ಮೈಸೂರು ಚಲೋ ಚಳವಳಿ: ಉಸ್ತುವಾರಿ ಸಚಿವÀರಿಂದ ರಾಷ್ಟ್ರ ಧ್ವಜಾರೋಹಣ
ಮೈಸೂರು,ಅ.28.ಮೈಸೂರು ಚಲೋ ಚಳವಳಿಯ ಕಾರ್ಯಕ್ರಮದ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರ ಸ್ಮಾರಕ ಉದ್ಯಾನವನದಲ್ಲಿ (ಸುಬ್ಬರಾಯನಕೆರೆ) ಇಂದು ಮೈಸೂರು ಪ್ರಾಂತ್ಯದ ಹಲವು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಸ್ವಾತಂತ್ರ್ಯ ನಂತರ ಮೈಸೂರು ಸಂಸ್ಥಾನ ಸ್ವತಂತ್ರ ಭಾರತದಲ್ಲಿ ವಿಲೀನವಾಗದೇ ಇದ್ದಾಗ ಮೈಸೂರು ಚಲೋ ಚಳವಳಿ ನಡೆಸಲಾಗಿತು.್ತ ಮೈಸೂರು ಸಂಸ್ಥಾನವನ್ನು 1947ರ ಅಕ್ಟೋಬರ್ 24 ರಂದು ಸ್ವತಂತ್ರ ಭಾರತದಲ್ಲಿ ವಿಲೀನಗೊಳಿಸಲಾಯಿತು. ಇದರ ಸ್ಮರಣಿಗಾಗಿ ಮೈಸೂರು ಚಲೋ ಚಳವಳಿ ದಿನವನ್ನು ಇಂದು ಆಚರಿಸಲಾಗುತ್ತಿದ್ದೆ ಎಂದರು.
ಮೈಸೂರು ಮಹಾನಗರ ಪಾಲಿಕೆಯ ಮಹಾಪೌರ ಆರ್.ಲಿಂಗಪ್ಪ ಅವರು ಸ್ವಾತಂತ್ರ್ಯ ಹೋರಾಟಗಾರ ಸ್ಮಾರಕ ಉದ್ಯಾನವನದ ಎದುರು ಕಲಾ ತಂಡಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನೊಳಗೊಂಡ ಮೈಸೂರು ಚಲೋ ಚಳವಳಿ ಮೆರವಣಿಗೆಗೆ ಚಾಲನೆ ನೀಡಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ, ಶಾಸಕ ತನ್ವೀರ್ ಸೇಠ್, ಜಿಲ್ಲಾಧಿಕಾರಿ ಶಿಖಾ, ಮೈಸೂರು ನಗರ ಪೊಲೀಸ್ ಆಯುಕ್ತ ಡಾ||ಎಂ.ಎ. ಸಲೀಮ್, ಅಪರ ಜಿಲ್ಲಾಧಿಕಾರಿ ಅರ್ಚನಾ, ತಹಸೀಲ್ದಾರ್ ನವೀನ್ ಜೋಸೆಫ್ ಹಾಗೂ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ನವೆಂಬರ್ 3 ರಂದು ವಿಶ್ವವಿದ್ಯಾನಿಯಲದ ಸಭೆ
ಮೈಸೂರು,ಅ.28.ಮೈಸೂರು ವಿಶ್ವವಿದ್ಯಾನಿಯಲದ ಎರಡನೇ ಸಾಮಾನ್ಯ ಸಭೆಯು ನವೆಂಬರ್ 3 ರಂದು ಬೆಳಗ್ಗೆ 11 ಗಂಟೆಗೆ ಕ್ರಾಫರ್ಡ್‍ಭವನದ ಶಿಕ್ಷಣ ಮಂಡಳಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 29 ರಂದು ಸಮಾರೋಪ ಸಮಾರಂಭ
ಮೈಸೂರು,ಅ.28.ಮೈಸೂರು ವಿಶ್ವವಿದ್ಯಾನಿಯಲದ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ವತಿಯಿಂದ 2014-15ನೇ ಸಾಲಿನ ಅಂತರ ಕಾಲೇಜು ಸಾಹಿತ್ಯದ ಮತ್ತು ಸಾಂಸ್ಕøತಿಕ ಸ್ಪರ್ಧೆಗಳ ಸಮಾರೋಪ ಸಮಾರಂಭವನ್ನು ಅಕ್ಟೋಬರ್ 29 ರಂದು ಸಂಜೆ 4 ಗಂಟೆಗೆ ಮಾನಸಗಂಗೋತ್ರಿಯ ಇ.ಎಂ.ಆರ್.ಸಿ. ಸಭಾಂಗಣದಲ್ಲಿ ನಡೆಯಲಿದೆ.
