Thursday, 9 October 2014

ಮಂಡ್ಯ: ನಗರದ ಸರ್ಕಾರಿ ಮಹಾವಿದ್ಯಾಲಯವನ್ನು ಅಭಿವೃದ್ಧಿಪಡಿಸಲು ಸರ್ಕಾರ ಹಾಗೂ ಸಂಸದರ ನಿಧಿಯಿಂದ ಅಗತ್ಯ ಅನುದಾನ ದೊರಕಿಸಿಕೊಡಲು ಶ್ರಮಿಸುವುದಾಗಿ ಸಂಸದ ಸಿ.ಎಸ್.ಪುಟ್ಟರಾಜು ಹೇಳಿದರು.
ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ ನಡೆದ 2014-15ನೇ ಸಾಲಿನ ಸಾಂಸ್ಕøತಿಕ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕಾಲೇಜನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರ ಜತೆಗೂಡಿ ಮಾದರಿಯಾಗಿ ಅಭಿವೃದ್ಧಿಪಡಿಸಲಾಗುವುದು. ಕಾಲೇಜನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುತ್ತೇನೆ ಎಂದರು.
ವಿದ್ಯಾರ್ಥಿಗಳು ರಾಷ್ಟ್ರದ ಸತ್ಪ್ರಜೆಯನ್ನಾಗಿಸಬೇಕು. ಯುವ ಸಮೂಹ ಸಮಾಜದ ಅಪಾಯದ ಅಂಚಿಗೆ ಹೋಗುತ್ತಿದೆ. ಭಾರತ ದೇಶ ವಿಶ್ವದಲ್ಲೇ ಪ್ರಜ್ವಲಿಸುತ್ತಿದ್ದು, ಯುವಸಮೂಹ ದಿಕ್ಕು ತಪ್ಪುತ್ತಿದ್ದು, ಒಳ್ಳೆಯ ದಾರಿಗೆ ತರಬೇಕಾಗಿದೆ ಎಂದು ಹೇಳಿದರು.
ಯುವಜನತೆ ತಮ್ಮ ಭವಿಷ್ಯವನ್ನು ಉತ್ತಮವಾಗಿಸಿಕೊಳ್ಳಲು ಉತ್ತಮ ದಾರಿಯಲ್ಲಿ ನಡೆಯಬೇಕು. ಸಮಾಜಘಾತುಕ ಶಕ್ತಿಗಳ ವಿರುದ್ಧ ಹೋರಾಟ ನಡೆಸಬೇಕು. ವಿದ್ಯಾರ್ಥಿನಿಯರು ಸಹ ಧೀಮಂತ ನಾಯಕರಂತೆ ಅನ್ಯಾಯ, ದಬ್ಬಾಳಿಕೆಯ ವಿರುದ್ದ ನಿಲ್ಲಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಪ್ರೊ.ಡಿ.ಕೃಷ್ಣೇಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಚಂದ್ರಶೇಖರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಖಜಾಂಚಿ ಅಮರಾವತಿ ಚಂದ್ರಶೇಖರ್, ಪ್ರಾಧ್ಯಾಪಕ ಪ್ರೊ.ಮರೀಗೌಡ ಇತರರು ಭಾಗವಹಿಸಿದ್ದರು.

ಮಂಡ್ಯ: ಕ್ರೀಡೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸುವುದು ಅತ್ಯವಶ್ಯಕ. ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಹೇಳಿದರು.
ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ನಗರದ ಸರ್ ಎಂ.ವಿ.ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ 14-17 ವರ್ಷ ವಯೋಮಿತಿ ಶಾಲಾ ಬಾಲಕ- ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯು ಯಾವುದಾದರೊಂದು ಕ್ರೀಡೆಯಲ್ಲಿ ಭಾಗವಹಿಸಿ, ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಡಿಡಿಪಿಐ ಎಂ.ಡಿ.ಶಿವಕುಮಾರ್ ಕ್ರೀಡಾಜ್ಯೋತಿ ಸ್ವೀಕರಿಸಿದರು. ಮಹದೇವಪ್ಪ, ಯುವಜನ ಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಮಂಜುಳಾ, ಜಿ.ಎನ್.ಶಿವರುದ್ರಪ್ಪ, ನಾರಾಯಣಗೌಡ, ಎಂ.ಶಿವಲಿಂಗಯ್ಯ, ಜಯಶಂಕರ್, ವೀರೇಶ್ ಲಿಂಬಿಕಾಯಿ ಇತರರು ಭಾಗವಹಿಸಿದ್ದರು.


