ತು ಬಿಲ್‍ಕಲೆಕ್ಟರ್ ಮೇಲೆ ಪ್ರಕರಣ ದಾಖಲಾಗಿರುತ್ತದೆ ಆದರೂ ಸಹ ಪೊಲೀಸ್ ಇಲಾಖೆಯು ಅವರನ್ನು ಬಂಧಿಸದೇ ಇರುವುದನ್ನು ಖಂಡಿಸಿದರು.
ಆದ್ದರಿಂದ ಜಿಲ್ಲಾಡಳಿತ ಮತ್ತು ಸರ್ಕಾರವು ಮಧ್ಯಪ್ರವೇಶಿಸಿ ತಪ್ಪಿತಸ್ಥ ಆರೋಪಿಗಳ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿ ಅವರನ್ನು ಸೇವೆಯಿಂದ ವಜಾಗೊಳಿಸಿ, ಸಾವಿಗೀಡಾದ ಶಿವಪ್ರಕಾಶ್ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಪುನರ್ವಸತಿ ಒದಗಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮೃತರ ಪತ್ನಿ ಸರೋಜಮ್ಮ, ತಾಯಿ ಸಿದ್ಧಮ್ಮ, ಎಂ.ಬಿ.ಶ್ರೀನಿವಾಸ್, ಕೃಷ್ಣಮೂತಿ, ಕೃಷ್ಣ ಸೇರಿದಂತೆ ಗ್ರಾಮಸ್ಥರು ಹಾಗೂ ಸಂಬಂಧಿಕರು ಉಪಸ್ಥಿತರಿದ್ದರು.

No comments:

Post a Comment