ಮೈಸೂರು ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯ ಅಧಿಕಾರಿ ಎಂ.ಎನ್.ನಟರಾಜ್ ಅವರು ಸಮಾರೋಪ ಭಾಷಣ ಮಾಡುವರು. ಕುಲಸಚಿವ ಪ್ರೊ| ಸಿ. ಬಸವರಾಜು ಅವರು ಅಧ್ಯಕ್ಷತೆ ವಹಿಸುವರು. ಮೈಸೂರಿನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪ ಅಮರನಾಥ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಬದಲಿ ಮಾರ್ಗ ವ್ಯವಸ್ಥೆ
ಮೈಸೂರು,ಅ.28.ಮೈಸೂರು ನಗರ ಕುವೆಂಪುನಗರದ ಪಂಚಮಂತ್ರ ರಸ್ತೆ ಮತ್ತು ಅನಿಕೇತನ ರಸ್ತೆ ಸಂಧಿಸುವ ಸ್ಥಳದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಯ ಸಮಯದಲ್ಲಿ ವಾಹನಗಳಿಗೆ ಬದಲಿ ಮಾರ್ಗದಲ್ಲಿ ಚಲಿಸಲು ತಾತ್ಕಾಲಿಕ ಅಧಿಸೂಚನೆ ಹೊರಡಿಸಲಾಗಿದೆ.
ಪಂಚಮಂತ್ರ ರಸ್ತೆಯಲ್ಲಿ ಅನಿಕೇತನ ರಸ್ತೆ ಸಂಧಿಸುವ ಜಂಕ್ಷನ್‍ನಿಂದ ದಕ್ಷಿಣಮುಖನಾಗಿ ಸಾಗುವ ವಾಹನಗಳು ಅನಿಕೇತನ ರಸ್ತೆಗೆ ಬಲತಿರುವು (ಪಶ್ಚಿಮಕ್ಕೆ) ಪಡೆದು ವಿಶ್ವಮಾನವ ಜೋಡಿ ರಸ್ತೆ ತಲುಪಿ ಪಡುವಣ ರಸ್ತೆ ಮೂಲಕ ಉದಯರವಿ ರಸ್ತೆ ತಲುಪಿ ಮುಂದೆ ಸಂಚರಿಸತಕ್ಕದ್ದು.
ಪಂಚಮಂತ್ರ ರಸ್ತೆಯಲ್ಲಿ ಜ್ಞಾನಗಂಗಾ ಶಾಲೆಯ ದಕ್ಷಿಣ ಭಾಗದಲ್ಲಿರುವ ಕ್ರಾಸ್ ರಸ್ತೆ ಜಂಕ್ಷನ್‍ನಿಂದ ಉತ್ತರಕ್ಕೆ ಸಾಗುವ ಎಲ್ಲಾ ಮಾದರಿಯ ವಾಹನಗಳು ಕ್ರಾಸ್ ರಸ್ತೆಯ ಮೂಲಕ ಪಶ್ಚಿಮಾಭಿಮುಖವಾಗಿ ಸಾಗಿ ಚಿತ್ರಭಾನು ರಸ್ತೆ ತಲುಪಿ ಮುಂದೆ ಸಂಚರಿಸಬೇಕು ಹಾಗೂ ಪಂಚಮಂತ್ರ ರಸ್ತೆಯಲ್ಲಿ ಉದಯರವಿ ರಸ್ತೆಯಿಂದ ಉತ್ತರಮುಖನಾಗಿ ಸಾಗುತ್ತಿದ್ದ ನಗರ ಸಾರಿಗೆ ಬಸ್ಸುಗಳು ಉದಯರವಿ ರಸ್ತೆಯಿಂದ ಅಮ್ಮ ಬಿಲ್ಡಿಂಗ್ ಜಂಕ್ಷನ್ ಮೂಲಕ ಪಡುವಣ ರಸ್ತೆಯಲ್ಲಿ ಸಾಗಿ ವಿಶ್ವ ಮಾನವ ಜೋಡಿ ರಸ್ತೆಯ ಮೂಲಕ ಮುಂದೆ ಚಲಿಸಬೇಕೆಂದು ಪೊಲೀಸ್ ಆಯುಕ್ತ ಡಾ|| ಎಂ.ಎ. ಸಲೀಮ್ ಅವರು ಆದೇಶ ಹೊರಡಿಸಿದ್ದಾರೆ.
