ಗರ್ಭಧಾರಣೆಯಲ್ಲಿ ಅಬ್‍ಸ್ಟೆಟ್ರಿಕ್ ಅಲ್ಟ್ರಾಸೌಂಡ್‍ನ ಮಹತ್ವದ ಕುರಿತು ಪರಿಣಿತ ವೈದ್ಯರಿಂದ
ಯುವ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಿಗೆ ಮೈಸೂರಿನಲ್ಲಿ ತರಬೇತಿ
ಮೈಸೂರು: ಅಬ್‍ಸ್ಟೆಟ್ರಿಕ್ ಅಲ್ಟ್ರಾಸೌಂಡ್‍ನ ಉಪಯೋಗದಿಂದ ಉತ್ತಮ ಮಾತೃ ಆರೋಗ್ಯಸೇವೆಯನ್ನು ಭಾರತದಲ್ಲಿ ನೀಡಲು ಸಾಧ್ಯ’ಎಂದು ಡಾ.ಹೇಮಾ ದಿವಾಕರ್ ಹೇಳಿದರು. ಜೆಎಸ್‍ಎಸ್ ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಲಾದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಹೇಳಿದ ಅವರು ಯುವ ಪ್ರಸೂತಿ ತಜ್ಞರು ಮತ್ತು ಸ್ತ್ರೀರೋಗ ತಜ್ಞರ ಪರಿಣಿತಿ ಮತ್ತು ಸಾಮಥ್ರ್ಯಗಳನ್ನು ಸದೃಢಗೊಳಿಸುವ ದೀರ್ಘಾವಧಿ ಯೋಜನೆಯ ಹಿನ್ನೆಲೆಯಲ್ಲಿ ಮಾತೃ ಆರೋಗ್ಯಸೇವೆಯ ಜಾಗತಿಕ ಮತ್ತು ಭಾರತೀಯ ಪರಿಣಿತರು ಪ್ರಾರಂಭಿಕ ಗರ್ಭಧಾರಣೆಯ ಹಂತದಲ್ಲಿ ಅಬ್‍ಸ್ಟೆಟ್ರಿಕ್ ಅಲ್ಟ್ರಾಸೌಂಡ್‍ನ ಪ್ರಾಮುಖ್ಯತೆಯನ್ನು ತಿಳಿಸಿದರು.
ಪರಿಣಿತ ಅಲ್ಟ್ರಾಸೌಂಡ್ ತಜ್ಞರು ಹಾಗೂ ಸ್ತ್ರೀರೋಗ ತಜ್ಞರು, ಪ್ರಸೂತಿ ತಜ್ಞರು ಭಾಗವಹಿಸಿದ್ದ ಈ ತರಬೇತಿಗೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಕ್ರೆಡಿಟ್ ಪಾಯಿಂಟ್‍ಗಳನ್ನು ನೀಡಿದೆ. ವಿಶ್ವದ ಹಲವಾರು ಯುವ ಸ್ತ್ರೀರೋಗ ತಜ್ಞರು, ಪ್ರಸೂತಿ ತಜ್ಞರು ದಿನಪೂರ್ತಿ ನಡೆದ ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತಮ್ಮ ಅಬ್‍ಸ್ಟೆಟ್ರಿಕ್ ಅಲ್ಟ್ರಾಸೌಂಡ್ ಕುರಿತು ಅಭಿಪ್ರಾಯಗಳು ಮತ್ತು ದೃಷ್ಟಿಕೋನವನ್ನು ಹಂಚಿಕೊಂಡರು.
ಫೆಡರೇಷನ್ ಆಫ್ ಅಬ್‍ಸ್ಟೆಟ್ರಿಕ್ಸ್ ಅಂಡ್ ಗೈನಕಾಲಜಿಸ್ಟ್ಸ್ ಸೊಸೈಟೀಸ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷೆ ಡಾ.ಹೇಮಾ ದಿವಾಕರ್, ಬೆಂಗಳೂರಿನ ಶ್ರೀನಿವಾಸ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್‍ನ ಡಾ.ಬಿ.ಎಸ್.ರಾಮಮೂರ್ತಿ, ಜೆಎಸ್‍ಎಸ್ ಆಸ್ಪತ್ರೆಯ ಅಬ್‍ಸ್ಟೆಟ್ರಿಕ್ಸ್ ಅಂಡ್ ಗೈನಕಾಲಜಿಸ್ಟ್ಸ್ ವಿಭಾಗದ ಮುಖ್ಯಸ್ಥ ಡಾ.ಅಂಬರೀಷ ಬಂಡಿವಾಡ ಮತ್ತು ಅಮೆರಿಯಾದ ಸಿಯಾಟಲ್‍ನ ಪ್ರಾಕ್ಟೀಸಿಂಗ್ ರೇಡಿಯಾಲಜಿಸ್ಟ್ ಡಾ.ವಿಲಿಯಂ ಮಾಕ್ರ್ಸ್ ತರಬೇತುದಾರರಾಗಿದ್ದರು.
