Thursday, 9 October 2014

ವಿಶ್ವದ ಅಗಾಧತೆ ಮುಂದೆ ಮಾನವ ಕುಬ್ಜ - ಲೋಕೇಶ್
ಮಂಡ್ಯ:ನಮ್ಮ ವಿಶ್ವ ಊಹೆಗೆ ನಿಲುಕದಂತಹ ವಿಶಾಲತೆಯನ್ನು ಹೊಂದಿದ್ದು ಅದರ ಅಗಾಧತೆ ಮುಂದೆ ಮಾನವ ಕುಬ್ಜನಾಗಿದ್ದಾನೆ ಎಂದು ಚಂದೂಪುರ ಸರ್ಕಾರಿ ಪ್ರೌಢÀಶಾಲೆಯ ಮುಖ್ಯ ಶಿಕ್ಷಕ  ಎಸ್. ಲೋಕೇಶ್  ಅಭಿಪ್ರಾಯಪಟ್ಟರು.
ಅವರು ಮತ್ತು ಬಸರಾಳು ಸ.ಪ.ಪೂ.ಕಾಲೇಜಿನ ವತಿಯಿಂದ ಸಿದ್ದೇಗೌಡನ ಕೊಪ್ಪಲಿನಲ್ಲಿ ನಡೆಯುತ್ತಿರುವ ಎನ್.ಎಸ್.ಎಸ್. ಶಿಬಿರದಲ್ಲಿ ಆಕಾಶವೀಕ್ಷಣೆ ಕುರಿತು ಮಾತನಾಡುತ್ತಿದ್ದರು.
ನಮ್ಮ ವಿಶ್ವದಲ್ಲಿ ಲಕ್ಷಾಂತರ ಗ್ಯಾಲಕ್ಸಿಗಳಿದ್ದು ಪ್ರತಿಯೊಂದರಲ್ಲೂ ಲಕ್ಷಾಂತರ ನಕ್ಷತ್ರಗಳಿವೆ.ಅವುಗಳ ಮುಂದೆ ನಮ್ಮ ಸೂರ್ಯ, ಚಂದ್ರ, ಭೂಮಿ, ಮಾನವರಾಗಲಿ ಗುರುತಿಸಿಕೊಳ್ಳಲಾರದಷ್ಟು ಕುಬ್ಜರಾಗಿದ್ದೇವೆ. ವಿಶ್ವದಲ್ಲಿ ಏನೇನೂ ಅಲ್ಲದ ನಾವು, ನಾನು ನನ್ನದು ಎಂಬ ಸ್ವಾರ್ಥ ಭಾವನೆಗಳನ್ನು ಬೆಳಸಿಕೊಂಡು ಸಂಕುಚಿತರಾಗಿದ್ದೇವೆ. ಇಂತಹ ವಿಶ್ವದ ಅಗಾಧತೆ ಮುಂದೆ ನಾವು ತಲೆಬಾಗಿ ನಡೆಯಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಅವರು ದೂರದರ್ಶಕದ ಕಾರ್ಯವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಮೋಡ ಕವಿದ ವಾತಾವರಣದಲ್ಲಿ ಆಕಾಶ ವೀಕ್ಷಣೆ ಸಾಧ್ಯವಾಗದಿದ್ದರೂ ಕಂಪ್ಯೂಟರ್‍ನ ಪವರ್ ಪಾಯಿಂಟ್ ಮೂಲಕ ನಮ್ಮ ವಿಶ್ವ, ಸೌರವ್ಯೂಹದ ಆಕಾಶ ಕಾಯಗಳು, ಮಂಗಳಗ್ರಹಯಾನ, ಸುನಾಮಿ, ಭೂಕಂಪ, ರಾಕೆಟ್ ಉಡಾವಣೆ ಮುಂತಾದ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು.
ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರಮೂರ್ತಿ, ಶಿಬಿರದ ಕಾರ್ಯಕ್ರಮಾಧಿಕಾರಿ ಬಿ. ಮಂಜುನಾಥ್, ಸಹ ಕಾರ್ಯಕ್ರಮಾಧಿಕಾರಿಗಳಾದ ವಿಶ್ವನಾಥ್, ವೈ.ಸುರೇಶ್, ಉಪನ್ಯಾಸಕರಾದ ಹೊಳಲು ಶ್ರೀಧರ್, ಓ.ನಾಗರಾಜು, ಚೇತನ ಮತ್ತು ಗ್ರಾಮದ ಮುಖಂಡರು ಭಾಗವಹಿಸಿದ್ದರು.

No comments:

Post a Comment