ಖ್ಯಾತ ಪತ್ರಕರ್ತ ಎಮ್ .ವಿ ಕಾಮತ್ ನಿಧನಕ್ಕೆ ಪ್ರಧಾನಿ ಸಂತಾಪ
ಅಕ್ಟೋಬರ್ 9, 2014
ಖ್ಯಾತ ಪತ್ರಕರ್ತ ಮಾಧವ ವಿಠ್ಠಲ್ ಕಾಮತ್ ಅವರ ನಿಧನಕ್ಕೆ ಪ್ರಧಾನಿ ಶ್ರೀ. ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಎಮ್.ವಿ ಕಾಮತ್ ಒಬ್ಬ ಉತ್ತಮ ಬರಹಗಾರ ಹಾಗೂ ಸಜ್ಜನ ವ್ಯಕ್ತಿ. ಅವರ ನಿಧನ ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳಿಗೆ ತುಂಬಲಾರದ ನಷ್ಟ. ಎಮ್.ವಿ ಕಾಮತ್ ಅವರೊಂದಿಗಿನ ಹಲವು ಮಾತುಕತೆಗಳನ್ನು ನನ್ನ ಮನಸ್ಸು ಸ್ಮರಿಸಿಕೊಳ್ಳುತ್ತಿದೆ. ಎಂದೆಂದಿಗೂ ನಮ್ರತೆ ಮತ್ತು ವಿಶ್ವಾಸಗಳಿಂದ ತುಂಬಿಕೊಂಡಿರುತ್ತಿದ್ದ ಅವರು ಜ್ಞಾನದ ಭಂಡಾರವಾಗಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಧಾನಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. 
                                         ಸಂಸದ ಆದರ್ಶ ಗ್ರಾಮ ಯೋಜನೆ
ಅಕ್ಟೋಬರ್ 9, 2014
ಭಾರತದ ಸ್ವಾತಂತ್ರ್ಯ ದಿನದಂದು  ಪ್ರಧಾನಿ ಶ್ರೀ ನರೇಂದ್ರ ಮೋದಿ ಸಂಸದ ಆದರ್ಶ ಗ್ರಾಮ ಯೋಜನೆಯನ್ನು ಪ್ರಾರಂಭಿಸುವ ನಿರ್ಣಯ ಕೈಗೊಂಡರು.  ಇದಕ್ಕೆ ಬದ್ಧವಾಗಿ ಇದೇ ಅಕ್ಟೋಬರ್ 11,2014ರಂದು ಲೋಕನಾಯಕ ಶ್ರೀ. ಜಯಪ್ರಕಾಶ್ ನಾರಾಯಣ್ ಅವರ ಜನ್ಮೋತ್ಸವದಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಅವರು ಈ ಯೋಜನೆಯನ್ನು ಆರಂಭಿಸಲಿದ್ದಾರೆ.
2019ರೊಳಗಾಗಿ ಮೂರು ಆದರ್ಶ ಗ್ರಾಮಗಳನ್ನು ಅಭಿವೃದ್ಧಿಪಡಿಸುವುದು ಈ ಯೋಜನೆ ಗುರಿ. ಇವುಗಳಲ್ಲಿ ಒಂದು ಗ್ರಾಮ 2016ರ ವೇಳೆಗೆ ತಯಾರಾಗಲಿದೆ. ಬಳಿಕ 2024ರೊಳಗಾಗಿ ಇಂತಹದ್ದೇ ಐದು ಆದರ್ಶ ಗ್ರಾಮಗಳ (ವರ್ಷಕ್ಕೆ ಒಂದರಂತೆ) ಆಯ್ಕೆ ಮತ್ತು ಅಭಿವೃದ್ಧಿ ನಡೆಯಲಿದೆ. 
ಮಹಾತ್ಮಾ ಗಾಂಧಿ ಅವರ ಸಿದ್ಧಾಂತಗಳು ಮತ್ತು ಮೌಲ್ಯಗಳಿಂದ ಪ್ರೇರಿತವಾದ ಈ ಯೋಜನೆ  ರಾಷ್ಟ್ರೀಯ ಅಭಿಮಾನ, ದೇಶಭಕ್ತಿ, ಸಮುದಾಯ ಶಕ್ತಿ, ಆತ್ಮ ವಿಶ್ವಾಸ ಮುಂತಾದ ಮೌಲ್ಯಗಳನ್ನು ಬೆಳೆಸುವುದರ ಜತೆಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೂ ಸಮಾನ ಒತ್ತು ನೀಡುತ್ತದೆ. ಗುಣಮಟ್ಟದ ಮೂಲಭೂತ ಆವಶ್ಯಕತೆಗಳ ಪೂರೈಕೆ ಮತ್ತು ತಮ್ಮ ಹಣೆಬರಹವನ್ನು ತಾವೇ ರೂಪಿಸಿಕೊಳ್ಳಲು ಅವಕಾಶಗಳನ್ನು ನೀಡುವ ಮೂಲಕ ಸಂಸದ ಆದರ್ಶ ಗ್ರಾಮ ಯೋಜನೆ ಗ್ರಾಮೀಣ ಭಾರತದ ಆತ್ಮವನ್ನು ಜಾಗೃತವಾಗಿಡಲಿದೆ.