ಅಕ್ಟೋಬರ್ 31 ರಂದು ನಿರ್ಗಮನ ಪಥ ಸಂಚಲನ
ಮೈಸೂರು,ಅ.28.ಕರ್ನಾಟಕ ಕಾರಾಗೃಹಗಳ ಇಲಾಖೆ ವತಿಯಿಂದ ಅಕ್ಟೋಬರ್ 31 ರಂದು ಬೆಳಗ್ಗೆ 9 ಗಂಟೆಗೆ ಸಂಸ್ಥೆಯ ಕವಾಯತು ಮೈದಾನದಲ್ಲಿ 42ನೇ ತಂಡದ ವೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ನಡೆಯಲಿದೆ.
ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ಅಧ್ಯಕ್ಷತೆ ವಹಿಸುವರು. ಕರ್ನಾಟಕ ಕಾರಾಗೃಹಗಳ ಮಹಾನಿರೀಕ್ಷಕ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ವಿ. ಗಗನ್ ದೀಪ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಅಕ್ಟೋಬರ್ 29 ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ವಿಚಾರ ಗೋಷ್ಠಿ
ಮೈಸೂರು,ಅ.28.ಮೈಸೂರು ವಿಶ್ವವಿದ್ಯಾನಿಯಲದ ಮನೋವಿಜ್ಞಾನ ಅಧ್ಯಯನ ವಿಭಾಗದ ವತಿಯಿಂದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ವಿಚಾರ ಗೋಷ್ಠಿಯನ್ನು ಅಕ್ಟೋಬರ್ 29 ರಂದು ಬೆಳಗ್ಗೆ 9-30 ಗಂಟೆಗೆ ಮನೋವಿಜ್ಞಾನ ಅಧ್ಯಯನದ ಸಭಾಂಗಣದಲ್ಲಿ ನಡೆಯಲಿದೆ.
ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಸಿ. ಬಸವರಾಜು ಕಾರ್ಯಕ್ರಮ ಉದ್ಘಾಟಿಸುವರು. ಮನೋವಿಜ್ಞಾನ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ. ಎನ್.ಎಲ್. ಶ್ರೀಮತಿ ಅವರು ಅಧ್ಯಕ್ಷತೆ ವಹಿಸುವರು.
ಮಕ್ಕಳ ಮನೋವೈದ್ಯರು ಹಾಗೂ ವೈದ್ಯಕೀಯ ನಿರ್ದೇಶಕ ಡಾ| ರಾಮ್‍ಪ್ರಸಾದ್ ಅತ್ತೂರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕಾಣೆಯಾಗಿರುವ ಹುಡುಗನ ಪತ್ತೆಗೆ ಮನವಿ
ಮೈಸೂರು,ಅ.28.ಮೈಸೂರಿನ ಭಾಗ್ಯ ಎಂಬುವರ ಮಗ ಮಾ|| ರಾಜು ಅವರು ಅಕ್ಟೋಬರ್ 16 ರಿಂದ ಕಾಣೆಯಾಗಿದ್ದಾರೆ. ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ಪ್ರಕರಣವನ್ನು ನೋಂದಾಯಿಸಿ ತನಿಖೆ ಕೈಗೊಳ್ಳಲಾಗಿದೆ.
ಕಾಣೆಯಾಗಿರುವ ಹುಡುಗನ ಚಹರೆ ಇಂತಿದೆ: 4.5 ಅಡಿ ಎತ್ತರ, ಕಪ್ಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಬಲಗಡೆ ಕತ್ತಿನ ಹತ್ತಿರ ಹಾಗೂ ಬಲಗೈ ತೋಳಿನ ಮೇಲೆ ಸಣ್ಣ ಗಂಟುಗಳು ಇರುತ್ತದೆ. ಹಳದಿ ಬಣ್ಣದ ಟೀ ಶರ್ಟ್, ಕಾಫಿ ಕಲರ್ ನಿಕ್ಕರ್ ಧರಿಸಿರುತ್ತಾರೆ. ಕನ್ನಡ ಮಾತನಾಡುತ್ತಾರೆ.
ಕಾಣೆಯಾಗಿರುವ ಹುಡುಗನ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಮೈಸೂರು ಉದಯಗಿರಿ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಪ್ರಕಟಣೆ ತಿಳಿಸಿದೆ.
No comments:
Post a Comment