Thursday, 9 October 2014

ಮೈಸೂರು ಮಹಾ ನಗರ ಪಾಲಿಕೆಯ ಮೇಯರ್-ಉಪಮೇಯರ್ ಆಯ್ಕೆ
ಮೈಸೂರು,ಅ.9- ಮೈಸೂರು ಮಹಾ ನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಆಯ್ಕೆಗಾಗಿ ಇಂದು ಮಹಾನಗರ ಪಾಲಿಕೆ ಕಟ್ಟಡದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಚುನಾವಣೆ ನಡೆಸಲಾಯಿತು.
ಪ್ರಾದೇಶಿಕ ಆಯುಕ್ತರುಗಳಾದ ರಷ್ಮಿ ಮಹೇಶ್, ಬೆಟ್ಸೂರ್‍ಮಠ್ ಹೆಚ್ಚುವರಿ ಆಯುಕ್ತೆ ಗಾಯತ್ರಿರವರ ಸಮ್ಮುಖದಲ್ಲಿ ಸರ್ವಸದಸ್ಯರುಗಳು ಕೈಎತ್ತುವ ಮೂಲಕ ತಮ್ಮ ಅಭ್ಯರ್ಥಿಯನ್ನು ಚುನಾಯಿಸುವ ಪ್ರಕ್ರಿಯೆ ನಡೆಯಿತು.
ಇದಕ್ಕೂ ಮೊದಲು ಮೇಯರ್ ಆಕಾಂಶಿಗಳಾಗಿ ಕಾಂಗ್ರೆಸ್‍ನ ಆರ್.ಅನಂತು, ಜೆಡಿಎಸ್‍ನ ಆರ್.ಲಿಂಗಪ್ಪನಾಮಪತ್ರವನ್ನು ಸಲ್ಲಿಸಿದ್ದರು. ಚುನಾವಣೆಗೂ ಮುನ್ನ ಅಭ್ಯರ್ಥಿಗಳಿಗೆ ನಾಮಪತ್ರವನ್ನು ಹಿಂದಕ್ಕೆ ಪಡೆಯಲು ಐದು ನಿಮಿಷಗಳ ಕಾಲಾವಕಾಶವನ್ನು ನೀಡಲಾಯಿತು. ಯಾರೂ ಹಿಂದಕ್ಕೆ ಪಡೆಯದ ಕಾರಣ ಚುನಾವಣೆಯನ್ನು ನಡೆಸಲಾಯಿತು.
ಮಹಾನಗರ ಪಾಲಿಯಲ್ಲಿ ಒಟ್ಟು 65 ಸದಸ್ಯರುಗಳಿದ್ದು, ಮಂಜುಳಾ ಮಾನಸರವರು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಯಾದ್ದರಿಂದ ಅವರು ರಾಜಿನಾಮೆ ನೀಡಿದ್ದರು. ಉಳಿದಂತೆ 64 ಸದಸ್ಯರ ಪೈಕಿ ಚನ್ನಪ್ಪ, ಹಾಗೂ ಸುಬೇಲ್‍ಬೇಗ್‍ರವರುಗಳು ಹಾಗೂ ಶಾಸಕ ತನ್ವೀರ್‍ಸೇಠ್‍ರವರುಗಳು ಗೈರುಹಾಜರಾಗಿದ್ದಕಾರಣ 62 ಮಂದಿ ಸದಸ್ಯರು ಹಾಗೂ 8 ಮಂದಿ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರುಗಳು ಹಾಗೂ ಸಂಸದರೊಡಗೂಡಿ ಕೈ ಎತ್ತುವ ಮೂಲಕ ಚುನಾವಣೆ ನಡೆಸಲಾಯಿತು.
ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 40 ಮಂದಿಸದಸ್ಯರು ಜೆಡಿಎಸ್ ಅಭ್ಯರ್ಥಿ ಆರ್.ಲಿಂಗಪ್ಪ ಪರ ಮತ ಚಲಾಯಿಸಿದರೆ, 27 ಮಂದಿ ಆರ್.ಅನಂತುರವರಿಗೆ ಮತ ಚಲಾವಣೆಗೊಂದು ಆಯುಕ್ತರು ಜೆ.ಡಿ.ಎಸ್‍ನ ಆರ್.ಲಿಂಗಪ್ಪರವರನ್ನು ಮೇಯರ್‍ಆಗಿ ಗೋಷಿಸಿದರು.
ಉಪಮೇಯರ್ ಸ್ಥಾನಕ್ಕೂ ಸಹ ಇದೇರೀತಿಯಲ್ಲಿ ಚುನಾವಣೆ ನಡೆದು, ಉಪಮೇಯರ್ ಆಕಾಂಶಿಗಳಾಗಿ ಬಿಎಸ್‍ಆರ್ ಕಾಂಗ್ರೆಸ್‍ನ ಸಮೀನಾ ಜಬೀನ್ ಹಾಗೂ ಬಿಜೆಪಿಯ ಎಂ.ಮಹದೇವಪ್ಪ ಸ್ಪರ್ಧಿಸಿದ್ದು, ಮಹದೇವಮ್ಮ ರವರಿಗೆ 40 ಮತಗಳು ದೊರೆಯುವ ಮೂಲಕ ಉಪಮೇಯರ್‍ಆಗಿ ಆಯ್ಕೆಗೊಂಡರು.
ವಿಶೇಷವೇನೆಂದರೆ ಜೆಡಿಎಸ್-ಬಿಜೆಪಿಯು ಮೈತ್ರಿ ಮಾಡಿಕೊಂಡು ಕಳೆದ ಬಾರಿಯಂತೆಯೇ ಈಬಾರಿಯು ಮೇಯರ್ ಸ್ಥಾನವನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್‍ನ ಶಾಸಕರುಗಳಾದ ಎಂ.ಕೆ.ಸೋಮಶೇಖರ್, ವಾಸು, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನ, ಜೆಡಿಎಸ್ ಶಾಸಕರುಗಳಾದ ಜಿ.ಟಿ.ದೇವೇಗೌಡ, ಮರಿಸಿದ್ದೇಗೌಡ, ಸಂದೇಶ್‍ನಾಗರಾಜ್,  ಬಿ.ಜೆ.ಪಿ ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್‍ಸದಸ್ಯರುಗಳಾದ ಗೋಮಧುಸೂದನ್ ಉಪಸ್ಥಿತರಿದ್ದರು, ತಮ್ಮ ಅಭ್ಯರ್ಥಿ ಪರ ಮತ ಚಲಾಯಿಸಿದರು.

No comments:

Post a Comment