ಈ ಯೋಜನೆ ಅಭಿವೃದ್ಧಿಯೆಡೆ ಸಮಗ್ರ ವಿಧಾನವನ್ನು ಹೊಂದಿರುವುದರಿಂದ ಇದೊಂದು ಅನನ್ಯ ಮತ್ತು ಪರಿವರ್ತನಾತ್ಮಕ ಯೋಜನೆಯಾಗಿದೆ. ಆಯ್ದ ಗ್ರಾಮಗಳ ಕೃಷಿ, ಆರೋಗ್ಯ, ಶಿಕ್ಷಣ, ಸ್ವಚ್ಛತೆ, ಪರಿಸರ, ಜೀವನೋಪಾಯ ಇತ್ಯಾದಿ ಬಹುಮುಖೀ ವಲಯಗಳಲ್ಲಿ  ಈ ಯೋಜನೆ ಸಮಗ್ರ ಅಭಿವೃದ್ಧಿಯ ಚಿಂತನೆ ನಡೆಸಿದೆ. ಸಂಸದ ಆದರ್ಶ ಗ್ರಾಮ ಯೋಜನೆ ಕೇವಲ ಮೂಲಭೂತ ಸೌಕರ್ಯ ಅಭಿವೃದ್ಧಿ ಅಲ್ಲದೆ ಅದರಿಂದಾಚೆಗೆ ಹಳ್ಳಿಗಳಲ್ಲಿ ಮತ್ತು ಅಲ್ಲಿನ ಜನರಲ್ಲಿ ಜನರ ಪಾಲ್ಗೊಳ್ಳುವಿಕೆ, ಅಂತ್ಯೋದಯ, ಲಿಂಗ ಸಮಾನತೆ, ಮಹಿಳೆಯರ ಘನತೆ, ಸಾಮಾಜಿಕ ನ್ಯಾಯ, ಸಮುದಾಯ ಸೇವೆಯ ಸ್ಪೂರ್ತಿ , ಸ್ವಚ್ಛತೆ, ಪರಿಸರಸ್ನೇಹ, ಪರಿಸರ ಸಮತೋಲನ ಕಾಯ್ದುಕೊಳ್ಳುವಿಕೆ, ಶಾಂತಿ ಮತ್ತು ಸಾಮರಸ್ಯ, ಪರಸ್ಪರ ಸಹಕಾರ ,ಸ್ವಾವಲಂಬನೆ, ಸ್ಫಳೀಯ ಸ್ವಯಂ ಆಡಳಿತ, ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ. . . ಇತ್ಯಾದಿ ಮೌಲ್ಯಗಳನ್ನು ಬೆಳೆಸಿ ಹಳ್ಳಿಗಳ ಜನರು ಇತರರಿಗೆ ಮಾದರಿಯಾಗುವಂತೆ ಅವರನ್ನು ಪರಿವರ್ತಿಸುವÀ ಗುರಿ ಹೊಂದಿದೆ.  