ಈ ಕಾರ್ಯಕ್ರಮ ಯುವ ಪ್ರಸೂತಿ ತಜ್ಞರು ಮತ್ತು ಸ್ತ್ರೀರೋಗ ತಜ್ಞರ ಸಾಮಥ್ರ್ಯವೃದ್ಧಿ ಮಾಡುವ ಉದ್ದೇಶ ಹೊಂದಿದೆ. `ಡಿಜಿಟಲ್ ಜಗತ್ತಿನ ಮತ್ತು ಗುಣಮಟ್ಟದ ತರಬೇತಿಗೆ ವಿನೂತನ ವಿಧಾನಗಳ ಅನ್ವೇಷಣೆಯಿಂದ ಮುಂದಿನ ತಲೆಮಾರಿನ ತಜ್ಞರಿಗೆ ಅಲ್ಟ್ರಾಸೌಂಡ್ ಸ್ಕ್ಯಾನ್‍ಗಳ ನಿರ್ವಹಣೆಯಲ್ಲಿ ಸಾಮಥ್ರ್ಯ ಮತ್ತು ವಿಶ್ವಾಸ ಮೂಡಿಸುವ ಉದ್ದೇಶ ಹೊಂದಿದೆ. ತರಬೇತಿ ನೀಡುವ ವಿಶಿಷ್ಟ ವಿಧಾನ, ಅನುಭವ, ಸಿಮುಲೇಟರ್‍ಗಳ ಬಳಕೆ, ವಿದೇಶಿ ತಜ್ಞರನ್ನು ಒಳಗೊಂಡ ವೆಬ್‍ಕಾಸ್ಟ್ ಮತ್ತು ಇ-ಕಲಿಕೆಯಿಂದ ತರಬೇತಿ ಮತ್ತು ಕಲಿಕೆಯ ಗುಣಮಟ್ಟ ಹೆಚ್ಚಿಸುತ್ತದೆ. ಗುಣಮಟ್ಟ ಮತ್ತು ಸಾಮಥ್ರ್ಯ ಎರಡೂ ಕೌಶಲ್ಯ ಅಭಿವೃದ್ಧಿಯಲ್ಲಿ ಬಹಳ ಮುಖ್ಯವಾಗಿದ್ದು ಇದರಿಂದ ಉತ್ತಮ ಮಾತೃ ಆರೋಗ್ಯಸೇವೆಯನ್ನು ಭಾರತದಲ್ಲಿ ನೀಡಲು ಸಾಧ್ಯ’ ಎಂದು ತರಬೇತಿ ಕಾರ್ಯಕ್ರಮದ ಸಂಘಟನಾ ಅಧ್ಯಕ್ಷರಾದ ಡಾ.ಹೇಮಾ ದಿವಾಕರ್ ಹೇಳಿದರು.
ಈ ತರಬೇತಿ ಮೂರು ಹಂತಗಳನ್ನು ಒಳಗೊಂಡಿತ್ತು. ಸಿದ್ಧತೆಯ ಹಂತ; ಕಲಿಕೆಯ ಹಂತ ಮತ್ತು ಅನುಷ್ಠಾನದ ಹಂತ. `ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ದೇಶದಲ್ಲಿ ಇನ್ನೂ ಸೂಕ್ಷ್ಮ ವಿಚಾರ. ಆದರೆ ಈ ಕ್ಷೇತ್ರದ ಪರಿಣಿತರಾಗಿ ಪ್ರಾರಂಭಿಕ ಗರ್ಭಧಾರಣೆಯ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‍ನಿಂದ ಮಾತೃ ಆರೋಗ್ಯದ ವ್ಯವಸ್ಥೆ ಸದೃಢಗೊಳ್ಳಲಿದೆ. ಇದರಿಂದ ಮಿಲೆನಿಯಂ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸಾಧ್ಯ’ ಎಂದು ತರಬೇತಿ ಕಾರ್ಯಕ್ರಮದಲ್ಲಿ ಹಲವು ಅಧಿವೇಶನ ನಿರ್ವಹಿಸಿದ ಡಾ.ಹೇಮಾ ದಿವಾಕರ್ ಹೇಳಿದರು.
ಸ್ಕ್ಯಾನಿಂಗ್ ತರಬೇತಿ ಅಲ್ಲದೆ ಹಲವಾರು ಪ್ರಕರಣ ಆಧರಿತ ಅಧ್ಯಯನಗಳ ಮೂಲಕ ಚರ್ಚೆ ನಡೆಸಲಾಯಿತು. ಎಕ್ಟೊಪಿಕ್ ಪ್ರೆಗ್ನೆನ್ಸಿ, ಪಿಎನ್‍ಡಿಟಿ ಕಾಯ್ದೆಯ ಅರಿವು, ಗೊತ್ತಿಲ್ಲದ ಪ್ರದೇಶದಲ್ಲಿ ಗರ್ಭಧಾರಣೆಯ ಸಂಕೀರ್ಣತೆಗಳು ಮತ್ತು ಸ್ಕ್ಯಾನಿಂಗ್ ಪ್ರೊಟೊಕಾಲ್ ಕುರಿತು ವೇದಿಕೆಯಲ್ಲಿ ಪ್ರದರ್ಶನವನ್ನು ಈ ಕಾರ್ಯಕ್ರಮ ಹೊಂದಿತ್ತು.

No comments:
Post a Comment