ವಿಜಯನಗರ ಪೊಲೀಸರಿಂದ ಅಂತರ ಜಿಲ್ಲಾ ಕನ್ನ ಕಳುವು ಕಳ್ಳನ ಬಂಧನ.
ಒಟ್ಟು 3,65,000/- ಬೆಲೆಯ 90 ಗ್ರಾಂ ಚಿನ್ನದ ವಡವೆಗಳು ಹಾಗೂ ನಗದು ವಶ.
ದಿನಾಂಕಃ- 06/10/2014 ರಂದು ಬಾತ್ಮೀದಾರರ ಮಾಹಿತಿ ಮೇರೆಗೆ ಆರೋಪಿಯಾದ-
ಶಿವಲಿಂಗ @ ಮಜ್ಜಿಗೆ ಶಿವಲಿಂಗ @ ಭಾಷ @ ರೋಮಿಯೋ ಬಿನ್ ಸಿದ್ದೇಗೌಡ, 51 ವರ್ಷ, ಸೋಗಲಪಾಳ್ಯ ಗ್ರಾಮ, ವಿರುಪಾಕ್ಷಿಪುರ ಹೋಬಳಿ, ಚನ್ನಪಟ್ಟಣ ತಾಲ್ಲೋಕು, ರಾಮನಗರ ಜಿಲ್ಲೆ.
ಎಂಬುವನನ್ನು ಮೈಸೂರಿನ ಗಾಂಧಿ ವೃತ್ತದ ಬಳಿ ಇರುವ ಅಲಂಕಾರ್ ಬಾರ್ ಬಳಿ ಹಿಡಿದು ಠಾಣೆಗೆ ತಂದು ಆತನನ್ನು ವಿಚಾರಣೆ ಮಾಡಲಾಗಿ, ಆತನು ವಿಚಾರಣಾ ಕಾಲದಲ್ಲಿ ಕಳೆದ ತಿಂಗಳಲ್ಲಿ ವಿಜಯನಗರ ಪೊಲೀಸ್ ಠಾಣಾ ಸರಹದ್ದಿನ ವಿಜಯನಗರ 01ನೇ ಹಂತದ ಬೀಗ ಹಾಕಿದ್ದ ಒಂದು ಮನೆಯ ಮೊದಲನೆ ಮಹಡಿ ಬಾಗಿಲಿನ ಲಾಕ್ ಮುರಿದು ಒಳಗೆ ಪ್ರವೇಶಿಸಿ ಬೆಡ್‍ರೂಂನ ಬೀರುವಿನಲ್ಲಿಟ್ಟಿದ್ದ ಚಿನ್ನದ ವಡವೆಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ವಿಚಾರವನ್ನು ತಿಳಿಸಿದ್ದು ಆತನ ವಶದಲ್ಲಿದ್ದ ವಿಜಯನಗರ ಪೊಲೀಸ್ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿದ ನಗದು ಹಣ ರೂಃ 50,000/- ಹಾಗೂ ಸುಮಾರು 20 ಗ್ರಾಂ ತೂಕದ ಚಿನ್ನದ ವಡವೆಗಳನ್ನು ವಶಪಡಿಸಿಕೊಂಡು ನಂತರ ಆತನ ಮಾಹಿತಿ ಮೇರೆಗೆ ಬೆಂಗಳೂರಿಗೆ ತೆರಳಿ ಆರೋಪಿಯು ಆತನ ಪತ್ನಿಗೆ ನೀಡಿದ್ದ ಸುಮಾರು 70 ಗ್ರಾಂ ತೂಕದ ಚಿನ್ನದ ವಡವೆಗಳನ್ನು ವಶಪಡಿಸಿಕೊಂಡಿರುತ್ತೆ. ನಂತರ ಹೆಚ್ಚಿನ ವಿಚಾರಣೆ ಸಂಬಂಧ ಈತನನ್ನು ಪೊಲೀಸ್ ಕಸ್ಟಡಿಗೆ ಪಡೆದು ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನು ನೀಡಿದ ಮಾಹಿತಿ ಮೇರೆಗೆ ಆತನ ಊರಾದ ಚನ್ನಪಟ್ಟಣ
ತಾಲ್ಲೋಕಿನ ಸೋಗಲ್‍ಪಾಳ್ಯ ಗ್ರಾಮಕ್ಕೆ ಹೋಗಿ ಆತನ ಮನೆಯ ಹಿಂಭಾಗದ ಹಿತ್ತಲಿನಲ್ಲಿರುವ ಹುಲ್ಲಿನ ಮೆದೆಯಲ್ಲಿ ಆತನು ಬಚ್ಚಿಟ್ಟಿದ್ದ ನಗದು ಹಣ ರೂಃ 1,15,000/- ಗಳನ್ನು ಆತನು ತೋರಿಸಿಕೊಟ್ಟ ಮೇರೆಗೆ ವಶಪಡಿಸಿಕೊಂಡಿರುತ್ತೆ. ಆತನಿಂದ ಮೇಲ್ಕಂಡ ಪ್ರಕರಣದಲ್ಲಿ ಒಟ್ಟು 2,00,000/- ಬೆಲೆಯ 90 ಗ್ರಾಂ ತೂಕದ ಚಿನ್ನದ ವಡವೆಗಳು ಹಾಗೂ ನಗದು ಹಣ ರೂಃ 1,65,000/- ಗಳನ್ನು (ಒಟ್ಟು ರೂಃ 3,65,000/- ಮೌಲ್ಯದ ಮಾಲನ್ನು) ವಶಪಡಿಸಿಕೊಂಡಿರುತ್ತೆ.