ಸಂಸತ್ ಸದಸ್ಯರು ಈ ಯೋಜನೆಯನ್ನು ಜಾರಿಗೊಳಿಸುವಲ್ಲಿ ಕೇಂದ್ರಬಿಂದುಗಳಾಗಿದ್ದಾರೆ. ಇಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿಯ ಮೂಲ ಬಿಂದುವಾಗಿರುತ್ತದೆ. ಸಮತಟ್ಟು ಪ್ರದೇಶಗಳ್ಲಲಿ ಇದು 3,000ದಿಂದ 5, 000 ಜನಸಂಖ್ಯೆ ಹೊಂದಿರುತ್ತದೆ ಮತ್ತು ಗುಡ್ಡಗಾಡು , ಬುಡಕಟ್ಟು ಮತ್ತು ಅನ್ಯ ಕಠಿಣ ಪ್ರದೇಶಗಳಲ್ಲಿ ಇದು 1,000 ದಿಂದ 3,000 ಜನಸಂಖ್ಯೆ ಹೊಂದಿರುತ್ತದೆ. ಜನರ ಗಾತ್ರ ಲಭ್ಯವಾಗದ ಜಿಲ್ಲೆಗಳಲ್ಲಿ ಗ್ರಾಮ ಪಂಚಾಯತ್‍ಗಳು ಅಪೇಕ್ಷಿತ ಅಂದಾಜು ಜನಸಂಖ್ಯೆ ಪ್ರಮಾಣವನ್ನು ಆಯ್ಕೆ ಮಾಡಬಹುದು. ತುರ್ತಾಗಿ ಆಯ್ಕೆ ಮಾಡಬೇಕಾದ ಒಂದು ಗ್ರಾಮ ಪಂಚಾಯತ್‍ನ್ನು ಸಂಸತ್ ಸದಸ್ಯರು ಗುರುತಿಸುತ್ತಾರೆ. ಬಳಿಕದ ಹಂತದಲ್ಲಿ ಎರಡು ಗ್ರಾಮ ಪಂಚಾಯತ್‍ಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಲೋಕಸಭಾ ಸದಸ್ಯರು ತಮ್ಮ ಕ್ಷೇತ್ರದೊಳಗಿನ ಗ್ರಾಮ ಪಂಚಾಯತ್‍ನ್ನಷ್ಟೇ ಆಯ್ಕೆ ಮಾಡಬೇಕಾಗುತ್ತದೆ. ರಾಜ್ಯ ಸಭಾ ಸದಸ್ಯರು  ತಾವು ಚುನಾಯಿತಗೊಂಡ ರಾಜ್ಯದೊಳಗೆ  ತಮ್ಮ ಆಯ್ಕೆಯ ಜಿಲ್ಲೆಯ ಒಂದು ಗ್ರಾಮ ಪಂಚಾಯತ್‍ನ್ನಷ್ಟೇ ಆಯ್ಕೆ ಮಾಡಬಹುದು.   ನಾಮನಿರ್ದೇಶನಗೊಂಡ ಸಂಸತ್ ಸದಸ್ಯರು ದೇಶದ ಯಾವುದೇ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿರುವ ಗ್ರಾಮ ಪಂಚಾಯತ್‍ನ್ನು ಆಯ್ಕೆ ಮಾಡಬಹುದು. ಪಟ್ಟಣ ಕ್ಷೇತ್ರಗಳಲ್ಲಿನ ಸಂಸದರು ತಮ್ಮ ಆಸುಪಾಸಿನಲ್ಲಿರುವ ಗ್ರಾಮೀಣ ಪ್ರದೇಶಗಳಲ್ಲಿರುವ ಗ್ರಾಮ ಪಂಚಾಯತ್‍ನ್ನು ಆಯ್ಕೆ ಮಾಡಿಕೊಳ್ಳಬಹುದು.
ಪ್ರಾಥಮಿಕವಾಗಿ 2019ರೊಳಗೆ ಮೂರು ಆದರ್ಶ ಗ್ರಾಮ ಯೋಜನೆಯನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ. ಇವುಗಳಲ್ಲಿ ಒಂದು ಗ್ರಾಮದ ಅಭಿವೃದ್ಧಿ 2016ರೊಳಗೆ ಸಾಧಿಸಲಾಗುತ್ತದೆ. ಬಳಿಕ 2014ರೊಳಗಾಗಿ ಇಂತಹದ್ದೇ ಐದು ಆದರ್ಶ ಗ್ರಾಮಗಳ (ವರ್ಷಕ್ಕೆ ಒಂದರಂತೆ) ಆಯ್ಕೆ ಮತ್ತು ಅಭಿವೃದ್ಧಿ ನಡೆಯಲಿದೆ. 
ಸಂಸತ್ ಸದಸ್ಯರು ಸಮುದಾಯದ ಜತೆ ಸೇರಿ ಗ್ರಾಮ ಅಭಿವೃದ್ಧಿ ಯೋಜನೆಯನ್ನು ರೂಪಿಸಿ ಅಗತ್ಯದ ಸಂಪನ್ಮೂಲಗಳನ್ನು ಸಂಗ್ರಹಿಸಿಕೊಡಲಿದ್ದಾರೆ. ಕಡುಬಡತನದಲ್ಲಿರುವ ಮನೆಗಳು ಬಡತನದಿಂದ ಹೊರಬರುವಂತೆ ಮಾಡಲು ಈ ಅಭಿವೃದ್ಧಿ ಯೋಜನೆಯಲ್ಲಿ ವಿಶೇಷ ಒತ್ತು ನೀಡಲಾಗುತ್ತದೆ. ಯೋಜನೆ ರೂಪುಗೊಳ್ಳುವ ಮೊದಲು ಸಂಸತ್ ಸದಸ್ಯ ಆತ/ಆಕೆಯ ನೇತೃತ್ವದಲ್ಲಿ ಯೋಜಿತ ಪರಿಸರ ನಿರ್ಮಾಣ ಮತ್ತು ಸಾಮಾಜಿಕ ಸಂಚಲನೆ ನಡೆಯಲಿದೆ. ಪ್ರತಿಯೊಂದು ಗ್ರಾಮದಲ್ಲೂ ಯೋಜನಾ ಪ್ರಕ್ರಿಯೆ ಎಂಬುದು ಜಿಲ್ಲಾಧಿಕಾರಿ ಸಂಯೋಜಕತ್ವದಲ್ಲಿ ನಡೆಯುವ ಸಹಯೋಗಿ ಕಾರ್ಯವಾಗಿರುತ್ತದೆ. ಇದರಲ್ಲ್ಲಿ ಸಂಸತ್ ಸದಸ್ಯರು ಸಕ್ರಿಯ ಅನುಕೂಲಕರ ಪಾತ್ರ ನಿರ್ವಹಿಸಲಿದ್ದಾರೆ.
