Thursday, 23 October 2014


 ಶಾಸಕ ವಾಸುರಿಂದ ಪಾದಯಾತ್ರೆ; ಸ್ವಚ್ಛತೆ ಬಗ್ಗೆ ಅವಲೋಕನ
ಮೈಸೂರು, ಅ.23- ಚಾಮರಾಜ ಕ್ಷೇತ್ರದ ಶಾಸಕ ವಾಸುರವರು ಇಂದು ತಮ್ಮ ಕ್ಷೇತ್ರದ ವ್ಯಾಪ್ತಿಗೊಳಪಡುವ ತಿಲಕ್ ನಗರದ ಎಪಿಎಂಸಿ ಮಾರುಕಟ್ಟೆಯಿಂದ, ಕೆ.ಆರ್. ಆಸ್ಪತ್ರೆ ಆವರಣ, ದೇವರಾಜ ಮಾರುಕಟ್ಟೆ, ಬೋಟಿಬಜಾರ್, ಶಿವರಾಂಪೇಟೆ, ಸಂತೆಪೇಟೆಗಳಲ್ಲಿ ಪಾದಯಾತ್ರೆ ಹಮ್ಮಿಕೊಂಡು ಅಲ್ಲಿನ ಪರಿಸರ ಹಾಗೂ ಸ್ವಚ್ಚತೆ ಬಗ್ಗೆ ಅವಲೋಕನ ನಡೆಸಿದರು.
   ದೇವರಾಜ ಮಾರುಕಟ್ಟೆಯ ಹಿಂಭಾಗದಲ್ಲಿರುವ  ಬೋಟಿ ಬಜಾರ್‍ನಲ್ಲಿ ಕಸದ ರಾಶಿ, ಮಳೆಯಿಂದಾಗಿ ಉಂಟಾಗಿರುವ  ಕೆಸರುಗದ್ದೆಯಂತಾಗಿರುವುದರಿಂದ
 ಸ್ವಚ್ಚತೆ ಕಾಣದೆ ಗಬ್ಬು ನಾರುತ್ತಿರುವುದರಿಂದ  ಅಸಮದಾನಗೊಂಡರು, ಕೂಡಲೆ ಪಾಲಿಕೆಯ ಸ್ವಚ್ಚತಾ ಅಧಿಕಾರಿಗಳನ್ನು ಕರೆಸಿ  ಸ್ವಚ್ಚಗೊಳಿಸುವಂತೆ ಆದೇಶಿಸಿದರು.
   ಕಂಡಕಂಡಲ್ಲಿ ಕಸ ಹಾಕದೇ  ತಮ್ಮ ಸುತ್ತ ಮುತ್ತಲಿನ ಸ್ಥಳಗಳನ್ನು  ಸ್ವಚ್ಛವಾಗಿಟ್ಟುಕೊಂಡು  ಪರಿಸರ ಕಾಪಾಡುವಂತೆ ಜನತೆಗೆ ಕರೆನೀಡಿದರು.
     ಇವರೊಂದಿಗೆ ಜಿಲ್ಲಾಧಿಕಾರಿ ಸಿ.ಶಿಖಾ, ಮೇಯರ್ ಆರ್. ಲಿಂಗಪ್ಪ, ಪಾಲಿಕೆ ಸದಸ್ಯ ಚಿನ್ನಿರವಿ, ಪಾಲಿಕೆ ಅಯುಕ್ತ ಬೆಟ್‍ಸೂರ್‍ಮಟ್ ಹಾಗೂ ಪಾಲಿಕೆಯ ಆರೋಗ್ಯ ಅಧಿಕಾರಿಗಳು ಇದ್ದರು.