ಆರೋಪಿ ಶಿವಲಿಂಗ @ ಮಜ್ಜಿಗೆ ಶಿವಲಿಂಗನ ಮೇಲೆ ಕರ್ನಾಟಕ ರಾಜ್ಯದ ಬೆಂಗಳೂರಿನ ಪೊಲೀಸ್ ಠಾಣೆಗಳಲ್ಲಿ ಸುಮಾರು 30 ಪ್ರಕರಣಗಳು, ಮಂಡ್ಯ, ಚನ್ನಪಟ್ಟಣ & ಮೈಸೂರು ಪೊಲೀಸ್ ಠಾಣೆಗಳಲ್ಲಿ ಸುಮಾರು 10 ಕನ್ನಕಳುವು ಪ್ರಕರಣಗಳು ದಾಖಲಾಗಿದ್ದು ಈತನು ಸುಮಾರು 30 ವರ್ಷಗಳಿಂದ ಕಳ್ಳತನವನ್ನೆ ಹವ್ಯಾಸವನ್ನಾಗಿ ಮಾಡಿಕೊಂಡು ಜೀವನ ನಡೆಸಿಕೊಂಡಿರುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿರುತ್ತೆ. ಈತನು ಹೆಚ್ಚಾಗಿ ಸಂಜೆಯ ವೇಳೆ ಬೀಗ ಹಾಕಿರುವ ಮನೆಗಳ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದುದ್ದಾಗಿಯೂ ವಿಚಾರಣೆ ವೇಳೆ ತಿಳಿದು ಬಂದಿರುತ್ತೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ. ರವರಾದ ಶ್ರೀ ಎಂ.ಎಂ. ಮಹದೇವಯ್ಯ ಮತ್ತು ನರಸಿಂಹರಾಜ ವಿಭಾಗದ ಎ.ಸಿ.ಪಿ. ರವರಾದ ಎ.ಕೆ. ಸುರೇಶ್‍ರವರುಗಳ ಮಾರ್ಗದರ್ಶನದಲ್ಲಿ ಮೈಸೂರು ನಗರದ ಬೆರಳು ಮುದ್ರೆ ಘಟಕದ ಘಟಕದ ಅಧಿಕಾರಿಗಳು & ಅವರ ತಂಡ, ಸಿ.ಸಿ.ಬಿ. ಘಟಕದ ಅಧಿಕಾರಿಗಳು & ಅವರ ತಂಡ, ವಿಜಯನಗರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಸಿ.ವಿ. ರವಿ, ಸಬ್‍ಇನ್ಸ್‍ಪೆಕ್ಟರ್ ಎನ್. ರಘುಪ್ರಸಾದ್, ಹೆಡ್‍ಕಾನ್ಸ್‍ಟೇಬಲ್ ದಿವಾಕರ, ಚನ್ನಬಸವಯ್ಯ, ಕೃಷ್ಣ, ಕಾನ್ಸ್‍ಟೇಬಲ್‍ಗಳಾದ ಸೋಮಶೆಟ್ಟಿ, ಸುರೇಶ, ಸಾಗರ್, ಮಂಜು, ಈರಣ್ಣ & ಸಿ. ಮಹೇಶ್‍ರವರ ನೇತೃತ್ವದ ತಂಡವು ಪತ್ತೆ ಕಾರ್ಯದಲ್ಲಿ ಶ್ರಮಿಸಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರಾದ ಡಾಃ ಎಂ.ಎ. ಸಲೀಂ, ಐ.ಪಿ.ಎಸ್. ರವರು ಶ್ಲಾಫಿಸಿದ್ದಾರೆ.

No comments:
Post a Comment