ಗ್ರಾಮ ಮಟ್ಟದಲ್ಲಿ ನಡೆಯುವ ಸಮುದಾಯ ಜಾಗೃತಿ, ಸಮಸ್ಯೆಗಳ ಪರಿಹಾರ ಶಿಬಿರಗಳ ಆಯೋಜನೆ, ಆರೋಗ್ಯ ಶಿಬಿರಗಳು ಮುಂತಾದ ಚಟುವಟಿಕೆಗಳನ್ನು  ಸಂಸತ್ ಸದಸ್ಯರು ನೇರವಾಗಿ ಬೆಂಬಲಿಸುತ್ತಾರೆ. ಅವರು ಸಮಗ್ರ ಅಭಿವೃಧ್ಧಿಗೆ ನಿರ್ದೇಶನ ನೀಡುತ್ತಾರೆ ಮತ್ತು ಮುಗ್ಧ ಗ್ರಾಮಸ್ಥರು ತಮ್ಮ ಕಠಿಣ ಪರಿಶ್ರಮ ಮತ್ತು ವ್ಯಾವಹಾರಿಕ ಕೌಶಲಗಳಿಂದ ತಮ್ಮ ದಾರಿಯನ್ನು ತಾವೇ ಸುಗಮಗೊಳಿಸಲಿದ್ದಾರೆ.
ಸಂಸದ ಆದರ್ಶ ಗ್ರಾಮ ಯೋಜನೆಯ ಕೆಲವು ವೈಶೀಷ್ಟ್ಯಗಳು ಈ ಕೆಳಕಂಡಂತಿವೆ:
ಸಂಸದ ಆದರ್ಶ ಗ್ರಾಮ ಯೋಜನೆ ಸಮುದಾಯದ ಭಾಗವಹಿಸುವಿಕೆಗೆ ಒತ್ತು ನೀಡುತ್ತದೆ. ಗ್ರಾಮೀಣ ಜನರ ಸಾಮಾಜಿಕ ಜಾಗೃತಿ ಇತರ ಅಭಿವೃದ್ಧಿ ಚಟುವಟಿಕೆಗಳಿಗೆ ಪ್ರೇರಣೆ ನೀಡುತ್ತದೆ. ಉದಾಹರಣೆಗೆ ಎಲ್ಲ ವಯೋಮಾನದ ಜನರಲ್ಲಿ ಕುಡಿತದ ಚಟ, ಧೂಮಪಾನ, ಮಾದP Àವ್ಯಸನದಂತಹ ಅಪಾಯಕಾರಿ ಚಟಗಳನ್ನು ಕಡಿಮೆ ಮಾಡುವುದಾಗಿದೆ. 
ಸದೃಢ ಮತ್ತು ಪಾರದರ್ಶಕ ಗ್ರಾಮ ಪಂಚಾಯತ್‍ಗಳ ಮೂಲಕ ಸ್ಥಳೀಯ ಪ್ರಜಾಪ್ರಭುತ್ವವನ್ನು ಬಲಪಡಿಸುವುದು, ಸಕ್ರಿಯ ಗ್ರಾಮ ಸಭೆ ಮತ್ತು ಉತ್ತಮ ಆಡಳಿತವನ್ನು ಒದಗಿಸುವುದೂ ಸಹ ಈ ಯೋಜನೆಯ ಮುಖ್ಯ ಉದ್ದೇಶಗಳಾಗಿವೆ. ನಿರ್ಣಯ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲಾಗುತ್ತದೆ. ಮಹಿಳೆಯರ ಮತ್ತು ಮಕ್ಕಳ ವಿಚಾರಗಳು ಮತ್ತು ಕಾಳಜಿಗಳ ಕುರಿತು ಚರ್ಚಿಸುವಲ್ಲಿ ಮಹಿಳಾ ಸಭೆ ಮತ್ತು ಬಾಲ ಸಭೆಗಳನ್ನು ಆಯೋಜಿಸುವಲ್ಲಿ ಈ ಯೋಜನೆ ಪ್ರೇರಣೆ ನೀಡುತ್ತದೆ. ಇ-ಆಡಳಿತಕ್ಕೂ ಬೆಂಬಲ ನೀಡಲಾಗುತ್ತದೆ.