 ವಿದ್ಯುತ್ ಸಾರ್ಟ್‍ಸಕ್ರ್ಯೂಟ್, ಮೊಬೈಲ್ ಅಂಗಡಿ ಭಸ್ಮ
ಮೈಸೂರು, ಅ.23-ವಿದ್ಯುತ್ ಸಾರ್ಟ್ ಸಕ್ರ್ಯುಟ್‍ನಿಂದಾಗಿ ಮೊಬೈಲ್ ಅಂಗಡಿಯೊಂದು ಭಸ್ಮವಾಗಿ ಸುಮಾರು 5 ಲಕ್ಷ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ ಘಟನೆ  ಮೈಸೂರು ನಗರದ ಹೃದಯ ಭಾಗದಲ್ಲಿರುವ ನಗರ ಬಸ್ ನಿಲ್ದಾಣದ ಬಳಿ ಕಳೆದ ಮಧ್ಯರಾತ್ರಿ ಸಂಬವಿಸಿದೆ.
  ನಗರ ಬಸ್ ನಿಲ್ದಾಣ ಬಳಿ ಮಹೇಂದ್ರ ಎಂಬುವರಿಗೆ ಸೇರಿದ ಮೊಬೈಲ್ ಅಂಗಡಿ ಇದ್ದು, ಅದರ ಪಕ್ಕದಲ್ಲಿಯೇ ಪಾನಿಪೂರಿ, ಗೋಬಿಮಂಚೂರಿ ಅಂಗಡಿಗಳಿವೆ, ಈ ಅಂಗಡಿಗಳಲ್ಲಿ  ಗ್ಯಾಸ್ ಸಿಲಿಂಡರ್ ಇರಿಸಲಾಗಿತ್ತು, ವಿದ್ಯುತ್ ಸಾರ್ಟ್‍ಸಕ್ರ್ಯುಟ್‍ನಿಂದ ಬೆಂಕಿ ಗ್ಯಾಸ್ ಸಿಲಿಂಡರ್ ಇದ್ದ ಅಂಗಡಿಗೆ  ತಗುಲಿದ ಕಾರಣ ಸಿಲಿಂಡರ್ ಸ್ಪೋಟಗೊಂಡಿದೆ, ಮದ್ಯರಾತ್ರಿ ಆಗಿದ್ದರಿಂದ ಅಂಗಡಿಗಳಲ್ಲಿ ಯಾರೂ ಇಲ್ಲದಿದ್ದ ಕಾರಣ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ.
   ಎರಡೂ ಅಂಗಡಿಗಳಿಂದ ಮೊಬೈಲ್‍ಗಳು  ಸೇರಿದಂತೆ ಸುಮಾರು 5 ಲಕ್ಷ ರೂ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ. ಮದ್ಯ ರಾತ್ರಿ ಬೆಂಕಿ ಹೊತ್ತಿ ಉರಿಯುತ್ತಿದ್ದುದ್ದನ್ನು  ಕಂಡ ಸಾರ್ವಜನಿಕರು  ಕೂಡಲೆ ಅಗ್ನಿಶಾಮಕ ದಳದವರಿಗೆ ವಿóಷಯ ತಿಳಿಸಿದ್ದಾರೆ.  ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ವಾಹನ ಬೆಂಕಿ ನಂದಿಸಿದ್ದಾರೆ.
  ದೇವರಾಜ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ  ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

  ಪರಿಸರ ಕಾಪಾಡುವುದರೊಂದಿಗೆ ದೀಪಾವಳಿ ಆಚರಿಸಿ - ಎಂ.ಕೆ.ಎಸ್
ಮೈಸೂರು,ಅ.23- ಬೆಳಕಿನ ಹಬ್ಬ ದೀಪಾವಳಿಯನ್ನು ಪಟಾಕಿ ಸಿಡಿಸುವುದನ್ನು ಬಿಟ್ಟು, ಪರಿಸರ ಹಾಗೂ  ವಾಯು ಮಾಲಿನ್ಯ ಕಾಪಾಡುವುದರೊಂದಿಗೆ ಪರಿಸರ ಸ್ನೇಹಿ ದೀಪಾವಳಿ ಆಚರಿಸಿ  ಎಂದು ಕೆ.ಆರ್. ಕ್ಷೆತ್ರದ ಶಾಸಕ ಎಂ.ಕೆ. ಸೋಮಶೇಕರ್ ಜನತೆಗೆ ಕರೆ ನೀಡಿದರು.
 ಅವರು ಇಂದು ತಮ್ಮ ಕ್ಷೇತ್ರದ ವಿದ್ಯಾರಣ್ಯಪುರಂನ ಧರಮ್‍ಸಿಂಗ್ ಕಾಲೋನಿಯಲ್ಲಿ ಪಾದಯಾತ್ರೆ ಹಮ್ಮಿಕೊಂಡು ಅಲ್ಲಿನ ಜನರಿಗೆ ಪಟಾಕಿ ಬದಲಿಗೆ ಸಿಹಿ ಹಾಗೂ ಹೊಸ ಬಟ್ಟೆಗಳನ್ನು ವಿತರಿಸುವ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ, ಪಟಾಕಿಗಳನ್ನು ಸಿಡಿಸಬೇಡಿ, ಅದರಿಂದ ಪ್ರಾಣಹಾನಿ ಸಂಭವಿಸುವ ಸಾಧ್ಯತೆಗಳಿರುತ್ತವೆ, ಅದ್ದರಿಂದ ಮಣ್ಣಿನ ಹಣತೆಗಳಿಂದ ದೀಪಹಚ್ಚಿ ಸರಳ, ಸಂಭ್ರಮದಿಂದ  ದೀಪಾವಳಿ ಆಚರಿಸಿ ಎಂದು ಪ್ರತೀ ಮನೆ ಮನೆಗೂ ತೆರಳಿ ಸಿಹಿ ಮತ್ತು ಬಟ್ಟೆಗಳನ್ನು ವಿತರಿಸಿದರು.


No comments:

Post a Comment