ಶೈಕ್ಷಣಿಕ ಸೌಲಭ್ಯಗಳ ಸಾರ್ವತ್ರಿಕ ಲಭ್ಯತೆ, ವಯಸ್ಕ ಶಿಕ್ಷಣ,ಇ-ಸಾಕ್ಷರತೆ ಮುಂತಾದವುಗಳು ಕೂಡಾ ಸಂಸದ ಆದರ್ಶ ಗ್ರಾಮ ಯೋಜನೆಯ ಮುಖ್ಯ ಉದ್ದೇಶಗಳಾಗಿವೆ. ಶಾಲೆಗಳಲ್ಲಿ ಮೂಲಸೌಕರ್ಯಗಳಾದ ಶೌಚಾಲಯ, ಗ್ರಂಥಾಲಯಗಳು, ಸ್ಮಾರ್ಟ್ ಶಾಲೆಗಳಿಗೆ ಬೆಂಬಲ ಮುಂತಾದವುಗಳೆಡೆಯೂ ಈ ಯೋಜನೆ ಗಮನ ಹರಿಸುತ್ತಿದೆ.
ಮಹಿಳೆ, ಹುತಾತ್ಮರು ಮತ್ತು ಹಿರಿಯರ  ಕುರಿತು ಗೌರವ, ಪರಿಸರ ಕಾಳಜಿ, ಸ್ವಚ್ಛತೆ, ಉತ್ತಮ ಓದುವಿಕೆ ಹವ್ಯಾಸ ಇತ್ಯಾದಿ ಮೌಲ್ಯಗಳನ್ನು ನಮ್ಮ ಯುವ ಜನಾಂಗದಲ್ಲಿ ಅಳವಡಿಸುವುದು ಅತ್ಯಗತ್ಯ. ಶಿಕ್ಷಣದ ಹೊರತಾಗಿ ಈ ಗ್ರಾಮಗಳಲ್ಲಿ ಗುಣಮಟ್ಟದ ಆರೋಗ್ಯಸೇವೆ ಲಭ್ಯವಾಗಲಿದೆ. ಫಲಿತಾಂಶ ಶೇ 100 ರೋಗನಿರೋಧಕತೆ, ಆಸ್ಪತ್ರೆಗಳಲ್ಲೇ ಶೇ 100 ಹೆರಿಗೆಗಳು, ಶಿಶು ಮರಣ ದರದಲ್ಲಿ ಇಳಿಕೆ, ತಾಯಿ ಮರಣ ದರದಲ್ಲಿ ಇಳಿಕೆ, ಅಪೌಷ್ಠಿಕತೆಯಲ್ಲಿ ಇಳಿಕೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.
ಒಂದು ವಿಶೇಷ ಮತ್ತು ಸಾಮರಸ್ಯಪೂರ್ಣ ಸಮಾಜವನ್ನು ಸೃಷ್ಠಿಸುವಲ್ಲಿ ಗ್ರಾಮದ ವೃಧ್ಧರಿಗೆ ಸನ್ಮಾನ, ಜನಪದ ಕಲೋತ್ಸವಗಳು, ಜನಪದ ಗಾಯನ ಮುಂತಾದವುಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಕ್ರೀಡೆ, ನಿಯತ ದೈಹಿಕ ವ್ಯಾಯಾಮ. ಸಮತೋಲಿತ ಪೋಶಕಾಂಶ, ವಯುಕ್ತಿಕ ಸ್ವಚ್ಛತೆ ಮುಂತಾದವುಗಳ ಮೂಲಕ ವಯುಕ್ತಿಕ ಅಭಿವೃದ್ಧಿಯನ್ನು ಈ ಯೋಜನೆಯ ವಿಶೇಷ ವಿಚಾgವಾಗಿದೆ.
ತಂತ್ರಜ್ಞಾನದ ಸ್ವೀಕೃತಿ ಮತ್ತು ಅಳವಡಿಸುವಿಕೆ ಮತ್ತು ಆವಿಷ್ಕಾರಗಳ ಪರಿಚಯಿಸುವಿಕೆ ಈ ಯೋಜನೆಯ ಕ್ಲಿಷ್ಟ ವಿಚಾರಗಳು. ಇದು ಸ್ಪೇಸ್ ಅಪ್ಲಿಕೇಶನ್, ಯೋಜನೆಯ ದೂರಸಂವೇದನೆ, ಪರಿಶೀಲನೆಗಾಗಿ ಮೊಬೈಲ್ ಆಧರಿತ ತಂತ್ರಜ್ಞಾನ, ಉತ್ಪಾದಕತೆ ಹೆಚ್ಚಳಕ್ಕಾಗಿ ಕೃಷಿ ತಂತ್ರಜ್ಞಾನ ಮುಂತಾದವುಗಳನ್ನು ಒಳಗೊಂಡಿದೆ. 
ಸಂಸದ ಆದರ್ಶ ಗ್ರಾಮ ಯೋಜನೆ ಚಟುವಟಿಕೆಗಳು ವಿವಿಧ ಕಾರ್ಯಕ್ಷೇತ್ರಗಳಲ್ಲಿ ನಡೆಯಲಿರುವುದರಿಂದ ಯೋಜನೆಯ ಯಶಸ್ವೀ ಅನುಷ್ಠಾನಕ್ಕಾಗಿ ವಿವಿಧ ಸಚಿವಾಲಯಗಳು, ವಿಭಾಗಗಳು, ಸರ್ಕಾರದ ವಿವಿಧ ಯೋಜನೆಗಳು, ರಾಜ್ಯ ಸರ್ಕಾರಗಳು, ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಗಳ ಅಭಿವೃದ್ಧಿ ಯೋಜನೆÀ (ಎಮ್‍ಪಿಎಲ್‍ಎಡಿಎಸ್) ಮತ್ತು ಖಾಸಗಿ ವಲಯಗಳೊಡನೆ ಸಹಭಾಗಿತ್ವ ಮತ್ತು ಸಹಕಾರ ಅಗತ್ಯವಾಗಿದೆ. ಯೋಜನೆಯ ಅನುಷ್ಠಾನ ಉತ್ತಮಗೊಳಿಸಲು ಟೈಡ್ ಫಂಡ್ ( ನಿಗಧಿತ ನಿಧಿ) ಮತ್ತು ಅನಟೈಡ್ ಫಂಡ್ (ನಿಗದಿತವಲ್ಲದ ನಿಧಿ) ಉದಾಹರಣೆಗೆ ಗ್ರಾಮಪಂಚಾಯತ್‍ನ ಅನಿಗಧಿತ ನಿಧಿಗಳಾದ ಸ್ವ -ಆದಾಯ, ಕೇಂದ್ರ ಮತ್ತು ರಾಜ್ಯ ಹಣಕಾಸು ಆಯೋಗಗಳ ಅನುದಾನಗಳು ಮುಂತಾದವುಗಳನ್ನು ಬಳಸಬೇಕು. ಯೋಜನೆಯ ಸಮರ್ಥ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಗ್ರಾಮೀಣಾಭಿವೃದ್ಧಿ ಸಚಿವಾಲಯವನ್ನು  ಯೋಜನೆಯ ಮೇಲ್ವಿಚಾರಣೆಗಾಗಿ ನೋಡಲ್ ಸಚಿವಾಲಯವನ್ನಾಗಿ ನೇಮಿಸಲಾಗಿದೆ. ಎಲ್ಲಾ ವಿಚಾರ ಮತ್ತು ಅಂಶಗಳನ್ನು ಒಳಗೊಂಡಿರುವ ಯೋಜನೆಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕ ಮತ್ತು ನೈಜ ಸಮಯದಲ್ಲಿ ವೆಬ್ ಆಧರಿತ ಪರಿಶಿಲನಾ ವ್ಯವಸ್ಥೆಯೊಂದನ್ನು ಸಿದ್ಧಪಡಿಸಲಾಗುತ್ತದೆ.  ಗ್ರಾಮ ಪಂಚಾಯತ್ ಒಳಗೊಂಡಂತೆ ವಿವಿಧ ಮಟ್ಟಗಳಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರಿ ಕಾರ್ಯಕರ್ತರಿಗಾಗಿ ಸಚಿವಾಲಯ ವಿಶೇಷ ವಿನ್ಯಾಸವನ್ನು ಹೊಂದಿರುವ ಸಾಮಥ್ರ್ಯ ನಿರ್ಮಾಣ ಕಾರ್ಯಕ್ರಮವನ್ನು ಪರಿಚಯಿಸಲಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಯೋಜನೆಯ ಅನುಷ್ಠಾನಕ್ಕೆ ಸಂಭಂಧಿಸಿದಂತೆ ವಿಸ್ತøತ ಕೈಪಿಡಿಗಳನ್ನು ತಯಾರಿಸುವುದರ ಜತೆಗೆ ಸಂಸತ್ ಸದಸ್ಯರಿಗೆ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ. ಯೋಜನೆಯ ನಿರ್ದೇಶನಗಳು ಅನುಷ್ಠಾನಕ್ಕಿರುವ ನೀಲನಕ್ಷೆಗಳು. ಅವುಗಳೂ ವಿಶಾಲ ತಂತ್ರಗಳು ಮತ್ತು ನಿರೀಕ್ಷಿತ ಫಲಿತಾಂಶಗಳನ್ನು ನೀಡುತ್ತವೆ. ರಾಜ್ಯ ಮಟ್ಟದಲ್ಲಿ ಉನ್ನತಾಧಿಕಾರದ ಸಮಿತಿಯೊಂದಿದ್ದು ಮುಖ್ಯ ಕಾರ್ಯದರ್ಶಿ ಅದರ ಮುಖ್ಯಸ್ಥನಾಗಿರುತ್ತಾರೆ.  ಸಮಿತಿ ಅಗತ್ಯವಿರುವ ಎಲ್ಲ ವಿಭಾಗಗಳು ಮತ್ತು ವಿಷಯ ಪರಿಣತರನ್ನು ಒಳಗೊಂಡಿರುತ್ತದೆ. ಸಮಿತಿಯು ಕನಿಷ್ಠ ಎರಡು ನಾಗರಿಕ ಸಮಾಜ ಪ್ರತಿನಿಧಿಗಳನ್ನೂ ಒಳಗೊಂಡಿರುತ್ತದೆ. ರಾಜ್ಯದ ಗ್ರಾಮೀಣಾಭಿವೃದ್ಧಿ ವಿಭಾಗದ ಕಾರ್ಯದರ್ಶಿ ಇದರ ಸಂಚಾಲಕ ಸದಸ್ಯನಾಗಿರುತ್ತಾರೆ. ಯೋಜನೆಯ ಅನುಷ್ಠಾನಕ್ಕಾಗಿ ಜಿಲ್ಲಾಧಿಕಾÀರಿ ನೋಡಲ್ ಅಧಿಕಾರಿಯಾಗಿರುತ್ತಾರೆ. ಪರಿಶೀಲನಾ ಸಭೆಗಳ ಅಧ್ಯಕ್ಷತೆಯನ್ನು ಸಂಸತ್ ¸ದಸ್ಯರು ನಿರ್ವಹಿಸುತ್ತಾರೆ.
ಅರ್ಹ ಸ್ವತಂತ್ರ ಸಂಸ್ಥೆಯೊಂದು ಯೋಜನೆಯ ಅನುಷ್ಠಾನದ ಮಧ್ಯಾವಧಿ ಮೌಲ್ಯಮಾಪನ ಮಾಡಲಾಗುತ್ತದೆ. ಇದೇ ರೀತಿ ಯೋಜನೆಯ ಅನುಷ್ಠಾನದ ಬಳಿಕ ಫಲಿತಾಂಶ ಮತ್ತು ಸಾಧನೆಗಳ ಮೌಲ್ಯಮಾಪನ ಮಾಡಲಾಗುತ್ತದೆ. 
ಈ ಕೆಳಕಂಡ ವಿಭಾಗಗಳಿಗೆ ನಾಲ್ಕು ಪ್ರಶಸ್ತಿಗಳನ್ನು ನೀಡಲಾಗುತ್ತದೆ:
ಉತ್ತಮ ಆಚರಣೆಗಳು
ಉತ್ತಮ ಕಾರ್ಯನಿರತ ಅಧಿಕಾರಿ
ಉತ್ತಮ ಜಿಲ್ಲಾಧಿಕಾರಿ
ಉತ್ತಮ ಆದರ್ಶ ಗ್ರಾಮ
ಆದರ್ಶ ಗ್ರಾಮಗಳು ಪುನರಾವರ್ತನೀಯ ಮತ್ತು ಸಮರ್ಥನೀಯ ಮಾದರಿ ಗ್ರಾಮಗಳೆಂಬ ಭರವಸೆ ಇದೆ. ಮುಂದಿನ ದಿನಗಳಲ್ಲಿ ಈ ಮಾದರಿ ಗ್ರಾಮಗಳೀಂದ ನೂರಾರು ಆವಿಷ್ಕಾರಗಳು ಮತ್ತು ಯಶೋಗಾಥೆಗಳು ಕೇಳಿಬರಲಿವೆ.

No comments:

Post a Comment